By Village Missionary Movement
Thursday, 20-Jan-2022ಧೈನಂದಿನ ಧ್ಯಾನ(Kannada) – 21.01.2022
ಸಂಗ್ರಹಿಸಿದ ಕಣ್ಣೀರು
“...ನನ್ನ ಕಣ್ಣೀರನ್ನು ನಿನ್ನ ಬುದ್ದಲಿಯಲ್ಲಿ ಹಾಕು; ಅದು ನಿನ್ನ ಪುಸ್ತಕದಲ್ಲಿ ಇಲ್ಲವೋ?" - ಕೀರ್ತನೆ 56: 8
ಒಂದು ಕುಟುಂಬದಲ್ಲಿ ತಾಯಿಯೊಬ್ಬಳು ಅನೇಕ ರೀತಿಯ ಕಷ್ಟಗಳನ್ನು ಅನುಭವಿಸುತ್ತಿದ್ದಳು. ಗಂಡನ ಬಳಿ ಏಟು ತಿನ್ನುತ್ತಾ ಸಿಕ್ಕ ಕೆಲಸಕ್ಕೆ ಹೋಗುತ್ತಾ ತನ್ನ ಇಬ್ಬರು ಗಂಡುಮಕ್ಕಳಿಗಾಗಿ ಎಲ್ಲವನ್ನೂ ತಾಳ್ಮೆಯಿಂದ ಸಹಿಸಿಕೊಂಡು ಪ್ರತಿದಿನ ಕಣ್ಣೀರಿನಿಂದ ಪ್ರಾರ್ಥಿಸುತ್ತಲೇ ಇದ್ದರು. ಇವರ ಪ್ರಾರ್ಥನೆ ಬಹಳ ದಿನಗಳ ಕಾಲ ನಡೆಯಿತು. ಆ ತಾಯಿಯವರು ಕೂಡ ಬೇಸರಗೊಳ್ಳದೆ ಪ್ರಾರ್ಥಿಸುತ್ತಲೇ ಇದ್ದರು. ಕೆಲವು ವರ್ಷಗಳ ನಂತರ ತಾಯಿಯವರ ಪ್ರಾರ್ಥನೆ ಕೇಳಲ್ಪಟ್ಟಿತು. ಅವರು ಸುರಿಸಿದ ಕಣ್ಣೀರನ್ನು ದೇವರು ನೋಡಿದರು. ಇಬ್ಬರು ಪುತ್ರರ ಭವಿಷ್ಯವು ತುಂಬಾ ಚೆನ್ನಾಗಿ ಮಾರ್ಪಟ್ಟಿತು. ಗಂಡನೂ ಮಾನಸಾಂತರ ಹೊಂದಿದರು. ಕುಟುಂಬವಾಗಿ ಸಂತೋಷಪಟ್ಟರು. ಕಾರಣ, ದೇವರು ಅವರ ಕಣ್ಣೀರಿನ ಪ್ರಾರ್ಥನೆಯನ್ನು ಪುಸ್ತಕದಲ್ಲಿ (ಸೇರಿಸಿ) ಇಟ್ಟುಕೊಂಡಿದ್ದರು. ಸರಿಯಾದ ಸಮಯದಲ್ಲಿ ಉತ್ತರಕೊಟ್ಟರು.
ಸತ್ಯವೇದದಲ್ಲಿಯೂ ದಾವೀದನು ಗೊಲ್ಯಾತನನ್ನು ಕೊಂದಾಗ ಜನರು ಸೌಲನು ಕೊಂದದ್ದು ಸಾವಿರ ಮತ್ತು ದಾವೀದನು ಕೊಂದದ್ದು ಹತ್ತು ಸಾವಿರ ಎಂದು ಹೊಗಳಿದಾಗ ಸಹಿಸಲು ಸಾಧ್ಯವಾಗದೆ ದಾವೀದನನ್ನು ಕೊಲ್ಲಲು ಹೊಂಚು ಹಾಕುತ್ತಿದ್ದನು. ಗೊಲ್ಯಾತನನ್ನು ಕೊಂದಿದ್ದಕ್ಕಾಗಿ ತನ್ನ ಮಗಳನ್ನು ಜನರನ್ನು ಮೆಚ್ಚಿಸಲು ಮದುವೆ ಮಾಡಿಕೊಟ್ಟರೂ, ದಾವೀದನು ಕಾಡು, ಪರ್ವತ, ಮರುಭೂಮಿ ಹೀಗೆ ತನ್ನನ್ನು ರಕ್ಷಿಸಿಕೊಳ್ಳಲು ಓಡಿ ಅಲೆಯುತ್ತಿದ್ದರು. ಆಗ ಅನೇಕ ಬಾರಿ ದಾವೀದನು ಕಣ್ಣೀರಿನೊಂದಿಗೆ ಪ್ರಾರ್ಥಿಸಿದರು. ಆದ್ದರಿಂದ, "ನನ್ನ ಕಣ್ಣೀರನ್ನು ನಿನ್ನ ಬುದ್ದಲಿಯಲ್ಲಿ ಹಾಕು; ಅದು ನಿನ್ನ ಪುಸ್ತಕದಲ್ಲಿ ಇಲ್ಲವೋ?" ಎಂದು ದಾವೀದನು ಹೇಳುತ್ತಾರೆ. ಅದರಂತೆ ಕಣ್ಣೀರು ಸಹ ಬುದ್ದಲಿಯಲ್ಲಿ ಇದ್ದದರಿಂದ ದಾವೀದನು ತಕ್ಕ ಸಮಯ ಬಂದಾಗ ಇಸ್ರಾಯೇಲ್ ಮತ್ತು ಯೆಹೂದ್ಯ ಜನರ ಅರಸನಾಗಿ ಉನ್ನತೀಕರಿಸಲ್ಪಟ್ಟರು. ಕರ್ತನ ಕಣ್ಣಿಗೆ ಯಾವುದೂ ಮರೆಯಾಗಿಲ್ಲ.
ಇದನ್ನು ಓದುತ್ತಿರುವ ಪ್ರಿಯರೇ! ನೀವು ಕೂಡ ಎಷ್ಟೋ ದಿನಗಳಿಂದ ಯಾವುದೋ ಒಂದು ಕಾರ್ಯಕ್ಕಾಗಿ ಕಣ್ಣೀರು ಸುರಿಸುತ್ತಾ ಪ್ರಾರ್ಥಿಸುತ್ತಿದ್ದೀನಿ, ಪ್ರಯೋಜನವೇ ಇಲ್ಲ ಎಂದು ಕೊರಗುತ್ತಿದ್ದೀರ? ನಿಮ್ಮ ಕಣ್ಣೀರು ವ್ಯರ್ಥವಾಗಿಲ್ಲ. ಪರಲೋಕದಲ್ಲಿ ನಿಮ್ಮ ಖಾತೆಗೆ ಜಮೆಯಾಗಿದೆ. ಅದರಿಂದ ಖಂಡಿತವಾಗಿಯೂ ಪ್ರತಿಫಲವಿದೆ. ದೇವರು ಏನನ್ನೂ ಸಾಲವಾಗಿ ಇಡುವುದಿಲ್ಲ. ತಕ್ಕ ಸಮಯ ಸಂದರ್ಭ ಬಂದಾಗ ಪ್ರತಿಫಲ ಬರುತ್ತದೆ. ಬೇಸರಗೊಳ್ಳದೆ ಪ್ರಾರ್ಥನೆಯನ್ನು ಮುಂದುವರೆಸಿ. ಗೆಲುವು ನಿಶ್ಚಯ.
- S. ಕಾಲೇಬ್ ರಾಜ
ಪ್ರಾರ್ಥನಾ ಅಂಶ:
ಹೊಸ ವರ್ಷದಲ್ಲಿ ನಮ್ಮೊಂದಿಗೆ ಸೇರಿ ಸೇವೆ ಮಾಡುತ್ತಿರುವ ಸಹ ಮಿಷನರಿಗಳನ್ನು ದೇವರು ಕಾರ್ಯಸ್ಥಳದಲ್ಲಿ ಬಲವಾಗಿ ಉಪಯೋಗಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482