Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.01.2022
Share:

By Village Missionary Movement

Friday, 21-Jan-2022

ಧೈನಂದಿನ ಧ್ಯಾನ(Kannada) – 22.01.2022

 

ಯೌವನಸ್ಥರ ವೈರಾಗ್ಯ

 

“ಆಗ ಕರ್ತನು ತನ್ನ ದೇಶಕ್ಕೋಸ್ಕರ ರೋಷ ಗೊಂಡು ತನ್ನ ಜನರನ್ನು ಕನಿಕರಿಸುವನು." - ಯೋವೇಲ 2:18

 

ಇಸ್ರಾಯೇಲ್ ಜನರು ಅರಣ್ಯದಲ್ಲಿ ಬಸವನನ್ನು ಮಾಡಿ ಪೂಜಿಸಿದರು. ಆದ್ದರಿಂದ ದೇವರು ಅವರನ್ನು ನಾಶಮಾಡಿದರು. ನಾವು ಬದುಕುತ್ತಿರುವ ಈ ಕಾಲದಲ್ಲಿ ಎಲ್ಲರೂ ಮೂರ್ತಿ ಪೂಜೆಯನ್ನು ಕಡ್ಡಾಯವಾಗಿ ಮಾಡಬೇಕು ಎಂಬ ಕಾನೂನು ಜಾರಿಗೆ ಬಂದರೆ ನಾವು ಏನು ಮಾಡುತ್ತೇವೆ? ದೇವರಿಗಾಗಿ ವೈರಾಗ್ಯದಿಂದ ನಿಲ್ಲುತ್ತೇವೆಯೇ? ಅಥವಾ ಲೋಕಕ್ಕೆ ಹೆದರಿ ಮಾರ್ಪಡುತ್ತೇವೆಯೇ? ಇಂತಹ ಒಂದು ಪರಿಸ್ಥಿತಿಯಲ್ಲಿ ದೇವರಿಗಾಗಿ ವೈರಾಗ್ಯದಿಂದ ನಿಂತ ದೇವ-ಮನುಷ್ಯರ ಬಗ್ಗೆ ಈಗ ಇಲ್ಲಿ ನೋಡಲಿದ್ದೇವೆ.

 

ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಅರವತ್ತು ಮೊಳ ಎತ್ತರವಾಗಿಯೂ ಆರು ಮೊಳ ಅಗಲವಾಗಿಯೂ ಇರುವ ಒಂದು ಬಂಗಾರದ ಪ್ರತಿ ಮೆಯನ್ನು ಬಯಲಿನಲ್ಲಿ ನಿಲ್ಲಿಸಿ ಅದನ್ನು ಆರಾಧಿಸಬೇಕೆಂದು ದೇಶದ ಎಲ್ಲಾ ಜನರಿಗೆ ಆಜ್ಞಾಪಿಸಿದನು. ಎಲ್ಲರೂ ರಾಜನ ಅಪ್ಪಣೆಗೆ‌ ಹೆದರಿ ನಮಸ್ಕರಿಸಿದರು. ಕಾರಣ, ಅಡ್ಡಬೀಳದೆಯೂ ಆರಾಧಿಸದೆಯೂ ಇರುವವ ನನ್ನು ಉರಿಯುವ ಬೆಂಕಿಯ ಆವಿಗೆಯ ಮಧ್ಯದಲ್ಲಿ ಹಾಕಲ್ಪಡಬೇಕೆಂದೂ ಆಜ್ಞೆಕೊಟ್ಟಿದ್ದನು. ಆ ದೇಶದಲ್ಲಿ ಶದ್ರಕ್‌, ಮೇಷಕ್‌, ಅಬೇದ್‌ನೆಗೂ ಎಂಬ ಮೂವರು ಯೌವನಸ್ಥರಿದ್ದರು. ಈ ಮೂರು ಜನ ಯೌವನಸ್ಥರು ವೈರಾಗ್ಯದಿಂದ ದೇವರನ್ನು ಸ್ತುತಿಸಿದರು. 

 

ಅವರು ರಾಜನ ಆಜ್ಞೆಗೆ ವಿಧೇಯರಾಗಲಿಲ್ಲ. ಅವರು ಪ್ರತಿಮೆಯನ್ನು ನಮಸ್ಕರಿಸಲಿಲ್ಲವೆಂದು ಆರೋಪಿಸಿ ಅರಸನ ಮುಂದೆ ನಿಲ್ಲಿಸಿದರು. ಅರಸನು ಪ್ರತಿಮೆಯನ್ನು ನಮಸ್ಕರಿಸಲು ಹೇಳಿದನು. ಅವರು ಧೈರ್ಯದಿಂದ ಅರಸನನ್ನು ನೋಡಿ, “ನೆಬೂಕದ್ನೆಚ್ಚರನೇ, ಈ ವಿಷಯದಲ್ಲಿ ನಾವು ನಿನಗೆ ಉತ್ತರಕೊಡುವ ಅವಶ್ಯಕತೆ ಇಲ್ಲ. ನಾವು ಸೇವಿಸುವ ನಮ್ಮ ದೇವರು ಉರಿಯುವ ಬೆಂಕಿಯ ಆವಿಗೆಯೊಳಗಿಂದ ನಮ್ಮನ್ನು ತಪ್ಪಿಸಲು ಸಮರ್ಥನಾಗಿದ್ದಾನೆ. ಆತನು ಒಂದು ವೇಳೆ ತಪ್ಪಿಸದಿದ್ದರೂ ನಾವು ನಿನ್ನ ದೇವರುಗಳನ್ನು ಸೇವಿಸುವದಿಲ್ಲ ನೀನು ನಿಲ್ಲಿಸಿರುವ ಬಂಗಾರದ ಪ್ರತಿಮೆಯನ್ನು ಆರಾಧಿಸುವದಿಲ್ಲ" ಎಂದು ಗಂಭೀರವಾಗಿ ಹೇಳಿದರು. ಆಗ ಅರಸನು ಬಹಳ ಕೋಪದಿಂದ ಮಾತನಾಡಿ ಆ ಆವಿಗೆಯನ್ನು ಸಾಧಾರಣವಾದ ಉರಿಗಿಂತ ಏಳರಷ್ಟು ಹೆಚ್ಚಾಗಿ ಉರಿಹಾಕಬೇಕೆಂದು ಆಜ್ಞಾಪಿಸಿ ಅವರ ಕೈ ಕಾಲುಗಳನ್ನು ಕಟ್ಟಿ ಬೆಂಕಿಯಲ್ಲಿ ಹಾಕಲು ಹೇಳಿದನು. ಅವರ ವೈರಾಗ್ಯವನ್ನು ಕಂಡ ದೇವರು ಬೆಂಕಿಯ ಮಧ್ಯದಲ್ಲಿ 4 ನೇ ವ್ಯಕ್ತಿಯಾಗಿ ಅವರೊಂದಿಗೆ ಸಂಚರಿಸಿದರು. ಅರಸನು ಅದನ್ನು ನೋಡಿ ವಿಸ್ಮಯಗೊಂಡವನಾಗಿ "ಮಹೋನ್ನತ ದೇವರ ಸೇವಕರೇ" ಎಂದು ಅವರನ್ನು ಕರೆದು ಹೊರಗೆ ಬರಲು ಹೇಳಿದನು. ಅವರ ತಲೇಕೂದಲುಗಳಲ್ಲಿ ಒಂದಾದರೂ ಸುಟ್ಟುಹೋಗಲಿಲ್ಲ. ಬೆಂಕಿಯ ವಾಸನೆಯೂ ಸಹ ಅವರ ಮೇಲಿರಲಿಲ್ಲ. ಕರ್ತನು ಅವರನ್ನು ಬಿಡಿಸಿದರು.

 

ಹೀಗೆ ರಕ್ಷಿಸುವ ದೇವರು ಬೇರೆಲ್ಲೂ ಇಲ್ಲ. ಈ ದೇವರಿಗೆ ವಿರುದ್ಧವಾಗಿ ಮಾತನಾಡುವವರು ನಾಶವಾಗುವರು ಎಂದು ಅರಸನು ಆಜ್ಞಾಪಿಸಿದನು. ಈ ಮೂವರು ಯೌವನಸ್ಥರ ವೈರಾಗ್ಯದಿಂದ ಬಾಬಿಲೋನ್ ದೇಶದಲ್ಲಿ ದೇವರ ನಾಮವು ಹೆಚ್ಚಿಸಲ್ಪಟ್ಟಿತು. ಅವರೂ ಉನ್ನತ ಸ್ಥಿತಿಗೆಹೆಚ್ಚಿಸಲ್ಪಟ್ಟರು. ನಾವು ಸಹ ವೈರಾಗ್ಯದಿಂದ ದೇವರನ್ನು ಸ್ತುತಿಸುವಾಗ, ದೇವರು ನಮ್ಮ ಭಾರತ ದೇಶವನ್ನು ತನ್ನದಾಗಿಸಿಕೊಳ್ಳುತ್ತಾರೆ. ಹಲ್ಲೇಲೂಯ!

 

ಪ್ರಾರ್ಥನಾ ಅಂಶ:

ತಮಿಳುನಾಡಿನಲ್ಲಿ ಆಲಯಗಳಿಲ್ಲದ ಸಾವಿರಾರು ಹಳ್ಳಿಗಳಲ್ಲಿ ದೇವಾಲಯಗಳನ್ನು ನಿರ್ಮಿಸಲು ಮಾಡುತ್ತಿರುವ ಪ್ರಯತ್ನಗಳಲ್ಲಿ ದೇವರ ಹಸ್ತವು ಜೊತೆಯಿದ್ದು ನಡೆಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin