By Village Missionary Movement
Wednesday, 19-Jan-2022ಧೈನಂದಿನ ಧ್ಯಾನ(Kannada) – 19.01.2022
ಹೆಚ್ಚಿನ ಭದ್ರತೆ
“ಆದರೆ ಬಾಯೊಳಗಿಂದ ಹೊರಡುವಂಥವುಗಳು ಮನಸ್ಸಿನೊಳಗಿಂದ ಬರುತ್ತವೆ; ಇವೇ ಮನುಷ್ಯನನ್ನು ಹೊಲೆ ಮಾಡುವವು" - ಮತ್ತಾಯ 15:18
ರಾಜಿ ಒಂದು ಕಂಪ್ಯೂಟರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಒಂದು ದಿನ ಕುಪ್ಪುಸಾಮಿ ಎಂಬವರು ಹಳ್ಳಿಯಿಂದ ಕಂಪ್ಯೂಟರ್ ತೆಗೆದುಕೊಳ್ಳಲು ಆ ಕಂಪನಿಗೆ ಬಂದರು. ಬಂದವರು, “ನನ್ನ ಮಗ ಪಟ್ಟಣದಲ್ಲಿ ದೊಡ್ಡ ದಿನಸಿ ಅಂಗಡಿಯನ್ನು ಇಟ್ಟಿದ್ದಾನೆ. ಅದಕ್ಕಾಗಿ ಉತ್ತಮ ಗುಣಮಟ್ಟದ ಕಂಪ್ಯೂಟರ್ ಬೇಕು” ಎಂದು ಕೇಳಿದರು. ರಾಜಿ, “ಇದು ಹೊಸ ಮಾಡೆಲ್ ಬೆಲೆ ದುಬಾರಿಯಾಗಿದೆ. ಇದು ಹಳೇ ಮಾಡೆಲ್ ಬೆಲೆ ಕಡಿಮೆ" ಎಂದಳು. ಕುಪ್ಪುಸಾಮಿ ಅದನ್ನು ನೋಡಿ ಬಿಟ್ಟು, “ಕೋಪದಿಂದ ಹೆಂಗಸರು ಬಳಸುವದನ್ನು ನನ್ನ ಮಗನ ದಿನಸಿ ಅಂಗಡಿಗೆ ಕೊಡುತ್ತಿದ್ದೀಯಲ್ಲಾ . ದಿನಸಿ ಅಂಗಡಿಗೆ ಬಳಸುವುದು ಬೇಕು" ಎಂದರು. ರಾಜಿ ಮುಗುಳ್ನಗುತ್ತಾ ಹೇಳಿದಳು, "ಸಾರ್, ಕಂಪ್ಯೂಟರ್ ಎಲ್ಲಾ ಒಂದೇ. ಆದರೆ ನಾವು ಅದರಲ್ಲಿ ಯಾವ ವಿಷಯಗಳನ್ನು ತುಂಬಿಸಿ ಇಡುತ್ತೇವೋ ಅದೇ ಬರುತ್ತದೆ. ಅದಕ್ಕೆ ತಕ್ಕ ಸ್ಥಳಗಳಲ್ಲಿ ಬಳಸಬಹುದು. ನಿಮ್ಮ ಅಂಗಡಿಗೆ ಅಗತ್ಯವಿರುವ ವಿಷಯಗಳನ್ನು ನೀವು ಅದರಲ್ಲಿ ಲೋಡ್ ಮಾಡಿದರೆ ಅದು ನಿಮ್ಮ ಅಂಗಡಿಗೆ ಉಪಯುಕ್ತವಾಗಿ ಮಾರ್ಪಡುತ್ತದೆ” ಎಂದಳು. ಹೌದು, ನಮ್ಮ ಜೀವನದಲ್ಲೂ ಅದೇ ಸತ್ಯ. ನಾವು ಯಾವುದನ್ನು ನಮ್ಮ ಆಲೋಚನೆಯೊಳಗೆ ತುಂಬಿಸುತ್ತೇವೋ ಅದೇ ನಮ್ಮ ಕ್ರಿಯೆಯಾಗಿ ಪ್ರಕಟವಾಗುತ್ತದೆ.
ಮನುಷ್ಯನ ಒಳಗಿನಿಂದ ಬರುವ ಆಲೋಚನೆಗಳು ಮತ್ತು ಚಿಂತೆಗಳು ಅವನನ್ನು ಹೊಲೆ ಮಾಡುತ್ತವೆ ಎಂದು ಕರ್ತನು ಹೇಳುತ್ತಾರೆ. ಕೋಪ, ಕ್ರೋಧ, ಸಿಡುಕು, ಸುಳ್ಳು ಮತ್ತು ಕಳ್ಳತನ ಇವು ಮನುಷ್ಯನನ್ನು ಅಪವಿತ್ರಗೊಳಿಸುತ್ತವೆ ಎಂದು ಯೇಸು ಕ್ರಿಸ್ತನು ಹೇಳುತ್ತಾರೆ. ಆತ್ಮದ ಫಲಗಳಾದ ಪ್ರೀತಿ, ಸಂತೋಷ, ಸಮಾಧಾನ, ದೀರ್ಘಶಾಂತಿ, ದಯೆ, ಉಪಕಾರ, ನಂಬಿಕೆ, ಸಾಧುತ್ವ, ಶಮೆದಮೆ ಇಂಥವುಗಳು ನಮ್ಮಲ್ಲಿ ಹೆಚ್ಚುತ್ತಾ ಹೆಚ್ಚುತ್ತಾ, ಶರೀರ ಕೃತ್ಯಗಳಾದ ಕೋಪ, ಜಾರತ್ವ, ಹೊಟ್ಟೇಕಿಚ್ಚು, ಇಂಥಾ ಕಾರ್ಯಗಳು ನಮ್ಮನ್ನು ಬಿಟ್ಟು ಹೋಗುತ್ತವೆ. ನಾವು ಆತ್ಮದ ಫಲಗಳನ್ನು ಪಡೆಯಲು ಅಧಿಕವಾಗಿ ಶ್ರಮಿಸಬೇಕು. ಅದಕ್ಕಾಗಿ ಮುಖದ ಕನ್ನಡಿಯಂತೆ ನಮ್ಮ ನಿಜಸ್ವರೂಪವನ್ನು ತೋರಿಸುವ ಸತ್ಯವೇದ ವಾಕ್ಯಗಳನ್ನು ಓದಿ ನಮ್ಮನ್ನು ನಾವು ಪ್ರತಿನಿತ್ಯ ಸರಿ ಮಾಡಿಕೊಳ್ಳಬೇಕು.
ಹೌದು, ಪ್ರಿಯರೇ! ಕ್ರೈಸ್ತ ಜೀವನದ ಹೃದಯ ಪ್ರಾರ್ಥನೆ ಮತ್ತು ಸತ್ಯವೇದ ಧ್ಯಾನವೇ. ಇದನ್ನು ಮರೆಯಬೇಡಿ. ಕಂಪ್ಯೂಟರ್‌ನಲ್ಲಿ ಹೇಗೆ ಸಂಗ್ರಹಿಸಿದ ವಿಷಯಗಳನ್ನು ಹೊರಗೆ ತೋರಿಸುತ್ತದೋ ಅದರಂತೆಯೇ ನಮ್ಮಲ್ಲಿ ಪ್ರತಿಯೊಬ್ಬರ ಹೃದಯವೂ ದೇವರ ವಾಕ್ಯಗಳು ಮತ್ತು ಪ್ರಾರ್ಥನೆಯಿಂದ ತುಂಬಿಸಲ್ಪಡುವಾಗ ಆತ್ಮದ ಫಲ, ಪರಿಶುದ್ಧತೆ ಬಹಿರಂಗಗೊಳ್ಳುತ್ತದೆ, ಇಂದಿನಿಂದ ನಮ್ಮ ಹೃದಯವನ್ನು ಸತ್ಯವೇದವನ್ನು ಓದುವುದು ಮತ್ತು ಪ್ರಾರ್ಥನೆಯ ಮೂಲಕ ಕಾಪಾಡಿಕೊಳ್ಳಲು ಕರ್ತನೇ ನಮ್ಮಲ್ಲಿ ಪ್ರತಿಯೊಬ್ಬರಿಗೂ ದಯಪಾಲಿಸಲಿ. ಆಮೆನ್.
- Mrs. ಮಾನುಷಿಯಾ ಪೌಲ್
ಪ್ರಾರ್ಥನಾ ಅಂಶ:
ಬೈಬಲ್ ಕಾಲೇಜ್ ಮತ್ತು ಸೇವಕರ ಕೂಟಗಳಿಗೆ ಅಡುಗೆ ಮಾಡಲು "Wood steamer boiler" ಅನ್ನು ಖರೀದಿಸಲು ಬೇಕಾದ ಅವಶ್ಯಕತೆಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482