Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.02.2022 (God’s creation’s special)
Share:

By Village Missionary Movement

Thursday, 03-Feb-2022

ಧೈನಂದಿನ ಧ್ಯಾನ(Kannada) – 03.02.2022 (God’s creation’s special)

 

ಮತ್ತೊಂದು ಅವಕಾಶ

 

 "...ಈ ವರುಷವೂ ಇದನ್ನು ಬಿಡು;..." - ಲೂಕ 13: 8,

 

ನನ್ನ ತೋಟಗಾರನ ಎಚ್ಚರಿಕೆಯ ಮೇಲ್ವಿಚಾರಣೆಯಲ್ಲಿ ನಾನು ಸೊಂಪಾದ ಸ್ಥಳದಲ್ಲಿ ಸುಂದರವಾಗಿ ಬೆಳೆದೆ. ನನ್ನ ಮರದಲ್ಲಿ ಪಕ್ಷಿಗಳು ಮತ್ತು ಪ್ರಾಣಿಗಳು ವಾಸಿಸುತ್ತವೆ. ಇಷ್ಟೆಲ್ಲಾ ಸೌಲಭ್ಯ, ಅವಕಾಶಗಳನ್ನು ನಾನು ಹೊಂದಿದ್ದರೂ ನನ್ನನ್ನು ಸೃಷ್ಟಿಸಿದ ಉದ್ದೇಶವು ಈಡೇರದ ರೀತಿಯಲ್ಲಿ ಬೆಳೆದು ಬಂದೆ. ನನ್ನ ಬಗ್ಗೆ ನನಗೇ ಚಿಂತೆಯಾಗಿತ್ತು. ನಾನು ಯಾರೆಂದು ನೀವು ಕಂಡು ಹಿಡಿದುಬಿಟ್ರಾ?

 

ನಾನೇ ಆ ಸುಂದರ ದ್ರಾಕ್ಷಿತೋಟದಲ್ಲಿ ನೆಡಲ್ಪಟ್ಟಿದ್ದ ಅಂಜೂರದ ಮರ.

ನನ್ನನ್ನು ನೋಡಿಕೊಳ್ಳುವ ತೋಟಗಾರನು ತುಂಬಾ ಒಳ್ಳೆಯವರು. ನನಗೆ ಬೇಕಾದ ನೀರು, ಗೊಬ್ಬರ, ಬಿಸಿಲಿನ ತಾಪ ಎಲ್ಲಾ ಸಿಗುವಂತೆ ತುಂಬಾ ಚೆನ್ನಾಗಿ ನೋಡಿಕೊಂಡರು. ನಾನು ಬಳ್ಳಿಗಳೊಂದಿಗೆ ಎಲೆಗಳೊಂದಿಗೆ ಹಚ್ಚಹಸಿರಾಗಿ ಬೆಳೆದುಬಂದೆ. ಆದರೆ ನನ್ನಲ್ಲಿ ಯಾವ ಫಲವೂ ಉಂಟಾಗಲಿಲ್ಲ. ಎಷ್ಟು ಶೋಚನೀಯ! ಇಷ್ಟು ಚೆನ್ನಾಗಿ ನೋಡಿಕೊಂಡರೂ ಪ್ರಯೋಜನವಿಲ್ಲದೇ ಇದ್ದೆನು. ಒಂದು ವೇಳೆ ಇದನ್ನು ಓದುತ್ತಿರುವ ನೀವು ಕೂಡ ಹೀಗೇ ಇದ್ದೀರಾ? ದೇವರು ನಿಮಗೆ ಉತ್ತಮ ಕುಟುಂಬ, ಆದಾಯ, ಮನೆ, ಉತ್ತಮ ಐಕ್ಯತೆಯಂತಹ ಎಲ್ಲಾ ಅವಕಾಶಗಳನ್ನು ನೀಡಿ ಸಂತೋಷವಾಗಿಟ್ಟಿದ್ದಾರಲ್ಲವೇ! ಎಲ್ಲವನ್ನೂ ಅನುಭವಿಸುತ್ತಿರುವ ನೀವು ಇತರರಿಗೆ ಉಪಯೋಗವಾಗುವ ಜೀವನವನ್ನು ಜೀವಿಸುತ್ತಿದ್ದೀರಾ? ಅಂಜೂರದ ಮರವನ್ನು ನೆಟ್ಟ ತೋಟಗಾರನು ಆ ಜಾಗದಲ್ಲಿ ಬೇರೊಂದು ಮರವನ್ನು ನೆಟ್ಟಿದ್ದರೂ ಕೂಡ ಅದು ಫಲ ನೀಡುತ್ತಿತ್ತು. ಹೆಚ್ಚು ಅವಕಾಶಗಳನ್ನು ಪಡೆದ ನಾನು ಅವಕಾಶಗಳನ್ನು ಬಳಸಿಕೊಳ್ಳದ ಜೀವನವನ್ನು ಜೀವಿಸುತ್ತಿದ್ದೇನೆ. ನನ್ನಂತೆ ನೀವು ಕೂಡ ನಿಮ್ಮನ್ನು ಸೃಷ್ಟಿಸಿದ ದೇವರಿಗೆ ಭಾರವಾಗಿ, ದುಃಖವನ್ನು ಉಂಟುಮಾಡುವ ಜೀವನವನ್ನು ಜೀವಿಸುತ್ತಾ ಇದ್ದೀರ?

 

ನನ್ನನ್ನು ಗಮನಿಸಿದ ತೋಟಗಾರನು ನನ್ನಲ್ಲಿ ಫಲವಿಲ್ಲ ಎಂದು ಮೂರು ವರ್ಷಗಳ ಕಾಲ ಕಾದಿದ್ದು ನೋಡಿಯೂ ಅದನ್ನು ಕಡಿಯಲು ಯಜಮಾನನು ಅನುಮತಿ ನೀಡಿಯೂ ನನಗಾಗಿ ಬೇಡಿಕೊಂಡರೇ! ಇದರಂತೆಯೇ ಯೇಸುಕ್ರಿಸ್ತನು ಕೂಡ ತಂದೆಯ ಬಳಿ ಬೇಡಿಕೊಂಡ ಪರಿಣಾಮವೇ ನೀವು ಈ ವರ್ಷ ಜೀವಂತವಾಗಿದ್ದೀರ. ಏಕೆಂದರೆ ಈ ವರ್ಷ ನೀವು ಫಲಪ್ರದ ಜೀವನವನ್ನು ಜೀವಿಸುತ್ತೀರ ಎಂದು ಎದುರು ನೋಡುತ್ತಾ ಕಾಯುತ್ತಿದ್ದಾರೆ. ಆತ್ಮದ ಫಲವು ನಿಮ್ಮಲ್ಲಿ ಕಾಣಲ್ಪಡುವಾಗ ಅದು ನಿಮ್ಮನ್ನು ಸಮೀಪಿಸುವವರಿಗೆ ಸಿಹಿಯಾಗಿಯೂ ಅವರ ಜೀವನದಲ್ಲಿ ಒಂದು ದೊಡ್ಡ ಬದಲಾವಣೆಯನ್ನೋ ಅಥವಾ ದಾಹವನ್ನೋ ಕೊಡುತ್ತದಲ್ಲವೇ! ನಾವು ಒಂದು ವೇಳೆ ಈ ವರ್ಷ ಫಲ ನೀಡದಿದ್ದರೆ ನಮ್ಮನ್ನು ಕಡಿದು ಬೆಂಕಿಗೆ ಹಾಕುತ್ತಾರೆ. ನಾವು ಸುಟ್ಟು ಬೂದಿಯಾಗುತ್ತೇವೆ. ಆದರೆ ನಿಮಗೆ ಕೊಡಲ್ಪಟ್ಟಿರುವ ಅವಕಾಶವನ್ನು ನೀವು ಕಳೆದುಕೊಂಡರೆ, ನೀವು ವರ್ಷಾನುಗಟ್ಟಲೆ ದೇವರೊಂದಿಗೆ ವಾಸಿಸುವ ನಿತ್ಯ ಜೀವವನ್ನು ಕಳೆದುಕೊಂಡು ಪರಿತಪಿಸುವವರಾಗಿ ಮಾರ್ಪಡುತ್ತೀರ. ಆದ್ದರಿಂದ ಫಲಕೊಡಲು ಜಾಗರೂಕರಾಗಿರಿ.

 -Mrs . ಜೆಬಾ ಡೇವಿಡ್ ಗಣೇಶನ್

 

ಪ್ರಾರ್ಥನಾ ಅಂಶ:

ನಮ್ಮ ಪ್ರಾರ್ಥನಾ ಗುಡಾರದ ನಿರ್ಮಾಣ ಕೆಲಸಗಳಲ್ಲಿ ತೊಡಗಿರುವವರ ಸುರಕ್ಷತೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet grandpashabet jojobet casinoroyal jojobet holiganbet ibizabet holiganbet amkbet sonbahis betgit cratosroyalbet cratosroyalbet tlcasino