Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.02.2022 (God’s creation’s special)
Share:

By Village Missionary Movement

Monday, 07-Feb-2022

ಧೈನಂದಿನ ಧ್ಯಾನ(Kannada) – 07.02.2022 (God’s creation’s special)

ನನ್ನ ವಿಳಾಸ

"...ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬರಲಿ" - ಮತ್ತಾಯ 16:24

ಎರಡು ಸಾವಿರದ ಇಪ್ಪತ್ತು ವರ್ಷಗಳ ಹಿಂದೆ ನಾನು ಜನರಿಂದ ದ್ವೇಷಿಸಲ್ಪಟ್ಟವನಾಗಿದ್ದೆ.  ನನ್ನನ್ನು ನೋಡಿದವರಿಗೆ ಭಯ ಮತ್ತು ಗಾಬರಿ ತುಂಬಿತ್ತು.  ಇದೇ ನನ್ನ ವಿಳಾಸ.  ನಾನು ಯಾರೆಂದು ನೀವು ಯೋಚಿಸುತ್ತಿದ್ದೀರ?  ರೋಮನ್ನರ ಆಳ್ವಿಕೆಯಲ್ಲಿ ಅವರ ಕಾನೂನು ಯೋಜನೆಗಳಿಗೆ ವಿರುದ್ಧವಾಗಿ ವರ್ತಿಸಿದವರನ್ನು ಕಿರುಕುಳಗೊಳಿಸಿ, ಅವರ ಕೈ ಕಾಲುಗಳಿಗೆ ಮೊಳೆ ಹೊಡೆದು, ಅವರ ಮೈಯಲ್ಲಿದ್ದ ರಕ್ತವನ್ನೆಲ್ಲಾ ಸುರಿಸಿ ಅತ್ಯಂತ ಭಯಾನಕ ಮರಣದಂಡನೆಯನ್ನು ನೀಡುವ ಶಾಪದ ಸಂಕೇತವಾಗಿದ್ದ ಶಿಲುಬೆ ಮಾತನಾಡುತ್ತಿದ್ದೇನೆ. ನನ್ನಲ್ಲಿ ಯಾವಾಗಲೂ ಸಾವಿನ ಕಿರುಚಾಟ ಮತ್ತು ರಕ್ತವು ಕಾಣುತ್ತದೆ.  ಹೀಗೆ ನನ್ನ ಜೀವನ ನನಗೆ ಇಷ್ಟವಿಲ್ಲ.  ನನ್ನನ್ನು ನಾನೇ ದ್ವೇಷಿಸಿದಾಗ, ಯೇಸು ಕ್ರಿಸ್ತನು ನನ್ನನ್ನೂ ಪ್ರೀತಿಸಿ ಹೊತ್ತು ಕೊಂಡರು.  ಅಂದಿನಿಂದ ಶಾಪದ ಸಂಕೇತವಾಗಿದ್ದ ನಾನು ವಿಮೋಚನೆಯ ಸಂಕೇತವಾಗಿ ಮಾರ್ಪಟ್ಟೆನು.

ಅವರು ನನ್ನನ್ನು ಹೊತ್ತು, ಶಿಲುಬೆಯಲ್ಲಿ ಸಾಯುವ ಮಟ್ಟಿಗೆ ಯಾವ ಪಾಪವನ್ನೂ ಮಾಡಲಿಲ್ಲ.  ಆದರೆ ಪ್ರಪಂಚದ ಪ್ರತಿಯೊಬ್ಬರಿಗಾಗಿಯೂ  ಶಿಲುಬೆಗೇರಿಸಲ್ಪಟ್ಟು ತನ್ನನ್ನು  ಒಪ್ಪಿಸಿಕೊಟ್ಟರು.  ಅವರು ಪಾಪವನ್ನರಿಯದ ಪರಿಶುದ್ಧನಾಗಿದ್ದರೂ ಅವರು ನನ್ನ ಮೇಲೆ ತೂಗಾಡಿ, ಪಾಪದಿಂದ ದಾಸರಾಗಿದ್ದ ತಮ್ಮ ಜನರನ್ನು ಬಿಡುಗಡೆ ಮಾಡಲು ಮರಣಕ್ಕೆ ಅಧಿಕಾರಿಯಾದ ಸೈತಾನನನ್ನು ತನ್ನ ಮರಣದಿಂದ ನಾಶಮಾಡಿದರು. ಅಪರಾಧದಿಂದ ದೇವರನ್ನು ಬಿಟ್ಟು ಬೇರ್ಪಟ್ಟ ಮನುಷ್ಯನೊಂದಿಗೆ ಅಪ್ಪ-ಮಗ ಎಂಬ ರಕ್ತ ಬಂಧವನ್ನು ಪುನರುಜ್ಜೀವನಗೊಳಿಸಲು, ಅವರು ನನ್ನನ್ನು ಕೈಯಲ್ಲಿಡಿದು ಹೊಸ ಒಡಂಬಡಿಕೆಯನ್ನು ಏರ್ಪಡಿಸಿದರು.  ಇದಲ್ಲದೆ, ಆತನು ತನ್ನನ್ನು ನಂಬುವವರಿಗೆ ನನ್ನ ಮೂಲಕ ಅವರ ಶಾಪಗಳನ್ನು ಮತ್ತು ರೋಗಗಳನ್ನು ನೀಗಿಸಿದರು.  ಅವರನ್ನು ಹಿಂಬಾಲಿಸುವವರಿಗೆ ನನ್ನನ್ನು ಕಡ್ಡಾಯವಾಗಿ ಹೊತ್ತುಕೊಳ್ಳಬೇಕೆಂದು ಹೇಳಿದ್ದಾರೆ.

ಆದರೆ ಇಂದಿನ ಕ್ರೈಸ್ತರನ್ನು ನೋಡುವಾಗ ನನಗೆ ತುಂಬಾ ದುಃಖವಾಗುತ್ತದೆ. ಪ್ರತಿದಿನವೂ ಧ್ಯಾನಿಸ ಬೇಕಾದ ನನ್ನನ್ನು ಶುಭ ಶುಕ್ರವಾರದಂದು ಮಾತ್ರವೇ ಯೋಚಿಸುತ್ತಾರೆ.  ಗೋಪುರದ ತುದಿಯಲ್ಲಿ ಇಟ್ಟಿರುವ ನನ್ನನ್ನು ತಮ್ಮ ಜೀವನದಲ್ಲಿ ನೆನೆಪಿಸಿಕೊಳ್ಳಲು ತಪ್ಪಿಹೋಗುತ್ತಿದ್ದಾರೆ. ನನ್ನನ್ನು ತಮ್ಮ ಕುತ್ತಿಗೆಗಳಲ್ಲಿ ಡಾಲರ್ ಗಳಾಗಿ ಹೊತ್ತರೆ ಸಾಕು ಎಂದು ಅವರು ಭಾವಿಸುತ್ತಾರೆ.  ಆದರೆ ನನಗೋಸ್ಕರ ಕೊರಳು ಕೊಡುವವರೇ ಕ್ರೈಸ್ತರೆಂದು ಅವರಿಗೆ ಗೊತ್ತಿಲ್ಲ.

ಪ್ರಿಯರೇ!  ನೀವು ಯೇಸುವಿನ ನಿಜವಾದ ಶಿಷ್ಯರಾಗಿ ಮಾರ್ಪಟ್ಟು, ಅವರ ಹೆಜ್ಜೆ ಜಾಡುಗಳನ್ನು ಹಿಂಬಾಲಿಸಬೇಕಾದರೆ ನೀವು ನನ್ನನ್ನು ಹೊರಬೇಕಾದದ್ದು ಕಡ್ಡಾಯವೇ!  ಪ್ರತಿದಿನ ಅವರ ಶಕ್ತಿಯಿಂದ ನನ್ನನ್ನು ಹೊತ್ತು ಸಾಗಿರಿ. ನಿಮ್ಮ ಜೀವನವನ್ನು ನಾನು ಭಾರವಾಗಿ ಅಲ್ಲ, ಸುಲಭವಾಗಿ ಮಾರ್ಪಡಿಸುತ್ತೇನೆ. ನನ್ನ ವಿಳಾಸವನ್ನು ಕೊಟ್ಟುಬಿಟ್ಟೆನು.  ದಾರಿತಪ್ಪದೆ ಶಿಲುಬೆಯನ್ನು ಹೊತ್ತು ಬರುವುದಾದರೆ ನಿತ್ಯ ಸಂತೋಷವನ್ನು, ನಿತ್ಯ ಜೀವವನ್ನು ಕಂಡುಕೊಳ್ಳಬಹುದು.
-    S. ಮನೋಜಕುಮಾರ್

ಪ್ರಾರ್ಥನಾ ಅಂಶ:
You Tube-ನಲ್ಲಿ ಪ್ರಸಾರವಾಗುವ ಗ್ರಾಮೀಣ ಸಮಯ ಕಾರ್ಯಕ್ರಮವನ್ನು ಇನ್ನೂ ಅನೇಕರು ನೋಡಲು, ಆಶೀರ್ವದಿಸಲ್ಪಡಲು ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş