By Village Missionary Movement
Thursday, 10-Feb-2022ಧೈನಂದಿನ ಧ್ಯಾನ(Kannada) – 10.02.2022 (God’s creation’s special)
ಸಮುದ್ರದ ಕರೆ
"...ಸಮುದ್ರಕ್ಕೆ - ಸುಮ್ಮನಿರು, ಮೊರೆಯಬೇಡ ಎಂದು ಅಪ್ಪಣೆಕೊಟ್ಟನು..." - ಮಾರ್ಕನು 4:39
ದೇವರ ಸೃಷ್ಟಿಯಲ್ಲಿ ನಾನೊಂದು ಅತಿಶಯ. ನನ್ನ ಆಳ, ಉದ್ದ, ಎತ್ತರ ಮತ್ತು ಅಗಲವನ್ನು ಯಾರಿಂದಲೂ ಅಳೆಯಲಾಗುವುದಿಲ್ಲ. ನಮ್ಮೊಳಗೂ ಅನೇಕ ಜೀವಿಗಳು ವಾಸಿಸುತ್ತವೆ. ನಮಗೆ ವಿಶ್ರಾಂತಿಯೇ ಇಲ್ಲ. ಅಲೆ ಅಲೆಯಾಗಿ ಗಾಳಿಯೊಂದಿಗೆ ಸೇರಿ ಆರ್ಭಟಿಸುತ್ತಿರುತ್ತೇವೆ. ಕೈಗಳಲ್ಲಿ ನನ್ನನ್ನು ಹಿಡಿದಿಡಲು ಯಾರಿಂದಲೂ ಸಾಧ್ಯವಿಲ್ಲ. ಹೊರಗಿನಿಂದ ನಮ್ಮ ಆರ್ಭಟವನ್ನು ನೋಡಿ ಅನೇಕರು ಆಶ್ಚರ್ಯಪಡುತ್ತಾರೆ. ಒಮ್ಮೆ ನಮ್ಮ ಮೇಲೆ ದೋಣಿಯಲ್ಲಿ ಯೇಸುವಿನ ಶಿಷ್ಯರು ಪ್ರಯಾಣಿಸುತ್ತಿದ್ದರು. ನಾವೂ ಕೂಡ ಅಬ್ಬರದಿಂದ ಆರ್ಭಟಿಸುತ್ತಿದ್ದೆವು. ದೋಣಿ ನಮ್ಮ ಮೇಲೆ ಹೋಗುತ್ತಿತ್ತು. ನಮ್ಮ ಉತ್ಸಾಹವನ್ನು ತಡೆಯಲಾಗದೆ ದೋಣಿಯು ಆಕಡೆ ಈಕಡೆ ಗೆ ಅಲ್ಲೋಲಕಲ್ಲೋಲವಾಗುತ್ತಿತ್ತು. ದೋಣಿಯಲ್ಲಿದ್ದ ಶಿಷ್ಯರು ನಮ್ಮ ಆಕ್ರಂದನವನ್ನು ಕಂಡು ಏನು ಮಾಡಬೇಕೆಂದು ತೋಚದೆ ಭಯದಿಂದ ಕಿರುಚಿದರು. ನಮ್ಮನ್ನು ರಕ್ಷಿಸಲು ಯಾರೂ ಇಲ್ಲ ಮತ್ತು ನಾವು ಒಬ್ಬಂಟಿಯಾಗಿದ್ದೇವೆ ಎಂದು ಗಾಬರಿಗೊಂಡರು. ಅವರಲ್ಲಿ ಒಂದು ಹನಿಯೂ ನಾವು ಬದುಕುತ್ತೇವೆ ಎಂಬ ನಂಬಿಕೆಯೇ ಇರಲಿಲ್ಲ. ಆಗ ಒಂದು ಆಶ್ಚರ್ಯವನ್ನು ಕಂಡು ನಾವು ಬೆಚ್ಚಿಬಿದ್ದೆವು. ಮುಳುಗಿಸುವುದೇ ನಮ್ಮ ಸ್ವಭಾವ. ಆದರೆ ಇವರನ್ನು ಏನೂ ಮಾಡಲು ಸಾಧ್ಯವಾಗಲಿಲ್ಲ. ಏಕೆಂದರೆ ಅವರೇ ಕರ್ತನಾದ ಯೇಸು ಕ್ರಿಸ್ತನು! ಆತನೇ ನಮ್ಮನ್ನು ಸೃಷ್ಟಿಸಿದವರು! ಅವರು ನನ್ನ ಮೇಲೆ ನಡೆದು ಬರುವಾಗ ನನ್ನ ಸ್ವಭಾವವನ್ನು ಅವರ ಮೇಲೆ ತೋರಿಸಲಾಗಲಿಲ್ಲ. ಏಕೆಂದರೆ, ಅವರ ದಿವ್ಯ ಸ್ವಭಾವ ನನ್ನ ಮೇಲೆ ಬಂದು ಇಳಿಯಿತು. ಆಗ ಯೇಸುವನ್ನು ನೋಡಿದ ಶಿಷ್ಯರಲ್ಲಿ ಒಬ್ಬನಾದ ಪೇತ್ರನು ನಂಬಿಕೆಯಿಂದ ಸಮುದ್ರದಲ್ಲಿ ನಡೆದನು. ಗಾಳಿ ಪ್ರಬಲವಾಗಿ ಬೀಸುತ್ತಿರುವುದನ್ನು ಪೇತ್ರನು ಕಂಡು ಭಯಪಟ್ಟು ಮುಳುಗಲು ಪ್ರಾರಂಭಿಸಿದಾಗ ಯೇಸುವನ್ನು ನೋಡಿ ಕರೆದನು. ಅವರು ಕೈ ಹಿಡಿದು ಮೇಲಕ್ಕೆತ್ತಿ, ಇಬ್ಬರೂ ದೋಣಿ ಹತ್ತುವುದನ್ನು ಕಂಡ ಕೂಡಲೇ ನಾವು ಬಾಯಿ ಮುಚ್ಚಿಕೊಂಡು ನಿಂತೆವು, ಗಾಳಿಯೂ ಶಾಂತವಾಯಿತು.
ದೇವರ ಮಕ್ಕಳೇ! ದೇವರಲ್ಲಿ ನಿಮ್ಮ ನಂಬಿಕೆ ಎಷ್ಟು ಹೆಚ್ಚಾಗುತ್ತದೋ, ಅಷ್ಟು ಹೆಚ್ಚಾಗಿ ನೀವು ಆತನಿಗಾಗಿ ಹೆಚ್ಚಾಗಿ ಪ್ರಕಾಶಿಸುತ್ತೀರ. ಯೇಸು ನಿಮ್ಮೊಂದಿಗಿದ್ದರೆ ನಮ್ಮಂತಹ ಸಮುದ್ರವು ನಿಮ್ಮನ್ನು ಏನೂ ಮಾಡಲಾರದು. ನಾವು ಯೇಸುವಿನ ಮಾತಿನಿಂದಲೇ ಸೃಷ್ಟಿಸಲ್ಪಟ್ಟಿದ್ದೇವೆ. ಹಾಗಾಗಿ ಅವರ ಮಾತಿಗೆ ಬದ್ಧರಾಗಿ, ಅವರು ಮೊರೆಯಬೇಡ ಸುಮ್ಮನಿರು ಎಂದು ನಮ್ಮನ್ನು ನೋಡಿ ಹೇಳಿದಾಗ, ನಾವು ಮೌನವಾದೆವು. ಅಷ್ಟೇ ಏಕೆ, ಆ ಶಕ್ತಿಯುತವಾದ ಮಾತು ನಿಮ್ಮೊಳಗಿಂದ ಬಂದರೂ ನಾವು ನಿಮಗೂ ಬದ್ಧರಾಗಿರುತ್ತೇವೆ. ನನ್ನನ್ನು ನಂಬುವವನು ನನಗಿಂತ ದೊಡ್ಡದನ್ನು ಮಾಡುತ್ತಾನೆ ಎಂದು ಯೇಸು ಕ್ರಿಸ್ತನೇ ಹೇಳಿದ್ದಾರಲ್ಲವೇ!
- Bro. ಶಂಕರರಾಜ್
ಪ್ರಾರ್ಥನಾ ಅಂಶ:
ವಿಶಾಖಪಟ್ಟಣಂನ ಪಾಡೇರು ಕಾರ್ಯಸ್ಥಳದಲ್ಲಿ ಸೇವೆಗಳು ಪ್ರಾರಂಭಿಸಿಲ್ಪಡುವಂತೆ, ಸಮರ್ಪಣೆಯುಳ್ಳ ಸೇವಕರು ಸಿಗುವಂತೆ ಪ್ರಾರ್ಥಿಸಿರಿ.
Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482