Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.01.2022
Share:

By Village Missionary Movement

Friday, 07-Jan-2022

ಧೈನಂದಿನ ಧ್ಯಾನ(Kannada) – 07.01.2022

 

ಪರಿಶುದ್ಧತೆ

 

 "...ನಾನು ನಿಮ್ಮನ್ನು ಪರಿಶುದ್ಧ ಜನವಾಗುವಂತೆ ಮಾಡುವ ಯೆಹೋವನು” - ಯಾಜಕಕಾಂಡ 20:8

 

19ನೇ ಶತಮಾನದಲ್ಲಿ ಜಾಫ್ನಾದಲ್ಲಿ ಇಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಮಣಿಯನ್ ಅವರನ್ನು ಬಂಧಿಸಿ ಜೈಲಿನಲ್ಲಿರಿಸಲಾಗಿತ್ತು. ನ್ಯಾಯಾಧೀಶರು ಆತನನ್ನು ಗಲ್ಲಿಗೇರಿಸಲು ಆದೇಶಿಸಿದರು. ಆ ದಿನಗಳಲ್ಲಿ, ಬ್ರಿಕೆನ್ರಿಡ್ಜ್ ಎಂಬವರು ಶ್ರೀಲಂಕಾದ ಜೈಲು ಕೈದಿಗಳ ನಡುವೆ ಸೇವೆ ಮಾಡುತ್ತಿದ್ದರು. ಬ್ರಿಕೆನ್ರಿಡ್ಜ್ ಸಾರಿದ ಸುವಾರ್ತೆಯ ಮೂಲಕ, ಸುಬ್ರಮಣಿಯನ್ ಯೇಸುವನ್ನು ತನ್ನ ಸ್ವಂತ ರಕ್ಷಕನಾಗಿ ಸ್ವೀಕರಿಸಿ, ನನ್ನನ್ನು ಪ್ರೀತಿಸಲೂ ಒಬ್ಬರಿದ್ದಾರೆ ಅವರೇ ಯೇಸು ಎಂಬ ನಂಬಿಕೆಯಿಂದ ಬೈಬಲ್ ಅನ್ನು ಓದಲು ಪ್ರಾರಂಭಿಸಿದರು, ಯೇಸು ಕ್ರಿಸ್ತನು ನನ್ನ ಎಲ್ಲಾ ಪಾಪಗಳನ್ನು ಕ್ಷಮಿಸಿದ್ದಾರೆ ಎಂದು ಪಾಪ ಕ್ಷಮಾಪಣೆಯನ್ನು ಖಚಿತಪಡಿಸಿಕೊಂಡು ನಿಜವಾದ ಸಮಾಧಾನವನ್ನು ಅನುಭವಿಸಿದ ವ್ಯಕ್ತಿಯಾಗಿ, ತಾನು ರುಚಿ ನೋಡಿದ ದೇವರ ಪ್ರೀತಿಯನ್ನು ಮತ್ತೊಬ್ಬರಿಗೆ ಸಾಕ್ಷಿಯಾಗಿ ಹಂಚಿಕೊಂಡರು. ಇವರು ಯೇಸುಕ್ರಿಸ್ತನನ್ನು ತನ್ನ ಸ್ವಂತ ರಕ್ಷಕನಾಗಿ ಅಂಗೀಕರಿಸಿ ಮರಣದ ಭಯವಿಲ್ಲದೆ ಮರಣದಂಡನೆಯನ್ನು ಧೈರ್ಯದಿಂದ ಎದುರಿಸಿದರು. ಅವರು ಸಾಯುವ ಮೊದಲು ಯೇಸು ಪ್ರೀತಿಸುತ್ತಿದ್ದಾರೆ ಎಂಬ ಕೀರ್ತನೆಯ ಹಾಡನ್ನು ಬರೆದರು. ಈ ಹಾಡನ್ನು ಇಂದಿಗೂ ಚರ್ಚ್‌ಗಳಲ್ಲಿ ಹಾಡಲಾಗುತ್ತಿದೆ ಮತ್ತು ಕರ್ತನ ನಾಮವು ಮಹಿಮೆ ಹೊಂದುತ್ತಿದೆ.

 

ಪರಿಶುದ್ಧ ಗ್ರಂಥದಲ್ಲಿ ಅಪೊಸ್ತಲನಾದ ಪೌಲನೂ, ಸೀಲನೂ ಸುವಾರ್ತೆಯನ್ನು ಪ್ರಕಟಿಸುತ್ತಿದ್ದಾರೆ ಎಂಬುದಕ್ಕಾಗಿ ಇವರನ್ನು ಸೆರೆಮನೆಯಲ್ಲಿ ಬಂಧಿಸಲಾಯಿತು. ಇವರು ಸೆರೆಮನೆಯಲ್ಲಿ ಪ್ರಾರ್ಥಿಸಿದಾಗ, ದೇವರು ಇವರ ಎಲ್ಲಾ ಬೇಡಿಗಳನ್ನು ತೆಗೆದುಹಾಕಿದರು. ಆಗ ಸೆರೆಯ ಯಜಮಾನನು ನಿದ್ರೆಯಿಂದ ಎಚ್ಚತ್ತು, ಸೆರೆಯಲ್ಲಿದ್ದವರು ಓಡಿಹೋದರೆಂದು ಭಾವಿಸಿ, ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದನು. ಈ ಪರಿಸ್ಥಿತಿಯಲ್ಲಿ ಪೌಲನು, ಅವನನ್ನು ತಡೆದು ಸೆರೆಯ ಯಜಮಾನನಿಗೆ ಸುವಾರ್ತೆಯನ್ನು ಬೋಧಿಸಿದರು. ಇದರಿಂದಾಗಿ ಅವನು ಮಾನಸಾಂತರ ಹೊಂದಿ, ಯೇಸುವನ್ನು ಅಂಗೀಕರಿಸಿ, ತನ್ನ ಮನೆಯವರೆಲ್ಲರು ರಕ್ಷಣೆ ಹೊಂದಲು ಅನುಕೂಲವಾದ ಕಾರ್ಯವನ್ನು ಮಾಡಿದರು.

 

ಇದನ್ನು ಓದುತ್ತಿರುವ ಪ್ರಿಯರೇ! ನೀವು ಎಷ್ಟು ದೊಡ್ಡ ಪಾಪಗಳನ್ನು ಮಾಡಿದ್ದರೂ ಸರಿ ಅಥವಾ ಎಷ್ಟು ದೊಡ್ಡ ಅಪರಾಧವನ್ನು ಮಾಡಿದ್ದರೂ ಸರಿ, ಯೇಸುವೇ ನನ್ನ ಪಾಪಗಳನ್ನು ಕ್ಷಮಿಸಿ, ನನ್ನನ್ನು ಪರಿಶುದ್ಧಗೊಳಿಸಿ ಎಂದು ಕೇಳುವಾಗ ಯೇಸು ನಮ್ಮ ಎಲ್ಲಾ ಪಾಪಗಳನ್ನು ಕ್ಷಮಿಸಿ ನಮ್ಮನ್ನು ಪರಿಶುದ್ಧಪಡಿಸುವ ದೇವರಾಗಿದ್ದಾರೆ. ನಮ್ಮ ಪಾಪಗಳಿಗಾಗಿ ಶಿಲುಬೆಗೇರಿಸಲ್ಪಟ್ಟರು. ಏಕೆಂದರೆ ಅವರ ಪರಿಶುದ್ಧ ರಕ್ತದಿಂದ ಪಾಪಗಳನ್ನು ತೊಳೆದು ಪರಿಶುದ್ಧಗೊಳಿಸಿ ನಮ್ಮನ್ನು ಒಂದು ಹೊಸ ಮನುಷ್ಯನನ್ನಾಗಿ ಪರಿವರ್ತಿಸುವವರು ಯೇಸು ಕ್ರಿಸ್ತನು ಮಾತ್ರವೇ. ನೀವು ಯೇಸು ಕ್ರಿಸ್ತನನ್ನು ಅಂಗೀಕರಿಸಿ, ಪಾಪಗಳು ತೊಳೆಯಲ್ಪಟ್ಟು ಮರಣಕ್ಕೆ ಭಯಪಡದ ಹೊಸ ಜೀವನವನ್ನು ಪ್ರಾರಂಭಿಸಿರಿ.

- P.V. ವಿಲಿಯಮ್ಸ್

 

ಪ್ರಾರ್ಥನಾ ಅಂಶ:

"ಮೋಕ್ಷ ಪ್ರಯಾಣ" ಪತ್ರಿಕೆಯ ಸಂಪಾದಕರು ಮತ್ತು ಸಹ ಸೇವಕರುಗಳನ್ನು ದೇವರು ವಿಶೇಷವಾದ ಜ್ಞಾನದಿಂದ ತುಂಬಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş meritking meritking giriş meritking güncel giriş betcio betcio giriş perabet perabet perabet giriş deneme bonusu deneme bonusu veren siteler bahissenin bahissenin güncel giriş bahissenin giriş superbetin giriş superbetin giriş süperbetin betsat betsat betsat giriş betsat güncel giriş alobet alobet giriş meritking güncel giriş Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş safirbet safirbet giriş safirbet güncel giriş dumanbet giriş dumanbet dumanbet güncel giriş vaycasino vaycasino giriş vaycasino güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş kingroyal kingroyal giriş kingroyal güncel giriş