Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.02.2022 (God’s creation’s special)
Share:

By Village Missionary Movement

Wednesday, 16-Feb-2022

ಧೈನಂದಿನ ಧ್ಯಾನ(Kannada) – 16.02.2022 (God’s creation’s special)

ಮರದ ಕಟ್ಟಿಗೆಯ ಅದೃಷ್ಟ

“...ಆರೋನನು ಕೊಟ್ಟಿದ್ದ ಕೋಲು ಚಿಗುರಿ ಮೊಗ್ಗೆ ಬಿಟ್ಟು ಹೂವರಳಿ ಬಾದಾವಿು ಹಣ್ಣುಗಳನ್ನು ಫಲಿಸಿತ್ತು." - ಅರಣ್ಯಕಾಂಡ 17: 8

ನಾವು ಸುಡಲು ಸೌದೆಗಳಾಗಿಯೇ ಉಪಯೋಗವಾಗುತ್ತೇವೆ.  ನಾವು ಸಾಮಾನ್ಯವಾಗಿ ಗಣನೆಗೆ ಬಾರದೆ ಹೋಗುತ್ತೇವೆ.  ಒಂದು ದಿನ ತುಂಬಾ ಮಳೆ ಸುರಿದದ್ದರಿಂದ  ಹೇಗಾದರೂ ನನ್ನನ್ನು ಕಾಪಾಡಿ ಬಿಡು ಎಂದು ನೀರನ್ನು ಕೇಳಿದೆ.  ಮಳೆಯು ನನ್ನನ್ನು ಹೊಡೆದುಕೊಂಡು ಹೋಗಿ ನನಗೇನು ಎಂಬಂತೆ ಒಂದು ಬದಿಗೆ ಹಾಕಿಬಿಟ್ಟು ಹೊರಟು ಹೋಯಿತು. ಪುನಃ ಒಂದು ಮೂಲೆಯಲ್ಲಿ  ಬಿದ್ದಿದ್ದೆನು. ನನಗೆ ಒಳ್ಳೇ ದಿನಗಳು ಬರುವುದಿಲ್ಲವಾ, ನಾನು ಬೇರೆ ಮರಗಳಂತೆ ಚಿಗುರಿಸಿ ಕಾಯಿ ಹಣ್ಣುಗಳನ್ನು ಕೊಡುವುದಿಲ್ಲವೋ ಎಂದು ಹಂಬಲಿಸುತ್ತಿದ್ದೆನು. ನನ್ನ ಹಂಬಲದ ಧ್ವನಿಯು ನನ್ನನ್ನು ಸೃಷ್ಟಿಸಿದಾತನಿಗೆ ಕೇಳಿಸಿತು.  ಆಮೇಲೆ ಏನಾಯ್ತು ಗೊತ್ತಾ?  ಆರೋನನೆಂಬ ವ್ಯಕ್ತಿ ನನ್ನನ್ನು ಕಂಡು ಅದರ ಮೇಲೆ ತನ್ನ ಹೆಸರನ್ನು ಬರೆದು ದೇವರ ಸನ್ನಿಧಿಯಲ್ಲಿ ಇಟ್ಟನು.  ನನ್ನ ಬಳಿಯಿರುವ ಇತರ 11 ಕೋಲುಗಳಲ್ಲಿ ಆಯಾ ಕುಲಗಳ ಹೆಸರುಗಳನ್ನು ಬರೆಯಲ್ಪಟ್ಟು ಇಡಲಾಗಿತ್ತು.  ಏನಾಶ್ಚರ್ಯ!  ಮರುದಿನ ಒಣಗಿ ಹೋಗಿದ್ದ ನಾನು ಚಿಗುರಿಸಿ ಹೂವರಳಿ ಬಾದಾಮಿಯನ್ನು ಕೊಟ್ಟೆ.  ಒಂದೇ ದಿನದಲ್ಲಿ ಚಿಗುರಿಸಿ ಹೂವು ಹಣ್ಣು ಕೊಟ್ಟದ್ದರ ಹಿಂದಿನ ಗುಟ್ಟೇನು ಎಂದು ಹೇಳಲಾ?

ಸತ್ಯವೇದದಲ್ಲಿ ಮೋಶೆ ಮತ್ತು ಆರೋನ್ ಎಂಬ ದೇವರ ಮನುಷ್ಯರಿದ್ದರು. ಅವರು ದೇವರ ಸನ್ನಿಧಾನದಲ್ಲಿ ಯಾಜಕ ಸೇವೆಯನ್ನು ಮಾಡುತ್ತಿದ್ದರು.  ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದರು.  ಮತ್ತು ಇಸ್ರಾಯೇಲಿನ ಎಲ್ಲಾ 12 ಕುಲಗಳು ಮೋಶೆ ಮತ್ತು ಆರೋನರೆಂಬ ನಾಯಕರ ವಿರುದ್ಧ ಗುಣುಗುಟ್ಟಿ ವ್ಯರ್ಥವಾಗಿ ಅವರ ಮೇಲೆ ನಿಂದನೆಯನ್ನು ಹೊರಿಸಿದರು.  ಹಾಗಾಗಿ ಆ 11 ಕೋಲುಗಳೂ ದೇವರ  ಸನ್ನಿಧಿಯಲ್ಲಿ ಗುಣುಗಟ್ಟುತ್ತಾ ಕಂಡವು.  ಹಾಗಾಗಿ ಅವು ಚಿಗುರಿಸಲಿಲ್ಲ. ನಾನು ಚಿಗುರಿಸಲು  ಕಾರಣ ನನ್ನನ್ನು ಎತ್ತಿಕೊಂಡ ದೇವ ಮನುಷ್ಯನ ವಿಧೇಯತೆ ಮತ್ತು ಭಯಭಕ್ತಿಯೇ.

ದೇವರ ಮಕ್ಕಳೇ!  ನೀವು ಬಹಳ ದೀರ್ಘ ಕಾಲದಿಂದ ಯಾವುದೋ ಒಂದು ಕಾರ್ಯಕ್ಕಾಗಿ ಕಾಯುತ್ತಿದ್ದೀರಾ?  ಅದು ಗರ್ಭ ಫಲವಾಗಿರಬಹುದು, ಕೆಲಸವಾಗಿರಬಹುದು, ಪದವಿ ಉನ್ನತಿಯಾಗಿರಬಹುದು, ವೃತ್ತಿಯಾಗಿರಬಹುದು, ಮಕ್ಕಳ ಮದುವೆ ಆಗಿರಬಹುದು, ಏನೇ ಇರಲಿ ನಿಮ್ಮ ಕಾಯುವಿಕೆ ಹರ್ಷವಾಗಿ ಬದಲಾಗುವುದು ಖಚಿತ.  ನಮ್ಮ ದೇವರು ಎಲ್ಲವನ್ನು ಮಾಡಬಲ್ಲನು ಎಂಬ ನಂಬಿಕೆಯೊಂದಿಗೆ ಗೊಣಗದೆ ದೇವರ ಸನ್ನಿಧಿಯಲ್ಲಿ ಕಾದಿರುವಾಗ ಸಂತೋಷವು ಗ್ಯಾರಂಟಿ.  ನಿಮ್ಮ ಕಾರ್ಯಗಳು ಚಿಗುರಿಸುತ್ತವೆ.  ನೀವು ಸ್ಥಾನ ಮತ್ತು ಅಧಿಕಾರವನ್ನು ಹುಡುಕದೆ, ಆರೋನನಂತೆ ದೇವರು ನಿಮಗೆ ಕೊಟ್ಟಿರುವ ಜವಾಬ್ದಾರಿಯನ್ನು ಗುಣುಗುಟ್ಟದೆ ಮಾಡುವಾಗ, ದೇವರು ಹುಡುಕಿ ಬಂದು ನಿಮ್ಮನ್ನು ಮೇಲಕ್ಕೆತ್ತುವುದು ಖಚಿತ.  ಬಹಳ ದಿನಗಳಿಂದ ಕಾದಿರುವುದು ಹೃದಯವನ್ನು ಹಿಂಡುವಂತೆ ಮಾಡುತ್ತದೆ ಆದರೆ ಬಯಸಿದ ವಿಷಯ ಬಂದಾಗಲೋ ಜೀವೃಕ್ಷದಂತೆ ಇರುತ್ತದೆ.  ಆಮೆನ್.
-    Mrs.  ಜ್ಯೋತಿ ಸ್ಟಾಲಿನ್
 
ಪ್ರಾರ್ಥನಾ ಅಂಶ:
ಗಾಂಧಿನಗರ ಪ್ರಾಂತ್ಯದಲ್ಲಿ ಸುವಾರ್ತಾ ಸೇವೆಯನ್ನು ಮಾಡಲು ನಾಲ್ಕು ಚಕ್ರದ ವಾಹನವನ್ನು ತೆಗೆದುಕೊಳ್ಳಲು ಬೇಕಾದ ಅವಶ್ಯಕತೆಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel bahsegel holiganbet holiganbet giriş holiganbet güncel giriş perabet perabet giriş perabet güncel giriş perabet perabet giriş perabet perabet giriş perabet güncel giriş casibom casibom giriş casibom güncel giriş meritking meritking giriş meritking güncel giriş pusulabet pusulabet giriş pusulabet güncel giriş holiganbet holiganbet giriş holiganbet güncel giriş jojobet jojobet giriş jojobet güncel giriş kingroyal kingroyal giriş kingroyal güncel giriş bahsegel bahsegel bahsegel marsbahis jojobet marsbahis marsbahis bahsegel bahsegel