Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.01.2022
Share:

By Village Missionary Movement

Wednesday, 26-Jan-2022

ಧೈನಂದಿನ ಧ್ಯಾನ(Kannada) – 26.01.2022

 

ಅಡ್ಡಿಯಾಗಿರಬೇಡಿರಿ

 

"ಆದರೆ ನನ್ನಲ್ಲಿ ನಂಬಿಕೆಯಿಡುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾವನಾದರೂ ಅಡ್ಡಿಯಾದರೆ ಅಂಥವನ ಕೊರಳಿಗೆ ಬೀಸುವ ಕಲ್ಲು ಕಟ್ಟಿ ಅವನನ್ನು ಆಳವಾದ ಸಮುದ್ರದಲ್ಲಿ ಮುಣುಗಿಸಿಬಿಡುವದು ಅವನಿಗೆ ಹಿತವಾಗುವದು" - ಮತ್ತಾಯ 18: 6

 

ದಕ್ಷಿಣ ಆಫ್ರಿಕಾದಲ್ಲಿ ಟ್ರಾನ್ಸ್‌ವಾಲ್‌ ಎಂಬ ನಗರದಲ್ಲಿರುವ ಕ್ಯಾಥೆಡ್ರಲ್‌ ಆಲಯದಲ್ಲಿ ಪ್ರಸಿದ್ಧ ಬೋಧಕರು ಮಾಡಲಿರುವ ಪ್ರಸಂಗವನ್ನು ಕೇಳಲು ನಮ್ಮ ನಾಡತಂದೆ ಗಾಂಧೀಜಿಯವರು ತಮ್ಮ ಸ್ನೇಹಿತರೊಂದಿಗೆ ಹೋಗಿದ್ದರು. ಆರಾಧನೆ ಆರಂಭವಾಗುವ ಮೊದಲೇ ಹೋಗಿ ಕೊನೆಯ ಸಾಲಿನಲ್ಲಿ ಕುಳಿತಿದ್ದರು. ಅಲ್ಲಿದ್ದ ಆಲಯ ಸಿಬ್ಬಂದಿ ಗಾಂಧೀಜಿಯವರ ಬಳಿಗೆ ಬಂದು, “ಇದು ಏಷ್ಯಾಖಂಡದ ನಿವಾಸಿಗಳು ಆರಾಧನೆಗೆ ಬರುವ ದೇವಾಲಯವಲ್ಲ, ಅವರು ಬ್ರಿಟಿಷರೊಂದಿಗೆ ಕುಳಿತು ಆರಾಧನೆ ಮಾಡುವ ಸಂಪ್ರದಾಯ ಇಲ್ಲಿಲ್ಲ. ನಿಮಗಾಗಿ ಪ್ರತ್ಯೇಕ ದೇವಾಲಯವಿದೆ. ಆದ್ದರಿಂದ ದಯವಿಟ್ಟು ಹೊರಗೆ ಹೋಗಿ ಬಿಡಿ” ಎಂದರು.

 

ಅದಕ್ಕೆ ಗಾಂಧೀಜಿಯವರು ತಮ್ಮ ಗೆಳೆಯರನ್ನು ನೋಡಿ “ಈ ಆಲಯದಲ್ಲಿ ಯೇಸುಕ್ರಿಸ್ತನಿಗೆ ಜಾಗವಿಲ್ಲವೆಂದು ಹೇಳುತ್ತಿರುವುದು ನನಗೆ ಆಶ್ಚರ್ಯವಾಗಿದೆ” ಎಂದರು. ತಕ್ಷಣ ದೇವಾಲಯದ ಸೇವಕನು ಕೋಪದಿಂದ, "ಇದು ಕ್ಯಾಥೆಡ್ರಲ್ (ರಾಯಭಾರಿ ಕಚೇರಿ) ಯೇಸು ಕ್ರಿಸ್ತನು ಇಲ್ಲಿಲ್ಲ ಎಂದು ನೀವು ಹೇಗೆ ಹೇಳುತ್ತೀರಿ?" ಎಂದರು. ಅದಕ್ಕೆ ಗಾಂಧೀಜಿಯವರು, “ಹೌದು, ಯೇಸುಕ್ರಿಸ್ತನು ಏಷ್ಯಾಖಂಡದಲ್ಲಿ ಹುಟ್ಟಿದವರೇ ತಾನೇ ! ಈ ದೇವಾಲಯದಲ್ಲಿ ಏಷ್ಯಾಖಂಡದವರಿಗೆ ಸ್ಥಳವಿಲ್ಲ ಎಂದು ನೀವೇ ಹೇಳುತ್ತಿದ್ದೀರ?” ಎಂದರು. ಸೇವಕನು ನಾಚಿಕೆಯಿಂದ ತಲೆಬಗ್ಗಿಸಿದರು.

 

ಗಾಂಧೀಜಿಯವರು ಯೇಸುಕ್ರಿಸ್ತರನ್ನು ಅಂಗೀಕರಿಸಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಇದು ಭಾರತಕ್ಕೆ ಎಷ್ಟೋ ದೊಡ್ಡ ಆಶೀರ್ವಾದವಾಗಿರುತ್ತಿತ್ತು. ಆದರೆ ಕ್ರೈಸ್ತರೆಂಬ ಹೆಸರಿನಲ್ಲಿ ಜಾತಿ ಭಾವನೆಯೊಂದಿಗೆ ಬದುಕಿದ ಕೆಲವು ಗುಂಪುಗಳು ಅವರು ಕ್ರಿಸ್ತನನ್ನು ಅಂಗೀಕರಿಸಲು ಅಡ್ಡಿಯಾಗಿದ್ದವು. ಇನ್ನೂ ಅನೇಕರು ಉತ್ಸಾಹದಿಂದ ಕ್ರಿಸ್ತನಿಗಾಗಿ ಎದ್ದೇಳುತ್ತಿರುವುದನ್ನು ನೋಡುವಾಗ ಸಂತೋಷವಾಗುತ್ತಿದೆ. ಆದರೆ ಅದೇ ಸಮಯದಲ್ಲಿ ಕೆಲವರ ಹೃದಯದಲ್ಲಿ ವಿಷವಾಗಿ ಕಾಣುವ ಜಾತಿ ಭಾವನೆಯಿಂದ ಅಯ್ಯೋ! ಕ್ರಿಸ್ತನ ಬಳಿಗೆ ಬರದೆ ಎಷ್ಟೊಂದು ಜನರು ಹೋಗಿಬಿಡುತ್ತಿದ್ದಾರೆ. ನಮ್ಮ ಭಾರತದಲ್ಲಿ ಜಾತಿಗೊಂದು ಆಲಯ ಎಂಬ ಸ್ಥಿತಿ ಬದಲಾಗುವವರೆಗೂ ಉಜ್ಜೀವನ ವಿಳಂಬವಾಗುತ್ತಲೇ ಇರುತ್ತದೆ. 

 

ಇದನ್ನು ಓದುತ್ತಿರುವ ಯೌವನಸ್ಥನೇ! ನಿನ್ನ ಬಗ್ಗೆ ಏನು? ಜಾತಿ ಭಾವನೆಯಿಂದ ನಿನ್ನ ಹೃದಯದಲ್ಲಿ ಏನಾದರೂ ಅಸಮಾನತೆಗಳಿವೆಯೇ? ನಿನ್ನ ಪ್ರತಿಯೊಂದು ಕ್ರಿಯೆಯು ಇತರರನ್ನು ಸೃಷ್ಟಿಸುತ್ತಿದೆಯಾ ಅಥವಾ ಮುರಿಯುತ್ತಿದೆಯಾ. ಮುರಿದುಹೋದವರನ್ನು ರೂಪಿಸುತ್ತಿದ್ದೀಯ! ಅಥವಾ ಕ್ರಿಸ್ತನಿಗಾಗಿ ರೂಪಿಸಲ್ಪಡುತ್ತಿರುವವರನ್ನು ಮುರಿಯುತ್ತಿದ್ದೀಯಾ? ವಿದ್ಯೆ, ಅಂತಸ್ತು, ಜಾತಿಯಿಂದ ಬೇರೆಯವರನ್ನು ಕೀಳಾಗಿ ಕಂಡರೆ, ಅವರನ್ನು ರೂಪಿಸಿದ ದೇವರನ್ನು ಕಡೆಗಣಿಸಿದಂತಾಗುತ್ತದೆ ಎಂಬುದು ಸತ್ಯ. ನಾವು ನೋಡುವ ಪ್ರತಿಯೊಬ್ಬರೂ ದೇವರ ಸ್ವಾರೂಪ್ಯದಲ್ಲಿ ರೂಪಿಸಲ್ಪಟ್ಟವರು ಎಂಬುದನ್ನು ಎಂದಿಗೂ ಮರೆಯದಿರೋಣ. ನಮ್ಮೆಲ್ಲರಿಗಾಗಿ ಸುರಿಸಲ್ಪಟ್ಟ ಒಂದೇ ರಕ್ತವನ್ನು ಸ್ಮರಿಸುತ್ತಾ ಒಟ್ಟಿಗೆ ಸಂತೋಷದಿಂದ ಬಾಳೋಣ.

- J. ಸಂತೋಷ್

 

ಪ್ರಾರ್ಥನಾ ಅಂಶ:

ದೇವರು ನಮಗೆ ನೀಡಿದ ದರ್ಶನವನ್ನು ಪೂರೈಸಲು ಪ್ರತಿ ರಾಜ್ಯದಿಂದ 12 ಮಿಷನರಿಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet jojobet güncel giriş matbet holiganbet güncel sahabet onwin bets10 bets10 giriş bets10 güncel giriş betcio atlasbet bets10 bets10 giriş kralbet betturkey safirbet safirbet safirbet giriş safirbet güncel giriş tarafbet betnano meritbet mariobet markajjbet queenbet betcio atlasbet tarafbet mariobet mariobet Norabahis Norabahis giriş Norabahis jojobet jojobet grandpashabet holiganbet gameofbet 1win teosbet palacebet tempobet wbahis grandpashabet betpark betpark casibom casibom casibom giriş casibom casibom giriş vaycasino holiganbet bahsegel bahsegel bahsegel