Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 31.01.2022
Share:

By Village Missionary Movement

Sunday, 30-Jan-2022

ಧೈನಂದಿನ ಧ್ಯಾನ(Kannada) – 31.01.2022

 

ನೆನೆಪಿಗೆ ತಂದುಕೊಳ್ಳಿರಿ

 

"ಲೋಟನ ಹೆಂಡತಿಯನ್ನು ನೆನಪಿಗೆ ತಂದುಕೊಳ್ಳಿರಿ" - ಲೂಕ 17:32

 

"ಆಗುವುದು ಹೆಣ್ಣಿಂದಲೇ ಹಾಳಾಗುವುದೂ ಹೆಣ್ಣಿಂದಲೇ" ಎಂಬುದು ತಮಿಳಿನ ಗಾದೆ. ಒಂದು ಕುಟುಂಬದ ಆಶೀರ್ವಾದಕ್ಕೂ ಮತ್ತು ಶಾಪಕ್ಕೂ ಮಹಿಳೆಯರೇ ಕಾರಣ. ಆದ್ದರಿಂದ ದೇವರು ನಮ್ಮ ಮುಂದೆ ಎಚ್ಚರಿಕೆಯ ಚಿಹ್ನೆಗಳಾಗಿ ಇಬ್ಬರು ಮಹಿಳೆಯರನ್ನು ನಿಲ್ಲಿಸಿ, ಅವರನ್ನು ನೆನಪಿಗೆ ತಂದುಕೊಳ್ಳಿರಿ ಎಂದು ಸಲಹೆ ನೀಡುತ್ತಿದ್ದಾರೆ. ಅವರೇ ಕೆಳಕಂಡ ಮಹಿಳೆಯರು.

 

ಲೋಟನ ಹೆಂಡತಿ: ಅವಳು ನೀತಿವಂತನ ಹೆಂಡತಿ. ಸೊದೋಮಿನ ವಿನಾಶದಿಂದ ಪಾರಾಗಲು ಅವಳು ದೇವರ ಕರುಣೆಯನ್ನು ಹೊಂದಿದವಳು. ಬಿಟ್ಟು ಬಂದ ಸೊದೋಮಿನ ಮೇಲೆ ಆಸೆ, ಇಚ್ಛೆ ಹೊಂದಿದ್ದರಿಂದ, ಹಿಂತಿರುಗಿ ನೋಡಬೇಡ ಎಂಬ ದೇವರ ಆಜ್ಞೆಯನ್ನು ಧಿಕ್ಕರಿಸಿ ಉಪ್ಪಿನ ಸ್ತಂಭವಾದಳು. ಒಂದು ವೇಳೆ ಅವಳು ತನ್ನ ನೀತಿವಂತ ಗಂಡನನ್ನು ಹಿಂಬಾಲಿಸಿ ಅವನೊಂದಿಗೆ ಹೋಗಿದ್ದರೆ ಅವಳ ಹೆಣ್ಣು ಮಕ್ಕಳ ಮೂಲಕ ಮೋವಾಬ್ಯರು ಮತ್ತು ಅಮ್ಮೋನಿಯರು ಎಂಬ ಶಾಪಗ್ರಸ್ತ ಸಂತತಿಗಳು ಹುಟ್ಟುತ್ತಿರಲಿಲ್ಲ. ಒಂದು ಕುಟುಂಬದ ಯಜಮಾನಿ ಒಳ್ಳೆಯ ಮೂಲ ಮಾದರಿಯಾಗಿ ಸಿಗಲು, ಅವಳ ಕುಟುಂಬ ಆಶೀರ್ವದಿಸಲ್ಪಡಲು ಅವಳು ದೇವರ ಆಜ್ಞೆಯನ್ನು ಉಲ್ಲಂಘಿಸಬಾರದು. ರಕ್ಷಣೆ ಹೊಂದಲು ಮೊದಲು ಕಾಣಲ್ಪಡುವ ಮೋಸ ಹೋಗುವ ಇಚ್ಚೆಗಳಿಂದ ಕೆಟ್ಟು ಹೋಗುವ ಹಳೆಯ ಮನುಷ್ಯನನ್ನು ಹೊರಹಾಕಿ, ದೇವರ ಸ್ವಾರೂಪ್ಯದಲ್ಲಿ ಸೃಷ್ಟಿಸಲ್ಪಟ್ಟ ಹೊಸ ಮನುಷ್ಯನನ್ನು ಧರಿಸಬೇಕು.

 

ಮಿರ್ಯಾಮಳು: ಅವಳು ದೇವರಿಂದ ಆರಿಸಲ್ಪಟ್ಟವಳು. ಒಂದು ಪ್ರವಾದಿನಿ ಕೂಡ! ಇಂತಹ ವಿಶೇಷವಾದ ಆಹ್ವಾನವನ್ನು ಪಡೆದ ನಂತರ ಅವಳೊಳಗೆ ಗುಣುಗುಟ್ಟುವ ಆತ್ಮವಿತ್ತು. 6 ವರ್ಷಕ್ಕೆ ಚಿಕ್ಕವನಾಗಿದ್ದ ತನ್ನ ಸಹೋದರನೂ, ಸೇವಕನೂ ಆಗಿದ್ದ ಮೋಶೆಗೆ ವಿರುದ್ಧವಾಗಿ ಮಾತನಾಡಿದ್ದರಿಂದ ಕುಷ್ಠರೋಗಿಯಾದಳು. ಯೆಹೋವನು ವಿುರ್ಯಾಮಳಿಗೆ ಮಾಡಿದ್ದನ್ನು ನೆನಪುಮಾಡಿಕೊಳ್ಳಿರಿ (ಧರ್ಮೋಪ. 24:9) ಎಂದು ಸತ್ಯವೇದವು ಹೇಳುತ್ತಿದೆ ಗುಣುಗುಟ್ಟಿದ ಇಸ್ರಾಯೇಲ್ಯರು ಸಂಹಾರದೂತರಿಂದ ನಾಶಮಾಡಲ್ಪಟ್ಟರು. ಆದ್ದರಿಂದ ನೀವು ಗುಣುಗುಟ್ಟಬೇಡಿರಿ ಎಂದು ಸತ್ಯವೇದವು ಹೇಳುತ್ತಿದೆ. ಆದ್ದರಿಂದ ಎಲ್ಲಾದಕ್ಕೂ ಕೃತಜ್ಞತೆ ಸಲ್ಲಿಸುವ ಮನೋಭಾವನೆಯಿಂದ, ಗೊಣಗಾಟಕ್ಕೆ ಅವಕಾಶ ಕೊಡಬಾರದು. ಸೇವಕರ ಬಗ್ಗೆ ಕೊರತೆ ಹೇಳುವುದನ್ನು ನಿಲ್ಲಿಸಬೇಕು. ಗುಣುಗುಟ್ಟಿದ ಮಿರ್ಯಾಮಳನ್ನು, ದೇವರ ಸೇವಕ ನನ್ನು ಕೊರತೆ ಹೇಳಿದ ಮಿರ್ಯಾಮಳನ್ನು ಭಯದಿಂದಲೂ, ಎಚ್ಚರಿಕೆಯಿಂದಲೂ ನೆನೆಪಿಸಿಕೊಳ್ಳೋಣ! ಲೋಕವನ್ನು ಹಿಂತಿರುಗಿ ನೋಡಿ ಉಪ್ಪಿನ ಸ್ತಂಭವಾದ ಲೋಟನ ಹೆಂಡತಿಯನ್ನೂ ನೆನಪಿಗೆ ತಂದುಕೊಂಡು ಎಚ್ಚರಿಕೆಯಿಂದ ಬದುಕೋಣ.

- Mrs. ಗೀತಾ ರಿಚರ್ಡ್

 

ಪ್ರಾರ್ಥನಾ ಅಂಶ:

ಪ್ರತಿದಿನ ಮುಂಜಾನೆಯಲ್ಲಿ ನಡೆಯುವ ಸ್ವಸ್ಥತೆಯ ಆರಾಧನೆಯಲ್ಲಿ ಪಾಲ್ಗೊಳ್ಳುವ ವ್ಯಕ್ತಿಗಳನ್ನು ದೇವರು ತನ್ನ ಬಲದಿಂದ ತುಂಬಿಸಿ ಅಭಿಷೇಕಿಸುವಂತೆ, ಎಲ್ಲರೂ ಸ್ವಸ್ಥತೆಯನ್ನು ಪಡೆದುಕೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş