By Village Missionary Movement
Wednesday, 12-Jan-2022ಧೈನಂದಿನ ಧ್ಯಾನ(Kannada) – 13.01.2022
ಅಮೂಲ್ಯವಾದ ನಿಧಿ
“ಶಾಸ್ತ್ರಗಳಿಂದ ನಿತ್ಯಜೀವವು ದೊರೆಯುತ್ತದೆಂದು ನೀವು ನೆನಸಿ ಅವುಗಳನ್ನು ವಿಚಾರಿಸುತ್ತೀರಲ್ಲಾ;..." - ಯೋಹಾನ 5:39
ತನಗಾಗಿ ಒಂದು ಸತ್ಯವೇದವನ್ನು ತೆಗೆದುಕೊಳ್ಳಲು ಮೇರಿಜೋನ್ಸ್ ಪಟ್ಟ ಪಾಡು ಅಷ್ಟಿಷ್ಟಲ್ಲ! ಹಣ ಕೊಟ್ಟರೂ ಬೈಬಲ್ ಕೊಳ್ಳುವುದು ಬಹಳ ಕಷ್ಟವಾಗಿದ್ದ ಕಾಲವದು! ದೇವರ ಕೃಪೆಯಿಂದ ಓದು ಬರಹ ಕಲಿತಿದ್ದ ಆ ಪುಟ್ಟ ಬಾಲಕಿ ಆರು ಕಿಲೋಮೀಟರ್ ನಡೆದು ಹೋಗಿ ಬೈಬಲ್ ಅನ್ನು ಓದಿ ಬರುತ್ತಿದ್ದಳು. ತಾನು ಕೂಡ ಒಂದು ಬೈಬಲ್ ತೆಗೆದುಕೊಳ್ಳಲು ಆಸೆ ಪಟ್ಟಳು. ಅದಕ್ಕಾಗಿ ಆರು ವರ್ಷ ಕಠಿಣವಾಗಿ ದುಡಿದು ಅಲ್ಪಸ್ವಲ್ಪ ಹಣ ಸಂಗ್ರಹಿಸಿದಳು. ಅದಲ್ಲದೆ ಬೈಬಲ್ ಅನ್ನು ಖರೀದಿಸಲು ಬರಿಗಾಲಿನಲ್ಲಿ 80 ಕಿಮೀ ನಡೆಯಬೇಕಾಗಿತ್ತು. ಬೈಬಲ್ ತೆಗೆದುಕೊಂಡ ನಂತರ ದೇವರ ವಾಕ್ಯಗಳನ್ನು ಕಲಿತು ಇತರರಿಗೆ ಮಾದರಿಯಾಗಿದ್ದಳು. ಅನೇಕರು ಅವಳ ಉತ್ತಮವಾದ ಸಾಕ್ಷಿ ಜೀವನವನ್ನು ನೋಡಿ, ಅವಳ ಸಲಹೆಯನ್ನು ಕೇಳಿ ಅನೇಕರು ಕ್ರಿಸ್ತನನ್ನು ಅಂಗೀಕರಿಸಿದರು.
“ಸತ್ಯವೇದವನ್ನು ಓದದಿರುವ ಒಂದು ವ್ಯಕ್ತಿ ಉಪಯುಕ್ತ ಕ್ರೈಸ್ತನಾಗಿ ಬದುಕುವುದನ್ನು ನಾನು ನೋಡಿಲ್ಲ. ಅವನು ತನ್ನ ಸತ್ಯವೇದವನ್ನು ತ್ಯಜಿಸಿ, ದೇವರನ್ನು ನೋಡಿ ಪ್ರಾರ್ಥಿಸಿದರೂ ಅವರ ಕೆಲಸದಲ್ಲಿ ತನ್ನನ್ನು ಉಪಯೋಗಿಸುವಂತೆ ಕೇಳಿಕೊಂಡರೂ ದೇವರು ಅವನನ್ನು ಹೆಚ್ಚಾಗಿ ಉಪಯೋಗಿಸಲಾಗುವುದಿಲ್ಲ " ಎಂದು ಡಿ.ಎಲ್.ಮೂಡಿ ಎಂಬ ಸೇವಕರು ಹೇಳಿದ್ದಾರೆ. "ದೇವರು ಮನುಷ್ಯನಿಗೆ ಕೊಟ್ಟಿರುವ ಶ್ರೇಷ್ಠ ಕೊಡುಗೆಯೆಂದರೆ ಯೇಸುಕ್ರಿಸ್ತನ ಜೊತೆ, ಸತ್ಯವೇದವನ್ನು ಕೊಟ್ಟಿರುವುದೇ" ಎಂದು ಅಬ್ರಹಾಂ ಲಿಂಕನ್ ರವರು ಹೇಳಿದ್ದಾರೆ. ಕರ್ತನ ಸತ್ಯವೇದದ ಬಗ್ಗೆ ಕೀರ್ತನೆಗಳು 19:7 ರಲ್ಲಿ ಯೆಹೋವನ ಧರ್ಮಶಾಸ್ತ್ರವು ಲೋಪವಿಲ್ಲದ್ದು; ಅದು ಪ್ರಾಣವನ್ನು ಉಜ್ಜೀವಿಸಮಾಡುವಂಥದ್ದು ಎಂದು ಬರೆಯಲ್ಪಟ್ಟಿದೆ. ಒಬ್ಬನು ಲೋಕವನ್ನು ಪ್ರೀತಿಸುತ್ತಾ ಸತ್ಯವೇದವನ್ನೂ ಪ್ರೀತಿಸಲು ಸಾಧ್ಯವಿಲ್ಲ. ಪ್ರಪಂಚದ ಅನೇಕ ಪುಸ್ತಕಗಳು ಜ್ಞಾನವನ್ನು ನೀಡುತ್ತವೆ, ಆದರೆ ಪರಿಶುದ್ಧ ಗ್ರಂಥವು ಮಾತ್ರವೇ ಯೇಸುವಿನ ಪ್ರೀತಿಯನ್ನು ತೋರಿಸುತ್ತದೆ, ರಕ್ಷಣೆಯನ್ನು ನೀಡುತ್ತದೆ ಮತ್ತು ಪರಲೋಕಕ್ಕೆ ಸೇರಿಸುತ್ತದೆ. ಇದು ಕೇವಲ ಕಾಗದವಲ್ಲ, ಇದು ಪರಿಶುದ್ಧ ದೇವರ ಹೃದಯ ಬಡಿತವಾಗಿದೆ.
ಕರ್ತನಲ್ಲಿ ಪ್ರಿಯರೇ! ನಮ್ಮ ಕೈಯಲ್ಲಿರುವ ಗ್ರಂಥವು ಅಮೂಲ್ಯವಾದ ಸಂಪತ್ತು. ಅನೇಕ ಮಿಷನರಿಗಳ ತ್ಯಾಗದ ಮೂಲಕ ನಾವು ನಮ್ಮ ಮಾತೃಭಾಷೆಯನ್ನು ಪಡೆದುಕೊಂಡಿದ್ದೇವೆ. ಅದರ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳಿರಿ ಮತ್ತು ಪ್ರತಿದಿನ ಅದನ್ನು ಓದಲು, ಧ್ಯಾನಿಸಲು ಮತ್ತು ಅದರಂತೆ ಬದುಕಲು ನಿಮ್ಮನ್ನು ಸಮರ್ಪಿಸಿಕೊಳ್ಳಿರಿ. ಕರ್ತನು ನಿಮ್ಮನ್ನು ಆಶೀರ್ವದಿಸುತ್ತಾರೆ. ಆಮೆನ್.
- P. ಶಿವ
ಪ್ರಾರ್ಥನಾ ಅಂಶ:
ಮಾಧ್ಯಮ ಸೇವೆಗಳಲ್ಲಿ ಕೆಲಸ ಮಾಡುವ ಸೇವಕರನ್ನು ದೇವರು ವಿಶೇಷವಾದ ಆತ್ಮದಿಂದ ತುಂಬಿಸಿ ನಡೆಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482