By Village Missionary Movement
Tuesday, 11-Jan-2022ಧೈನಂದಿನ ಧ್ಯಾನ(Kannada) – 11.01.2022
ಅಂದವಾಗಿ ನಿರ್ಮಿಸುವಾತನು
“ಒಂದೊಂದು ವಸ್ತುವನ್ನು ಸಮಯಕ್ಕೆ ತಕ್ಕ ಹಾಗೆ ಅಂದವಾಗಿ ನಿರ್ಮಿಸಿದ್ದಾನೆ;..." - ಪ್ರಸಂಗಿ 3:11
ಒಬ್ಬ ದಾರಿಹೋಕನು ಹೊಲದ ಮಾರ್ಗದಲ್ಲಿ ನಡೆದು ಬಂದನು. ಆಗ ಕುಂಬಳಕಾಯಿ ತೋಟದಲ್ಲಿ ದೊಡ್ಡ ದೊಡ್ಡ ಕುಂಬಳಕಾಯಿಗಳು ಬಿಟ್ಟು ನೆಲದ ಮೇಲೆ ಹಾಗೆ ಹರಡಿಕೊಂಡಿತ್ತು. ಅದನ್ನು ನೋಡಿದ ದಾರಿಹೋಕನು ನೆಟ್ಟಗೆ ನಿಲ್ಲಲಾರದ ಗಿಡದ ಮೇಲೆ ಇಷ್ಟು ದೊಡ್ಡ ಕುಂಬಳಕಾಯಿಗಳನ್ನು ದೇವರು ಸೃಷ್ಟಿಸಿದ್ದಾರಲ್ಲಾ ಎಂದು ಬೇಸರ ಮಾಡಿಕೊಂಡನು. ಹೀಗೆ ಯೋಚಿಸುತ್ತಲೇ ನಡೆಯುತ್ತಿದ್ದ ಆ ವ್ಯಕ್ತಿ ಬಿಸಿಲಿನ ತಾಪಕ್ಕೆ ದಣಿದು ರಸ್ತೆ ಬದಿಯ ಆಲದ ಮರದ ನೆರಳಿನಲ್ಲಿ ಮಲಗಿದನು. ಮಲಗಿದವನು ಹಾಗೆ ಗಾಢ ನಿದ್ರೆಗೆ ಜಾರಿದನು. ಸ್ವಲ್ಪ ಹೊತ್ತಿನ ನಂತರ ಆಲದ ಮರದ ಚಿಕ್ಕ ಹಣ್ಣು ಅವನ ತಲೆಯ ಮೇಲೆ ಬಿದ್ದಿತು. ಕುಂಬಳಕಾಯಿ ಬಿದ್ದು ಬಿಟ್ಟಿತೇ ಎಂದು ಕಿರುಚುತ್ತಾ ಎದ್ದು ನೋಡಿದಾಗ, ಒಂದು ಸಣ್ಣ ಆಲದ ಮರದ ಹಣ್ಣು ಉರುಳುತ್ತಿರುವುದು ಕಂಡಿತು. “ದೇವರೇ! ಆ ದೊಡ್ಡ ಹಣ್ಣನ್ನು ಆಲದ ಮರದಲ್ಲಿ ಸೃಷ್ಟಿಸಿದ್ದರೆ ನನ್ನ ತಲೆ ತಪ್ಪಿಸಿಕೊಳ್ಳುತ್ತಿರಲಿಲ್ಲ. ನಿಮ್ಮ ಜ್ಞಾನವುಳ್ಳ ಕ್ರಿಯೆಗೆ ಧನ್ಯವಾದಗಳು” ಎಂದನು.
ಪರಿಶುದ್ಧ ಗ್ರಂಥದಲ್ಲಿ ನಂಬಿಕೆಯ ತಂದೆಯಾದ ಅಬ್ರಹಾಮನು ತನ್ನ ಮಗನಾದ ಇಸಾಕನಿಗೆ ಹೆಣ್ಣು ನೋಡಲು ತನ್ನ ಸೇವಕನನ್ನು ಕರೆದು, ಅವನಿಗೆ ಕೆಲವು ವಿಷಯಗಳನ್ನು ಕಲಿಸಿಕೊಟ್ಟು ಕಳುಹಿಸುತ್ತಾರೆ. ಆ ಸೇವಕನು ಕೂಡ ತನ್ನ ಯಜಮಾನನಾದ ಅಬ್ರಹಾಮನು ಅವನಿಗೆ ಕಲಿಸಿದಂತೆಯೇ, ಇಸಾಕನಿಗೆ ಹೆಣ್ಣು ನೋಡಲು ಹೋಗುತ್ತಾರೆ. ಒಂದು ಕಡೆ ಈ ಕಾರ್ಯ ಮುಂದುವರಿಯಲು, ಇಸಾಕನು ಅದೇ ಸಮಯದಲ್ಲಿ ದೇವರ ವಿಷಯಗಳ ಬಗ್ಗೆ ಧ್ಯಾನಿಸಲು ಅಡವಿಗೆ ಹೋಗುತ್ತಾರೆ. ಹೀಗೆ ಎಲಿಯೇಜರನು ಒಂದೆಡೆ ಮತ್ತು ಇಸಾಕನು ಮತ್ತೊಂದೆಡೆ ತಮ್ಮ ಮನಸ್ಸನ್ನು ದೇವರ ವಿಷಯಗಳತ್ತ ಇಟ್ಟರು. ದೇವರು ಕಾರ್ಯಗಳನ್ನು ಹೇಗೆ ಮಾಡುತ್ತಾರೆಂದು ನೋಡಿರಿ. ಅಬ್ರಹಾಮನು ತನ್ನ ಸೇವಕನಿಗೆ ಕಲಿಸಿದಂತೆಯೇ ಆ ಹೆಣ್ಣನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಿರುವ ಸಮಯದಲ್ಲಿ, ಆ ಸೇವಕನು ಹೇಳುತ್ತಾರೆ "ನನ್ನನ್ನು ಸರಿಯಾದ ಮಾರ್ಗ ದಲ್ಲಿ ನಡಿಸಿದ ನನ್ನ ಯಜಮಾನನಾದ ಅಬ್ರಹಾಮನ ದೇವರಾಗಿರುವ ಕರ್ತನನ್ನು ಕೊಂಡಾಡಿದೆನು" ಎಂದು.
ಇದನ್ನು ಓದುತ್ತಿರುವ ಪ್ರಿಯರೇ! ನಮ್ಮ ಕರ್ತನು ಎಲ್ಲವನ್ನು ಸರಿಯಾಗಿಯೂ ಮತ್ತು ನ್ಯಾಯಯುತವಾಗಿಯೂ ಮಾಡುವವರು. ನಮ್ಮ ದೇಹದಲ್ಲಿರುವ ಎಲ್ಲಾ ಅಂಗಾಂಗಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ನಮ್ಮ ಕೌಟುಂಬಿಕ ಜೀವನ, ಮಕ್ಕಳ ಶಿಕ್ಷಣ, ಭವಿಷ್ಯ, ಮದುವೆ, ವೃತ್ತಿ ಹೀಗೆ ಎಲ್ಲವನ್ನೂ ಕೊಟ್ಟಿರುವ ದೇವರೇ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಿ ಮುಗಿಸಲು ಸಮರ್ಥರಾಗಿದ್ದಾರೆ. ಈ ಹೊಸ ವರ್ಷಕ್ಕೆ ಕಾಲಿಟ್ಟಿರುವ ನಾವು ಪ್ರತಿದಿನವೂ, ಸರಿಯಾಗಿ ನಮ್ಮನ್ನು ಮುನ್ನಡೆಸು ದೇವರೇ! ಎಂದು ಪ್ರಾರ್ಥಿಸಿ ಅವರಿಗೆ ಕೃತಜ್ಞತೆ ಸಲ್ಲಿಸೋಣ!
- Mrs. ಶಕ್ತಿ ಶಂಕರರಾಜ್
ಪ್ರಾರ್ಥನಾ ಅಂಶ:
ಮಾಧ್ಯಮ ಸೇವೆಗಳಿಗೆ ಅನುಭವವುಳ್ಳ ಸಮರ್ಪಣೆಯುಳ್ಳ ಸೇವಕರುಗಳು ಸಿಗುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482