Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.02.2022 (God’s creation’s special)
Share:

By Village Missionary Movement

Friday, 04-Feb-2022

ಧೈನಂದಿನ ಧ್ಯಾನ(Kannada) – 04.02.2022 (God’s creation’s special)

 

ಪಕ್ಷಿಗಳ ಮನೆ

 

“ಅದು ಸಾಸಿವೆ ಕಾಳಿನಂತಿರುತ್ತದೆ. ಭೂವಿುಯಲ್ಲಿ ಬಿತ್ತುವಾಗ ಅದು ಭೂವಿುಯಲ್ಲಿರುವ ಎಲ್ಲಾ ಬೀಜಗಳಿಗಿಂತಲೂ ಸಣ್ಣದಾಗಿದೆ" - ಮಾರ್ಕನು 4:31

 

ನೀವು ಸಸ್ಯ ಬೀಜಗಳ ಬಗ್ಗೆ ಕೇಳಿರಬಹುದು. ನೀವು ಕೆಲವು ಬೀಜಗಳನ್ನು ಸಹ ನೋಡಿರಬಹುದು. ಸಾಸಿವೆ ಕಾಳನ್ನು ನೋಡದವರು ಯಾರೊಬ್ಬರೂ ಇಲ್ಲ. ನಿಮ್ಮ ಅಡಿಗೆ ಮನೆಯ ಡಬ್ಬಿಯಲ್ಲಿ ನಾನಿಲ್ಲದೇ ಇರಲು ಸಾಧ್ಯವೇ ಇಲ್ಲ. ಇಂದಿನ ಧ್ಯಾನ ಸಂದೇಶದಲ್ಲಿ ಸಾಸಿವೆ ಕಾಳು ನಿಮ್ಮನ್ನು ಭೇಟಿಯಾಗಲು ಬಂದಿದ್ದಾರೆ. ಬನ್ನಿ, ಅವರ ಮಾತು ಕೇಳೋಣ. "ಸಾಸಿವೆ ಚಿಕ್ಕದಾದರೂ ಕಾರ ಕಡಿಮೆಯಾಗೋದಿಲ್ಲ" ಎನ್ನುತ್ತಾರೆ. ಹೌದು, ನಾನು ಹಾಗೇ ಇದ್ದೇನೆ. ನನ್ನ ಹೊರರೂಪವನ್ನು ನೋಡಿ ನನ್ನನ್ನು ಕಡಿಮೆ ಎಂದು ನೆನಸ ಬೇಡಿರಿ. ನಾನು ನನ್ನ ಬಗ್ಗೆ ಉನ್ನತ ಆಲೋಚನೆಗಳು ಮತ್ತು ಕೆಲವು ಉನ್ನತ ಅಭಿಪ್ರಾಯಗಳನ್ನು ಹೊಂದಿದ್ದೇನೆ. ಅದು ಏನೆಂದು ಹೇಳುತ್ತೇನೆ ಹಾಗೆ ಕೇಳುತ್ತಲೇ ಇರಿ.

 

ಆಕಾಶವನ್ನುಮತ್ತು ಭೂಮಿಯನ್ನು ಉಂಟು ಮಾಡಿದ ಕರ್ತನು ನನ್ನನ್ನೂ ಉಂಟು ಮಾಡಿದರು. ಕರ್ತನಾದ ಯೇಸು ಕ್ರಿಸ್ತನು ಸುವಾರ್ತೆಯಲ್ಲಿ ನನ್ನ ಬಗ್ಗೆ ಉಲ್ಲೇಖಿಸಿದ್ದಾರೆ. ಅದೇನಂದರೆ, "ಸಾಸಿವೆ ಕಾಳಿನಷ್ಟು ನಂಬಿಕೆ ನಿಮ್ಮಲ್ಲಿ ಇದ್ದರೆ" ಎಂದು ತಮ್ಮ ಶಿಷ್ಯರನ್ನು ನೋಡಿ ಹೇಳುತ್ತಾರೆ. ಇದನ್ನು ಓದುತ್ತಿರುವ ನಿಮಗೆ ಸಾಸಿವೆ ಕಾಳಾದ ನನ್ನಷ್ಟು ನಂಬಿಕೆ ಇದ್ದರೆ ನಿಮ್ಮ ಜೀವನದಲ್ಲಿ ಪ್ರತಿದಿನವೂ ದೊಡ್ಡ ದೊಡ್ಡ ಅದ್ಭುತಗಳನ್ನು ನೋಡುತ್ತೀರಿ. ಸತ್ಯವೇದವನ್ನು ಬಹಳಷ್ಟು ಓದುತ್ತೀರಿ ಮತ್ತು ನಿಮಗೆ ಅನೇಕ ವಿಷಯಗಳು ತಿಳಿಯುತ್ತದೆ. ಆದರೆ ನಿಮಗೆ ನಂಬಿಕೆಯೇ ಇಲ್ಲವೇ! ಅದಕ್ಕಾಗಿಯೇ ಯೇಸು ನಂಬಿಕೆಯ ಕೊರತೆಯಿರುವವರನ್ನು ನೋಡಿ "ಅಲ್ಪ ವಿಶ್ವಾಸಿಗಳೇ" ಎಂದು ಗದ್ದಿಸುತ್ತಿದ್ದಾರೆ. ನಂಬಿ ನೋಡಿ. ನೀವು ಅದ್ಭುತವನ್ನು ನೋಡುತ್ತೀರಿ.

 

ಮಾರ್ಕನು 4 ನೇ ಅಧ್ಯಾಯದಲ್ಲಿ, ದೇವರ ರಾಜ್ಯವು ಸಾಸಿವೆ ಕಾಳಿಗೆ ಹೋಲಿಕೆಯಾಗಿದೆ ಎಂದು ಯೇಸು ಕ್ರಿಸ್ತನು ಹೇಳಿದ್ದಾರೆ. ಭೂಮಿಯ ಎಲ್ಲಾ ಬೀಜಗಳಲ್ಲಿ ಚಿಕ್ಕ ಬೀಜವಾದ ನಾನು ನೆಲದಲ್ಲಿ ಬಿತ್ತಲ್ಪಡುತ್ತೇನೆ. ನಂತರ ನಾನು ಪಕ್ಷಿಗಳಿಗೆ ದೊಡ್ಡ ವೃಕ್ಷವಾಗಿ ಬೆಳೆಯುತ್ತೇನೆ. ನೀವು ಸಹ ದೇವರಿಗಾಗಿ ಎಂದು ನೆಡಲ್ಪಟ್ಟಾಗ, ಅಂದರೆ, ಸೇವೆಯಲ್ಲಿ ದೇವರಿಗಾಗಿ ಕೆಲಸ ಮಾಡಲು ನಿಮ್ಮನ್ನು ಒಪ್ಪಿಸಿದಾಗ, ನೀವು ಸಾವಿರಾರು ಜನರಿಗೆ ಆಶೀರ್ವಾದವಾಗಿ ಮಾರ್ಪಡುವಿರಿ. ಒಂದು ಮಿಷನರಿ ಕಾರ್ಯ ಸ್ಥಳದಲ್ಲಿ ನಡೆದ ಕುಟುಂಬ ಪ್ರಾರ್ಥನೆಯಲ್ಲಿ ಈ ವಾಕ್ಯವನ್ನು ಬೋಧಿಸಲಾಯಿತು. ವಿದ್ಯಾಭ್ಯಾಸವು ಕೊಂಚವಾಗಿದ್ದ ಸೆಲ್ಲಮ್ಮಾಳ್ ಎಂಬವರು ಈ ವಾಕ್ಯವನ್ನು ತುಂಬಾ ಗಮನವಿಟ್ಟು ಕೇಳಿ, ತನ್ನನ್ನು ದೇವರಿಗೆ ಸಮರ್ಪಿಸಿಕೊಂಡರು. ಇಂದು ಅನೇಕ ಚಿಕ್ಕ ಮಕ್ಕಳು, ಯೌವನಸ್ಥರು ಮತ್ತು ವಯಸ್ಕರು ಇರುವ ಒಂದು ದೊಡ್ಡ ಸಭೆಯನ್ನು ಕಟ್ಟಲು ಅವರು ಕಾರಣವಾದರು. ಇದನ್ನು ಓದುತ್ತಿರುವ ನಿಮ್ಮ ಜೀವನದಲ್ಲಿಯೂ

 

ಮೊದಲನೆಯ ಸ್ಥಿತಿ ಅಲ್ಪವಾಗಿದ್ದರೂ ಕ್ರಿಸ್ತನಲ್ಲಿ ನಿನ್ನ ಕಡೆಯ ಸ್ಥಿತಿಯು ಬಹಳ ಸಂಪೂರ್ಣವಾಗಿರುವುದು ಎಂದು ನಂಬಿರಿ. ದೇವರ ರಾಜ್ಯಕ್ಕಾಗಿ ನೀವು ದೊಡ್ಡ ಕಾರ್ಯಗಳನ್ನು ಮಾಡುವಂತೆ ದೇವರು ನಿಮ್ಮನ್ನು ಉಪಯೋಗಿಸುತ್ತಾರೆ. 

- P. ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

ಸತ್ಯಂ T.V, ಮತ್ತು ನಂಬಿಕೈ T.Vಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಮೂಲಕ ಅನೇಕರು ಆಶೀರ್ವದಿಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş