Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 29.01.2022
Share:

By Village Missionary Movement

Saturday, 29-Jan-2022

ಧೈನಂದಿನ ಧ್ಯಾನ(Kannada) – 29.01.2022

 

ಯಾರಿಗೆ ಮೊದಲ ಸ್ಥಾನ?

 

"ನಾನು ಯೆಹೋವನನ್ನು ಯಾವಾಗಲೂ ನನ್ನೆದುರಿಗೇ ಇಟ್ಟುಕೊಂಡಿದ್ದೇನೆ;..." - ಕೀರ್ತನೆ 16:8

 

ಒಬ್ಬ ಕಲಾವಿದ ಸುಂದರವಾದ ಚಿತ್ರವನ್ನು ಚಿತ್ರಿಸಿದ. ಅದರಲ್ಲಿ ಒಬ್ಬ ದೇವದೂತನು ಭೂಮಿಯನ್ನು ಉಳುಮೆ ಮಾಡುತ್ತಿರುವಂತೆಯೂ, ಒಬ್ಬ ರೈತನು ಹೊಲದ ಮಧ್ಯದಲ್ಲಿ ಮೊಣಕಾಲೂರಿ ಎರಡೂ ಕೈಗಳನ್ನು ಜೋಡಿಸಿ ಆಕಾಶವನ್ನು ದೃಷ್ಟಿಸಿ ಪ್ರಾರ್ಥಿಸುತ್ತಿರುವಂತೆಯೂ ಇತ್ತು. ರೈತನು ತನ್ನ ಭೂಮಿಯನ್ನು ವ್ಯವಸಾಯ ಮಾಡುವ ಮೊದಲು, ದೇವರ ಬಳಿ ತನ್ನ ಜಮೀನು ಚೆನ್ನಾಗಿ ಫಲಕೊಡುವಂತೆಯೂ, ದೇವರು ತನ್ನೊಂದಿಗೆ ಒಂದು ಪಾಲುದಾರನಾಗಿರಬೇಕೆಂದು ಪ್ರಾರ್ಥಿಸುತ್ತಿದ್ದನು. ಆಗ ದೇವರು ರೈತನಿಗೆ ಸಹಾಯ ಮಾಡಲು ತನ್ನ ದೂತನನ್ನು ಕಳುಹಿಸುತ್ತಾರೆ. ಆ ರೈತನು ತನ್ನ ಕೆಲಸದಲ್ಲಿ ದೇವರನ್ನು ಮುಂದಿಟ್ಟು ಕಾರ್ಯ ಮಾಡುವಾಗ ದೇವರು ತನ್ನ ದೂತನನ್ನು ಕಳುಹಿಸಿ ಅವರಿಗೆ ಸಹಾಯ ಮಾಡುವ ಹಾಗೆ ಚಿತ್ರಿಸಿದ್ದರು.

 

ನಾವು ಸತ್ಯವೇದದಲ್ಲಿ ದಾವೀದನ ಜೀವನವನ್ನು ನೋಡುವಾಗ ಅವರು ಎಲ್ಲಾ ಕಾರ್ಯಗಳಲ್ಲೂ ದೇವರನ್ನೇ ಮೊದಲ ಸ್ಥಾನದಲ್ಲಿಟ್ಟು, ದೇವರನ್ನು ಸ್ತುತಿಸುತ್ತಿದ್ದದ್ದನ್ನು ನಾವು ನೋಡಬಹುದು. ಕೀರ್ತನೆ 16:8 ನೇ ವಚನದಲ್ಲಿ "ನಾನು ಯೆಹೋವನನ್ನು ಯಾವಾಗಲೂ ನನ್ನೆದುರಿಗೇ ಇಟ್ಟುಕೊಂಡಿದ್ದೇನೆ; ಎಂದು, ಕೀರ್ತನೆ 34:1 ರಲ್ಲಿ, "ನಾನು ಯೆಹೋವನನ್ನು ಎಡೆಬಿಡದೆ ಕೊಂಡಾಡುವೆನು; ಆತನ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿ ಇರುವದು" ಎಂದು ಹೇಳುವುದನ್ನು ಓದುತ್ತೇವೆ. ಹೀಗೆ ಎಲ್ಲಾ ಪರಿಸ್ಥಿತಿಗಳಲ್ಲೂ, ಎಲ್ಲಾ ಸಮಯದಲ್ಲೂ, ಎಲ್ಲಾ ಸಂದರ್ಭಗಳಲ್ಲೂ ಕರ್ತನನ್ನೇ ತನ್ನೆದುರಿಗೆ ಇಟ್ಟುಕೊಂಡಿದ್ದದರಿಂದ‌ ದೇವರು ದಾವೀದನಿಗೆ ಎಲ್ಲಾ ಕಾರ್ಯಗಳನ್ನು ಸುಲಭಗೊಳಿಸಿದರು ಮತ್ತು ಆಶೀರ್ವದಿಸಿ ಅರಸನನ್ನಾಗಿ ಅಭಿವೃದ್ಧಿ ಪಡಿಸಿದರು.

 

ಕರ್ತನಲ್ಲಿ ಪ್ರಿಯರೇ! ನಮಗೆ ಪ್ರತಿದಿನ ಮಾಡಲು ಹಲವಾರು ಕೆಲಸಗಳಿವೆ. ಅವೆಲ್ಲವುಗಳನ್ನು ನಾವು ದೇವರನ್ನು ಮುಂದಿಟ್ಟು, ಪ್ರಾರ್ಥಿಸಿ ಮಾಡುತ್ತಿದ್ದೇವೆಯೇ? ಒಂದು ಕ್ಷಣ ಯೋಚಿಸೋಣ. ನಮ್ಮ ಕೆಲಸದ ಮೊದಲು ನಾವು ದೇವರೊಂದಿಗೆ ಕಳೆಯುವ ಸಮಯ ಎಂದಿಗೂ ವ್ಯರ್ಥವಾಗುವುದಿಲ್ಲ. ಎಷ್ಟರ ಮಟ್ಟಿಗೆ ದೇವರ ಬಳಿ ಪ್ರಾರ್ಥಿಸುವುದರಲ್ಲೂ, ಸ್ತುತಿಸುವುದರಲ್ಲೂ, ಸತ್ಯವೇದವನ್ನು ಧ್ಯಾನಿಸುವುದರಲ್ಲೂ ಸಮಯವನ್ನು ಕಳೆಯುತ್ತೇವೋ, ಅಷ್ಟು ಹೆಚ್ಚಾಗಿ ದೇವರು ನಮ್ಮ ಕೆಲಸವನ್ನು ನಮಗೆ ಸುಲಭಗೊಳಿಸುವುದನ್ನು ನಾವು ನೋಡಬಹುದು. ಹೌದು, ದಾವೀದನಂತೆ, ನಾವು ಕೂಡ ದೇವರಿಗೆ ಪ್ರಥಮ ಸ್ಥಾನವನ್ನು ನೀಡುವಾಗ ದೇವರು ನಮ್ಮನ್ನು ಆಶೀರ್ವದಿಸಿ ಅಭಿವೃದ್ಧಿ ಪಡಿಸುತ್ತಾರೆ. ಆಮೆನ್.

- P. ಶಿವ

 

ಪ್ರಾರ್ಥನಾ ಅಂಶ:

ಪ್ರಾರ್ಥನಾ ಗುಡಾರದ ನಿರ್ಮಾಣ ಕಾಮಗಾರಿಯು ಶೀಘ್ರವಾಗಿ ಪೂರ್ಣಗೊಂಡು ದೇವರ ನಾಮ ಮಹಿಮೆಗಾಗಿ ಪ್ರತಿಷ್ಠೆ ಮಾಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet matbet marsbahis imajbet perabet perabet giriş