Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.02.2022 (God’s creation’s special)
Share:

By Village Missionary Movement

Thursday, 17-Feb-2022

ಧೈನಂದಿನ ಧ್ಯಾನ(Kannada) – 17.02.2022 (God’s creation’s special)

ಬೆಂಕಿಯ ಆತಂಕ

“...ದೇಹವನ್ನು ಕೊಂದು ಆತ್ಮವನ್ನು ಕೊಲ್ಲಲಾರದವರಿಗೆ ಹೆದರಬೇಡಿರಿ, ಆತ್ಮ ದೇಹ ಎರಡನ್ನೂ ಕೂಡ ನರಕದಲ್ಲಿ ಹಾಕಿ ನಾಶಮಾಡಬಲ್ಲಾತನಿಗೇ ಹೆದರಿರಿ." - ಮತ್ತಾಯ 10:28

"ಅಯ್ಯೋ, ನಮ್ಮನ್ನು ಬಿಡಿಸುವವರು ಯಾರೂ ಇಲ್ಲವಾ?’ ಎಂಬ ಕೂಗು ಅಳು ಮತ್ತು ಹಲ್ಲು ಕಡಿಯೋಣವು ತುಂಬಿದ್ದ  ಸ್ಥಳವದು.  ಅಲ್ಲಿಗೆ ಹೋದವರು ಯಾರೂ ಕೂಡ ಹಿಂತಿರುಗಿ ಬರಲು ಸಾಧ್ಯವಿಲ್ಲ.  ಈ ಸ್ಥಳದಲ್ಲಿ ನನ್ನ ಪಾತ್ರವೇ ಹೆಚ್ಚು.  ನಾನು ಯಾರೆಂದು ನೋಡುತ್ತೀರಾ?  ನಾನೇ ಪಾಪ ಪುಣ್ಯ ನೋಡದೆ ದಹಿಸುವ ಬೆಂಕಿ ಮಾತನಾಡುತ್ತಿದ್ದೇನೆ.  ಭೂಮಿಯ ಮೇಲೆ ಅತ್ಯಂತ ಬೆಲೆಬಾಳುವ ಚಿನ್ನವನ್ನು ನಾನು ಪರೀಕ್ಷಿಸುತ್ತೇನೆ.  ನಾನು ಅವುಗಳ ಆಕಾರವನ್ನು ಬದಲಾಯಿಸಬಹುದು ಮತ್ತು ನಂತರ ಅದನ್ನು ಹೊಳೆಯುವಂತೆ ಮಾಡಬಹುದು.  ಈ ರೀತಿ ನಾನು ಕೆಲವು ಒಳ್ಳೆಯ ವಿಷಯಗಳಿಗೆ ಒಗ್ಗಿಕೊಳ್ಳುತ್ತೇನೆ.  ನಾನು ಯಾರನ್ನೂ ಬೇಕಾದರೂ ಮುಟ್ಟುತ್ತೇನೆ.  ಆದರೆ ನನ್ನನ್ನು ಮುಟ್ಟಲು ಯಾರಿಂದಲೂ ಆಗುವುದಿಲ್ಲ. ಹೀಗೆ ನಾನು ನನಗೆ ಸರಿ ಎನಿಸಿದ್ದನ್ನು ಮಾಡಿ ಮುಗಿಸುತ್ತೇನೆ ಎಂಬ ಹೆಮ್ಮೆ ನನಗಿತ್ತು.  ಆದರೆ ನಾನು ಸೋತು ಹೋಗುವ ದಿನವೊಂದು ಬಂತು.

606 ನೇ ವರ್ಷ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನೆಂಬವನು ದಂಡನೆ ವಿಧಿಸಿದ್ದ
ದೇವರ ಮಕ್ಕಳಾದ 3 ಜನರನ್ನು ನನ್ನ ಬಳಿಗೆ ತಂದು, ಕೊಲ್ಲಲು ಆದೇಶಿಸಿದರು.  ಆದರೆ ನಾನು ಅವರಿಗೆ ಏನೂ ಮಾಡಲು ಸಾಧ್ಯವಾಗಲಿಲ್ಲ.  ಅಷ್ಟೇ ಏಕೆ, ಅವರ ಕೂದಲನ್ನೂ ಕೂಡ ಮುಟ್ಟಲಾಗಲಿಲ್ಲ. ತಕ್ಷಣ ನೋಡಿದರೆ ಮೂವರ ಜೊತೆ ಇನ್ನೊಬ್ಬರು ಸಂಚರಿಸುವುದನ್ನು ನೋಡಿದೆ.  ಚೆನ್ನಾಗಿ ದೃಷ್ಟಿಸಿ ನೋಡಿದಾಗ ಅದು ದೇವರ ಮಗನಾದ ಕರ್ತನಾದ ಯೇಸು ಕ್ರಿಸ್ತನು! ಅವರನ್ನು ಆಳಲು ನಮ್ಮಿಂದ ಸಾಧ್ಯವಿಲ್ಲವೇ!  ಅವರಿದ್ದಾಗ ಯಾವ ಪ್ರಕೃತಿಯೂ ಅವರಿಗೆ ವಿರುದ್ಧವಾಗಿ ಎದ್ದೇಳಲು ಸಾಧ್ಯವಿಲ್ಲ.  ಅವರು ದಹಿಸುವ ಬೆಂಕಿಯಾಗಿದ್ದಾರೆ.  ಆಗಲೇ ಅರ್ಥವಾಯಿತು ಅವರನ್ನು ಮಾತ್ರವಲ್ಲ, ಅವರನ್ನೇ ಅವಲಂಬಿಸಿ ಅವರಿಗಾಗಿಯೇ ಬದುಕುವವರನ್ನೂ ಕೂಡ, ಅವರ ಚಿತ್ತವಿಲ್ಲದೆ ನಾನೇನೂ ಮಾಡಲು ಸಾಧ್ಯವಿಲ್ಲ ಎಂದು! 

ದೇವರ ಮಕ್ಕಳೇ!  ನಾನು ಬೆಂಕಿಯೇ.  ನಾನು ಇತರರ ದೇಹವನ್ನು ನಾಶಮಾಡಬಲ್ಲೆ ಹೊರತು,  ಅವರ ಆತ್ಮಗಳನ್ನು ಏನೂ ಮಾಡಲು ಸಾಧ್ಯವಿಲ್ಲ.  ಆದರೆ ನೀವು ಜನರನ್ನು ದೇವರಿಗಾಗಿ ಆದಾಯ ಮಾಡಬಹುದು. ನೀವು ನಿಮ್ಮ ಆತ್ಮದಲ್ಲಿ ಬೆಂಕಿಯಾಗಿ, ವೈರಾಗ್ಯದಿಂದ ಇರುವಾಗ ಖಂಡಿತವಾಗಿ ನೀವು ಅನೇಕರನ್ನು ದೇವರಿಗಾಗಿ ಹೊತ್ತಿ ಉರಿಯುವಂತೆ   ಮಾರ್ಪಡಿಸಬಹುದು.  ಮಾಡುತ್ತೀರಾ?

ಈಗ ನೋಡುತ್ತಿರುವ ಜಗತ್ತಿನಲ್ಲಿ ನನಗೆ ಒಂದು ಕೊನೆಯ ಕೆಲಸವಿದೆ.  2 ಪೇತ್ರ 3:7 ರಲ್ಲಿ ಹೇಳಿರುವಂತೆ, ಈ ಅನ್ಯಾಯ ಅಕ್ರಮ ತುಂಬಿರುವ ಲೋಕ ನನಗೆ ಆಹಾರವಾಗಿ ಇಡಲ್ಪಟ್ಟಿದೆ. ಅದನ್ನು ನಾಶಮಾಡಿ,  ನ್ಯಾಯ ವಾಸಮಾಡುವ ಹೊಸ ಭೂಮಿ ಬರಲು ನಾನು ದಾರಿತೋರಿಸುತ್ತೇನೆ. ಆದರೆ ಭೂಮಿಯನ್ನು ನಾಶಮಾಡುವುದರೊಂದಿಗೆ ನನ್ನ ಕೆಲಸ ಮುಗಿದು ಹೋಗುವುದಿಲ್ಲ. ಮಾನಸಾಂತರ ಹೊಂದದ  ಪಾಪಿಗಳಿಗಾಗಿ ನೇಮಿಸಲ್ಪಟ್ಟಿರುವ ಬೆಂಕಿ ನರಕದಲ್ಲಿ ನಾನು ಶಾಶ್ವತವಾಗಿ ಉರಿಯುತ್ತಲೇ ಇರುತ್ತೇನೆ.  ಹಲ್ಲು ಕಡಿಯೋಣವು ತುಂಬಿರುವ ಆ ಸ್ಥಳಕ್ಕೆ ನಿಮಗೆ ತಿಳಿದಿರುವ ಜನರು ಬಂದು ಬಿಡದಂತೆ ಅವರು ಯೇಸುವನ್ನು ತಿಳಿದುಕೊಳ್ಳಲು ನೀವು ಸಹಾಯ ಮಾಡುವುದಿಲ್ಲವೇ?  ನನ್ನ ಆತಂಕವನ್ನು ಅರ್ಥಮಾಡಿಕೋಳ್ಳುತ್ತೀರಾ?
-    Mrs.  ಉಮಾ ವಿಲಿಯಮ್ಸ್

ಪ್ರಾರ್ಥನಾ ಅಂಶ:
ಸಹ ಸೇವಕರು ಕೆಲಸ ಮಾಡುತ್ತಿರುವ ಆಲಯಗಳಿಲ್ಲದ ಹಳ್ಳಿಗಳಲ್ಲಿ ಆಲಯಗಳನ್ನು ನಿರ್ಮಿಸಲು ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel bahsegel holiganbet holiganbet giriş holiganbet güncel giriş perabet perabet giriş perabet güncel giriş perabet perabet giriş perabet perabet giriş perabet güncel giriş casibom casibom giriş casibom güncel giriş meritking meritking giriş meritking güncel giriş pusulabet pusulabet giriş pusulabet güncel giriş holiganbet holiganbet giriş holiganbet güncel giriş jojobet jojobet giriş jojobet güncel giriş kingroyal kingroyal giriş kingroyal güncel giriş bahsegel bahsegel bahsegel marsbahis jojobet marsbahis marsbahis bahsegel bahsegel