By Village Missionary Movement
Friday, 14-Jan-2022ಧೈನಂದಿನ ಧ್ಯಾನ(Kannada) – 14.01.2022
ಯುದ್ಧಭೂಮಿಯಾ - ಕಂಬಳಿಯಾ?
“ಕ್ರಿಸ್ತ ನಂಬಿಕೆಯುಳ್ಳವರು ಮಾಡತಕ್ಕ ಶ್ರೇಷ್ಠ ಹೋರಾಟವನ್ನು ಮಾಡು, ನಿತ್ಯಜೀವವನ್ನು ಹಿಡಿದುಕೋ; ಅದಕ್ಕಾಗಿ ದೇವರು ನಿನ್ನನ್ನು ಕರೆದನು,..." -1 ತಿಮೊಥೆ. 6:12
ಹಿತ್ತಿಯನಾದ ಊರೀಯನು ಉತ್ತಮ ಯೋಧನಾಗಿದ್ದನು. ಯುದ್ಧಭೂಮಿಯಲ್ಲಿ ಯಾವೊಬ್ಬ ಸೈನಿಕನನ್ನಾದರೂ ಕರೆದು, "ಮನೆಗೆ ಹೋಗು ಮತ್ತು ನಿನ್ನ ಹೆಂಡತಿ ಮಕ್ಕಳೊಂದಿಗೆ ಸಂತೋಷವಾಗಿರು" ಎಂದು ಹೇಳಿದರೆ ಹೋಗಲು ಯಾರಾದರೂ ಹಿಂಜರಿಯುತ್ತಾರಾ?... ಇಲ್ಲವೇ ಇಲ್ಲ. ಇಸ್ರಾಯೇಲ್ಯರ ಮಹಾರಾಜನಾದ ದಾವೀದನ ಕಾಲದಲ್ಲಿ ಊರೀಯನೆಂಬ ಸೈನಿಕನಿಗೆ ಹೀಗೆ ಆಜ್ಞಾಪಿಸಲಾಯಿತು. ರಾಜನು ಊರೀಯನನ್ನು ಕರೆದು ಮನೆಗೆ ಹೋಗುವಂತೆ ಪ್ರೋತ್ಸಾಹಿಸಿದರು. ಆದರೆ ಊರೀಯನು ಮನೆಗೆ ಹೋಗಲು ನಿರಾಕರಿಸಿದನು. ಏಕೆ ಹೀಗೆ ವಿಚಿತ್ರವಾಗಿ ವರ್ತಿಸಿದನೆಂದು ಕೇಳಿದಾಗ, "ದೇವರ ಒಡಂಬಡಿಕೆಯ ಮಂಜೂಷ ಮತ್ತು ಇಸ್ರಾಯೇಲ್ಯರ ಸೈನ್ಯವು ಯುದ್ಧಭೂಮಿಯಲ್ಲಿದ್ದಾಗ, ನಾನು ತಿನ್ನಲು, ಕುಡಿಯಲು ಮತ್ತು ನನ್ನ ಕುಟುಂಬದೊಂದಿಗೆ ಸಂತೋಷಪಡಲು ನನ್ನ ಮನೆಯೊಳಗೆ ಪ್ರವೇಶಿಸುತ್ತೇನಾ?" ಎಂದು ಊರೀಯ ಹೇಳಿದನು.
ಒಂದು ಚಿಕ್ಕ ಯೋಧನಾದ ಊರೀಯನು ತನ್ನ ದೇವರ ಮೇಲೆ ಮತ್ತು ಅವನ ರಾಜನ ಮೇಲೆ ಹೊಂದಿದ್ದ ಕರ್ತವ್ಯ ಪ್ರಜ್ಞೆಯನ್ನು ನೋಡಿ. ತನ್ನ ದೇಶದ ಜನರಿಗಾಗಿ ರಣರಂಗದಲ್ಲಿ ನಿಲ್ಲುವುದಕ್ಕಿಂತ, ತನ್ನ ಸಂತೋಷವು ಮುಖ್ಯವೋ ಎಂದು ವೈರಾಗ್ಯದಿಂದ ಇದ್ದನು. ಇಂತಹ ಒಬ್ಬ ಜವಾಬ್ದಾರಿಯುತ ಯೋಧನ ಜೀವವು ಅನ್ಯಾಯವಾಗಿ ಹೊರಟು ಹೋದರೂ, ಆ ಮಾತುಗಳು ಇಂದಿನವರೆಗೂ ಸತ್ಯವೇದದಲ್ಲಿ ಮಾತುನಾಡುತ್ತಲೇ ಇವೆಯಲ್ಲವೇ! ಕರ್ತವ್ಯ ನಿರ್ವಹಿಸಬೇಕಾದ ದಾವೀದರು ಯುದ್ಧಭೂಮಿಯಲ್ಲಿ ಇರದೇ ಕಂಬಳಿಗಳೊಳಗೆ ಇರುವುದರಿಂದ, ಪಾಪಗಳು ಮತ್ತು ಶಾಪಗಳು ಹೆಚ್ಚಾಗುತ್ತಿವೆ! ಅಂದು ಗೊಲ್ಯಾತನನ್ನು ಸೋಲಿಸಿದ ದಾವೀದರು ಎಲ್ಲಿದ್ದಾರೆ? ಬತ್ಷೆಬೆಗಳನ್ನು ಜಯಿಸಲು ಸಾಧ್ಯವಾಗದೆ ಮುಗ್ಗರಿಸುತ್ತಿದ್ದಾರೋ? ದಾವೀದನಿಗೆ ಪ್ರಾರಂಭದಲ್ಲಿದ್ದ ವೈರಾಗ್ಯ ಮತ್ತು ಉತ್ಸಾಹ ಎಲ್ಲಿ ಹೋಯಿತು? ಅಂದು! ಯುದ್ಧಭೂಮಿಯಲ್ಲಿ ಊರೀಯ, ಕಂಬಳಿಯೊಳಗೆ ದಾವೀದನು! ಎಷ್ಟು ಭೀಕರ.
ಸ್ನೇಹಿತರೇ! ಇಂದಿಗೂ ದೇವರಿಗಾಗಿ ಕಾರ್ಯನಿರ್ವಹಿಸಬೇಕಾದ ನಾವು ನಮ್ಮ ಜವಾಬ್ದಾರಿಗಳನ್ನು ಮರೆತು ನಿದ್ರಿಸುತ್ತಿದ್ದೇವೆಯೇ? ನಮ್ಮ ಮನಸ್ಸಿನ ಇಚ್ಛೆಯ ಪ್ರಕಾರ ಬದುಕುತ್ತಿದ್ದೇವೆಯೇ? ಅರಿತುಕೊಳ್ಳೋಣ. ಮೊಣಕಾಲುಗಳು ಊರುವವರೆಗೂ ಗೆಲುವು ಎಂಬುದು ಮಾತಿನಲ್ಲಿ ಮಾತ್ರವೇ ಇರುತ್ತದೆ, ಜೀವನದಲ್ಲಿ ಇರೋದಿಲ್ಲ. ಎದ್ದೇಳೋಣ! ದೇವರ ಪಾದ ಸನ್ನಿಧಿಯಲ್ಲಿ ಬಿದ್ದು ಬಿಡೋಣ! ನಂಬಿಕೆಯ ಯುದ್ಧ ಮಾಡೋಣ! ಆಯಾಸ, ಬಲಹೀನತೆ, ಕಷ್ಟ ಮತ್ತು ನಷ್ಟಗಳನ್ನು ಜಯಿಸಿಬಿಡೋಣ.
- Mrs. ರೂತ್ ಅನೀಶ್
ಪ್ರಾರ್ಥನಾ ಅಂಶ:
"ನೋಂದಾಯಿತ ಮಿಷನರಿ" ಎಂದು ನಮ್ಮೊಂದಿಗೆ ಸೇರಿರುವ ಪ್ರತಿಯೊಬ್ಬರೂ ಪ್ರಾರ್ಥನಾ ಆತ್ಮದಿಂದ ತುಂಬಿಸಲ್ಪಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482