By Village Missionary Movement
Saturday, 08-Jan-2022ಧೈನಂದಿನ ಧ್ಯಾನ(Kannada) – 08.01.2022
ಯೇಸುವೊಂದಿಗೆ ಪ್ರಾರಂಭಿಸು
"...ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮಗೆ ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ ಓಡೋಣ." - ಇಬ್ರಿಯ 12:2
ಒಂದು ಸಮಾವೇಶದಲ್ಲಿ ಜನಸಾಗರವೇ ನೆರೆದಿತ್ತು. ಅಲ್ಲಿ ಒಬ್ಬ ಪ್ರಸಿದ್ಧ ಬೋಧಕರನ್ನು ಸಂದೇಶ ನೀಡಲು ಆಹ್ವಾನಿಸಲಾಗಿತ್ತು. ಅವರ ಸಂದೇಶದ ಪ್ರಾರಂಭದಲ್ಲಿ ಎಲ್ಲರೂ ಕುತೂಹಲದಿಂದ ಸಂದೇಶಕ್ಕಾಗಿ ಕಾಯುತ್ತಿದ್ದರು. ಆದರೆ ಅವರು ಬಂದ ಕೂಡಲೇ, ಎಲ್ಲರೂ ಯೇಸು ಯೇಸು ಎಂದು ಹೇಳಿ ಕರೆಯಿರಿ ಎಂದರು. ಇದನ್ನು ಕೆಲವರು ಇವರು ಏಕೆ ಪ್ರಸಂಗ ಮಾಡುವುದನ್ನು ಬಿಟ್ಟು ಬಿಟ್ಟು ಚಿಕ್ಕ ಮಕ್ಕಳಂತೆ ವರ್ತಿಸುತ್ತಿದ್ದಾರೆ ಎಂದರು. ಹೀಗೆ ಐದು ನಿಮಿಷ ಕಳೆಯಿತು. ಆಗ ಅಲ್ಲಿ ಒಂದು ದಿವ್ಯ ಮಹಿಮೆಯು ಇಳಿಯಿತು. ಆ ಗುಂಪಿನಲ್ಲಿ ಅನೇಕರಲ್ಲಿದ್ದ ಅಶುದ್ಧಾತ್ಮಗಳು ಕಿರುಚುತ್ತಾ ಓಡಿಹೋದವು. ಹಲವರ ಕಾಯಿಲೆಗಳು ವಾಸಿಯಾದವು. ಅನೇಕರು ಯೇಸುವನ್ನು ಸ್ವಂತ ರಕ್ಷಕನಾಗಿ ಸ್ವೀಕರಿಸಿದರು ಮತ್ತು ದೊಡ್ಡ ರಕ್ಷಣೆಯನ್ನು ಪಡೆದು ಕೊಂಡರು. ಬಳಿಕ ದೇವರ ಕೃಪೆಯಿಂದ ವಿಶೇಷ ಸಂದೇಶವನ್ನು ನೀಡಿದರು.
ಯೇಸು ಕ್ರಿಸ್ತನು ನಮಗಾಗಿ ದೊಡ್ಡ ಸಹಾಯವನ್ನು ಮಾಡುತ್ತಾರೆ. ಅದೇನಂದರೆ, ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿದ್ದಾರೆ. ಹೌದು, ಒಟ್ಟಾರೆಯಾಗಿ ಬೈಬಲ್‌ನಲ್ಲಿ, ತಮ್ಮ ಓಟದಲ್ಲಿ ಕರ್ತನಿಗಾಗಿ ವಿಜಯಶಾಲಿಗಳಾಗಿ ಓಡಿ ಮುಗಿಸಿದವರ ಜೀವನದಲ್ಲಿ ಬಲಹೀನತೆ, ಅಂಗವೈಕಲ್ಯ, ದಣಿವು ಮತ್ತು ಬಿಕ್ಕಟ್ಟು ಗಳಂತಹ ಕಷ್ಟಕರವಾದ ಸಂದರ್ಭಗಳು ಬಂದಾಗಲೂ ಎಲ್ಲಾ ವಿಜಯಶಾಲಿಗಳು ತಮ್ಮ ಅಸಾಮರ್ಥ್ಯವನ್ನು ದೇವರ ಬಳಿ ಒಪ್ಪಿಕೊಂಡು, ಸತತವಾಗಿ ಗೆಲುವಿನೊಂದಿಗೆ ಓಡಿ ಮುಗಿಸಿದರು. ಅವರು ಹಾಗೆ ಓಡುವಾಗ, ಅನೇಕರು ಅವರ ನಂಬಿಕೆಯನ್ನು ನೋಡಿ ಅವರನ್ನು ದೂಷಿಸಿ ಹಿಂಸಿಸಿ ಕೇವಲವಾಗಿ ನೆನೆಸಿ ಅಪಹಾಸ್ಯ ಮಾಡಿದರು. ಆದರೂ ಇದೆಲ್ಲವನ್ನೂ ಮೀರಿ ದೇವರ ಕಡೆಗೆ ನೋಡಿ ಅವರು ಅವರನ್ನು ನಾಚಿಕೆಪಡಿಸಲೇ ಇಲ್ಲ. ಅವರು ಬಿದ್ದಾಗಲೂ ಅವರನ್ನು ಮೇಲಕ್ಕೆತ್ತಿ ನಿಲ್ಲಿಸಿ ಸರಿಪಡಿಸಿ ಜಯವನ್ನು ಕೊಟ್ಟರು.
ಪ್ರಿಯರೇ! ಈ ವರ್ಷದ ಆರಂಭದಲ್ಲಿ ನೀವು ಸಹ ಅನೇಕ ನಿರ್ಧಾರಗಳನ್ನು ತೆಗೆದುಕೊಂಡಿರಬಹುದು. ಒಳ್ಳೆಯದು ದೇವರು ನಿಮ್ಮನ್ನು ಆಶೀರ್ವದಿಸಲಿ. ನೀವು ಕೇವಲ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅವರ ಶಕ್ತಿಯಿಲ್ಲದೆ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಹಿಂದಿನ ವರ್ಷಗಳಲ್ಲಿ ನೀವು ತೆಗೆದುಕೊಂಡ ನಿರ್ಧಾರಗಳಲ್ಲಿ ನೀವು ಸೋಲನ್ನು ಕಂಡಿರಬಹುದು. ಆದರೆ ಆಯಾಸಗೊಳ್ಳಬೇಡಿರಿ. ನಾವು ಮೇಲೆ ನೋಡಿದ ಬೋಧಕರಂತೆಯೇ, ಯೇಸುವಿಗೆ ಮೊದಲ ಸ್ಥಾನವನ್ನು ಕೊಟ್ಟು ಅವರಿಗಾಗಿ ಎಲ್ಲವನ್ನೂ ಮಾಡಿರಿ. ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವಾತನು ನಿಮಗಾಗಿ ಜಯಧ್ವಜವನ್ನು ಎತ್ತುತ್ತಾರೆ.
- S. ಮನೋಜಕುಮಾರ್
ಪ್ರಾರ್ಥನಾ ಅಂಶ:
"ಮೋಕ್ಷ ಪ್ರಯಾಣ" ಮುದ್ರಣಕ್ಕೆ ಪ್ರತಿ ತಿಂಗಳು ಬಹು ದೊಡ್ಡ ಹಣದ ಅಗತ್ಯವಿದೆ. ಅಗತ್ಯಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482