By Village Missionary Movement
Thursday, 20-Jan-2022ಧೈನಂದಿನ ಧ್ಯಾನ(Kannada) – 20.01.2022
ಮಿತಿ ಮೀರಿ ಬಯಸಬೇಡ
"...ತನ್ನ ಯೋಗ್ಯತೆಗೆ ಮೀರಿ ತನ್ನನ್ನು ಭಾವಿಸಿಕೊಳ್ಳದೆ... ನ್ಯಾಯವಾದ ಅಭಿಪ್ರಾಯದಿಂದ ತನ್ನನ್ನು ಭಾವಿಸಿಕೊಳ್ಳಬೇಕು" - ರೋಮಾ 12:3
ಮೊಹಮ್ಮದ್ ಅಲಿ ಖ್ಯಾತ ಬಾಕ್ಸರ್ ಆಗಿದ್ದು, 61 ವಿಶ್ವ ಮಟ್ಟದ ಪಂದ್ಯಗಳಲ್ಲಿ ಭಾಗವಹಿಸಿ 57 ಬಾರಿ ಗೆದ್ದು ಮೆಚ್ಚುಗೆ ಪಡೆದವರು. ಅವರು ತನ್ನ ಬಗ್ಗೆ ಯಾವಾಗಲೂ ಹೆಮ್ಮೆಯಿಂದ "I am the greatest" ಎಂದು ಹೇಳಿಕೊಳ್ಳುತ್ತಾರೆ. ಒಮ್ಮೆ ಅವರು ಸೀಟ್ ಬೆಲ್ಟ್ ಹಾಕದೆ ವಿಮಾನದಲ್ಲಿ ಕುಳಿತಿದ್ದರು. ಫ್ಲೈಟ್ ಅಟೆಂಡೆಂಟ್‌ಗಳು ಎಲ್ಲರಿಗೂ ಸೀಟ್‌ಬೆಲ್ಟ್ ಹಾಕಲು ಹೇಳುತ್ತಲೇ ಇದ್ದರು. ಇವರ ಬಳಿಗೆ ಬಂದು, ಸೀಟ್‌ಬೆಲ್ಟ್ ಹಾಕಲು ಹೇಳಿದರು, "ನಾನು ಸೂಪರ್‌ಮ್ಯಾನ್, ನನಗೆ ಸೀಟ್‌ಬೆಲ್ಟ್ ಅಗತ್ಯವಿಲ್ಲ" ಎಂದರು. "ಸೂಪರ್ ಮ್ಯಾನ್ ಗೆ ವಿಮಾನವೂ ಬೇಕಿಲ್ಲ" ಎಂದು ಹೇಳಿದಳು ಆ ಕೆಲಸದ ಹುಡುಗಿ. ಅಲಿ ತಕ್ಷಣ ಸೀಟ್ ಬೆಲ್ಟ್ ಹಾಕಿಕೊಂಡರು. ತನ್ನ ಬಗ್ಗೆ ಅತಿಯಾದ ಹೆಮ್ಮೆ ಅವರ ಜೀವನದಲ್ಲಿ ಕಾಣುತ್ತಿತ್ತು.
ಸತ್ಯವೇದದಲ್ಲಿ ಅರಸನಾದ ನೆಬೂಕದ್ನೆಚ್ಚರನು "ಇದು ನನ್ನ ಶಕ್ತಿಯ ಪರಾಕ್ರಮದಿಂದ, ನನ್ನ ಮಹಿಮೆಯ ಪ್ರತಾಪಕ್ಕಾಗಿ, ನಾನು ನಿರ್ಮಿಸಿದ ಮಹಾ ಬಾಬಿಲೋನ್ ಅಲ್ಲವೇ!" ಎಂದು ಹೆಮ್ಮೆಯಿಂದ ಹೇಳಿದನು. “ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ" ಎಂಬ ವಾಕ್ಯದಂತೆ, ದೇವರ ಕೋಪವು ತಕ್ಷಣ ಹೊರಪಟ್ಟು ಆತನನ್ನು ಸಿಂಹಾಸನವನ್ನು ಬಿಟ್ಟು ತಳ್ಳಲ್ಪಟ್ಟದ್ದು ಮಾತ್ರವಲ್ಲದೆ, ಮನುಷ್ಯರಿಂದಲೂ ತಳ್ಳಲ್ಪಟ್ಟು ಹಸುವಿನಂತೆ ಹುಲ್ಲು ಮೇಯುತ್ತಾ, ಮೃಗದ ಹಾಗೆ ಜೀವನ ಬದಲಾಗಿ ಬದುಕಲು ಪ್ರಾರಂಭಿಸಿದನು. ಈ ಶೋಚನೀಯ ಸ್ಥಿತಿಗೆ ಕಾರಣವೇನು? ಅವನ ಹೆಮ್ಮೆಯೇ! ಯಾವಾಗ ಬುದ್ಧಿ ನೆಟ್ಟಗಾಗಿ, ತನ್ನ ಸ್ಥಿತಿಯನ್ನು ಗ್ರಹಿಸಿ ತನ್ನನ್ನು ತಗ್ಗಿಸಿಕೊಂಡು ದೇವರನ್ನು ನೋಡಿ ವಿಜ್ಞಾಪನೆ ಮಾಡಿದನೋ ಆಗ ಕಳೆದುಕೊಂಡದ್ದನ್ನು ಪುನಃ ಪಡೆದುಕೊಂಡನು.
ನಮ್ಮ ಜೀವನದಲ್ಲೂ ನಮಗೆ ಬರುವ ಪಾಪಗಳಲ್ಲಿ ಅಹಂಕಾರವು ಪ್ರಬಲವಾಗಿದೆ. ನಮ್ಮ ಆಲೋಚನೆಯಲ್ಲಿ ಅಹಂಕಾರ ನೆಲೆಸಿದಾಗ ದೇವರೇ ನಮಗೆ ಎದುರಾಳಿಯಾಗಿ ಬಂದು ಬಿಡುತ್ತಾರೆ. ಈ ಕೆಲಸವನ್ನು ಅಥವಾ ಸೇವೆಯನ್ನು ಮಾಡಲು ನನ್ನನ್ನು ಹೊರತುಪಡಿಸಿ ಯಾರೂ ಅರ್ಹರಲ್ಲ ಎಂದು ಅನೇಕರು ತಮ್ಮ ಬಗ್ಗೆ ಹೆಮ್ಮೆಪಡುತ್ತಾರೆ. ಕೆಲವರು ತಮ್ಮಿಂದ ಏನನ್ನೂ ಮಾಡಲು ಸಾಧ್ಯವಿಲ್ಲ ಮತ್ತು ದೇವರು ತನಗೆ ಯಾವ ಪ್ರತಿಭೆಯನ್ನೂ ನೀಡಿಲ್ಲ ಎಂದು ಕುಗ್ಗಿ ಹೋಗುತ್ತಾರೆ. ಎರಡೂ ತಪ್ಪು. ನಮ್ಮಲ್ಲಿ ಪ್ರತಿಯೊಬ್ಬರೂ ಕರ್ತನಿಗಾಗಿ ಏನನ್ನಾದರೂ ಮಾಡಬೇಕು. ಆದ್ದರಿಂದ ನಮ್ಮ ಜೀವನದಲ್ಲಿ ಹೆಮ್ಮೆಯು ಬರದಂತೆ ಕಾಪಾಡಿಕೊಂಡು ನಾವು ಕರ್ತನಿಗೆ ಮಹಿಮೆಯನ್ನು ಹೊತ್ತು ತರುವ ಪಾತ್ರಗಳಾಗಿ ಮಾರ್ಪಡುವಂತೆ ದೇವರೇ ನಮಗೆ ಕೃಪೆ ತೋರಿಸಲಿ.
- Bro. ಹನೀಶ್ ಸಾಮುವೇಲ್
ಪ್ರಾರ್ಥನಾ ಅಂಶ:
ಬೈಬಲ್ ಕಾಲೇಜಿನ ವಿದ್ಯಾರ್ಥಿಗಳು ಇರಲು ಕಟ್ಟುತ್ತಿರುವ ಕೊಠಡಿಗಳು ಆದಷ್ಟು ಬೇಗ ಪೂರ್ಣಗೊಳ್ಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482