Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.02.2022
Share:

By Village Missionary Movement

Monday, 31-Jan-2022

ಧೈನಂದಿನ ಧ್ಯಾನ(Kannada) – 01.02.2022

 

ಮಾತನಾಡುವ ಮರ

 

 "...ಸತ್ಕಾರ್ಯಗಳನ್ನು ಮಾಡುವದಕ್ಕಾಗಿಯೇ ಕ್ರಿಸ್ತ ಯೇಸುವಿನಲ್ಲಿ ಸೃಷ್ಟಿಸಲ್ಪಟ್ಟೆವು. ನಾವು ಸತ್ಕಾರ್ಯಗಳನ್ನು ನಡಿಸುವವರಾಗಿ ಬದುಕಬೇಕೆಂದು ದೇವರು ನಮ್ಮನ್ನು ಮೊದಲೇ ನೇವಿುಸಿದನು." - ಎಫೆಸ 2:10

 

ನಾನು ಮರ ಮಾತನಾಡುತ್ತಿದ್ದೇನೆ. ಸೂರ್ ಎಂಬ ಮಾರಣಾಂತಿಕ ಮರುಭೂಮಿಯಲ್ಲಿ ನಾನಿದ್ದೆ. ಮಳೆ ನೋಡಿ ಎಷ್ಟೋ ವರ್ಷಗಳಾದವು. ನನ್ನ ಸುತ್ತಲೂ ಬರ ಆವರಿಸಿತ್ತು. ಬಿಸಿಲಿನ ತಾಪವು ನನ್ನನ್ನು ಕಾಡುತ್ತಿತ್ತು. ನನ್ನ ಜೀವನದಲ್ಲಿ ಹಸಿರೇ ಇಲ್ಲ ಎಂದು ದುಂಖಿಸುತ್ತಿದ್ದ ನನ್ನ ಮನದಲ್ಲಿ ಅನೇಕ ಪ್ರಶ್ನೆಗಳು ಮೂಡಿದವು. ಎಷ್ಟೋ ಹಸಿರಾದ ಸ್ಥಳಗಳು, ನೀರಿನ ಬುಗ್ಗೆಗಳುಳ್ಳ ಸ್ಥಳಗಳು ಹೀಗೆ ಸುಂದರವಾದ ಸ್ಥಳಗಳನ್ನು ದೇವರು ಸೃಷ್ಟಿಸಿರುವಾಗ, ನಾನು ಮಾತ್ರ ಯಾಕೆ ಈ ಅರಣ್ಯದಲ್ಲಿ ಇದ್ದೇನೆ. ಈ ಜೀವನದಿಂದ ನನಗೆ ಸುಖವೇ ಇಲ್ಲ, ಬೇರೆಯವರಿಗೂ ನನ್ನಿಂದ ಯಾವ ಉಪಯೋಗವೂ ಇಲ್ಲ ಎಂಬ ಯೋಚನೆ ನನಗೆ ದಿನವೂ ಬರುತ್ತಲೇ ಇತ್ತು.

 

ಹೀಗೆ ಹಲವು ವರ್ಷಗಳು ಕಳೆದವು. ಇದ್ದಕ್ಕಿದ್ದಂತೆ ಒಂದು ದಿನ ಗುಂಪಾಗಿ ಜನರು ಬರುತ್ತಿರುವುದನ್ನು ನಾನು ನೋಡಿದೆ. ನನ್ನ ಜೀವನದಲ್ಲಿ ಮೊದಲ ಬಾರಿಗೆ ಇಷ್ಟು ದೊಡ್ಡ ಗುಂಪನ್ನು ನೋಡಿ ನಾನು ಆಶ್ಚರ್ಯಚಕಿತನಾದೆ. ಅವರು ಮಾತನಾಡುವ ಸದ್ದು ಕೂಡ ನನ್ನ ಕಿವಿಗೆ ಬಿತ್ತು, "ಛೇ, ಈ ನೀರು ಎಷ್ಟು ಕಹಿಯಾಗಿದೆ, ಇದನ್ನು ಹೇಗೆ ಕುಡಿಯಲು ಸಾಧ್ಯ?" ಎಂದು ಗುಣುಗುಟ್ಟಿದರು. ಹೀಗೆ ಮಾತನಾಡುತ್ತಾ ಆ ಪ್ರಕಾಶಮಾನವಾದ ಮುಖದಿಂದ ಕೈಯಲ್ಲಿ ಕೋಲು ಹಿಡಿದಿದ್ದ ಮನುಷ್ಯನೊಂದಿಗೆ ಜಗಳವಾಡುತ್ತಿದ್ದರು. ಆಗಲೇ ಅವರ ಹೆಸರು ಮೋಶೆ ಎಂದು ನನಗೆ ಅರಿವಾಯಿತು. ಆಗಲೇ ದೇವರು ನನ್ನನ್ನು ಮೋಶೆಗೆ ತೋರಿಸಿದರು. ತಕ್ಷಣವೇ ಮೋಶೆ ನನ್ನನ್ನು ಕಡಿದು ಅಲ್ಲಿಯ ನೀರಿನಲ್ಲಿ ಹಾಕಿದರು ಕೂಡಲೇ ಕಹಿ ನೀರು ಸಿಹಿಯಾಗಿ ಮಾರ್ಪಟ್ಟಿತು. ಎಂಥಾ ಆಶ್ಚರ್ಯ! ಜೀವನವೇ ಪ್ರಶ್ನಾರ್ಥಕವಾಗಿದ್ದ ನಾನು ಕೂಡ, ಮೂರು ದಿನಗಳಿಂದ ನೀರಿಲ್ಲದೆ ಅರಣ್ಯದಲ್ಲಿ ಅಲೆದಾಡುತ್ತಿದ್ದ ಆರು ಲಕ್ಷಕ್ಕೂ ಹೆಚ್ಚು ಇಸ್ರಾಯೇಲ್ ಜನರ ಬಾಯಾರಿಕೆಯನ್ನು ನೀಗಿಸಿದ್ದನ್ನು ನೆನೆಸಿ ಸಂತೋಷಪಟ್ಟೆನು. ಸ್ವಲ್ಪ ಯೋಚಿಸಿದೆ. ಎಷ್ಟೋ ವರ್ಷಗಳ ನಂತರ ನಡೆಯುವ ಈ ಕಾರ್ಯಕ್ಕಾಗಿ ದೇವರು ನನ್ನನ್ನು ಮೊದಲೇ ಈ ಸ್ಥಳದಲ್ಲಿ ಇಟ್ಟಿದ್ದಾರೆ ಎಂದು ತಿಳಿದು ಆಶ್ಚರ್ಯಪಟ್ಟೆನು. ಅರಣ್ಯದಲ್ಲಿ ನನ್ನನ್ನು ವಿಚಾರಿಸುವವರು ಯಾರೂ ಇರಲಿಲ್ಲ, ಆದರೂ ದೇವರ ಯೋಜನೆಯ ಪ್ರಕಾರ ನಾನಿದ್ದೆ ಎಂಬುದನ್ನು ನೆನೆಸಿಕೊಂಡಾಗ ನನ್ನ ಆಂತರ್ಯವು ಹರ್ಷಿಸಿತು. ಹೆಸರೇ ಇಲ್ಲದ ನಾನು ಕೂಡ ಪರಿಶುದ್ಧ ಗ್ರಂಥದಲ್ಲಿ ಸ್ಥಾನವನ್ನು ಪಡೆದುಕೊಂಡು ಬಿಟ್ಟೆ.

 

ಇದನ್ನು ಓದುತ್ತಿರುವ ಪ್ರೀತಿಯ ಸ್ನೇಹಿತರೇ! ನಿಮ್ಮ ಜೀವನದಲ್ಲೂ ನಾನೇಕೆ ಹುಟ್ಟಿದ್ದೇನೆ, ಇಂತಹ ತಾಯಿ ತಂದೆ ನನಗೆ ಸಿಕ್ಕಿಬಿಟ್ಟರೇ, ನಾನು ಸುಂದರವಾಗಿಲ್ಲವೇ, ನಾನು ಓದಿಲ್ಲವೇ, ನನಗೆ ಒಳ್ಳೆಯ ಸಂಸಾರವಿಲ್ಲವೇ, ನನಗೆ ಉದ್ಯೋಗ ಸಿಗಲಿಲ್ಲವೇ ಎಂದು ಹಲವಾರು ಪ್ರಶ್ನೆಗಳೊಂದಿಗೆ ಇದ್ದೀರೋ? ಚಿಂತಿಸಬೇಡಿರಿ. ಮರವಾಗಿದ್ದ ನನ್ನನ್ನು ದೇವರು ಕಂಡು ಅನೇಕರಿಗೆ ಆಶೀರ್ವಾದಕರವಾಗಿ ಮಾರ್ಪಡಿಸಿದರೆಂದರೆ, ಮನುಷ್ಯರಾಗಿರುವ ನೀವು ನನಗಿಂತ ಹೆಚ್ಚು ವಿಶೇಷವಾದವರು. ನಿಮಗೂ ಸಹಾಯ ಮಾಡುವುದು ದೇವರಿಗೆ ಹಗುರವಾದ ವಿಷಯ. ನಾನು ಆಶೀರ್ವಾದಕ್ಕಾಗಿ ಹೇಗೆ ಕಾಯುತ್ತಿದ್ದೆನೋ ಹಾಗೆಯೇ ನೀವು ಕೂಡ ಆಶೀರ್ವಾದ ಪಡೆಯಲು ತಾಳ್ಮೆಯಿಂದಿರಿ. ಸರಿಯಾದ ಸಮಯದಲ್ಲಿ ದೇವರು ನಿಮ್ಮನ್ನು ಮೇಲಕ್ಕೆತ್ತುವುದು ಖಚಿತ.

- K. ಡೇವಿಡ್ ಗಣೇಶನ್

 

ಪ್ರಾರ್ಥನಾ ಅಂಶ:

ಈ ತಿಂಗಳು ಪೂರ್ತಿಯಾಗಿ ನಡೆಯುವಂತಹ ಸೇವೆಗಳಲ್ಲಿ ದೇವರ ಹಸ್ತವು ಜೊತೆಯಿದ್ದು ನಡೆಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet palacebet holiganbet romabet teosbet betgit cratosroyalbet cratosroyalbet gameofbet