Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.02.2022 (Kid’s special)
Share:

By Village Missionary Movement

Sunday, 06-Feb-2022

ಧೈನಂದಿನ ಧ್ಯಾನ(Kannada) – 06.02.2022 (Kid’s special)

ಕೃತಜ್ಞತೆ ಹೇಳಲು ಮರೆಯಬೇಡ

“ನನ್ನ ಮನವೇ, ಯೆಹೋವನನ್ನು ಕೊಂಡಾಡು; ಆತನ ಉಪಕಾರಗಳಲ್ಲಿ ಒಂದನ್ನೂ ಮರೆಯಬೇಡ" - ಕೀರ್ತನೆ 103: 2

ಹಲೋ ಪುಟಾಣಿಗಳೇ!  ಹೇಗಿದ್ದೀರ?  ಕಡೇ ದಿವಸಗಳಲ್ಲಿ ಬಾಧೆಯುಂಟಾಗುವುದೆಂದು ಸತ್ಯವೇದದಲ್ಲಿ ಹೇಳಲ್ಪಟ್ಟಿದೆಯಲ್ಲವೇ?  ಆದರೂ ನಾವು ಪ್ರಾರ್ಥಿಸುವಾಗ, ನಮ್ಮನ್ನು ಕಾಪಾಡಿ, ಅದ್ಭುತವಾಗಿ ನಡೆಸಲು ಯೇಸಪ್ಪ ನಮ್ಮೊಂದಿಗೇ ಇದ್ದಾರೆ.  ನಾವು ಭಯಪಡುವ ಅಗತ್ಯವಿಲ್ಲ. Ok ನಾ, ಸರಿ ಕಥೆ ಕೇಳೋಣವಾ?

ಸುಂದರವಾದ ಕಾಡಿನ ಪ್ರದೇಶದಲ್ಲಿ ಪಾರಿವಾಳ ಮತ್ತು ಇರುವೆ ಸ್ನೇಹಿತರಾಗಿದ್ದರು. ಝುಳು ಝುಳು ಎಂದು  ನೀರು ಹರಿಯುವ ಹೊಳೆಗೆ ನೀರು ಕುಡಿಯಲು ಪಾರಿವಾಳ ಬರುತ್ತಿತ್ತು. ಅದು ಬರುವಾಗೆಲ್ಲಾ ತನ್ನ ಗೆಳೆಯನಾದ ಇರುವೆಯನ್ನು ನೋಡಿ ಅದರ ಜೊತೆ ಮಾತಾಡಿಯೇ  ಹೋಗುತ್ತಿತ್ತು.  ಇರುವೆ ಚುರು -ಚುರುಕಾಗಿಯು, ಒಗ್ಗಟ್ಟಾಗಿಯು ಇರುವುದನ್ನು ನೆನೆಸಿ ಆಶ್ಚರ್ಯಪಡುತ್ತಿತ್ತು ಈ ಪಾರಿವಾಳ,  ಒಂದು ದಿನ ಆಹಾರ ಶೇಖರಿಸಲು ಹೊರಟಿದ್ದ ಇರುವೆ ಎಡವಿ ಹೊಳೆಗೆ ಬಿದ್ದುಬಿಟ್ಟಿತು.  ಅಲ್ಲಿಗೆ  ಆಕಸ್ಮಿಕವಾಗಿ ಅಲ್ಲಿಗೆ ಬಂದ ಪಾರಿವಾಳ ಒಂದು ಎಲೆಯನ್ನು ಕೊಯ್ದು ಇರುವೆಯ ಕಡೆಗೆ ಹಾಕಿತು.  ಇರುವೆಯು ಪಾರಿವಾಳಕ್ಕೆ ಕೃತಜ್ಞತೆ ಹೇಳಿ ಬಿಟ್ಟು,  “ಸರಿಯಾದ ಸಮಯಕ್ಕೆ ಬಂದು ನನ್ನನ್ನು ರಕ್ಷಿಸಿದೆ ಗೆಳೆಯಾ!  ನನ್ನ ಜೀವನದಲ್ಲಿ ಈ ಸಹಾಯವನ್ನು ನಾನು ಎಂದಿಗೂ ಮರೆಯುವುದೇ ಇಲ್ಲ”  ಎಂದಿತು. ಏನು ಪುಟಾಣಿಗಳೇ!  ನೀವು ಕೂಡ ನಿಮಗೆ ಸಹಾಯ ಮಾಡುವವರಿಗೆ ಕೃತಜ್ಞತೆ ಹೇಳುತ್ತೀರಾ? Very good.

ಇನ್ನೊಂದು ದಿನ ಪಾರಿವಾಳ ಮರದ ಕೊಂಬೆಯ ಮೇಲೆ ಕುಳಿತಿದ್ದಾಗ ಬೇಟೆಗಾರನೊಬ್ಬ ತನ್ನ ಬಾಣವನ್ನು ತೆಗೆದುಕೊಂಡು ಪಾರಿವಾಳವನ್ನು ಹೊಡೆಯಲು ಸಿದ್ಧನಾದ. ದಿಢೀರನೆ ಆ ಕಡೆಯಿಂದ ಬಂದ ಇರುವೆ ಭೇಟೆಗಾರನನ್ನು ಕಂಡ ಕೂಡಲೇ ತನ್ನ ಗೆಳೆಯರೊಂದಿಗೆ ಸೇರಿ ಅವನ ಕಾಲನ್ನು ಕಚ್ಚಿಬಿಟ್ಟಿತು.  “ಅಯ್ಯೋ!  ಅಮ್ಮಾ ಇರುವೆ ಕಚ್ಚುತ್ತಿದೆ" ಎಂದು ಕುಣಿಯುತ್ತಿದ್ದಾಗ ”ಪಾರಿವಾಳ ಜಿಗಿದು ಹಾರಿಹೋಯಿತು.  ತನ್ನನ್ನು ಕಾಪಾಡಿದ್ದು ಇರುವೆಯೇ ಎಂದು ಭಾವಿಸಿ ಕೃತಜ್ಞತೆ ಹೇಳಿತು.

ಏನು ಪುಟಾಣಿಗಳೇ!  ಇರುವೆ ಮತ್ತು ಪಾರಿವಾಳ ತನಗೆ ದೊರೆತ ಉಪಕಾರಕ್ಕೆ ಕೃತಜ್ಞತೆ ಹೇಳುವುದನ್ನು ಮರೆಯಲೇ ಇಲ್ಲ ನೋಡುದ್ರಾ?  ನಿಮ್ಮ ಜೀವನದಲ್ಲಿ Jesus ಎಷ್ಟು ಒಳ್ಳೆಯದನ್ನು ಮಾಡಿದ್ದಾರೆ, ನೀವು ಎಂದಾದರೂ ಯೋಚಿಸಿದ್ದೀರಾ?  ಹಗಲು-ರಾತ್ರಿ ನಮ್ಮನ್ನು ಕಾಪಾಡಿ ಆರೋಗ್ಯ ನೀಡಿ  ಅಗತ್ಯಗಳನ್ನು ಪೂರೈಸಿ.... ಹೀಗೆ ಹೇಳಿಕೊಂಡೇ ಹೋಗಬಹುದು... ಅಲ್ವಾ? ನೀವು Daily Jesus-ಗೆ  ಕೃತಜ್ಞತೆ ಹೇಳಲು ಮರೆಯಲೇಬಾರದು ಮುದ್ದು ಮಕ್ಕಳೇ?  Ok ತಾನೇ!
-    Mrs.  ಜೀವಾ ವಿಜಯ್

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş