Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.01.2022
Share:

By Village Missionary Movement

Friday, 28-Jan-2022

ಧೈನಂದಿನ ಧ್ಯಾನ(Kannada) – 28.01.2022

 

ಅವರು ಬರುವ ತನಕ...

 

“ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕ್ತಿಯಿಂದ ಮಾಡು;..." - ಪ್ರಸಂಗಿ 9:10

 

ನಾವೆಲ್ಲರೂ ಪ್ರತಿದಿನ ಸಮಾಧಿಯನ್ನು ನೋಡುತ್ತಲೇ ಓಡುತ್ತಿದ್ದೇವೆ. ಯಾರು ಮೊದಲು ಹೋಗಿ ಸೇರುತ್ತಾರೆ? ಹಿಂದೆ ಬರುವವರು ಯಾರು? ಅಂತಿಮವಾಗಿ ಹೋಗುವವರು ಯಾರು, ಯಾರು ಎಂಬುದನ್ನು ದೇವರು ನಿರ್ಧರಿಸುತ್ತಾರೆ. ನಾವು ಈ ಭೂಮಿಯಲ್ಲಿ ಹೆಚ್ಚು ಕಾಲ ಬದುಕುವುದಿಲ್ಲ. ರೋಗಗಳು ಮತ್ತು ಪ್ರಕೃತಿ ಒಟ್ಟಿಗೆ ಸೇರಿ ಅನೇಕ ಸಾವುಗಳನ್ನು ತರುತ್ತಿವೆ. ಭೂಕಂಪಗಳು, ಭೂಕುಸಿತಗಳು, ಧಾರಾಕಾರ ಮಳೆ, ಚಂಡಮಾರುತಗಳು, ನರಹತ್ಯೆಗಳು ಮತ್ತು ಆತ್ಮಹತ್ಯೆಗಳಂತಹ ನೈಸರ್ಗಿಕ ವಿಕೋಪಗಳು ಸೇರಿದಂತೆ ಅನೇಕ ವಿಧಗಳಲ್ಲಿ ಕರೋನ ವೈರಸ್‌ನಿಂದ ಉಂಟಾಗುವ ಸಾವುಗಳ ಪಟ್ಟಿ ಮುಂದುವರಿಯುತ್ತಲೇ ಇದೆ.

 

ನಾವು ಬದುಕಿರುವವರೆಗೆ ಮಾತ್ರ ಅನೇಕ ಒಳ್ಳೆಯ ಕೆಲಸಗಳನ್ನು ಮಾಡಲು ಸಾಧ್ಯ. ಅದಕ್ಕಾಗಿಯೇ ದೇವರು ನಮಗೆ ಬುದ್ಧಿವಂತಿಕೆ, ಜ್ಞಾನ ಮತ್ತು ಅನೇಕ ಅದ್ಭುತ ಪ್ರತಿಭೆಗಳನ್ನು ನೀಡಿದ್ದಾರೆ. ನಾವು ಅವುಗಳನ್ನು ಸರಿಯಾಗಿ ಮತ್ತು ಸಂಪೂರ್ಣವಾಗಿ ಬಳಸುತ್ತಿದ್ದೇವೆಯೇ? ಅಥವಾ ಸೋಮಾರಿಗಳಾಗಿ ದಿನಗಳನ್ನು ಕಳೆಯುತ್ತಿದ್ದೇವೆಯೇ? ದೇವರು ನಮಗೆ ನೀಡಿರುವ ಬುದ್ಧಿವಂತಿಕೆಯ ಮೂಲಕ ದೇವರನ್ನು ಮೆಚ್ಚಿಸುವ ಮತ್ತು ಆತನನ್ನು ಮಹಿಮೆಪಡಿಸುವ ಕೆಲಸಗಳನ್ನು ಮಾಡಲು ಸಾಧ್ಯ. ಅದನ್ನೇ ಸೊಲೊಮೋನನು ಹೇಳುತ್ತಾರೆ, "ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕ್ತಿಯಿಂದ ಮಾಡು" ಎಂದು. ನಮ್ಮಿಂದ ನಮ್ಮ ಮನೆಯಲ್ಲಿ ಇರುವವರಿಗೆ ಸಹಾಯ ಮಾಡಬಹುದು ಅಥವಾ ಕೆಲಸ ಮಾಡಿ ಕೊಡಬಹುದು. ನಾವು ಸಾಮಾನ್ಯವಾಗಿ ಮಾಡುವ ಕರ್ತವ್ಯಗಳನ್ನು ಮೀರಿ, ನಾವು ಹೆಚ್ಚು ಹೆಚ್ಚು ಕಾರ್ಯನಿರ್ವಹಿಸಬಹುದು. ವಯಸ್ಸಾದ ತಂದೆ-ತಾಯಿ, ಅತ್ತೆ-ಮಾವ ಇವರನ್ನು ಚೆನ್ನಾಗಿ ನೋಡಿಕೊಳ್ಳಬಹುದು. ಮಕ್ಕಳನ್ನು ಚೆನ್ನಾಗಿ ಬೆಳೆಸಬಹುದು ಮತ್ತು ಉತ್ತಮ ರೀತಿಯಲ್ಲಿ ಮಾರ್ಗದರ್ಶನ ನೀಡಬಹುದು. ನಮ್ಮ ಸುತ್ತಲಿರುವವರಿಗೆ ಸಮಯವೋ, ಹಣದ ಸಹಾಯವೋ ಅಥವಾ ಇತರ ಸಹಾಯವನ್ನೋ ನೀಡುವ ಮೂಲಕ ಅವರನ್ನು ಸಂತೋಷಪಡಿಸಬಹುದು. ಒಬ್ಬ ಕ್ರೈಸ್ತನ ಸಾಕ್ಷಿಯು ತನ್ನ ಕುಟುಂಬದಿಂದಲೇ ಪ್ರಾರಂಭವಾಗಬೇಕೆಂದು ದೇವರು ಬಯಸುತ್ತಿದ್ದಾರೆ. ಶಾಲೆಯಲ್ಲಿ ವ್ಯಾಸಂಗ ಮಾಡುವವರು ತಮ್ಮ ಸಹಪಾಠಿಗಳಿಗೆ ತಾವು ಕಲಿತದ್ದನ್ನು ಹೇಳಿ ಪ್ರೋತ್ಸಾಹಿಸಬಹುದು, ಅವರನ್ನು ವಿದ್ಯೆ ಬುದ್ಧಿಯಲ್ಲಿ ಅಭಿವೃದ್ಧಿಗೊಳಿಸಬಹುದು. ಸತ್ಕಾರ್ಯಗಳನ್ನು ಮಾಡುವುದರಲ್ಲಿ ಆಯಾಸಗೊಳ್ಳಬಾರದು. ಏಕೆಂದರೆ ಕರ್ತನು ತನ್ನ ದೂತರೊಂದಿಗೆ ಮಧ್ಯಾಕಾಶದಲ್ಲಿ ಬರುವಾಗ, ಅವರವರ ಕ್ರಿಯೆಗಳಿಗೆ ತಕ್ಕ ಪ್ರತಿಫಲವನ್ನು ಕೊಡುವೆನೆಂದು ಹೇಳಿದ್ದಾರೆ.

 

ಹೌದು, ಸಮಯವನ್ನು ಸರಿಯಾಗಿ ಉಪಯೋಗಿಸಿಕೊಂಡು, ನಮ್ಮ ಕೈಗೆ ಬರುವ ಯಾವ ಕೆಲಸವನ್ನಾದರೂ ಪೂರ್ಣ ಶಕ್ತಿಯಿಂದ ಮಾಡೋಣ. ಬಹುಶಃ ನಾವು ಈ ಕೆಲಸಗಳನ್ನು ಮಾಡುವಾಗ, ಭೂಮಿಯ ಮೇಲೆ ನಮಗೆ ಕಷ್ಟಗಳು, ನಷ್ಟಗಳು ಮತ್ತು ನಾವು ನಿರೀಕ್ಷಿಸಿದ ಪ್ರೀತಿಯು ಸಹ ನಮಗೆ ಸಿಗದೇ ಇರಬಹುದು. ಆದರೆ ಆಯಾಸಗೊಳ್ಳದೆ ಇನ್ನೂ ಹೆಚ್ಚು ಉತ್ಸಾಹವಾಗಿ ಮಾಡೋಣ. ಅವರು ಬರುವಾಗ ನಮಗೆ ಜೀವ ಕಿರೀಟವನ್ನು ನೀಡಲು ಆಸೆಯಿಂದಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಆತನು ಬರುವವರೆಗೂ ಇನ್ನೂ ನಮ್ಮ ಒಳ್ಳೆಯ ಕಾರ್ಯಗಳನ್ನು ಹೆಚ್ಚು ಉತ್ಸಾಹದಿಂದ ಮಾಡೋಣ.

- Mrs. ಭುವನಾ ಧನಪಾಲನ್

 

ಪ್ರಾರ್ಥನಾ ಅಂಶ:

ನಮ್ಮ Peace Centre - ಗೆ ಬರುವ ವ್ಯಕ್ತಿಗಳು ದೈಹಿಕವಾಗಿ ಮತ್ತು ಪ್ರಾಣ-ಆತ್ಮದಲ್ಲೂ ಬಿಡುಗಡೆ ಹೊಂದಿ ರಕ್ಷಣೆ ಹೊಂದುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet grandpashabet jojobet casinoroyal jojobet holiganbet ibizabet holiganbet amkbet sonbahis betgit cratosroyalbet cratosroyalbet tlcasino