Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 15.01.2022
Share:

By Village Missionary Movement

Friday, 14-Jan-2022

ಧೈನಂದಿನ ಧ್ಯಾನ(Kannada) – 15.01.2022

 

ಇಟ್ಟ ಗುರಿ ತಪ್ಪದು

 

 "...ದೇವರ ಸಂಕಲ್ಪದ ಮೇರೆಗೆ ಕರೆಯಲ್ಪಟ್ಟು ಆತನನ್ನು ಪ್ರೀತಿಸುವವರ ಹಿತಕ್ಕಾಗಿ ಎಲ್ಲಾ ಕಾರ್ಯಗಳು ಅನುಕೂಲವಾಗುತ್ತವೆ ಎಂದು ನಮಗೆ ಗೊತ್ತದೆ." - ರೋಮಾ 8:28

 

ಕುಷ್ಠರೋಗಿಗಳ ನಡುವೆ ದೇವರ ಪ್ರೀತಿಯನ್ನು ಸಾರಲು ಯಾರು ಹೋಗುತ್ತಾರೆ? ಎಂದು ಕೇಳಲು ಯುವಕನೊಬ್ಬ ಕೈ ಎತ್ತಿ ಮುಂದೆ ಬಂದ. ಮುಂದೆ ಬಂದ ಅವನನ್ನು ಕಳುಹಿಸಿದರು. ಆದರೆ ಯಾರೂ ಆ ಯುವಕನನ್ನು ಸ್ವೀಕರಿಸಲಿಲ್ಲ. ದೇವರ ಪ್ರೀತಿಯನ್ನು ಸಹ ನಿರ್ಲಕ್ಷಿಸಿದರು. 10 ವರ್ಷಗಳ ನಂತರವೂ ಒಬ್ಬರೂ ಅಂಗೀಕರಿಸಲಿಲ್ಲವೇ ಎಂದು ಯೋಚಿಸಿ, ಹಡಗು ಹತ್ತಿ ತನ್ನ ತಾಯ್ನಾಡಿಗೆ ಹಿಂತಿರುಗಲು ನಿರ್ಧರಿಸಿದನು. ಹಡಗನ್ನು ಹತ್ತಿದಾಗ ನಾವಿಕನು ಅವನನ್ನು ಕಂಡು ಮುಖ ಮತ್ತು ಕೈಗಳಲ್ಲಿ ಕುಷ್ಠರೋಗವಿದೆಯೇ ಎಂದರು. ಅವನು ಕಣ್ಣೀರಿನಿಂದ ಇವರೂ ನನ್ನನ್ನು ತಳ್ಳಿಬಿಟ್ಟರು. ಹುಟ್ಟೂರಿನಲ್ಲಿ ನನ್ನನ್ನು ಯಾರು ಅಂಗೀಕರಿಸುತ್ತಾರೆ ಎಂದು ಕಣ್ಣೀರಿಟ್ಟು ಅತ್ತನು. ಇದನ್ನು ಕೇಳಿದ ಒಬ್ಬನು ಓಡಿಹೋಗಿ ಊರಿನವರಿಗೆಲ್ಲಾ ಹೇಳಿದನು. ಅವರು ತಂಡೋಪತಂಡವಾಗಿ ಸಮುದ್ರತೀರಕ್ಕೆ ಬಂದು ನಿನಗೂ ಕುಷ್ಠರೋಗವಿದೆ ಎಂದು ಹೇಳಿದರು. ಅವನು ಅದನ್ನು ಮರೆತು ದೇವರ ಪ್ರೀತಿಯನ್ನು ಎತ್ತಿ ಹೇಳಿದನು. ಇಡೀ ಗ್ರಾಮವೇ ದೇವರನ್ನು ಅಂಗೀಕರಿಸಿತು.

 

ಪೌಲನನ್ನು ಯೆರೂಸಲೇಮಿನಿಂದ ರೋಮಾಗೆ ಹಡಗಿನ ಮೂಲಕ ಕರೆದೊಯ್ಯಲಾಗುತ್ತಿದೆ. ಬಿರುಗಾಳಿ ಮತ್ತು ಧಾರಾಕಾರ ಮಳೆಯಿಂದ ಮೆಲೀತೆ ದ್ವೀಪದ ತೀರದಲ್ಲೇ ಹೋಗುತ್ತಿದ್ದರು. ಆಗ ಆ ದ್ವೀಪದ ಜನರು ಚಳಿಗೆ ಬೆಂಕಿ ಹಚ್ಚಿ, ಪ್ರೀತಿಯಿಂದ ಸೇರಿಸಿಕೊಂಡರು. ಪೌಲನು ಕಟ್ಟಿಗೆಗಳನ್ನು ಎತ್ತಿ ಬೆಂಕಿಯಲ್ಲಿ ಹಾಕುವಾಗ ಒಂದು ಹಾವು ಅವನ ಕೈಯನ್ನು ಬಿಗಿಯಾಗಿ ಹಿಡುಕೊಂಡಿತು. ತಕ್ಷಣವೇ ಆ ದ್ವೀಪದವರು ಇವನು ಕೊಲೆಪಾತಕನು. ಇವನು ಸಮುದ್ರದಿಂದ ತಪ್ಪಿಸಿಕೊಂಡರೂ ಪಾಪವು ಅವನನ್ನು ಕಾಡುತ್ತಲೇ ಇದೆ ಎಂದು ಮಾತಾಡಿಕೊಂಡರು. ಪೌಲನು ಆ ಜಂತುವನ್ನು ಝಾಡಿಸಿಬಿಟ್ಟು ತನ್ನ ಕೆಲಸವನ್ನು ಮತ್ತೆ ಮಾಡುತ್ತಾರೆ. ಕೊಲ್ಲಲ್ಪಡಬೇಕಾದ ವ್ಯಕ್ತಿಯು ಇನ್ನು ಸ್ವಲ್ಪ ಸಮಯದಲ್ಲಿ ಸಾಯುತ್ತಾನೆ ಎಂದು ನೆನೆಸಿ ನೋಡುತ್ತಿದ್ದರು. ಆದರೆ ಪೌಲನು ಸಾಯಲಿಲ್ಲ ಇದನ್ನು ಕಂಡ ಕೂಡಲೇ ಆ ದ್ವೀಪದ ಮುಖ್ಯಸ್ಥನು ಪೌಲನನ್ನು ಕರೆಸಿ ಮೂರು ದಿವಸ ಆದರದಿಂದ ಸತ್ಕರಿಸಿ ದೇವರ ಪ್ರೀತಿಯನ್ನು ಕೇಳುತ್ತಾನೆ. ಆ ದ್ವೀಪದ ಜನರು ದೇವರ ಪ್ರೀತಿಯನ್ನು ಸವಿಯಲು ದೇವರ ಪ್ರೀತಿಯನ್ನು ಎತ್ತಿ ಹೇಳುತ್ತಾರೆ.

 

ದೇವರ ಮಕ್ಕಳೇ! ನೀವು ಕೂಡ, ಹಲವರು ಹಲವು ವಿಧವಾಗಿ ಮಾತಾಡುವುದನ್ನು ಕೇಳಿ ನಿಮ್ಮ ಜೀವನದಲ್ಲಿ ನಡೆಯುವುದನ್ನು ಕಂಡು ಸೋತುಹೋಗಿದ್ದೀರಾ? ಸೋತು ಹೋಗಬೇಡಿರಿ. ದೇವರು ಎಲ್ಲವನ್ನೂ ಒಳ್ಳೆಯದಕ್ಕಾಗಿಯೇ ಮಾಡುತ್ತಾರೆ. ದೇವರ ನಾಮ ಮಹತ್ತಿಗಾಗಿ ಕೆಲವನ್ನು ಅನುಮತಿಸುತ್ತಾರೆ. ದೇವರು ನಿಮ್ಮ ಜೀವನದಲ್ಲಿ ಅನುಮತಿಸುವ ಯಾವುದಾದರೂ ಒಳ್ಳೆಯದೇ ಎಂಬುದನ್ನು ಮರೆಯಬೇಡಿರಿ. ನೀವು ನೋಡುವ ಸಣ್ಣ ತೊಂದರೆಗಳು ಅಥವಾ ಆಯಾಸವನ್ನು ಉಂಟುಮಾಡುವ ವಿಷಯಗಳು ನಿಮ್ಮ ಜೀವನದಲ್ಲಿ ಹೆಚ್ಚಿನ ಪ್ರಯೋಜನವನ್ನು ತರುವುದು ಖಚಿತ. ಕುಷ್ಠರೋಗಿಯಾದ ಯುವಕನು, ಇತರರು ತನ್ನನ್ನು ನಿರಾಕರಿಸಿ ತಳ್ಳಿದಾಗ ವಿನಮ್ರತೆಗೆ ಒಳಗಾಗದೆ, ತನ್ನನ್ನು ಹುಡುಕಿಕೊಂಡು ಬಂದ ಗ್ರಾಮಸ್ಥರಿಗೆ ದೇವರ ಪ್ರೀತಿಯನ್ನು ಹೇಳಿದನು. ತನ್ನನ್ನು ದೂಷಿಸಿದ ಜನರ ಬಗ್ಗೆ ಪೌಲನು ಸ್ವಲ್ಪವೂ ಚಿಂತಿಸದೇ, ದೇವರ ರಾಜ್ಯವನ್ನು ಕಟ್ಟುವ ತೀರ್ಮಾನದಲ್ಲಿ ಬಹಳ ದೃಢನಿಶ್ಚಯವನ್ನು ಹೊಂದಿದ್ದರು. ನಮ್ಮ ಗುರಿ ಹೇಗಿದೆ? ಹಿಂಜಾರಿಹೋಗುವುದರಲ್ಲಿದೆಯೇ? ಅಥವಾ ಪ್ರಗತಿಯಲ್ಲಿದೆಯೇ? ನೀವು ಪ್ರಗತಿಯಲ್ಲಿ ಎಂದು ಹೇಳುವುದಾದರೆ ನೀವು ಸಹ ದೇವರ ರಾಜ್ಯವನ್ನು ಕಟ್ಟಬಹುದು. ಆಮೆನ್.

- Bro. ಚಂದನಪಾಂಡಿ

 

ಪ್ರಾರ್ಥನಾ ಅಂಶ:

7000 ಸೇವಕರ ಮೂಲಕ ಒಂದು ಲಕ್ಷ ಹಳ್ಳಿಗಳನ್ನು ತಲುಪುವ ಪ್ರಯತ್ನಗಳಲ್ಲಿ ದೇವರ ಹಸ್ತವು ಜೊತೆಯಿರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/