Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 27.01.2022
Share:

By Village Missionary Movement

Thursday, 27-Jan-2022

ಧೈನಂದಿನ ಧ್ಯಾನ(Kannada) – 27.01.2022

 

ನಂಬಿಕೆಯಿಂದಿರಿ

 

"ಹಾಗಾದರೆ ನಿಮ್ಮ ಧೈರ್ಯವನ್ನು ಬಿಟ್ಟುಬಿಡಬೇಡಿರಿ; ಅದಕ್ಕೆ ಮಹಾ ಪ್ರತಿಫಲ ಉಂಟು" - ಇಬ್ರಿಯ 10:35

 

"ನಿಮ್ಮ ಕೆಲಸ ಈ ಚರ್ಚ್ ಗೆ ಸಾಕಾಗುವುದಿಲ್ಲ. ಈ ವರ್ಷವಿಡೀ ಈ ಚರ್ಚ್‌ಗೆ ಸಿಕ್ಕ ಲಾಭ ಕೇವಲ ಈ ಒಬ್ಬ ಹುಡುಗ ಮಾತ್ರವೇ. ಆದ್ದರಿಂದ ದಯವಿಟ್ಟು ಇಲ್ಲಿಂದ ಹೊರಟು ಬೇರೆಡೆಗೆ ಹೋಗಿ ಬಿಡಿ” ಎಂದರು ಚರ್ಚ್‌ನ ಹಿರಿಯರು. ಈ ಮಾತುಗಳು ಆ ವಯಸ್ಸಾದ ಆ ಬೋಧಕರಿಗೆ ಬಹಳ ನೋವನ್ನುಂಟುಮಾಡಿತು. ತನ್ನನ್ನು ಚರ್ಚ್‌ನಿಂದ ಸಂಪೂರ್ಣವಾಗಿ ಬಿಡಿಸಿಕೊಳ್ಳುವ ನಿರ್ಧಾರವನ್ನು ಮಾಡಿದರು. ಅಲ್ಲಿ ತನ್ನ ಕೊನೆಯ ಭಾನುವಾರದ ಆರಾಧನೆಯ ಮುಕ್ತಾಯದಲ್ಲಿ, ಆ ನಿರ್ದಿಷ್ಟ ಹುಡುಗ ಬೋಧಕರ ಬಳಿಗೆ ಬಂದು, "ಅಯ್ಯಾ, ನಾನು ಬೆಳೆದು ನಿಮ್ಮಂತೆ ಬೋಧಕನಾಗಬಹುದೇ?" ಎಂದು ಕೇಳಿದನು. ಕಣ್ಣೀರು ತುಂಬಿದ ಕಣ್ಣುಗಳೊಂದಿಗೆ ಅವನ ತಲೆಯ ಮೇಲೆ ಕೈಯಿಟ್ಟು “ಹೌದು ತಮ್ಮ, ನೀನೂ ಕೂಡ ಒಂದು ದೊಡ್ಡ ಸೇವಕನಾಗುತ್ತೀಯ” ಎಂದರು.

 

ಹಲವು ವರ್ಷಗಳು ಉರುಳಿದವು. ಆಫ್ರಿಕಾದಲ್ಲಿರುವ ಕಠಿಣವಾದ ಜನರ ನಡುವೆ ಬಹು ದೊಡ್ಡ ದಾಹವನ್ನು ಉಂಟುಮಾಡಿದ ಮಿಷನರಿ ಲಂಡನ್‌ಗೆ ಹಿಂತಿರುಗುತ್ತಿದ್ದಾರೆ ಎಂಬ ವಿಷಯ ಕೇಳಿ ಮಿಷನರಿಯನ್ನು ಸ್ವಾಗತಿಸಲು ಬೃಹತ್ ಜನಸಮೂಹವು ಬಹು ಆರ್ಭಟದೊಂದಿಗೆ ಅಲ್ಲಿ ನೆರೆದಿತ್ತು. ಅದು ಯಾರೆಂದರೆ, "ನಾನು ನಿಮ್ಮಂತೆ ಒಬ್ಬ ಸೇವಕನಾಗಿ ಮಾರ್ಪಡಬಹುದಾ?" ಎಂದು ಪ್ರಶ್ನೆ ಕೇಳಿದ ಆ ಚಿಕ್ಕ ಹುಡುಗನೇ. ರಾಬರ್ಟ್ ಮೊಫಾಟ್ ಎಂಬ ಆ ಮುಖ್ಯ ಸೇವಕನನ್ನು ಸ್ವಾಗತಿಸಲೆಂದೇ ಲಂಡನ್ ನಗರವು ಕಾಯುತ್ತಿತ್ತು.

 

ನನ್ನ ಸೇವೆಯಲ್ಲೋ ಅಥವಾ ಕ್ರೈಸ್ತ ಜೀವನದಲ್ಲೋ ದೊಡ್ಡ ಬದಲಾವಣೆಯನ್ನು ಕಾಣಲಿಲ್ಲ ಎಂದು ನೆನೆಸಿ, ನಿರುತ್ಸಾಹಗೊಳ್ಳಬೇಡಿರಿ. ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರ್ರಿ. ನೀವು ಕರ್ತನ ಸೇವೆಯಲ್ಲಿ ಪಡುವ ಪ್ರಯಾಸವು ನಿಷ್ಫಲವಾಗುವದಿಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರಿ ಎಂದು ಸತ್ಯವೇದವು ಹೇಳುತ್ತಿದೆ. (1ಕೊರಿಂಥ. 15:8)

 

ನಾವು ಮೇಲೆ ಓದಿದ ವಾಕ್ಯದಲ್ಲಿ ಅತ್ಯಂತ ಫಲಪ್ರದಕ್ಕಾಗಿ ನಿಮ್ಮ ಧೈರ್ಯವನ್ನು ಬಿಟ್ಟುಬಿಡಬೇಡಿರಿ ಎಂದು ನಾವು ಓದುತ್ತೇವೆ. ವರ್ಷದ ಆರಂಭದಲ್ಲಿ ನಾವು ನೋಡುವ ಪ್ರತಿಯೊಬ್ಬರೂ ಕ್ರಿಸ್ತನಲ್ಲಿ ನಮ್ಮ ನಂಬಿಕೆಯನ್ನು ಕಳೆದುಕೊಳ್ಳದೆ, ನಂಬಿಕೆಯಿಂದ ನೀತಿವಂತವನು ಬದುಕುತ್ತಾನೆ ಹಿಂಜಾರಿಹೋದರೆ ಅವನ ಮೇಲೆ ನನ್ನ ಆತ್ಮವು ಸಂತೋಷಪಡುವುದಿಲ್ಲ ಎಂಬ ವಾಕ್ಯದ ಪ್ರಕಾರ, ನಾವು ಕೆಟ್ಟು ಹೋಗಲು ಹಿಂಜಾರಿ ಹೋಗದೇ, ಆತ್ಮನ ಬಯಕೆಯು ನೆರವೇರಲು ನಂಬಿಕೆಯುಳ್ಳವರಾಗಿರೋಣ. ದೇವರು ನಮ್ಮನ್ನು ಮುನ್ನಡೆಸಲಿ! ಆಮೆನ್.

- P. ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

12 ಮಿಷನರಿಗಳ ಮೂಲಕ ಆಯಾ ರಾಜ್ಯಗಳಲ್ಲಿ ಸಮರ್ಪಣೆಯುಳ್ಳ 500 ಮಿಷನರಿಗಳನ್ನು ಈ ಹೊಸ ವರ್ಷದಲ್ಲಿ ದೇವರು ಎಬ್ಬಿಸಿಕೊಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al