Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.01.2021
Share:

By Village Missionary Movement

Saturday, 16-Jan-2021

ಧೈನಂದಿನ ಧ್ಯಾನ(Kannada) – 16.01.2021

ದೇವರ ನೀತಿ

"ಅವರು ದೇವರಿಂದ ದೊರಕುವ ನೀತಿಯನ್ನರಿಯದೆ ಸ್ವನೀತಿಯನ್ನೇ ಸ್ಥಾಪಿಸಬೇಕೆಂದು ಪ್ರಯತ್ನಿಸುತ್ತಾ ಇದ್ದದರಿಂದ ದೇವರ ನೀತಿಗೆ ಅಧೀನರಾಗಲಿಲ್ಲ." - ರೋಮಾ 10:3

ಒಂದು ಕಾರ್ಯವು ಮನುಷ್ಯರ ದೃಷ್ಟಿಯಲ್ಲಿ ನೀತಿಯಾಗಿ ಕಾಣಬಹುದು. ಆದರೆ ದೇವರ ನೀತಿಯು ಅದಕ್ಕೆ ಸಂಪೂರ್ಣವಾಗಿ ವ್ಯತ್ಯಾಸವಾಗಿರುತ್ತದೆ. ಸತ್ಯವೇದದಲ್ಲಿ ಅಂತಹ ಕೆಲವು ಸಂಭವಗಳನ್ನು ಇಂದಿನ ಧ್ಯಾನದಲ್ಲಿ ನೋಡೋಣ.

ಬಾಬೆಲ್ ಗೋಪುರ (ಆದಿಕಾಂಡ 11:4) 
ಬಾಬೆಲ್ ಎಂಬ ಆಕಾಶದಷ್ಟು ಗೋಪುರವನ್ನು ಕಟ್ಟಬೇಕೆಂದು ಜನರು ನೆನೆಸಿದರು. ಕಾರಣ ತಾವು ಹೆಸರುಗಳಿಸುವಂತೆ, ಚದರಿ ಹೋಗದೆ ಇರಲು, ಅಳಿವು ಬರುವಾಗ ಒಬ್ಬರನ್ನೊಬ್ಬರು ಕಾಪಾಡಲು ಹೀಗೆ ಅವರು ತಮ್ಮ ಇಷ್ಟವನ್ನು, ಆಸೆಯನ್ನು ನೆರವೇರಿಸಲು ಬಯಸಿದರು. ತಾವು ಮಾಡುವುದು ಸಂಪೂರ್ಣವಾಗಿ ಸರಿಯಾದದ್ದೇ ಎಂದು ನೆನೆಸಿದರು. ಆದರೆ ದೇವರ ನೀತಿಯು ಒಂದೇ ಸ್ಥಳದಲ್ಲಿ ಮನುಷ್ಯರು ಇರಬಾರದು. ಭೂಮಿಯನ್ನು ತುಂಬಿಸಬೇಕು ಎಂಬುದೇ! ಆದ್ದರಿಂದ ಅವರ ಭಾಷೆಯನ್ನು ತಾರುಮಾರು ಮಾಡಿ ಎಲ್ಲರನ್ನು ಚದರಿಸಿದರು.

ದೇವರ ಮಂಜೂಷ(2 ಸಮುವೇಲ 6:7)
ದಾವೀದನು ದೇವರ ಮಂಜೂಷವನ್ನು ಯೆಹೂದ ದೇಶದಿಂದ ತೆಗೆದುಕೊಂಡು ಬರುವ ಸಮಯದಲ್ಲಿ ಎತ್ತುಗಳು ಎಡವಿದವು. ಮಂಜೂಷ ಬೀಳುತ್ತಿದಿಯೆ ಎಂದು ನೆನಸಿ ಮಂಜೂಷವನ್ನು  ಉಜ್ಜನು ತನ್ನ ಕೈ ಚಾಚಿ ಹಿಡಿದನು. ಇಲ್ಲಿಯೇ ತಾನು ಮಾಡುವುದು ಸರಿಯಾದದ್ದೇ ಎಂದು ಉಜ್ಜನು  ನೆನೆಸುತ್ತಾರೆ. ಆದರೆ ದೇವರ ನೀತಿಯು ಅದಲ್ಲ. ಯಾಜಕರು ಮಾತ್ರವೇ ದೇವರ ಮಂಜೂಷವನ್ನು ಮುಟ್ಟಿ ಎತ್ತಿಕೊಂಡು ಹೋಗಬೇಕು ಎಂಬುದೇ! ಆದ್ದರಿಂದ ಆ ಸ್ಥಳದಲ್ಲಿಯೇ ದೇವರು ಉಜ್ಜನನ್ನು ಹೊಡೆದರು. ಅವನು ಸತ್ತು ಹೋದನು.

ವ್ಯಭಿಚಾರದಲ್ಲಿ ಹಿಡಿಯಲ್ಪಟ್ಟ ಸ್ತ್ರೀ (ಯೋಹಾನ 8:7)
ವ್ಯಭಿಚಾರದಲ್ಲಿ ಹಿಡಿಯಲ್ಪಟ್ಟವಳನ್ನು ಕಲ್ಲೆಸೆದು ಕೊಲ್ಲಬೇಕೆಂದು ಶಾಸ್ತ್ರಿಗಳೂ, ಫರಿಸಾಯರೂ ನೆನೆಸಿದರು. ಆದರೆ ದೇವರ ನೀತಿಯು, ಅವರ ಆಲೋಚನೆಯಂತೆ ಇರಲಿಲ್ಲ, ವ್ಯಭಿಚಾರದಲ್ಲಿ ಹಿಡಿಯಲ್ಪಟ್ಟವಳನ್ನು ಕ್ಷಮಿಸುವುದೇ ದೇವರ ನೀತಿಯಾಗಿತ್ತು. ಇವರು ದೇವರ  ನೀತಿಯನ್ನು ತಿಳಿಯದೆ ಹೋದದ್ದರಿಂದ, ಸ್ವ ನೀತಿಯನ್ನು, ನೆಲೆಗೊಳಿಸಲು ನೋಡಿ, ದೇವರಿಗೆ ವಿರೋಧವಾಗಿ ನಿಂತಿದ್ದಾರೆ.

ಇದರಂತೆಯೇ, ನಾವು ಸಮಸ್ಯೆಗಳು ಬರುವ ಸಮಯದಲ್ಲಿ ಅವರವರು ತಾವು ಮಾಡುವುದು ಸರಿ ಎಂದು ಸಾಧಿಸಲು ನೋಡುತ್ತೇವೆ. ನಮಗೆ ತಿಳಿದಿರುವ ಅಥವಾ ನಮ್ಮ ಅನುಭವದಿಂದ ಕಾರ್ಯಗಳನ್ನು ನೆರವೇರಿಸಲು ನೋಡುತ್ತೇವೆ. ಆದರೆ ಇದರಲ್ಲಿ ದೇವರ ಆಲೋಚನೆ, ಅವರ ಕ್ರಿಯೆ ಹೇಗಿರುತ್ತದೆ ಎಂದು ನಾವು ಯೋಚಿಸುವುದಿಲ್ಲ. ದೇವರ ನೀತಿಯನ್ನು ಸತ್ಯವಾಕ್ಯ ಗಳಿಂದಲೇ ನಾವು ಕಲಿತುಕೊಳ್ಳಲು ಸಾಧ್ಯ. ಹೌದು, ಸತ್ಯವೇದವನ್ನು ಸ್ಪಷ್ಟವಾಗಿ ಓದಿ ವಿಧೇಯನಾಗುವವನ ಜೀವನದಲ್ಲಿ ಸ್ವ ನೀತಿಯಲ್ಲ, ದೇವರ ನೀತಿಯನ್ನೇ ಆಧಾರ ಗೊಂಡಿರುತ್ತಾನೆ.
-    S.ಗಾಂಧಿರಾಜನ್

ಪ್ರಾರ್ಥನಾ ಅಂಶ:-
VMM ಸೇವೆಯೊಂದಿಗೆ ಸೇರಿ ಸೇವೆ ಮಾಡುತ್ತಿರುವ ಸ್ವಯಂ ಸೇವಕರಿಗಾಗಿ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş