Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.01.2022
Share:

By Village Missionary Movement

Monday, 10-Jan-2022

ಧೈನಂದಿನ ಧ್ಯಾನ(Kannada) – 10.01.2022

 

ಸುಮ್ಮನೆ ಇರಬೇಡಿರಿ

 

"ನನ್ನನ್ನು ಕಳುಹಿಸಿದಾತನ ಕಾರ್ಯಗಳನ್ನು ನಾವು ಹಗಲಿರುವಾಗಲೇ ನಡಿಸಬೇಕು..." - ಯೋಹಾನ 9:4

 

ಚೆನ್ನೈ, ಮುಂಬೈ ಮತ್ತು ದೆಹಲಿಯಂತಹ ನಗರಗಳಲ್ಲಿ Manpower agency (ಮ್ಯಾನ್‌ಪವರ್ ಏಜೆನ್ಸಿ) ನಡೆಸುವವರು ಹೆಚ್ಚಾಗಿ ಬಿಟ್ಟಿದ್ದಾರೆ. ಇವರ ಕೆಲಸವೇನೆಂದರೆ, ಯಾವ ಯಾವ ಕಂಪನಿಗಳು ಮತ್ತು ಕಾರ್ಯಾಲಯ ಗಳು ತಮಗೆ ಹಗಲೆಲ್ಲಾ ಕೆಲಸ ಮಾಡಲು ಜನರು ಬೇಕೆಂದು ಹೇಳುತ್ತಾರೋ, ಅವರಿಗೆ ತಕ್ಷಣ ಜನರನ್ನು ಕಳುಹಿಸುತ್ತಾರೆ. ಯಾರನ್ನೂ ಸುಮ್ಮನಿರಲು ಬಿಡುವುದೇ ಇಲ್ಲ. ವಿದ್ಯಾವಂತರು ಮತ್ತು ಅವಿದ್ಯಾವಂತರು ಎಂದು ಯಾವ ರೀತಿಯ ಜನರನ್ನು ಕರೆದರೂ ತಕ್ಷಣವೇ ಕಳುಹಿಸುತ್ತಾರೆ. ಇದರಿಂದಾಗಿ ಕಂಪನಿಗಳ ಗುಣಮಟ್ಟವು ಹೆಚ್ಚಾಗುತ್ತದೆ ಮತ್ತು ಸಮಯಕ್ಕೆ ಸರಿಯಾಗಿ ಕೆಲಸಗಳೂ ಪೂರ್ಣಗೊಳ್ಳುತ್ತವೆ.

 

ಪರಿಶುದ್ಧ ಗ್ರಂಥದಲ್ಲಿ ಕರ್ತನಾದ ಯೇಸು ಕ್ರಿಸ್ತನು ಹೇಳಿದ ಸಾಮ್ಯವು ಬಹಳ ಆಶ್ಚರ್ಯವಾಗಿದೆ. ಒಂದು ಮನೆಯ ಯಜಮಾನನು ತನ್ನ ದ್ರಾಕ್ಷಿ ತೋಟಕ್ಕೆ ಕೆಲಸದವರನ್ನು ಕಳುಹಿಸಿದನು. ಆಗ ಮುಂಜಾನೆ ಹೊರಟು ಮೂರು, ಆರು, ಒಂಭತ್ತು ಮತ್ತು ಹನ್ನೊಂದು ಗಂಟೆಯವರೆಗೆ ಕೆಲಸದವರನ್ನು ಹುಡುಕುತ್ತಾನೆ. ಹನ್ನೊಂದು ಗಂಟೆಯ ಹೊತ್ತಿಗೆ ಸುಮ್ಮನೆ ನಿಂತಿದ್ದವರನ್ನು ನೋಡಿ “ನೀವು ದಿನವೆಲ್ಲಾ ಇಲ್ಲಿ ಕೆಲಸವಿಲ್ಲದೆ ನಿಂತಿರುವದೇಕೆ" ಎಂದು ಕೇಳಿದನು. ಎಂತಹ ಉದಾಹರಣೆ! ನಂತರ ಅವನು ಅವರನ್ನು ಕರೆದುಕೊಂಡು ಹೋದನು. ಅವರಿಗೆ ನ್ಯಾಯಯುತವಾದ ಸಂಬಳವನ್ನು ಕೊಟ್ಟನು. ಹೀಗೆ ಆ ಕೆಲಸ ಮಾಡುವವರು ಸುಮ್ಮನಿರುವುದನ್ನು ಬಿಟ್ಟು ಬಿಟ್ಟು, ಯಜಮಾನನ ಮಾತನ್ನು ಕೇಳಿ ಕನಿಷ್ಟ ಒಂದು ಗಂಟೆಯಾದರೂ ಕೆಲಸಮಾಡಿದ್ದಕ್ಕೆ ತಕ್ಕ ಪ್ರತಿಫಲವನ್ನು ಪಡೆದು ಸಂತೋಷದಿಂದ ಹಿಂತಿರುಗಿದರು.

 

ಸ್ನೇಹಿತರೇ! ನಮ್ಮ ದೇವರ ಹೃತ್ಪೂರ್ವಕ ಆಲೋಚನೆಗಳನ್ನು ನೀವು ನೋಡಿದ್ರಾ? ನಾವು ಹಗಲಿನಲ್ಲಿ ಸುಮ್ಮನಿರುವದನ್ನು ದೇವರು ಬಯಸುವುದೇ ಇಲ್ಲ. ದೇವರಿಗಾಗಿ ಏನಾದರೂ ಮಾಡುತ್ತಲೇ ಇರಬೇಕು. ನಮ್ಮ ಸಾಮರ್ಥ್ಯವೇನೋ, ನಮಗೆ ಏನು ಗೊತ್ತೋ, ಅದನ್ನು ದೇವರ ರಾಜ್ಯಕ್ಕಾಗಿ ಮಾಡುತ್ತಲೇ ಇರಬೇಕು. ಪ್ರಾರಂಭವಾಗಿರುವ ಈ ಹೊಸ ವರ್ಷದಲ್ಲಿ ಒಂದು ತೀರ್ಮಾನ ಮಾಡೋಣ. ನಮ್ಮಿಂದ ಸಾಧ್ಯವಾದಷ್ಟು ದೇವರಿಗಾಗಿ ಬರೆಯೋಣ, ಹಾಡೋಣ, ಕೆಲಸ ಮಾಡೋಣ, ಕೊಡೋಣ ಮತ್ತು ಇತರರಿಗೆ ಹೇಳೋಣ! ಸುಮ್ಮನೆ ಇರಲೇಬಾರದು ಎಂದು ತೀರ್ಮಾನಿಸೋಣ! ಸೇವಕರಿಗೆ ಕೈಜೋಡಿಸೋಣ! ದೇವರ ರಾಜ್ಯವು ಬೆಳೆಯಲಿ! ನೀವು ಯಾವ ಕೆಲಸ ಮಾಡುವವರಾಗಿದ್ದರೂ ಸರಿ, ಕನಿಷ್ಠ ಒಂದು ಗಂಟೆಯಾದರೂ ಮೀಸಲಿಟ್ಟು ದೇಶಕ್ಕಾಗಿ ಪ್ರಾರ್ಥಿಸಬೇಕು!

- T. ಶಂಕರ್ ರಾಜ್

 

ಪ್ರಾರ್ಥನಾ ಅಂಶ:

ಕ್ರಿಸ್ಮಸ್ ಆಚರಣೆಯ ಮೂಲಕ ಭೇಟಿಮಾಡಿದ ಆತ್ಮಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş