Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.01.2022 (Kids Special)
Share:

By Village Missionary Movement

Saturday, 22-Jan-2022

ಧೈನಂದಿನ ಧ್ಯಾನ(Kannada) – 23.01.2022 (Kids Special)

 

ಜ್ಞಾನವೇ ಮುಖ್ಯ

 

"ಜ್ಞಾನವನ್ನು ಪಡೆಯುವವನು ಧನ್ಯನು, ವಿವೇಕವನ್ನು ಸಂಪಾದಿಸುವವನು ಭಾಗ್ಯವಂತನು" - ಜ್ಞಾನೋಕ್ತಿ. 3:13

 

Hai ಪುಟಾಣಿಗಳೇ, How are you? ನೀವು ಪ್ರತಿ ವಾರವೂ ಕಥೆಯನ್ನು ಕೇಳುತ್ತೀರ ತಾನೇ. ಇಂದು Bible-ನಲ್ಲಿ ಇರುವ ನೈಜ ಕಥೆಯೊಂದನ್ನು ಹೇಳಲಿದ್ದೇನೆ. ನೀವು ಕೇಳಲು ರೆಡಿ ತಾನೇ? Are you ready? O... O... Yes, ಹೇಳಿ ನೋಡೋಣ. Super ಆಗಿ ಹೇಳಿಬಿಟ್ರಿ! ಸೊಲೊಮೋನನೆಂಬ ಒಬ್ಬ ಅರಸನಿದ್ದರು. ಅವರ ತಂದೆ ದಾವೀದ ಅರಸನು ದೇವರಿಗೆ ಇಷ್ಟವಾಗಿ ಜೀವಿಸಿ ಜನರಿಗೆ ಒಳ್ಳೇ ಕಾರ್ಯಗಳನ್ನು ಮಾಡಿ ಉತ್ತಮವಾದ ಆಳ್ವಿಕೆಯನ್ನು ನಡೆಸಿದರು. ಇವರಂತೆಯೇ, ಅರಸನಾದ ಸೊಲೊಮೋನನು ದೇವರನ್ನು ಪ್ರೀತಿಸುವ ವ್ಯಕ್ತಿಯಾಗಿದ್ದರು. ಇವರಿಗೆ ಒಂದು ದಿನ ರಾತ್ರಿ ಮಲಗಿದ್ದಾಗ ಕನಸಿನಲ್ಲಿ ದೇವರು ಕಾಣಿಸಿಕೊಂಡರು. ನೀವು ಕೂಡ ಕನಸು ಕಂಡಿದ್ದೀರ ತಾನೇ! ಹೌದು, ಇವರ ಕನಸಿನಲ್ಲಿ ಬಂದ ದೇವರು ನಿನಗೆ ಏನು ಬೇಕು ಕೇಳು... ನಾನು ಕೊಡುತ್ತೇನೆ ಎಂದು ಕೇಳಿದರು. ನೀವಾಗಿದ್ದರೆ ಏನು ಕೇಳ್ತಿದ್ರಿ ...ಯೋಚಿಸಿ ನೋಡಿ.

 

ಅರಸನಾದ ಸೊಲೊಮೋನನು ಸಹ ಯೋಚಿಸಿದರು. ಹಣ, ಕೀರ್ತಿ, ಸಂಪತ್ತು - ಇದನ್ನೆಲ್ಲ ಕೇಳಿರಬಹುದು ಎಂದು ನೀವು ಭಾವಿಸುತ್ತೀರಾ? ಅದ್ಯಾವುದೂ ಅಲ್ಲ. ಬೇರೇನು ಕೇಳಿರುತ್ತಾರೆ? ಕೇಳಿ ಹೇಳ್ತೀನಿ. ನಾನು ಒಳ್ಳೆಯ ಅರಸನಾಗಿದ್ದು ಜನರಿಗೆ ಒಳ್ಳೆಯ ಆಡಳಿತ ಮಾಡಲು ಜ್ಞಾನ ಬೇಕು ಎಂದು ಕೇಳಿದರು. ಇದು ದೇವರ ದೃಷ್ಟಿಯಲ್ಲಿ ಅದ್ಭುತವಾದ ಉತ್ತರವಾಗಿತ್ತು. ಇದರಿಂದ ಅವರು ಕೇಳಿದ ಜ್ಞಾನವನ್ನು, ಕೇಳದ ಸಂಪತ್ತನ್ನು ಮತ್ತು ಘನತೆಯನ್ನೂ ಕೊಟ್ಟರು. ಇವರ ಜ್ಞಾನದ ಬಗ್ಗೆ ಕೇಳಲ್ಪಟ್ಟು ಲೋಕದಲ್ಲಿರುವ ಅನೇಕ ಅರಸರು ಮತ್ತು ರಾಣಿಯರು ಸೊಲೊಮೋನನನ್ನು ಹುಡುಕಿ ಬಂದರು. ಇವರು ನ್ಯಾಯಯುತವಾಗಿ ತೀರ್ಪು ಕೊಡುವುದನ್ನು ಕೇಳಿ ಜನರೆಲ್ಲರೂ ಬೆರಗಾದರು. ಇವರ ಹೆಸರು, ಹೆಮ್ಮೆಯ ಬಗ್ಗೆ ಎಲ್ಲಾ ಸ್ಥಳಗಳಲ್ಲಿಯೂ ಮಾತನಾಡುತ್ತಿದ್ದರು. ಸೊಲೊಮೋನನು ಒಂದು ದೊಡ್ಡ ಜ್ಞಾನಿ ಮಾತ್ರವಲ್ಲ, ಅವರು ಬಹು ದೊಡ್ಡ ಹಣವಂತನಾಗಿಯೂ, ಹೆಸರುವಾಸಿಯಾದ ಅರಸನಾಗಿಯೂ ಇದ್ದರು.

 

ಪ್ರೀತಿಯ ಮುದ್ದು ಪುಟಾಣಿಗಳೇ! ಅರಸನಾದ ಸೊಲೊಮೋನನಿಗೆ ಜ್ಞಾನವನ್ನು ಕೊಟ್ಟ ದೇವರು ನಿಮಗೂ ಜ್ಞಾನವನ್ನು ಕೊಡುತ್ತಾರೆ. ಕೇಳುವ ಪ್ರತಿಯೊಬ್ಬರಿಗೂ ಪರಿಪೂರ್ಣವಾಗಿ ಕೊಡುವ ಯೇಸು ಕ್ರಿಸ್ತನಿಂದ ಮಾತ್ರವೇ ನೀನು ಜ್ಞಾನವನ್ನು ಪಡೆದುಕೊಳ್ಳಲು ಸಾಧ್ಯ. ಈ ಹೊಸ ವರ್ಷದಲ್ಲೂ ಜ್ಞಾನವನ್ನು ಗಳಿಸಿ ಯಶಸ್ವಿಯಾದ ಜೀವನವನ್ನು ಜೀವಿಸುವಂತೆ ಹಾರೈಸುತ್ತೇವೆ. ಹೊಸ ವರ್ಷದ ಶುಭಾಶಯಗಳು.

- Bro. ವಿಜಯ್ ಕುಮಾರ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin