Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.02.2022 (God’s creation’s special)
Share:

By Village Missionary Movement

Monday, 14-Feb-2022

ಧೈನಂದಿನ ಧ್ಯಾನ(Kannada) – 14.02.2022 (God’s creation’s special)

ಪ್ರೀತಿಯ ಇನ್ನೊಂದು ಮುಖ

"ಯೆಹೋವನನ್ನು ನಿರೀಕ್ಷಿಸಿಕೊಂಡಿರು;... ಯೆಹೋವನನ್ನು ನಿರೀಕ್ಷಿಸಿಕೊಂಡೇ ಇರು" - ಕೀರ್ತನೆ 27:14

ಇಂದು ಗುಲಾಬಿಗಳು ಹೆಚ್ಚು ಮಾರಾಟವಾಗುವ ದಿನ.  ಇಂದು ಹದಿಹರೆಯದವರು ಜಿಗಿಯುತ್ತಾ ಬಹಳ ಯೌವನದೊಂದಿಗೆ ಭೇಟಿಯಾಗುವ ದಿನವಿದು.

ಅಲೆಗಳಂತೆ ಹರಿಯುವ ಹೃದಯ, ಎದುರಿರುವವರನ್ನು ಕಂಡಾಗ ಉತ್ಸಾಹ, ಅವರ ಮಾತನಾಡುವ ಕಣ್ಣುಗಳು, ಕರಗುವ ಸಂತೋಷದ ಮುಖ  ಹಿತವಾದ ಮಾತುಗಳು ಇಂಥವರನ್ನು ಕಂಡ ಕೂಡಲೇ ಇವನು (ಳು)  ನನ್ನ ಜೀವನದ ಸಂಗಾತಿ ಎಂದು ತೀರ್ಮಾನಿಸಿ ಬಿಡುತ್ತಿದ್ದಾರೆ.  ಏನೂ ನೋಡಿದ ಕೂಡಲೇ ಪ್ರೀತೀನಾ?  ಇದು ಹೇಗೆ ಜೀವನಕ್ಕೆ ಸರಿಯಾಗಿರುತ್ತದೆ?

ಒಂದು ಹೊಸ ಬಟ್ಟೆಯನ್ನು ಖರೀದಿಸಲು ಒಂದು ಒಳ್ಳೆಯ ಶೋರೂಮ್‌ಗೆ ಹೋಗುತ್ತೀರ. ಅಲ್ಲಿ ಸುಂದರವಾದ ಬಟ್ಟೆಯನ್ನು ಸಿದ್ಧಮಾಡಿ ನೇತು ಹಾಕಿರುತ್ತಾರೆ.  ನೀವು ತಕ್ಷಣ ಅದರ ಬೆಲೆಯನ್ನು ಕೊಟ್ಟುಬಿಟ್ಟು ತೆಗೆದುಕೊಂಡು ಬಿಡ್ತೀರಾ ಏನು?  ಅಳತೆ, ಗುಣಮಟ್ಟ, ಬೆಲೆ, ಕಂಪನಿ ಹೆಸರು ಇದೆಲ್ಲಾ ನೆನಪಿಗೆ ಬಂದು ಬಿಡುತ್ತದಲ್ಲವೇ?  ಧರಿಸಿ ಬಿಚ್ಚಿ ಹಾಕುವ ಬಟ್ಟೆಗಳನ್ನೇ ಹೀಗೆ ಸೆಲೆಕ್ಟ್  ಮಾಡುವಾಗ, ನಮ್ಮ ಜೀವನದುದ್ದಕ್ಕೂ ನಮ್ಮೊಂದಿಗೆ ಬರುವ ಸಂಬಂಧವನ್ನು, ಕಂಡ ಕೂಡಲೇ ಆಯ್ಕೆ ಮಾಡುವುದು ಬುದ್ಧಿವಂತಿಕೆಯಾಗಿ ಕಾಣುತ್ತಿಲ್ಲವೇ!  ಇದು ಸಿನಿಮಾ ಮತ್ತು ಧಾರಾವಾಹಿಗಳಿಗೆ ಕಥೆಯಾಗಿರಬಹುದು.  ಆದರೆ ನಮ್ಮ ಜೀವನವು ನಟನೆಯೂ ಅಲ್ಲ, ಕನಸೂ ಅಲ್ಲ! ಪಾತ್ರೆಯೋ, ಮಡಿಕೆಯೋ ಅಲ್ಲ.  ತಪ್ಪು ಆಯ್ಕೆ ಮಾಡಿದ್ದೇನೆ, ಇದು ಬೇಡ, ಹೋಗಿ ಮತ್ತೊಂದನ್ನು ತೆಗೆದುಕೊಳ್ಳುತ್ತೇನೆ ಎಂಬುದಕ್ಕೆ!  ತಪ್ಪಾದ ಆಯ್ಕೆ ಎಂಬುದು ಬೇರು ತಿನ್ನುವ ಗೆದ್ದಲು.  ಪೋಷಕರು ಅಥವಾ ಭಕ್ತಿಯುಳ್ಳ ಸ್ನೇಹಿತರ ಸಹಾಯದೊಂದಿಗೆ  ಸರಿಯಾದ ವ್ಯಕ್ತಿಯನ್ನು ದೇವರು ನಿಮ್ಮ ಜೀವನದಲ್ಲಿ ಪ್ರವೇಶಿಸುವಂತೆ ಮಾಡುವವರೆಗೂ ದೇವರ ಸನ್ನಿಧಿಯಲ್ಲಿ ಕಾದಿರಿ.  ಹದಿಹರೆಯದಲ್ಲಿ ಕಾಣಿಸಿಕೊಳ್ಳುವ ತಾರುಣ್ಯದ ಭಾವನೆಗಳಿಗೆ ಸ್ಪಂದಿಸಿ ನಿಮ್ಮ ಭವಿಷ್ಯವನ್ನು ಕಳೆದುಕೊಳ್ಳಬೇಡಿರಿ.

ಇಂದು ಪ್ರೀತಿಯ ಇನ್ನೊಂದು ಮುಖವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.  ವೇಶ್ಯಾಗೃಹಗಳಲ್ಲಿ ಮಾರಾಟವಾಗುವ ಅನೇಕ ಯುವತಿಯರು ಅವರು ಪ್ರೀತಿಸುತ್ತಿದ್ದ ಯುವಕರ ಮೂಲಕವೇ ಮಾರಲ್ಪಟ್ಟವರು ಎಂದು ನಿಮಗೆ ಗೊತ್ತೇ?  ಯಾವ ಹುತ್ತದಲ್ಲಿ ಯಾವ ಹಾವು ಇರುತ್ತದೋ?  ನೀವು ಕಾಲ ಕಳೆದುಕೊಂಡ ಮೇಲೆ ಯೋಚಿಸುವುದಕ್ಕಿಂತ ಇಂದೇ ಯೋಚಿಸಿ.  ಹದಿಹರೆಯದಲ್ಲಿ ಸ್ವಯಂ ನಿಯಂತ್ರಣ ಅತ್ಯಗತ್ಯ. ನಿರ್ಜೀವ ಪದವಿಯೂ ಕೂಡ ಹತೋಟಿ ಇಲ್ಲದಿದ್ದರೆ ಉನ್ನತಕ್ಕೆ ತಲುಪದೇ ಮಣ್ಣಲ್ಲಿ ಬಿದ್ದುಬಿಡುತ್ತದೆ.  ಸ್ವಯಂ ನಿಯಂತ್ರಣವಿಲ್ಲದೆ ದೇವರ ಆಜ್ಞೆಗಳನ್ನು ಉಲ್ಲಂಘಿಸಿ, ಮದುವೆಯ ನಿಯಮಗಳನ್ನು ಹಿಂದಕ್ಕೆ ತಳ್ಳಿ ಬದುಕುವುದು ವಿನಾಶಕ್ಕೆ ಕಾರಣವಾಗುತ್ತದೆ.  ಮುಟ್ಟಿ ಸಹವಾಸ ಮಾಡುವುದು ಹತ್ತಿಯ ಬಳಿ ಬೆಂಕಿ ಇಡುವುದಕ್ಕೆ ಸಮ.  ದೇವರ ಭಯದೊಂದಿಗೆ ನಿಮ್ಮನ್ನು ಕಾಪಾಡಿಕೊಳ್ಳಿರಿ.

ಯೌವನಸ್ಥನೇ!  "ಯೌವನದಲ್ಲಿ ಕಲ್ಲು" ಎಂಬ ಹಳೆಯ ಗಾದೆ ಪ್ರಕಾರ ಪ್ರೀತಿಯಲ್ಲಿ ಬೀಳಲು ಸಮಯವಿಲ್ಲ ಎಂಬ board ನ್ನು ಹೃದಯದಲ್ಲಿ ನೇತುಹಾಕು. ಸ್ವಲ್ಪ ಕಾದಿರು. ಆದಾಮನಿಗೆ ತಕ್ಕ ಸಂಗಾತಿಯನ್ನು ಕೊಟ್ಟ ದೇವರು, ತಕ್ಕ ಸಮಯದಲ್ಲಿ ತಕ್ಕ ಸಂಗಾತಿಯನ್ನು ನಿನಗೂ ಕೊಡುತ್ತಾರೆ.  ಅವಳೊಂ (ನೊಂ)ದಿಗೆ  ಜೀವನದುದ್ದಕ್ಕೂ ಪ್ರೇಮಿಗಳ ದಿನವನ್ನು ಆಚರಿಸಬಹುದೇ!
-    Bro.  ಸಾಮುವೇಲ್ ರತ್ನಸ್ವಾಮಿ

ಪ್ರಾರ್ಥನಾ ಅಂಶ:
ಕಾರ್ಯಸ್ಥಳದ ಸೇವೆಗಳಲ್ಲಿ ಉಪಯೋಗಿಸಲ್ಪಡುವ ನಾಲ್ಕು ಚಕ್ರ ಮತ್ತು ದ್ವಿಚಕ್ರ ವಾಹನಗಳು ರಿಪೇರಿ ಇಲ್ಲದೇ ಉಪಯೋಗವಾಗುವಂತೆ ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel bahsegel holiganbet holiganbet giriş holiganbet güncel giriş perabet perabet giriş perabet güncel giriş perabet perabet giriş perabet perabet giriş perabet güncel giriş casibom casibom giriş casibom güncel giriş meritking meritking giriş meritking güncel giriş pusulabet pusulabet giriş pusulabet güncel giriş holiganbet holiganbet giriş holiganbet güncel giriş jojobet jojobet giriş jojobet güncel giriş kingroyal kingroyal giriş kingroyal güncel giriş bahsegel bahsegel bahsegel marsbahis jojobet marsbahis marsbahis bahsegel bahsegel