Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.01.2022 (Kids Special)
Share:

By Village Missionary Movement

Sunday, 30-Jan-2022

ಧೈನಂದಿನ ಧ್ಯಾನ(Kannada) – 30.01.2022 (Kids Special)

 

ಇವನು ಯಾರು?

 

“ಆತನು ದೀನರನ್ನು ಧೂಳಿಯಿಂದ ಎಬ್ಬಿಸಿ ಬಡವರನ್ನು ತಿಪ್ಪೆಯಿಂದ ಎತ್ತುತ್ತಾನೆ" - ಕೀರ್ತನೆ 113:7

 

ಬರ್ನಾಬಟ್ ಎಂಬ ಪುಟ್ಟ ತಮ್ಮ ತುಂಬಾ ಚುರು-ಚುರುಕಾಗಿ ಇರುತ್ತಾನೆ. ಇವನ ಒಡಹುಟ್ಟಿದವರು 13 ಜನ. ನಗು ಮತ್ತು ಹೊಡೆದಾಟಗಳಿಂದ ಮನೆಯೇ ಕಳೆ-ಕಳೆಯಾಗಿರುತ್ತದೆ. ಅಪ್ಪ ಕಾರ್ಲೋ ಕೆಲಸಕ್ಕೆ ಹೋಗುವಾಗೆಲ್ಲಾ ನಾನು ಬರುತ್ತೇನೆ ಎಂದು ಹಠ ಹಿಡಿಯುತ್ತಿದ್ದನು ಈ ಬರ್ನಾಬಟ್. ಅಪ್ಪ ಕೂಡ ಒಂದು ದಿನ ಅವನನ್ನು Office-ಗೆ ಕರೆದುಕೊಂಡು ಹೋದರು. ತಡವಾಗಿ ಬಂದಿದ್ದಕ್ಕೆ Manager ಕರೆದು ಬೈದರು. ಅಪ್ಪ ಬೈಸಿಕೊಂಡದ್ದು ಬರ್ನಾಬಟ್-ಗೆ ದುಃಖವಾಗಿದ್ದರೂ, ಮ್ಯಾನೇಜರ್ ಇವನಿಗೆ ದೊಡ್ಡ ವ್ಯಕ್ತಿಯಾಗಿ ಕಂಡರು. ತಕ್ಷಣ ಚೆನ್ನಾಗಿ ಓದಿ ನಾನು ಕೂಡ ಇವರಂತೆ Manager ಆಗಬೇಕೆಂದು ಯೋಚಿಸಿದನು. ನಿಮಗೆ ತುಂಬಾ ಕನಸುಗಳಿವೆಯೇ? Doctor, Engineer, Nurse, Army ಹೀಗೆ ಆಗಬೇಕೆಂದು ಬಯಸುತ್ತಿದ್ದೀರ ತಾನೇ!

 

ಒಂದು ದಿನ ಆ Manager ಮನೆಯಲ್ಲಿ ಔತಣವನ್ನು ಸಿದ್ಧಮಾಡಿದ್ದರು. ಕಾರ್ಲೋ ಕುಟುಂಬವನ್ನೂ ಅಲ್ಲಿಗೆ ಆಹ್ವಾನಿಸಿದ್ದರಿಂದ ಎಲ್ಲರೂ ಹೋದರು. ಈ ಬರ್ನಾಬಟ್ ಮಾತ್ರ Manager ಎಲ್ಲಿ ಎಂದು ಹುಡುಕುತ್ತಿದ್ದನು. ಉಳಿದ ಮಕ್ಕಳೆಲ್ಲಾ ಜಾಲಿಯಾಗಿ ತಿಂದು ಆಟವಾಡುತ್ತಾ Enjoy ಮಾಡಿದರು. ಆ Manager ಅನ್ನು ನೋಡಿದಾಗಿನಿಂದ ಅವರಂತೆ ಬದಲಾಗಬೇಕು, ಅವರೇ ನನಗೆ Hero ಎಂದು ಅಂದುಕೊಂಡಿದ್ದನು. ಇದ್ದಕ್ಕಿದ್ದಂತೆ Manager ಅನ್ನು ಯಾರೋ ಗದರಿಸುತ್ತಿರುವುದನ್ನು ನೋಡಿ ಗಾಬರಿಯಾದನು. ಹಾಗಾದರೆ ಇವರಿಗಿಂತ ದೊಡ್ಡ ವ್ಯಕ್ತಿ ಇದ್ದಾರಾ? ಅಂದುಕೊಂಡು ತನ್ನ ತಂದೆಯ ಬಳಿ ಹೋಗಿ ಕೇಳಿದನು. ಹೌದಪ್ಪ ಅವರಿಗಿಂತ ದೊಡ್ಡವರು Owner ಎಂದು ಅಪ್ಪ ಹೇಳಿದಾಗ ದೇಶದಲ್ಲೇ ಅತ್ಯುನ್ನತ ಪದವಿ ಯಾವುದಪ್ಪ? ಎಂದು ಕೇಳಿದನು. ಬರ್ನಾಬಟ್ ತಂದೆ ನಗುತ್ತಾ ರಾಜನ ಪದವಿಯೇ ಎಂದು ಹೇಳಿದರು. ಆ ದಿನದಿಂದ ಅವನು ರಾಜನಾಗಲು ಬಯಸಿದನು. ಶಾಲೆಯನ್ನು ಮುಗಿಸಿದ ನಂತರ ಮಿಲ್ಟ್ರಿ ಗೆ ಸೇರಿದನು. ಅವನ ಕಠಿಣ ಪರಿಶ್ರಮ ಮತ್ತು ಪ್ರಯತ್ನದ ಮೂಲಕ ಶೀಘ್ರದಲ್ಲೇ ಫೋರ್ಸ್ ಕಮಾಂಡರ್ ಆದನು. ಸರಿಯಾದ ಸಂದರ್ಭ ಬಂತು. ಆ ಸಂದರ್ಭವನ್ನು ಬಳಸಿಕೊಂಡು France ದೇಶದ ರಾಜನಾಗಿ ಮಾರ್ಪಟ್ಟನು. ರಾಜಮನೆತನದಲ್ಲಿ ಹುಟ್ಟದ ಯಾರೂ ರಾಜರಾಗಲು ಸಾಧ್ಯವಿಲ್ಲ. ಆದರೆ ಬರ್ನಾಬಟ್ ಆ ಇತಿಹಾಸವನ್ನೇ ಬದಲಿಸಿಬಿಟ್ಟನು. ಒಬ್ಬ ಸಾಮಾನ್ಯ ಪ್ರಜೆಯೂ ರಾಜನಾಗಬಹುದು ಎಂಬುದನ್ನು ಸಾಬೀತುಪಡಿಸಿದನು. ಇವರು ಯಾರು ಗೊತ್ತಾ? ಮಹಾವೀರ ನೆಪೋಲಿಯನ್ ಬರ್ನಾಬಟ್. ಸಾಧ್ಯವಿಲ್ಲ ಎಂಬ ಮಾತು ನನ್ನ ಜಾಯಮಾನದಲ್ಲೇ ಇಲ್ಲ ಎಂದು ಹೇಳಿದರು. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದರೂ.... ಆತ್ಮವಿಶ್ವಾಸದಿಂದ ಪ್ರಯತ್ನಪಟ್ಟು ಗುರಿ ಸಾಧಿಸಿ ಯಶಸ್ವಿಯಾದರು.

 

ಪ್ರೀತಿಯ ತಮ್ಮ-ತಂಗಿ, ಈ ಹೊಸ ವರ್ಷದಲ್ಲಿಯಾದರೂ ನನ್ನಿಂದ ಸಾಧ್ಯವಿಲ್ಲ, ಇದು ಸಾಧ್ಯವಿಲ್ಲ, ಅದು ಸಾಧ್ಯವಿಲ್ಲ, ಇದು ಖಂಡಿತ ಆಗುವುದೇ ಇಲ್ಲ ಎಂದು ಭಾವಿಸಬಾರದು. ನಮ್ಮನ್ನು ಸೃಷ್ಟಿಸಿದ ದೇವರು ಹೇಳುತ್ತಾರೆ ನನಗೆ ಅಸಾಧ್ಯವಾದದ್ದುಂಟೋ? ಎಂದು. ಅವರಿಂದ ಎಲ್ಲವೂ ಸಾಧ್ಯ. ನಿನ್ನ ಎಲ್ಲಾ ಆಸೆಗಳನ್ನು ಮತ್ತು ಹಂಬಲಗಳನ್ನು ಪೂರೈಸುತ್ತಾರೆ. ಯೇಸುವನ್ನು ನಂಬಿ ನಿನ್ನ ಜೀವನ ಪಯಣವನ್ನು ಮುಂದುವರೆಸುವುದಾದರೆ ... ಗೆಲುವು ನಿನ್ನ ಕೈಯಲ್ಲಿ!

- Mrs. ಜ್ಯೋತಿ ಆನಂದ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet matbet marsbahis imajbet perabet perabet giriş