Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.01.2022
Share:

By Village Missionary Movement

Sunday, 16-Jan-2022

ಧೈನಂದಿನ ಧ್ಯಾನ(Kannada) – 17.01.2022

 

ಪರಾಕ್ರಮಶಾಲಿಯಾದ ದೇವರು

 

 “...ಈ ನಿನ್ನ ಶಕ್ತಿಯಿಂದ ಹೋಗು; ... ನಾನು ನಿನ್ನನ್ನು ಕಳುಹಿಸಲಿಲ್ಲವೋ...." - ನ್ಯಾಯಸ್ಥಾಪಕರು 6:14

 

ಪ್ರಬಲವಾದ ಉಜ್ಜೀವನದ ಪ್ರಚಾರಕ D.L. ಮೂಡಿಯವರ ಜೀವನದಲ್ಲಿ ನಡೆದ ಒಂದು ಸ್ವಾರಸ್ಯಕರ ಘಟನೆ ಇದು. ಶರೀರದ ಬಲಹೀನತೆಯಿಂದಾಗಿ ಅವರು ವೈದ್ಯರನ್ನು ನೋಡಬೇಕಾಯಿತು. ಅವರಿಗೆ ಹೃದಯ ಸಮಸ್ಯೆ ಇದ್ದು, ವಿಶ್ರಾಂತಿ ಅಗತ್ಯ ಎಂದು ವೈದ್ಯರು ಹೇಳಿದರು. ಆದ್ದರಿಂದ ಅವರು ವಿಶ್ರಾಂತಿ ಪಡೆಯಲು ಬಯಸಿದರು. ಈ ಪರಿಸ್ಥಿತಿಯಲ್ಲಿ ಅವರು 5 ತಿಂಗಳ ಕಾಲ ಕೂಟಗಳಿಗಾಗಿ ಅಮೆರಿಕ ದೇಶಕ್ಕೆ ಪ್ರಯಾಣಿಸುತ್ತಿದ್ದರು. ಸಮುದ್ರ ಪ್ರಯಾಣ ಅವರ ಆರೋಗ್ಯಕ್ಕೆ ಸರಿಹೊಂದದ ಕಾರಣ ಅವರು ತಮ್ಮ ಕೋಣೆಯಲ್ಲೇ ಉಳಿದುಕೊಂಡರು. ನಡೆಯಲಿರುವ ಉಜ್ಜೀವನ ಸಭೆಗಳಲ್ಲಿ ಅವರು ತಮ್ಮ ಕೆಲಸವನ್ನು ಯಾರಾರಿಗೆ ಹಂಚಿಕೊಡಬೇಕು ಎಂದು ಯೋಜನೆ ಹಾಕಿದರು. ಸಮುದ್ರದಲ್ಲಿ ಚಂಡಮಾರುತವು ಬೀಸಿ, ಸಮುದ್ರದ ಅಲ್ಲೋಲ ಕಲ್ಲೋಲದಿಂದ ಹಡಗಿನ ಆಧಾರ ಸ್ತಂಭವೇ ಎರಡು ತುಂಡುಗಳಾಗಿ ಒಡೆದು ಹೋಯಿತು. ಹಡಗಿನಲ್ಲಿ ಸಮುದ್ರದ ನೀರು ಏರತೊಡಗಿತು. ಮೂಡಿ ಬೋಧಕರು ಮಾತ್ರ ಕರ್ತನನ್ನೇ ನೋಡುತ್ತಿದ್ದರು. ಕರ್ತನು ಅವರಿಗೆ, “ನೀನು ವಿಶ್ರಾಂತಿ ಅಗತ್ಯ ಎಂದು ನಿರ್ಧರಿಸಿದ್ದೀಯ, ನೀನು ನಿನ್ನ ಪೂರ್ಣ ಶಕ್ತಿಯಿಂದ ಕಾರ್ಯಮಾಡದಿದ್ದರೆ ನನಗೆ ಪ್ರಯೋಜನವಿಲ್ಲ. ಹಾಗಾಗಿ ನಾನು ನಿನ್ನನ್ನು ನನ್ನ ಬಳಿಗೆ ಕರೆದೊಯ್ಯುತ್ತೇನೆ" ಎಂದು ಹೇಳಿದ ಮಾತುಗಳಿಂದ ಅವರ ಮನಸ್ಸು ಒಡೆದು ಹೋಯಿತು. ಮೊಣಕಾಲಿನಲ್ಲಿ ದೇವರ ಮುಂದೆ ಬಿದ್ದರು. ಈ ಅಪಾಯದಿಂದ ಬದುಕುಳಿಯುವಂತೆ ಮಾಡಿದರೆ ಸಂಪೂರ್ಣ ಬಲದಿಂದ ನಿಮ್ಮನ್ನು ಪ್ರಕಟಿಸುತ್ತೇನೆ ಎಂದು ಹೇಳಿದರು. ಅದರ ನಂತರ ಅವರು ತನ್ನ ಜೀವನದಲ್ಲಿ ಎಂದಿಗೂ ಬಲಹೀನತೆಯ ಬಗ್ಗೆ ಯೋಚಿಸಲೇ ಇಲ್ಲವಂತೆ. ಮುಂಜಾನೆ ಅವರನ್ನು ರಕ್ಷಿಸಲು ಒಂದು ಹಡಗು ಬಂದದ್ದರಿಂದ ಎಲ್ಲರೂ ದಡ ಸೇರಿದರು. ಬೋಧಕರು ದೇವರನ್ನು ಸ್ತುತಿಸಿ ಕೊಂಡಾಡಿದರು. ಅವರ ಹೃದಯವು ಹೊಸ ಉತ್ಸಾಹದಿಂದ ತುಂಬಿತು.

 

ಸತ್ಯವೇದದಲ್ಲಿಯೂ ದೇವರು ಉಪಯೋಗಿಸಿದ ಪಾತ್ರಗಳನ್ನು ನೀವು ಗಮನಿಸಿ ನೋಡುವುದಾದರೆ, ತನ್ನ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವವರನ್ನು ತನ್ನ ಮಹಿಮೆಗಾಗಿ ಉಪಯೋಗಿಸಿಕೊಂಡಿದ್ದಾರೆ. ಮಳೆಯಿಲ್ಲದ ದಿನಗಳಲ್ಲಿ ದೊಡ್ಡ ನಾವೆಯನ್ನು ಕಟ್ಟಲು ನೋಹನಿಗೆ ಮೊದಲೇ ಗೊತ್ತಿತ್ತು. ಮಿದ್ಯಾನ್ಯರ ಕೈಯಿಂದ ಗೋಧಿಯನ್ನು ತಪ್ಪಿಸಲು ಹೆಣಗಾಡುತ್ತಿದ್ದ ಗಿದ್ಯೋನನನ್ನು ಉಪಯೋಗಿಸಿದರು. 12 ಜೋಡಿ ಎತ್ತುಗಳನ್ನು ಕಟ್ಟಿ ಉಳುಮೆ ಮಾಡುತ್ತಿದ್ದ ಎಲೀಷನಿಗೆ ಎರಡರಷ್ಟು ವರಗಳನ್ನು ಕೊಟ್ಟು ಉಪಯೋಗಿಸಿದರು. ಕುರಿಗಳನ್ನು ಮೇಯಿಸಿ, ಸಿಂಹಗಳಿಗೂ, ಕರಡಿಗಳಿಗೂ ಕುರಿಗಳನ್ನು ತಪ್ಪಿಸಿದ ದಾವೀದನನ್ನು ಆರಿಸಿಕೊಂಡರು. ದೇವರ ಕೆಲಸಕ್ಕಾಗಿ ಪೂರ್ಣಬಲದಿಂದ ಕಷ್ಟಪಟ್ಟು ಕೆಲಸ ಮಾಡಲು ನೀವು ಕೂಡ ಸಿದ್ಧರಿದ್ದೀರಾ?

 

ಬಹುಶಃ ನೀವು ಬಲಹೀನತೆಯಿಂದಾಗಿ ದಣಿದಿದ್ದೀರಾ? ಅಗತ್ಯಗಳ ಬಗ್ಗೆ ಯೋಚಿಸಿ ಆಯಾಸಗೊಂಡಿದ್ದೀರಾ? ದೇವರಿಗಾಗಿ ಉತ್ಸಾಹದಿಂದ ಎದ್ದು ಕೆಲಸಗಳನ್ನು ಮಾಡಿರಿ. ನಿಮ್ಮನ್ನು ತಮ್ಮ ಮಹಿಮೆಗಾಗಿ ತಮ್ಮ ಶಕ್ತಿಯನ್ನು ದಯಪಾಲಿಸಿ ಉಪಯೋಗಿಸುತ್ತಾರೆ. ಹಲ್ಲೇಲೂಯ!

- R. ಮಂಜುಳಾ

 

ಪ್ರಾರ್ಥನಾ ಅಂಶ:

ಉತ್ತರ ರಾಜ್ಯಗಳಲ್ಲಿ ಹೊಸ ಕಾರ್ಯ ಸ್ಥಳಗಳು ಪ್ರಾರಂಭಿಸಲ್ಪಡುವಂತೆ, ದೇವರು ಕೃಪೆ ತೋರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş