Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 05.02.2022 (God’s creation’s special)
Share:

By Village Missionary Movement

Saturday, 05-Feb-2022

ಧೈನಂದಿನ ಧ್ಯಾನ(Kannada) – 05.02.2022 (God’s creation’s special)

 

ಅಪರೂಪ

 

"ಸೌಂದರ್ಯವು ನೆಚ್ಚತಕ್ಕದ್ದಲ್ಲ, ಲಾವಣ್ಯವು ನೆಲೆಯಲ್ಲ; ಯೆಹೋವನಲ್ಲಿ ಭಯಭಕ್ತಿಯುಳ್ಳವಳೇ ಸ್ತೋತ್ರಪಾತ್ರಳು" - ಜ್ಞಾನೋಕ್ತಿ 31:30

 

ನಾನು ಹುಟ್ಟಿ ಬೆಳೆದದ್ದು ಸಮುದ್ರದ ಸ್ವಲ್ಪ ಬೆಚ್ಚನೆಯ ಭಾಗದಲ್ಲಿ. ನಾನು ರೂಪುಗೊಳ್ಳುವ ರೀತಿ ಸ್ವಲ್ಪ ಕಷ್ಟವೇ. ನನ್ನನ್ನು ಹುಡುಕುವುದೂ ಸುಲಭದ ಮಾತಲ್ಲ. ಯಾಕೆಂದರೆ, ತೆಗೆದ ಎಲ್ಲಾ ಸಿಂಪಿಗಳೊಳಗೂ ನಾನಿರುವುದಿಲ್ಲ. ನಾನು ಕೆಲವರಲ್ಲಷ್ಟೇ ಇದ್ದೇನೆ. ಹೀಗೆ ನಾನು ರೂಪಿಸಲ್ಪಡುವದೂ ಒಂದು ಕಷ್ಟಕರವಾದ ಪ್ರಕ್ರಿಯೆಯಾಗಿದೆ. ನಾನೊಂದು ಅಮೂಲ್ಯವಾದ ವಸ್ತುವಾಗಿ ಮಾರಾಟವಾಗಲು ಕಾರಣವೇನೆಂದರೆ, ನನ್ನನ್ನು ಸೃಷ್ಟಿಸಿದವರು ನನ್ನನ್ನು ಸೃಷ್ಟಿಸಿದ ವಿಧಾನವು ತುಂಬಾ ಅಪರೂಪವಾಗಿದೆ.

 

ಹವಳವಾಗಿರುವ ನಾನು ರೂಪಿಸಲ್ಪಡುವ ವಿಧವನ್ನು ಸ್ವಲ್ಪ ಕೇಳಿ. ಸಿಂಪಿ ಒಳಗೆ ಕೆಲವು ಮಾರಕತೆಗಳು ಕಂಡುಬರುತ್ತವೆ ನಂತರ ಎಪಿತೀಲಿಯಲ್ ಅಂಗಾಂಶದಿಂದ ರೂಪವನ್ನು ಹೊಂದಿ, ಅದರಲ್ಲಿ ನಾವು ದ್ರವದಿಂದ ಸುತ್ತುವರೆದು ರೂಪಿಸಲ್ಪಡುತ್ತೇವೆ. ಇದೊಂದು ದೀರ್ಘಕಾಲದ ಪ್ರಯಾಣ. ಆದರೆ ಸತ್ಯವೇದದಲ್ಲಿ ಹೆಣ್ಣಿನ ಗುಣವು ನನಗಿಂತ ಉನ್ನತವಾಗಿದೆ ಎಂದರೆ ದೇವರು ಅದಕ್ಕೆ ಎಷ್ಟು ಪ್ರಾಮುಖ್ಯತೆ ನೀಡಿದ್ದಾರೆ. ಹೌದು, ಗುಣವತಿಯಾದ ಸ್ತ್ರೀಯನ್ನು ಕಂಡುಹಿಡಿಯುವವನು ಯಾರು? ಆಕೆಯು ಹವಳಕ್ಕಿಂತಲೂ ಬಹು ಅಮೂಲ್ಯಳು. ಓ! ನನಗಿಂತ ಹೆಣ್ಣಿನ ಗುಣವು ಅಷ್ಟು ಉತ್ತಮವಾಗಿದೆಯೇ? ಇದು ಯಾವ ಮ್ಯಾಜಿಕ್ ಎಂದು ನಾನು ಆಶ್ಚರ್ಯ ಪಡುವುದುಂಟು. ನಮ್ಮಲ್ಲಿ ಹಲವು ವಿಧ, ಅನೇಕ ಬಣ್ಣಗಳು, ಇರುವಂತೆಯೇ ಮಹಿಳೆಯರು ಅನೇಕ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸುತ್ತಾರೆ ಎಂಬ ಅಂಶವನ್ನು ನೋಡಿ (ಜ್ಞಾನೋಕ್ತಿ 31: 10-29).

 

ಮುತ್ತುಗಳಾದ ನಮಗಿಂತ, ಉನ್ನತವಾದ ಸ್ತ್ರೀ ಯರೇ, ನೀವು ಯಾರೆಂದು ನಿಮಗೆ ಹೇಳುತ್ತೇನೆ? ನೀವು ನಿಮ್ಮ ಗಂಡನ ಸಂಪತ್ತನ್ನು ಕಡಿಮೆ ಮಾಡದೆ ಇರುವವರು (31:11) ಮತ್ತು ನಿಮ್ಮ ಜೀವನದ ಎಲ್ಲಾ ದಿನಗಳಲ್ಲಿ ನಿಮ್ಮ ಪತಿಗೆ ಕೆಟ್ಟದ್ದಲ್ಲ ಒಳ್ಳೇದನ್ನೇ ಮಾಡುವವರು (31:12). ನೀವು ಬಡವರು ಮತ್ತು ದಿಕ್ಕಿಲ್ಲದವರಿಗೆ ನಿಮ್ಮ ಕೈಗಳನ್ನು ಚಾಚಿರುವವರು (31:20) ಮತ್ತು ನಿಮ್ಮ ಮನೆಯ ಬಗ್ಗೆ ಕಾಳಜಿ ವಹಿಸುವವರು (31:21). ಭವಿಷ್ಯದ ಬಗ್ಗೆ ನೀವು ಘನತೆ ಮತ್ತು ಸಂತೋಷವನ್ನು ಹೊಂದಿರುವವರು (31:25). ನೀವು ನಿಮ್ಮ ಬಾಯನ್ನು ಬುದ್ಧಿ ಹೇಳಲು ತೆರೆಯುವವರು (31:26). ನೀವು ಸೋಮಾರಿಗಳಾಗಿರದೇ ತನ್ನ ಗೃಹಕೃತ್ಯಗಳ ಬಗ್ಗೆ ಕಾಳಜಿ ವಹಿಸುವವರು (31:27). ನಿಮ್ಮ ಮಕ್ಕಳು ನಿಮ್ಮನ್ನು ಧನ್ಯಳು ಎಂದು ಹೇಳುವ ಪ್ರಶಂಸೆಗೆ ಅರ್ಹರು (31:28).

 

ನಾವು ಸುಂದರವಾಗಿದ್ದೇವೆ, ಬಹು-ಬಣ್ಣವುಳ್ಳವರಾಗಿದ್ದೇವೆ, ಆದರೆ ನಮ್ಮ ಸೌಂದರ್ಯವು ಮೇಲ್ನೋಟಕ್ಕೆ ಮಾತ್ರ! ನೀವು ಹಾಗಲ್ಲ, ಅಂತರಂಗದಲ್ಲಿ ಅಂದವುಳ್ಳವರು. ಅಂದರೆ, ದೇವರಿಗೆ ಭಯಪಟ್ಟು, ನಿಮ್ಮ ಹೃದಯದಲ್ಲಿ ಅಡಗಿರುವ ಗುಣದಿಂದಲೂ, ಕಾರ್ಯದಿಂದಲೂ ಅಂದವಾಗಿರುವವರು (31:30). ಮುತ್ತಾಗಿರುವ ಸ್ತ್ರೀಯರೇ! ನಿಮ್ಮ ಗುಣವೇ ಅಮೂಲ್ಯವಾದ ಮುತ್ತುಗಳಿಗಿಂತಲೂ ಶ್ರೇಷ್ಠವಾಗಿದೆ. ಹಲ್ಲೇಲೂಯ.

- Bro. ಪೊನ್ಮಣಿ ಪಾಲ್

 

ಪ್ರಾರ್ಥನಾ ಅಂಶ:

ಪ್ರತಿದಿನ ಬೆಳಗ್ಗೆ 5 ಗಂಟೆಗೆ You tube ನಲ್ಲಿ ನೇರಪ್ರಸಾರಗೊಳ್ಳಲಿರುವ "Healing service" ನಲ್ಲಿ ಪಾಲ್ಗೊಳ್ಳುವ ವ್ಯಕ್ತಿಗಳು ಸ್ವಸ್ಥರಾಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş