By Village Missionary Movement
Tuesday, 01-Feb-2022ಧೈನಂದಿನ ಧ್ಯಾನ(Kannada) – 02.02.2022 (God’s creation’s special)
ನಿಧಿ
"ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ" - 2 ತಿಮೊಥೆ 3:16
ಸತ್ಯವೇದವಾದ ನಾನು ಬರೀ ಪುಸ್ತಕವಲ್ಲ ... ಅದ್ಭುತವಾದ ನಿಧಿ ನನ್ನನ್ನು ಮೂರು ಭಾಷೆಗಳಲ್ಲಿ ಬರೆದಿದ್ದಾರೆ. ಸುಮಾರು 1600 ವರ್ಷಗಳಿಂದ ನನ್ನನ್ನು ಬರೆದಿದ್ದಾರೆ. ಸುಮಾರು 40 ಜನರು ಬರೆದಿದ್ದಾರೆ. ಅವರು ಒಬ್ಬರನ್ನೊಬ್ಬರು ನೋಡಿಕೊಂಡಿದ್ದೂ ಇಲ್ಲ. ಅನಕ್ಷರಸ್ಥರು, ಮೀನುಗಾರರು, ಕುರುಬರು, ವೈದ್ಯರು ಇಂಥವರೇ ನನನ್ನು ಬರೆದರು. ಅವರೆಲ್ಲರೂ ಪವಿತ್ರಾತ್ಮದಿಂದ ಪ್ರೇರಿತರಾಗಿ ನನ್ನನ್ನು ಬರೆದರು. ಪ್ರಪಂಚದಲ್ಲೇ ಹೆಚ್ಚಾಗಿ ಮುದ್ರಿಸಿ ಸಂಶೋಧನೆ ಮಾಡಿದ ಪುಸ್ತಕ ಮತ್ತು ಹೆಚ್ಚು ಓದುವ ಪುಸ್ತಕವೂ ನಾನೇ! ನನ್ನನ್ನು ಸಂಪೂರ್ಣವಾಗಿ ಓದಲು 72 ಗಂಟೆಗಳು ಮಾತ್ರವೇ ಆಗುತ್ತದೆ. ವಿಶ್ವದಲ್ಲೇ ಅಧಿಕವಾಗಿ ಮಾರಾಟವಾಗುವುದು ನಾನೇ! ಸುಮಾರು 2000 ವರ್ಷಗಳಿಂದ ನನ್ನನ್ನು ನಾಶಮಾಡಬೇಕೆಂದು ಭಾವಿಸಿದರು. ನನ್ನನ್ನು ಸುಟ್ಟು ಹಾಕಿದರು, ಹರಿದು ಹಾಕಿದರು ಆದರೆ ಈಗ 1200 ಕ್ಕೂ ಹೆಚ್ಚು ಭಾಷೆಗಳಲ್ಲಿ ಮುದ್ರಿಸಲ್ಪಟ್ಟು ಅನೇಕರಿಗೆ ಪ್ರಯೋಜನಕರವಾಗಿದ್ದೇನೆ.
ನಿಮಗೆ ಗೊತ್ತಾ? ನನ್ನನ್ನು ಪ್ರೀತಿಸಿ, ಓದುತ್ತಾ ಅದರಂತೆ ನಡೆದುಕೊಳ್ಳುವವರಿಗೆ ಆಗುವ ಪ್ರಯೋಜನಗಳು ಹಲವಾರು. ಪ್ರಾಣವನ್ನು ಉಜ್ಜೀವಿಸಮಾಡುವಂಥದ್ದು (ಕೀರ್ತ. 19:7), ಸಂಪೂರ್ಣ ಸಮಾಧಾನವಿರುತ್ತದೆ (119: 165), ಆನಂದ ಉಂಟಾಗುತ್ತದೆ (119: 77), ನಿತ್ಯಜೀವವು ದೊರೆಯುತ್ತದೆ (ಯೋಹಾನ 5:39) ಹೀಗೆ ಹಲವು ಆಶೀರ್ವಾದಗಳು ನಿಮಗೆ ಉಂಟಾಗುತ್ತವೆ.
ಪ್ರಿಯರೇ! ಹಲವರ ತ್ಯಾಗದಿಂದ ನಾನು ನಿಮ್ಮ ಕೈಗೆ ಸಿಕ್ಕಿದ್ದೇನೆ. ನನ್ನನ್ನು ಮುಟ್ಟಿದರೆ ಅದು ಕೇವಲ ಕಾಗದ, ನೀವು ಅದನ್ನು ಓದಿದರೆ ಅದುವೇ ನಿನಗೆ ಆಯುಧ. ನೀನು ನನ್ನನ್ನು ಹೊತ್ತುಕೊಂಡರೆ, ನಾನು ನಿನ್ನನ್ನು ಹೊತ್ತುಕೊಳ್ಳುತ್ತೇನೆ. ಯಾವ ಪುಸ್ತಕಗಾರನೂ ಅದರೊಂದಿಗೆ ಬರುವುದಿಲ್ಲ. ಆದರೆ ನನನ್ನು ಬರೆದವರು ನನ್ನೊಂದಿಗಿದ್ದಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ ನಾನು ಪರಲೋಕದ ನಿಧಿ. ಸತ್ಯವೇದ ಪುಸ್ತಕವಾಗಿರುವ ನನ್ನನ್ನು ದಿಂಬಿನ ಕೆಳಗೆ ಇರಿಸಿ ಮಲಗುವುದರಿಂಲೋ, ನನ್ನನ್ನು ಮುಟ್ಟಿ ನಮಸ್ಕರಿಸುವುದರಿಂದಲೋ,ದೇವರ ಶಕ್ತಿಯು ನಿಮಗೆ ಸಿಗುವುದಿಲ್ಲ. ಬದಲಾಗಿ, ನನ್ನೊಳಗಿನ ದೇವರ ವಾಕ್ಯಗಳನ್ನು ಓದಿ, ಧ್ಯಾನಿಸಿ, ಪ್ರೀತಿಸಿ, ಅದಕ್ಕೆ ತಕ್ಕಂತೆ ತಮ್ಮ ಜೀವನವನ್ನು ಹೊಂದಿಸಿಕೊಳ್ಳುವವರಿಗೆ ಖಂಡಿತವಾಗಿಯೂ ದೇವರ ಶಕ್ತಿಯು ದೊರೆಯುತ್ತದೆ. ಹಾಗಾಗಿ ಭಾನುವಾರದಂದು ಮಾತ್ರವೇ ನನ್ನನ್ನು ಎತ್ತಿಕೊಳ್ಳದೆ ಪ್ರತಿದಿನವೂ ನನ್ನನ್ನು ಎತ್ತಿ ಓದಲು ಮತ್ತು ಧ್ಯಾನಿಸಲು ನಿಮ್ಮನ್ನು ಒಪ್ಪಿಸಿಕೊಡಿ. ಖಂಡಿತವಾಗಿಯೂ ದೇವರು ನಿಮ್ಮ ಜೀವನವನ್ನು ಆಶೀರ್ವದಿಸುತ್ತಾರೆ! ಆಮೆನ್.
- P. ಶಿವ
ಪ್ರಾರ್ಥನಾ ಅಂಶ:
ಪರಿಶುದ್ಧತೆಯಲ್ಲಿ ಬೆಳೆಯುವ ವರ್ಷವಾಗಿರುವ ಈ ವರ್ಷದಲ್ಲಿ ನಾವು ಮುನ್ನಡೆಸುವ ಪ್ರತಿಯೊಬ್ಬ ಯುವಕರು ಪರಿಶುದ್ಧತೆಯಲ್ಲಿ ಬೆಳೆಯುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482