Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.01.2021
Share:

By Village Missionary Movement

Monday, 18-Jan-2021

ಧೈನಂದಿನ ಧ್ಯಾನ(Kannada) – 18.01.2021

ಏಕಾಂತತೆಯಲ್ಲಿ ಮಾಧುರ್ಯ

 "...ಏಕಾಂತವಾದ ಕೋಣೆಯೊಳಗೆ ಹೋಗಿ ಬಾಗಲನ್ನು ಮುಚ್ಚಿಕೊಂಡು ಅಂತರಂಗದಲ್ಲಿಯೂ ಇರುವ ನಿನ್ನ ತಂದೆಗೆ ಪ್ರಾರ್ಥನೆಮಾಡು; ಅಂತರಂಗದಲ್ಲಿ ನಡೆಯುವದನ್ನು ನೋಡುವ ನಿನ್ನ ತಂದೆಯು ನಿನಗೆ ಫಲಕೊಡುವನು." - ಮತ್ತಾಯ 6:6

ಅಶೋಕನ ಮನೆಯಲ್ಲಿ ಎಲ್ಲರೂ ವೇಗ ವೇಗವಾಗಿ ಕೆಲಸಕ್ಕೆ ಹೊರಡುತ್ತಿದ್ದರು. ಆದರೆ ಇವನು ಮಾತ್ರ ತನ್ನ ಫೋನಿನಲ್ಲಿ ಚಾರ್ಜ್ ಕಡಿಮೆಯಾಗದಂತೆ ನೋಡಿಕೊಳ್ಳುತ್ತಿದ್ದನು. ಅಪ್ಪ ಅವನ ಬಳಿ,  " ಲೋ ಅಶೋಕ್ ಜವಾಬ್ದಾರಿಯಿಂದ ಇರು, ಸಮಯವನ್ನು ವ್ಯರ್ಥವಾಗಿ ಕಳೆಯಬೇಡ, ಈ ಬಾರಿಯಾದರೂ IAS ರಿಸಲ್ಟ್ ನಲ್ಲಿ ಪಾಸಾಗು, ನಿನ್ನನ್ನು ನಂಬಿಯೇ ನಾವೆಲ್ಲರೂ ಇದ್ದೇವೆ ಕಣೋ"ಎಂದು ಹೇಳಿ ಬಿಟ್ಟು ತನ್ನ ಕೆಲಸಕ್ಕೆ ಹೊರಟು ಬಿಟ್ಟರು. ಅಶೋಕನೋ ಎಂದಿನಂತೆ ಮೊಬೈಲ್ ಫೋನ್ ನ status ನ್ನು, WhatsApp, Facebook ನಲ್ಲಿ updates ನ್ನು ನೋಡಿ ಸಮಯವನ್ನು ಕಳೆದನು. ಸಮಯ ಹೋಗುವುದೇ ಗೊತ್ತಾಗದಂತೆ ವ್ಯರ್ಥವಾದ ಕಾರ್ಯಗಳು ಅವನ ಸಮಯವನ್ನು, ಯೋಚಿಸುವ ತಿಳುವಳಿಕೆಯನ್ನು ನುಂಗಿಬಿಟ್ಟಿತು. ಶಾಲೆಗೆ ಹೋಗುವ ದಿನಗಳಲ್ಲಿ ಬುದ್ಧಿವಂತನಾಗಿ ಓದಿದರೂ, ಈ ಬಾರಿಯೂ IAS ರಿಸಲ್ಟ್ ನಲ್ಲಿ ಫೇಲಾದನು. ಮನೆಯ ಜವಾಬ್ದಾರಿ, ದೇಶದ ಜವಾಬ್ದಾರಿ ಎಂದು ಎಲ್ಲವನ್ನು ಮರೆತುಬಿಟ್ಟನು. ಅವನಿಗೆ ದೊರೆತ ಏಕಾಂತವಾದ ಸಮಯವನ್ನು ಗಮನಹರಿಸಬೇಕಾದ ಕಾರ್ಯದಲ್ಲಿ ಕಳೆಯದೆ, ಕೆಟ್ಟದ್ದಕ್ಕೆ ನೇರವಾಗಿ ಅವನನ್ನು ಏಕಾಂತವು ಮುನ್ನಡೆಸಿತು.

ರಾಜನಾಗಿದ್ದ ದಾವೀದನು ಒಂದು ದಿನ ಏಕಾಂತವಾಗಿ ಮಹಡಿಯ ಮೇಲೆ ಆಕಡೆ ಈಕಡೆ ನಡೆಯುತ್ತಿರುವಾಗ, ಪಾಪದಲ್ಲಿ ಬಿದ್ದುಬಿಟ್ಟನು. ಬಹಿರಂಗವಾಗಿ ದಾವೀದನು ದೇವರನ್ನು ಸ್ತುತಿಸುತಿರುವಾಗ ರಾಜನಾಗಿ ಹೆಚ್ಚಿಸಲ್ಪಟ್ಟನು. ಅದೇ ಏಕಾಂತದಲ್ಲಿ ದೇವರನ್ನು ನೋಡದೇ ಸುತ್ತಲೂ ತಿರುಗಿ ನೋಡಿದಾಗ, ಪಾಪದಲ್ಲಿ ಬಿದ್ದುಬಿಟ್ಟನು. ಸಂಸೋನನು ಏಕಾಂತವಾಗಿ ಒಂದು ಸ್ತ್ರೀಯ ಬಳಿ ಸಿಕ್ಕಿಕೊಂಡನು. ಇಂದು ನಾವು ನೇರವಾಗಿ ಇಂತಹ ಪಾಪಗಳಲ್ಲಿ ಸಿಕ್ಕಿಕೊಳ್ಳದಿದ್ದರೂ, ಮೊಬೈಲ್ ಫೋನ್ ಗಳಲ್ಲಿ ಕಾಣುವಂತಹ ಒಂದು ಮಾಯಾಲೋಕಕ್ಕೆ ಗುಲಾಮರಾಗಿ ಬಿಡುತ್ತಿದ್ದೇವೆ. ಎಲ್ಲೋ ಕಣ್ಣಿಗೆ ಕಾಣದ ಸ್ಥಳದಲ್ಲಿ ರೂಪಿಸಲ್ಪಟ್ಟು ತೋರಿಸಲ್ಪಡುವ ಮಾಯಾ ದೃಶ್ಯಗಳಿಗೆ ಗುಲಾಮರಾಗಿ ಬಿಡುತ್ತಿದ್ದೇವೆ. ಆದರೆ ಯೋಸೇಫನು ಏಕಾಂತದಲ್ಲಿ ತೋರಿಸಿದಂತಹ ವೈರಾಗ್ಯವು ಅವನನ್ನು ಬಹಳ ದೊಡ್ಡ ಜಯದ ಕಡೆಗೆ ಮುನ್ನಡೆಸಿತು.

ಸ್ನೇಹಿತರೇ! ಏಕಾಂತದಲ್ಲಿ ನಿಮ್ಮ ಗುರುತು 10 ನಂಬರುಗಳು ಇರುವ ಒಂದು ಮೊಬೈಲ್ ಫೋನ್ ಆಗಿ ಬಿಡಬಾರದು. ಏಕಾಂತದಲ್ಲಿ ನಾವು ದೇವರನ್ನು ನೋಡಿ ಪ್ರಾರ್ಥಿಸುವುದನ್ನೇ ಅಭ್ಯಾಸವಾಗಿ ಮಾಡಿಕೊಳ್ಳಬೇಕು.ಅಂತರಂಗದಲ್ಲಿ ತಂದೆಯನ್ನು ನೋಡಿ ಪ್ರಾರ್ಥಿಸಿರಿ ಎಂದು ಯೇಸು ಹೇಳಿದ ಹಾಗೆ ಏಕಾಂತದಲ್ಲಿರುವಾಗ ಮೊಬೈಲ್ ಫೋನನ್ನು ಪಕ್ಕಕ್ಕಿಟ್ಟು, ತಂದೆಯನ್ನು ನೋಡಿ ಪ್ರಾರ್ಥಿಸಿ ನೋಡಿರಿ. ನಿಮ್ಮ ಜವಾಬ್ದಾರಿಗಳನ್ನು ಗ್ರಹಿಸುತ್ತೀರ. ನಿಮ್ಮ ಏಕಾಂತವನ್ನು ದೇವರೇ ತುಂಬಿಸಲಿ. ದೇವರಿಲ್ಲದ ಏಕಾಂತವು ಪಾಪದ ಕಡೆ ನಿಮ್ಮ ಹೃದಯವನ್ನು ಒರಗುವಂತೆ ಮಾಡುತ್ತದೆ. ನಾವು ಏಕಾಂತವಾದ ಸಮಯವನ್ನೆಲ್ಲಾ ದೇವರ ಬಳಿ ಕಳೆಯೋಣ. ಆಗಲೇ ಏಕಾಂತವು ಮಾಧುರ್ಯವಾಗಿ ಮಾರ್ಪಡುತ್ತದೆ. ಆದದರಿಂದ ಇಂದೇ ತೀರ್ಮಾನಿಸೋಣ. ಏಕಾಂತದಲ್ಲಿ ದೇವರೊಂದಿಗಿರಲು ಯಾವಾಗಲೂ ಬಯಸೋಣ.
-    T. ಶಂಕರ್ ರಾಜನ್

ಪ್ರಾರ್ಥನಾ ಅಂಶ :-
ನಮ್ಮ ಸೇವೆಯಲ್ಲಿ ಹೊಸದಾಗಿ ಸೇರಿಸಲ್ಪಟ್ಟಿರುವ ಸೇವಕರು ಒಂದೇ ದರ್ಶನದೊಂದಿಗೆ ಕಾರ್ಯನಿರ್ವಹಿಸುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş