Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 15.02.2022 (God’s creation’s special)
Share:

By Village Missionary Movement

Tuesday, 15-Feb-2022

ಧೈನಂದಿನ ಧ್ಯಾನ(Kannada) – 15.02.2022 (God’s creation’s special)

ಕ್ಷಿಪಣಿ

"...ನೀವು ಹಳೇ ಮನುಷ್ಯನನ್ನು ಅವನ ಕೃತ್ಯಗಳ ಕೂಡ ತೆಗೆದುಹಾಕಿದ್ದೀರಲ್ಲವೇ?...ನೂತನ ಮನುಷ್ಯನನ್ನು ಧರಿಸಿಕೊಂಡವರಾಗಿದ್ದೀರಿ" - ಕೊಲೊಸ್ಸೆಯವರಿಗೆ 3: 9-10

ಸ್ನೇಹಿತರೇ!  ನಾನು ಯಾರೆಂದು ಕಂಡುಹಿಡಿಯಿರಿ ನೋಡೋಣ.  ನಾನು ನದಿಯ ಬಳಿ ಇರುತ್ತೇನೆ.  ನನ್ನ ನುಣುಪಾದ ಮೈಯನ್ನು ನೋಡಿ ಕೈಯಲ್ಲಿ ಎತ್ತಿಕೊಳ್ಳದವರೇ ಇರುವುದಿಲ್ಲ.  ನಿಮ್ಮ ಮನೆಯ ಮೀನಿನ ತೊಟ್ಟಿಯಲ್ಲೂ ನಾನು ಇರುತ್ತೇನೆ.  ನಾನು ಮುಖ್ಯವಾಗಿ ಬೈಬಲ್‌ನಲ್ಲಿದ್ದೇನೆ.  Wow correct ನಾನೇ ನುಣುಪುಕಲ್ಲು.

ನನ್ನ ಕಥೆಯನ್ನು  ಹೇಳ್ಳಾ?  ನಾನು ನುಣುಪುಕಲ್ಲಾಗಿಯೇ ಹುಟ್ಟಲಿಲ್ಲ.  ನಾನು ದೊಡ್ಡ ಬಂಡೆಯಾಗಿ ಒಂದು ಬೆಟ್ಟದಲ್ಲಿ  ಇದ್ದೆನು.  ಒಂದು ದಿನ ಬಂದ ಭೀಕರವಾದ ಸಿಡಿಲು ಬಿರುಗಾಳಿಯಿಂದ ಒಡೆದು ಹೋಗಿ, ಬೆಟ್ಟಗಳಲ್ಲಿ ಮತ್ತು ಮರಗಳಲ್ಲಿ ಬಿದ್ದು ಎಷ್ಟೋ ಪಾಡುಪಟ್ಟು ಅರ್ಧಪ್ರಾಣಹೋಗಿ ನದಿಯ ದಡದಲ್ಲಿ ಬಂದು ಬಿದ್ದೆ. ಅಸ್ತವ್ಯಸ್ತವಾಗಿ ಕೇವಲವಾಗಿದ್ದ ನನ್ನ ಬಳಿ ಬಂದ ಹಲವರ ಕಾಲುಗಳನ್ನು ಚುಚ್ಚಿ ಸೀಳಿದ್ದೇನೆ. ಹಲವರನ್ನು ಗಾಯಪಡಿಸಿದ್ದೇನೆ.  ಒಂದು ದಿನ ನದಿ ಉಕ್ಕಿ ಹರಿದು ನನ್ನನ್ನು ಕೊಚ್ಚಿಕೊಂಡು ಹೋಯಿತು.  ನಾನು "ಅಯ್ಯೋ" ಎಂದು ಕೂಗಿದೆ.  ನಾನು ನೀರಿನಲ್ಲಿ ಮುಳುಗಿದೆ.  ಬೆಟ್ಟ ಗುಡ್ಡ ಹಳ್ಳ ದಿಣ್ಣೆ ಹೀಗೆ ಅನೇಕ ಸ್ಥಳಗಳಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದೆ. ಕೊನೆಗೆ ನದಿ ನೀರು ನನ್ನನ್ನು ಒಂದು ಕಡೆಗೆ ತಳ್ಳಿತು.  "ಅಬ್ಬಾ" ಎಂದು ನಿಟ್ಟುಸಿರು ಬಿಡುತ್ತಾ ನನ್ನತ್ತ ನೋಡಿದೆ.  ಆಶ್ಚರ್ಯ!  ನನ್ನ ಎಲ್ಲಾ ಚೂಪಾದ ಭಾಗಗಳೆಲ್ಲಾ ಉಜ್ಜಿಹೋಗಿ ಫಳಫಳ ಎಂದು ಹೊಳೆಯುವ ರೂಪವನ್ನು ಹೊಂದಿದ್ದೆ.

ಆಗ ದೂರದಲ್ಲಿ ಒಬ್ಬ ಸುಂದರ ಯುವಕ ಬರುತ್ತಿರುವುದನ್ನು ಕಂಡೆ.  ಅವನು ಸಂತೋಷದಿಂದ ನನ್ನನ್ನು ಎತ್ತಿಕೊಂಡು ತನ್ನ ಚೀಲಕ್ಕೆ ಹಾಕಿಕೊಂಡನು.  ನಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂದು ನನಗೆ ಊಹಿಸಲು ಸಾಧ್ಯವಾಗಲಿಲ್ಲ.  ಸ್ವಲ್ಪ ಸಮಯದ ನಂತರ ಭಯಾನಕ ಶಬ್ದ ಕೇಳಿಸಿತು.  ಈ ವ್ಯಕ್ತಿ ನನ್ನನ್ನು ವೇಗವಾಗಿ ಎತ್ತಿಕೊಂಡು ಕವಣೆಯಲ್ಲಿ ಹಾಕಿ ಚೆನ್ನಾಗಿ ತಿರುಗಿಸಿ ಹೊಡೆದನು.  ನಾನು ಶತ್ರುವಿನ ಹಣೆಯಲ್ಲಿ ಪತನವನ್ನು ನೋಡಿದೆ.  ದೊಡ್ಡ ಉಲ್ಲಾಸ!  ನಂತರವೇ ಇವನು ದಾವೀದನು ಎಂದು, ಕೆಳಗೆ ಬಿದ್ದ ಶತ್ರು ಗೋಲಿಯಾತ್ ಎಂದೂ ತಿಳಿದುಕೊಂಡೆ. ನಾನು ಚಿಕ್ಕ ಕಲ್ಲೇ. ಆದರೆ ಗೋಲಿಯಾತ್ ಗೆ ಕ್ಷಿಪಣಿಯಾಗಿ ಕಾಣಿಸಿದೆ.  ಸಣ್ಣ ಕಲ್ಲಾಗಿರುವ  ನನ್ನನ್ನು ಉಪಯೋಗಿಸಿ ದೇವರು ಇಸ್ರಾಯೇಲ್ಯರಿಗೆ ರಕ್ಷಣೆಯನ್ನು ಕೊಟ್ಟದ್ದನ್ನು ನೆನೆಸಿ ದೇವರನ್ನು ಸ್ತುತಿಸಿದೆನು.

ನನ್ನ ಕಥೆಯನ್ನು ಕೇಳುತ್ತಿರುವ ಗೆಳೆಯ!  ದೇವರು ನಿಮ್ಮನ್ನು ಬಳಸಬೇಕೆಂದು ನೀವು ಬಯಸುತ್ತಿದ್ದೀರಾ?  ನಿನ್ನ ಎಲ್ಲಾ sharp corners ಗಳಲ್ಲಿ ಅಂದರೆ ಹೆಮ್ಮೆ, ಕೋಪ, ಹೊಟ್ಟೆಕಿಚ್ಚು, ಕಹಿ, ವೈರಾಗ್ಯದಂತಹ ಚೂಪಾದ ಮೂಲೆಗಳಿರುವ  ನಿನ್ನನ್ನು ದೇವರ ಕೈಗಳಿಗೆ ಒಪ್ಪಿಸಿಕೊಡು. ಅವರು ನಿನ್ನನ್ನು ಅನೇಕ ಪರಿಸ್ಥಿತಿಗಳ ಮಾರ್ಗದಲ್ಲಿ ನಡೆಸಿ, ನಿನ್ನನ್ನು ಒಡೆದು, ಬದಲಾಯಿಸಿ  ಅವರಿಗೆ ಉಪಯೋಗವಾಗುವ ವ್ಯಕ್ತಿಯಾಗಿ  ಪರಿವರ್ತಿಸುತ್ತಾರೆ.  ಅವರು ನನ್ನನ್ನೇ ಬಳಸಿದರೆಂದರೆ, ನಿನ್ನನ್ನು ಉಪಯೋಗಿಸುವುದು ಎಷ್ಟು ಖಚಿತ.
-    Mrs.  ಎಬನ್ ಸಂತೋಷ್

ಪ್ರಾರ್ಥನಾ ಅಂಶ:
ಒಡಿಶಾ ರಾಜ್ಯದ ವನ್ನಾ ಗ್ರಾಮದಲ್ಲಿ ಕಟ್ಟಲ್ಪಡುವ ದೇವಾಲಯದ ಕಟ್ಟಡ ಕೆಲಸಗಳಿಗಾಗಿ,  ಅವಶ್ಯಕತೆಗಳು ಪೂರೈಸಲ್ಪಡುವುದಕ್ಕಾಗಿ ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet ibizabet holiganbet amkbet sonbahis betgit cratosroyalbet cratosroyalbet gameofbet