By Village Missionary Movement
Sunday, 09-Jan-2022ಧೈನಂದಿನ ಧ್ಯಾನ(Kannada) – 09.01.2022 (Kids Special)
ಬೇಡವೆಂದು ಬಿಟ್ಟ ಕಲ್ಲು
“ಕರುಣೆಯುಳ್ಳವರು ಧನ್ಯರು; ಅವರು ಕರುಣೆಹೊಂದುವರು." - ಮತ್ತಾಯ 5: 7
ಒಬ್ಬ ರಾಜನು ತನ್ನ ಜನರ ಬಗ್ಗೆ ತಿಳಿದುಕೊಳ್ಳಲು ಬಯಸಿ, ಮಾರುವೇಷ ಧರಿಸಿ ಜನರು ಹೆಚ್ಚು ಬಳಸುವ ಹಾದಿಯಲ್ಲಿ ದೊಡ್ಡ ಕಲ್ಲನ್ನು ಇಟ್ಟರು. ಅದರ ಕೆಳಗೆ ನೂರು ಬೆಳ್ಳಿಯ ನಾಣ್ಯಗಳನ್ನು ಮತ್ತು ಒಂದು ಪತ್ರವನ್ನು ಇಟ್ಟರು. ನಂತರ ಯಾರಿಗೂ ಗೊತ್ತಾಗದಂತೆ ಏನು ನಡೆಯುತ್ತದೆ ಎಂದು ಗಮನಿಸುತ್ತಿದ್ದರು. ಎಲ್ಲರೂ ಆ ದಾರಿಯಲ್ಲಿ ನಡೆದು ಹೋಗುತ್ತಿದ್ದರು. ರಸ್ತೆಯಲ್ಲಿ ಅಡ್ಡವಾಗಿ ಬಿದ್ದಿದ್ದ ಕಲ್ಲು ನೋಡಿ ರಾಜೀವ್ ಗೆ ಕೋಪ ಬಂತು. “ತೆರಿಗೆ ತೆಗೆದುಕೊಳ್ಳುವ ಮಂತ್ರಿಗಳಿಗೆ ಇದೆಲ್ಲಾ ಕಾಣಿಸೋದಿಲ್ಲ, ದಾರಿಮಧ್ಯೆ ಇಷ್ಟು ದೊಡ್ಡ ಕಲ್ಲು ಇದ್ದರೆ ಜನರು ಹೇಗೆ ಹೋಗೋದು, ಬರೋದು? ಮ್...ಮ್.... ಎಲ್ಲಾ ಅನ್ಯಾಯವೇ ನಡೆಯುತ್ತಿದೆ” ಎಂದು ಗೊಣಗುತ್ತಾ ಹೋದನು. ವೇಲನ್ ಆ ದಾರಿಯಲ್ಲಿ ಬಂದನು. ಆತುರಾತುರವಾಗಿ ಹೋಗುವಾಗ ಕಲ್ಲು ಅವನ ಕಾಲಿಗೆ ಬಲವಾಗಿ ಬಡಿಯಿತು. ತಕ್ಷಣ ಅವನಿಗೆ ಕೋಪ ಬಂತು. ಕಲ್ಲನ್ನು ಒದ್ದು, “ನನ್ನನ್ನು ಬೀಳುವಂತೆ ಕೆಡವಿದ್ದೀಯ. ಯಾವನು ಬುದ್ಧಿಯಿಲ್ಲದೆ ಈ ಕಲ್ಲನ್ನು ಇಲ್ಲಿ ತಂದುಹಾಕಿರೋದು ಮೂರ್ಖ” ಎಂದು ಬೈದು ಕೋಪದಿಂದ ಕಲ್ಲನ್ನು ತುಳಿದು ಬಿಟ್ಟು ಹೋದನು. ಮಣಿ ಬಂದನು. ಅವನೂ ಕೂಡ ಕಲ್ಲನ್ನು ನೋಡದೆ ಬಂದು ಎಡವಿ ಬಿದ್ದನು. ಆದರೆ ಅವನು ಮೇಲೆಕ್ಕೆದ್ದು, “ಎಷ್ಟು ಜನ ಹೀಗೆ ಎಡವಿ ಬಿದ್ದರೋ? ಗೊತ್ತಿಲ್ಲವೇ. ಯಾವನೋ ಹೋಗಿ ಹೋಗಿ ಇಲ್ಲಿ ಕಲ್ಲು ಹಾಕಿದ್ದಾನೆ" ಎಂದು ಹೇಳಿಬಿಟ್ಟು, ”ಇನ್ನು ಯಾರೂ ಬೀಳಬಾರದು. ನಾನು ಇದನ್ನು ಉರುಳಿಸುತ್ತಾ ಪಕ್ಕಕ್ಕೆ ತಳ್ಳುತ್ತೇನೆ" ಎಂದು ಹೇಳಿ ಕಲ್ಲನ್ನು ಕಷ್ಟಪಟ್ಟು ಉರುಳಿಸುತ್ತಾ ಪಕ್ಕಕ್ಕೆ ತಳ್ಳಿದನು. ತಳ್ಳಿ ಬಿಟ್ಟು ನೋಡಿದರೆ, ಒಂದು ಪತ್ರ ಮತ್ತು ಹೊಳೆಯುವ ನೂರು ಬೆಳ್ಳಿಯ ನಾಣ್ಯ ಇತ್ತು. ಪತ್ರದಲ್ಲಿ ಈ ಬೆಳ್ಳಿ ನಾಣ್ಯಗಳು ಕಲ್ಲನ್ನು ಪಕ್ಕಕ್ಕೆ ತಳ್ಳುವ ವ್ಯಕ್ತಿಗೆ ಸ್ವಂತ ಎಂದು ಬರೆಯಲಾಗಿತ್ತು. ಮಣಿಯನ್ನು ಮತ್ತು ಅಲ್ಲಿ ನಡೆಯುತ್ತಿದ್ದ ಕಾರ್ಯವನ್ನು ಗಮನಿಸುತ್ತಿದ್ದ ರಾಜ ಮಣಿಯನ್ನು ಹೊಗಳಿ ತನ್ನ ಉಪಾಯವನ್ನು ಹೇಳಿದನು. ಮಣಿ ಆ ನೂರು ಬೆಳ್ಳಿ ನಾಣ್ಯಗಳನ್ನು ತೆಗೆದುಕೊಂಡು ಸಂತೋಷದಿಂದ ಹೊರಟುಹೋದನು.
ಪ್ರೀತಿಯ ತಮ್ಮ- ತಂಗಿ, ರಾಜೀವ್, ವೇಲನ್‌ನಂತೆ ಕೋಪಗೊಂಡರೆ ನಾವೇನೂ ಮಾಡಲು ಸಾಧ್ಯವಿಲ್ಲ. ದಾರಿ ಸಿಗುತ್ತದೆ ಮತ್ತೊಬ್ಬರು ಎಡವಿ ಬೀಳಬಾರದೆ ಎಂದು ಮಣಿ ಕನಿಕರ ಪಟ್ಟು ಕಲ್ಲನ್ನು ತಳ್ಳಿದ ಹಾಗೆ ಕನಿಕರವುಳ್ಳ ಮನಸ್ಸಿನಿಂದ ವರ್ತಿಸಿದರೆ ನಮಗೂ ಕರುಣೆ ಸಿಗುತ್ತದೆ. ಕೋಪವಿಲ್ಲದೆ ಶಾಂತವಾಗಿದ್ದರೆ ಬುದ್ಧಿವಂತಿಕೆಯಿಂದ ವರ್ತಿಸಲು ಸಾಧ್ಯ. ಉನ್ನತಿ ಪಡೆಯಲೂ ಸಾಧ್ಯ.
- Mrs. ಅನ್ಬುಜ್ಯೋತಿ ಸ್ಟಾಲಿನ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482