Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.02.2022 (God’s creation’s special)
Share:

By Village Missionary Movement

Friday, 18-Feb-2022

ಧೈನಂದಿನ ಧ್ಯಾನ(Kannada) – 18.02.2022 (God’s creation’s special)

ಪೇತ್ರನ ಬಲೆ

"...ಪರಲೋಕರಾಜ್ಯವು ಒಂದು ಬಲೆಗೆ ಹೋಲಿಕೆಯಾಗಿದೆ. ಅದನ್ನು ಸಮುದ್ರದಲ್ಲಿ ಹಾಕಿ ಎಲ್ಲಾ ಜಾತಿಯ ಮೀನುಗಳನ್ನು ಹಿಡಿದರು" - ಮತ್ತಾಯ 13:47

ಸಾಮಾನ್ಯವಾಗಿ ನಾವು ಸಮುದ್ರದಲ್ಲಿ ಮೀನು ಹಿಡಿಯಲು ಉಪಯೋಗವಾಗುತ್ತೇವೆ. ನಾನಿಲ್ಲದಿದ್ದರೆ ಮೀನುಗಾರರು ಹೇರಳವಾಗಿ ಮೀನು ಹಿಡಿಯಲು ಸಾಧ್ಯವಾಗುವುದಿಲ್ಲ.  ನಾನು ನೈಲಾನ್ ಹಗ್ಗಗಳಿಂದ ಮಾಡಲ್ಪಟ್ಟಿದ್ದೇನೆ ಮತ್ತು ತುಂಬಾ ದೃಢವಾಗಿರುತ್ತೇನೆ.  ನನ್ನ ದೃಢಸಂಕಲ್ಪದಿಂದಾಗಿ ನಾನು ತೂಕದ ಮೀನುಗಳನ್ನು ಮತ್ತು ಎಣಿಸಲೂ ಸಾಧ್ಯವಿಲ್ಲದಷ್ಟು ಮೀನುಗಳನ್ನೂ ತರಬಲ್ಲೆ. ಮೀನುಗಳನ್ನು ಹೊರಗೆ ಬಿಡದೆ ಸುರಕ್ಷಿತವಾಗಿ ದಡ ಸೇರಿಸಲು ಸಹಾಯ ಮಾಡುತ್ತೇನೆ.  ನಾವು ಆಳವಾದ ಸ್ಥಳಗಳಲ್ಲಿಯೂ ಎಸೆಯಲ್ಪಡುವುದುಂಟು.  ಆಳವಿಲ್ಲದ ಸ್ದಳಗಳಲ್ಲಿಯೂ ಎಸೆಯಲ್ಪಡುವುದುಂಟು. ಯಾವ ಸ್ಥಳಕ್ಕೆ ಎಸೆದರೂ ನಮ್ಮಿಂದ ಮೀನುಗಳನ್ನು ತರಲು ಸಾಧ್ಯ. ನಾವು ನಿರ್ಲಕ್ಷ್ಯವಾಗಿರುವುದಿಲ್ಲ. ನಮ್ಮೊಳಗೆ ಬರುವ ಮೀನುಗಳನ್ನು ಬಿಡದೇ ಹಿಡಿದುಕೊಂಡು ದಡ ಸೇರಿಸುವವರೆಗೂ ನಾವು ಅದನ್ನು ಬಿಡುವುದಿಲ್ಲ.

ಸತ್ಯವೇದದಲ್ಲಿ ಯೇಸುವಿನ ಕೆಲವು ಶಿಷ್ಯರು ಮೀನುಗಾರರಾಗಿದ್ದರು.  ಒಂದು ದಿನ ಅವರು ಬಲೆಗಳನ್ನು ತೊಳೆಯುತ್ತಿದ್ದರು. ಅಂದರೆ ದುರಸ್ತಿ ಕಾರ್ಯ  ಭರದಿಂದ ಸಾಗುತ್ತಿತ್ತು. ಯೇಸು ಪೇತ್ರನೆಂಬ ಶಿಷ್ಯನಿಗೆ ಆಳವಾದ ಸ್ಥಳಕ್ಕೆ ದೋಣಿಯನ್ನು ನಡಿಸಿ ಮೀನುಬೇಟೆಗಾಗಿ ನಿಮ್ಮ ಬಲೆಗಳನ್ನು ಹಾಕಿರಿ ಎಂದು ಹೇಳಿದನು. ಪೇತ್ರನು ತನ್ನ ಬಲೆಯನ್ನು ಬೀಸಿದ ಕೂಡಲೆ ದೋಣಿಯು ತುಂಬಬಹುದಾದಷ್ಟು ಮೀನುಗಳನ್ನು ಸ್ವಾಧೀನಪಡಿಸಿಕೊಂಡರು.

ದೇವರ ಮಕ್ಕಳೇ!  ನೀವು ನಿಮ್ಮ ಸಭೆಯೊಂದಿಗೆ ಸೇರಿ ಆತ್ಮ ಆದಾಯವನ್ನು ಮಾಡುತ್ತಿದ್ದೀರಾ?  ನಿಮ್ಮ ಕೈಗಳಲ್ಲಿ ಸಿಕ್ಕಿರುವ ಆತ್ಮಗಳನ್ನು ಹೊರಗೆ ಹೋಗದಂತೆ ಕಾಪಾಡಿಕೊಳ್ಳುತ್ತಿದ್ದೀರಾ?  ನಾವು ಸೇವೆಗೆ ಹೋಗುವ ಸ್ಥಳ ಕಷ್ಟಕರವಾದದ್ದೋ ಅಥವಾ ಸುಲಭವಾದದ್ದೋ ಆತ್ಮ ಆದಾಯವನ್ನು ಮಾಡಲು ಉತ್ಸಾಹದಿಂದಿದ್ದೀರಾ?  ಆತ್ಮ ಆದಾಯವು ಕಡಿಮೆಯಾದರೂ ಅಥವಾ ಆತ್ಮಗಳು ಸಭೆಯನ್ನು ಬಿಟ್ಟು ಹೋಗುತ್ತಿದ್ದಾರೆ ಎಂದರೂ ನೀವು ಒಂದು ಕೆಲಸವನ್ನು ಮಾಡಬೇಕು. ನಾವು ಬಲೆಯನ್ನು ಸರಿಪಡಿಸಲು ನಮ್ಮ ಯಜಮಾನನ ಕೈಗೆ ನಮ್ಮನ್ನು ಒಪ್ಪಿಸಿಕೊಡುವಂತೆಯೇ, ನಿಮ್ಮ ಅಸಾಮರ್ಥ್ಯವನ್ನು ಸರಿಪಡಿಸಲು ನೀವು ನಿಮ್ಮನ್ನು ಕರ್ತನ ಕೈಯಲ್ಲಿ ಒಪ್ಪಿಸಿಕೊಡಬೇಕು.  ನಾವು ನಮ್ಮ ಬಲೆಗಳಲ್ಲಿ ಅನೇಕ ರೀತಿಯ ಮೀನುಗಳನ್ನು ಸಂರಕ್ಷಿಸಿ ಸಂಗ್ರಹಿಸುವ ಹಾಗೆ, ನೀವು ನಿಮ್ಮ ಬಳಿ ಹೋರಾಟದಿಂದ, ಅನಾರೋಗ್ಯದಿಂದ, ಬಡತನದಿಂದ ಮತ್ತು ಸಾಲದಿಂದ ನಿಮ್ಮ ಬಳಿಗೆ ಬರುವವರನ್ನು ಆದರಿಸಿ ಅವರಿಗಾಗಿ ಪ್ರಾರ್ಥಿಸುತ್ತಿದ್ದೀರಾ?

ದೇವರ ಮಕ್ಕಳೇ!  ನೀವು ಮಾಡುವ ಕೆಲಸ ಬಹಳ ಉನ್ನತವಾಗಿದೆ.  ಅದು ಏನೆಂದರೆ,  ನರಕಕ್ಕೂ ಮತ್ತು ಪಾತಾಳಕ್ಕೂ ಹೋಗುವ ಮಾನವರನ್ನು ರಕ್ಷಿಸಿ ಅವರನ್ನು ಪರಲೋಕಕ್ಕೆ ಕೊಂಡೊಯ್ದು ಸೇರಿಸುವ ಉತ್ತಮವಾದ ಕೆಲಸ. ಆದ್ದರಿಂದ ದಯವಿಟ್ಟು  ನಿರ್ಲಕ್ಷ್ಯವಾಗಿ ಇರದೇ ತ್ವರಿತವಾಗಿ ಕಾರ್ಯನಿರ್ವಹಿಸಿ.  ನಾವು ಹಿಡಿದಿರುವ ಮೀನುಗಳು  ತುಂಬಾ ರುಚಿಕರವಾದದ್ದು.  ಅದೇ ರೀತಿ ಆತ್ಮ ಆದಾಯವು ತುಂಬಾ ರುಚಿಕರವಾದದ್ದೇ ರೀ, ಅದನ್ನು ಸೇವಕರು ಮಾತ್ರ ಮಾಡಬೇಕೆಂದೇನಿಲ್ಲ.  ಪ್ರತಿಯೊಬ್ಬ ಕ್ರೈಸ್ತನೂ ಕಡ್ಡಾಯವಾಗಿ ಮಾಡಬೇಕಾದ ಕೆಲಸ. ಸರೀನಾ!
-    Mrs.  ಶಕ್ತಿ ಶಂಕರರಾಜ್

ಪ್ರಾರ್ಥನಾ ಅಂಶ:
ನಮ್ಮ ಸೇವೆಯಲ್ಲಿರುವ 790 ಸೇವಕರ ಯೋಗಕ್ಷೇಮ ಮತ್ತು ಆರೋಗ್ಯಕ್ಕಾಗಿ ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel bahsegel holiganbet holiganbet giriş holiganbet güncel giriş perabet perabet giriş perabet güncel giriş perabet perabet giriş perabet perabet giriş perabet güncel giriş casibom casibom giriş casibom güncel giriş meritking meritking giriş meritking güncel giriş pusulabet pusulabet giriş pusulabet güncel giriş holiganbet holiganbet giriş holiganbet güncel giriş jojobet jojobet giriş jojobet güncel giriş kingroyal kingroyal giriş kingroyal güncel giriş bahsegel bahsegel bahsegel marsbahis jojobet marsbahis marsbahis bahsegel bahsegel