By Village Missionary Movement
Monday, 24-Jan-2022ಧೈನಂದಿನ ಧ್ಯಾನ(Kannada) – 24.01.2022
ದೇವರ ಚಿತ್ತವನ್ನು ಮಾಡಿರಿ
“ಎಲ್ಲಾದರಲ್ಲಿಯೂ ಕೃತಜ್ಞತಾಸ್ತುತಿಮಾಡಿರಿ; ಇದೇ ನಿಮ್ಮ ವಿಷಯವಾಗಿ ಕ್ರಿಸ್ತ ಯೇಸುವಿನಲ್ಲಿ ತೋರಿ ಬಂದ ದೇವರ ಚಿತ್ತ" - 1 ಥೆಸ. 5:18
ತಾಯಂದಿರು ತಮ್ಮ ಮಕ್ಕಳಿಗೆ ನೀಡುವ ಕೆಲವು ಆಹಾರಗಳು ಪೌಷ್ಟಿಕವಾಗಿದೆ. ಆದರೆ ರುಚಿಯಾಗಿರುವುದಿಲ್ಲ. ಒಂದು ದಿನ ಒಬ್ಬ ಹುಡುಗ ತನ್ನ ತಾಯಿಯ ಬಳಿ, "ನೀವು ರುಚಿಕರವಲ್ಲದ ಆಹಾರವನ್ನು ನನಗೆ ಕೊಡುವಾಗ ನಾನು ಏಕೆ ದೇವರಿಗೆ ಕೃತಜ್ಞತೆ ಹೇಳಿ ತಿನ್ನಬೇಕು?" ಎಂದನಂತೆ. ಅದೇ ರೀತಿ ನಾವು ಕೂಡ ನಮಗೆ ಇಷ್ಟವಿಲ್ಲದ ವಿಷಯಗಳನ್ನು ದೇವರು ನಮ್ಮ ಜೀವನದಲ್ಲಿ ಅನುಮತಿಸಿದಾಗ, ನಾವು ಏಕೆ ದೇವರಿಗೆ ಕೃತಜ್ಞತೆ ಹೇಳಬೇಕು ಎಂಬ ಮನಸ್ಥಿತಿಯಲ್ಲಿದ್ದೇವೆ.
ಆದರೆ ಪೌಲ ಮತ್ತು ಸೀಲರನ್ನು ನೋಡಿ. ಸೆರೆಮನೆಯಲ್ಲಿ ಅವರ ಪಾದಗಳು ಕಂಬದಲ್ಲಿ ಕಟ್ಟಲ್ಪಟ್ಟಿದ್ದ ಸ್ಥಿತಿಯಲ್ಲಿ ಇರುವಾಗ ಕರ್ತನನ್ನು ಸ್ತುತಿಸಿ ಕೊಂಡಾಡಿದರು. ಕಾರಣ, ಕರ್ತನು ಅವರು ಎಂಥವರಾಗಿರಬೇಕೆಂದು ಬಯಸಿದರೋ ಹಾಗೆಯೇ ಇದ್ದರು. ಸೆರೆಮನೆಯ ಬಾಗಿಲುಗಳು ಅಥವಾ ಕಂಬಕ್ಕೆ ಕಟ್ಟಿದ್ದ ಸರಪಣಿಗಳು ಅವರ ಸಂತೋಷದಾಯಕ ಸ್ತೋತ್ರ ಗೀತೆಗಳನ್ನು ತಡೆಯಲು ಸಾಧ್ಯವಾಗಲಿಲ್ಲ. ಅಷ್ಟುಮಾತ್ರವಲ್ಲದೆ, ಅಪೊಸ್ತಲರು ಅವರಿಗೆ ಮಾಡುವ ಸೇವೆಯಿಂದ ಬರುವ ಎಲ್ಲಾ ಕಷ್ಟಗಳು ಮತ್ತು ಸಂಕಟಗಳ ಕುರಿತು ಸಂತೋಷಪಟ್ಟರು. ಅಂದರೆ, ಎಲ್ಲಾ ಪರಿಸ್ಥಿತಿಗಳಲ್ಲಿಯೂ, ಕರ್ತನಲ್ಲಿ ಭರವಸೆಯಿಟ್ಟು ಅವರಿಗೆ ಕೃತಜ್ಞತೆ ಸಲ್ಲಿಸುವವರಾಗಿದ್ದರು.
ನೈಟಿಂಗೇಲ್ ಎಂಬ ಹಕ್ಕಿ ರಾತ್ರಿಯಲ್ಲಿ ಹಾಡುವ ಹಕ್ಕಿ, ಕತ್ತಲೆ ಅದರ ಮಧುರ ಹಾಡನ್ನು ತಡೆಯುವುದಿಲ್ಲ. ಏಕೆಂದರೆ, ಅದು ಯಾವಾಗ ಹಾಡಬೇಕು ಎಂಬ ಉದ್ದೇಶದಿಂದ ಕರ್ತನು ಅದನ್ನು ಸೃಷ್ಟಿಸಿದರೋ ಆ ಉದ್ದೇಶವನ್ನು ಅದು ನೆರವೇರಿಸುತ್ತದೆ. ಕರ್ತನೊಂದಿಗೆ ನಡೆಯುವವರು ಕರ್ತನು ಏನು ಮಾಡಬೇಕೆಂದು ಬಯಸುತ್ತಾರೋ ಅದನ್ನು ಮಾಡುವುದರಲ್ಲೇ ಸಂತೋಷಪಡುತ್ತಾರೆ. ಅವರು ಪರಿಸ್ಥಿತಿಗಳಿಂದಾಗಿ ಆಯಾಸಗೊಳ್ಳುವುದಿಲ್ಲ. ಆತನ ಮಕ್ಕಳಾದ ನಾವು ಎಲ್ಲಾ ವಿಷಯಗಳಲ್ಲಿ ಕೃತಜ್ಞತೆ ಸಲ್ಲಿಸಬೇಕೆಂದು ಕರ್ತನು ಬಯಸುತ್ತಿದ್ದಾರೆ. ನಾವು ಮಾಡಲಾಗದದನ್ನು ಮಾಡಬೇಕೆಂದು ಕರ್ತನು ನಿರೀಕ್ಷಿಸುವುದಿಲ್ಲ. ಆದ್ದರಿಂದ ಈ ಹೊಸ ವರ್ಷದಲ್ಲಿ ನಾವು ಎಲ್ಲಾದಕ್ಕೂ ಕೃತಜ್ಞತೆ ಸಲ್ಲಿಸಿ ದೇವರ ಚಿತ್ತವನ್ನು ನೆರವೇರಿಸೋಣ!
ಅನಾರೋಗ್ಯ, ಬಡತನ, ಆತಂಕ, ದುಃಖ, ಶೋಧನೆ ಇಕ್ಕಟ್ಟಾದ ಪರಿಸ್ಥಿತಿಗಳು ಹೀಗೆ ಅನೇಕ ಕಷ್ಟಗಳು ನಮ್ಮನ್ನು ಸುತ್ತಿಕೊಂಡರೂ ಅವರ ಮಕ್ಕಳಾದ ನಾವು ಎಲ್ಲಾ ವಿಷಯಗಳಲ್ಲಿ ಕೃತಜ್ಞರಾಗಿರಬೇಕು ಎಂದು ದೇವರು ಬಯಸುತ್ತಿದ್ದಾರೆ. ಆದ್ದರಿಂದ ಈ ಎಲ್ಲದರಲ್ಲೂ ಸಹಿಸಿಕೊಳ್ಳುವ, ತಪ್ಪಿಸಿಕೊಳ್ಳುವ ಬಲವನ್ನೂ ನೀಡುತ್ತಾರೆ.
- Mrs. ಗೀತಾ ರಿಚರ್ಡ್
ಪ್ರಾರ್ಥನಾ ಅಂಶ:
ಗೆತ್ಸೆಮನೆ ಕ್ಯಾಂಪಸ್‌ನಲ್ಲಿ ಪ್ರಾರಂಭಿಸಿರುವ ವೈದ್ಯಕೀಯ ಸೇವೆಗಳು ಈ ಹೊಸ ವರ್ಷದಲ್ಲಿ ಹೆಚ್ಚಾಗಿ ನಡೆಯುವಂತೆ. ಇದಕ್ಕಾಗಿ ಸಮರ್ಪಿಸಿಕೊಂಡಿರುವ ಸೇವಕರು ನಮ್ಮೊಂದಿಗೆ ಬಂದು ಸೇರುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482