Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.01.2022
Share:

By Village Missionary Movement

Monday, 24-Jan-2022

ಧೈನಂದಿನ ಧ್ಯಾನ(Kannada) – 25.01.2022

 

ನಾವು ಮಾಡುವುದು ನ್ಯಾಯವಲ್ಲ

 

“...ಅಗೆದು ಆ ದಟ್ಟಿಯನ್ನು ನಾನು ಅಡಗಿಸಿದ್ದಲ್ಲಿಂದ ತೆಗೆದೆನು; ಇಗೋ, ಆ ದಟ್ಟಿಯು ಯಾವ ಕೆಲಸಕ್ಕಾದರೂ ಬಾರದೆ ಕೆಟ್ಟು ಹೋಗಿತ್ತು" - ಯೆರೆಮಿಯ 13:7

 

ದೇವರು ತಮಗೆ ನೀಡಿದ ಪ್ರತಿಭೆ ಮತ್ತು ಕೃಪೆಗಳನ್ನು ಬಚ್ಚಿಡುವ ಕೆಲವು ವ್ಯಕ್ತಿಗಳನ್ನು ನಾವು ಇಂದಿಗೂ ನೋಡಬಹುದು. ಯೆರೆಮಿಯ 13 ನೇ ಅಧ್ಯಾಯದಲ್ಲಿ, ಯೂಫ್ರೇಟೀಸ್ ನದಿ ಪಕ್ಕದಲ್ಲಿ ಅನೇಕ ದಿನಗಳಿಂದ ಬಚ್ಚಿಟ್ಟಿದ್ದ ದಟ್ಟಿಯು ಕೆಟ್ಟುಹೋಗಿ ಯಾವ ಕೆಲಸಕ್ಕಾದರೂ ಬಾರದೆ ಉಪಯೋಗವಿಲ್ಲದಂತಾಯಿತು ಎಂದು ನಾವು ಓದುತ್ತೇವೆ. ನಮ್ಮ ಜೀವನದಲ್ಲೂ ದೇವರು ನಮಗೆ ನೀಡಿದ ಪ್ರತಿಭೆಗಳನ್ನು ಮತ್ತು ವರಗಳನ್ನು ನಾವು ಬಹುಶಃ ನಮ್ಮ ಜೀವನದಲ್ಲಿ ಸಮಾಧಿಮಾಡಿ ಬಚ್ಚಿಟ್ಟಿರುವುದಾದರೆ ಈ ವರ್ಷದ ಆರಂಭದಲ್ಲಿ ತೆಗೆದು ಅದನ್ನು ದೇವರಿಗಾಗಿ ಉಪಯೋಗಿಸಲು ನಿರ್ಧರಿಸೋಣ.

 

ನ್ಯಾಯಸ್ಥಾಪಕರ ಪುಸ್ತಕದಲ್ಲಿ ಸಂಸೋನನು ಗಾಜಾದಲ್ಲಿ ವೇಶ್ಯೆಯ ಮನೆಯಲ್ಲೂ, ಸೋರೇಕ್‌ ತಗ್ಗಿನಲ್ಲಿ ದೆಲೀಲಾಳ ಮನೆಯಲ್ಲೂ ದೇವರು ತನಗೆ ಕೊಟ್ಟಿದ್ದ ಉನ್ನತವಾದ ಬಲವನ್ನು ಕರ್ತನೊಂದಿಗಿದ್ದ ಸಂಬಂಧವನ್ನು ಬಚ್ಚಿಟ್ಟು ಅನೇಕ ದಿನಗಳಿಂದ ಅದನ್ನು ಗ್ರಹಿಸದೇ ಇದ್ದದರಿಂದ ಭೀಕರವಾಗಿ ಕೆಟ್ಟು ಹೋದನು. ನಾವು ಇಂತಹ ತಪ್ಪಾದ ಸ್ಥಳಗಳಲ್ಲಿ, ದೇವರು ನಮಗೆ ಕೊಟ್ಟ ಕೃಪೆಗಳನ್ನು ಬಚ್ಚಿಟ್ಟಿರುವುದಾದರೆ ಇಂದೇ ಅದನ್ನು ಗ್ರಹಿಸೋಣವಾ?

 

ಮತ್ತಾಯ 25 ನೇ ಅಧ್ಯಾಯದಲ್ಲಿ ಒಂದು ತಲಾಂತನ್ನು ತೆಗೆದುಕೊಂಡವನು ನೆಲವನ್ನು ಅಗೆದು ತನ್ನ ಯಜಮಾನನ ಹಣವನ್ನು ಹೂತುಹಾಕಿದನು. ಕೊನೆಗೆ ಪ್ರಯೋಜನವಿಲ್ಲದ ಆ ಸೇವಕನು ಅಳುವು, ಕತ್ತಲೆಯು ಗೋಳಾಟವೂ, ಹಲ್ಲು ಕಡಿಯೋಣವೂ ಇರುವ ಸ್ಥಳಕ್ಕೆ ಸ್ವಂತವಾದನು.

 

ಪ್ರಿಯರೇ! ಪ್ರವಾದಿಯಾದ ಎಲೀಷನ ಕಾಲದಲ್ಲಿ ಜೀವಿಸಿದ ನಾಲ್ಕು ಕುಷ್ಠರೋಗಿಗಳ ಒಳ್ಳೆಯ ಕೆಲಸಗಳಿಂದ ನಾವೊಂದು ಪಾಠ ಕಲಿಯುತ್ತೇವೆ. ಆ ದಿನಗಳಲ್ಲಿ, ಕ್ಷಾಮವು ಉಲ್ಬಣಗೊಂಡಾಗ, ಅವರು ಸಿರಿಯಾದವರ ಪಾಳೆಯಕ್ಕೆ ಹೋಗಿ ಅಲ್ಲಿ ತಮಗಾಗಿ ಸಂಪತ್ತನ್ನು ಬಚ್ಚಿಟ್ಟ ಆರಂಭದಲ್ಲೇ "ನಾವು ಮಾಡುವುದು ನ್ಯಾಯವಲ್ಲ" ಎಂದು ಗ್ರಹಿಸಿ ತಾವು ತಿಳಿದುಕೊಂಡ ಆ ಒಳ್ಳೆಯ ಸಮಾಚಾರವನ್ನು ಅರಸನ ಮನೆಯವರಿಗೆ ತಿಳಿಸಿದರು. ಅದರ ಮೂಲಕ ಇಸ್ರಾಯೇಲ್ ಜನರು ಸಂತೋಷಪಟ್ಟರು. "ನಾವು ಮಾಡುವುದು ನ್ಯಾಯವಲ್ಲ" ಎಂದು ನಾವು ಯಾವಾಗ ಅರ್ಥಮಾಡಿಕೊಳ್ಳಲಿದ್ದೇವೆ?

 - Bro. ಬೆಂಜಮಿನ್

 

ಪ್ರಾರ್ಥನಾ ಅಂಶ:

"ಕತ್ತೆಗಳ ಮಾರ್ಗದರ್ಶಿ" ಎಂಬ ಮಾಸ ಪತ್ರಿಕೆಯನ್ನು ಕಳುಹಿಸಲು Postal permit ಸಿಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş