By Village Missionary Movement
Thursday, 06-Jan-2022ಧೈನಂದಿನ ಧ್ಯಾನ(Kannada) – 06.01.2022
ಎಲ್ಲಾದಕ್ಕೂ ಸಿದ್ಧವಾಗಿರುವವನು
"ಅಗೋ, ಆಕಾಶವು ತೆರೆದಿರುವದನ್ನೂ ಮನುಷ್ಯಕುಮಾರನು ದೇವರ ಬಲಗಡೆಯಲ್ಲಿ ನಿಂತಿರುವದನ್ನೂ ನೋಡುತ್ತೇನೆ ಎಂದು ಹೇಳಿದನು." - ಅಪೊ. 7:56
ಕ್ರಿಮಿಯನ್ ಯುದ್ಧದಲ್ಲಿ ಬ್ರಿಟಿಷರು ಗೆದ್ದಿದ್ದರಿಂದ ಲಂಡನ್ ನಗರವೇ ಹಬ್ಬದ ಸಂಭ್ರಮದಲ್ಲಿತ್ತು. ರಾಣಿ ವಿಕ್ಟೋರಿಯಾ ಯುದ್ಧದಲ್ಲಿ ಅಪರೂಪದ ವೈಶಿಷ್ಟ್ಯಗಳನ್ನು ಪ್ರದರ್ಶಿಸಿದ ಸೈನಿಕರಿಗೆ ಚಿನ್ನದ ಪದಕಗಳನ್ನು ನೀಡಿದರು. ಆದಾಗ್ಯೂ, ಕೆಲವು ಸೈನಿಕರು ತಮ್ಮ ಕೈ ಮತ್ತು ಕಾಲುಗಳಿಗೆ ದೊಡ್ಡ ಬ್ಯಾಂಡೇಜ್ಗಳೊಂದಿಗೆ ಬಂದರು. ಕೆಲವರು ಕೋಲುಗಳನ್ನು ಹಿಡಿದು ಕುಂಟುತ್ತಾ ಬಂದರು. ಮುಗುಳ್ನಗೆಯೊಂದಿಗೆ ರಾಣಿ ವಿಕ್ಟೋರಿಯಾ ಎಲ್ಲರನ್ನೂ ಪ್ರೋತ್ಸಾಹಿಸಿದರು ಮತ್ತು ಉಡುಗೊರೆಗಳನ್ನು ನೀಡಿದರು. ಅಂತಿಮವಾಗಿ, ಒಬ್ಬ ವ್ಯಕ್ತಿಯನ್ನು ನಾಲ್ಕು ಜನರು ಹೊತ್ತುಕೊಂಡು ಬಂದರು. ಅವನು ಯುದ್ಧದಲ್ಲಿ ಕೌಶಲ್ಯದಿಂದ ಹೋರಾಡಿದ ಯೋಧ. ಅದರಲ್ಲಿ ಅವನು ಎರಡೂ ಕಾಲುಗಳು ಮತ್ತು ಎರಡೂ ಕೈಗಳನ್ನು ಕಳೆದುಕೊಂಡನು. ಅವನ ಮುಖ ವಿಕಾರವಾಗಿ ಅಸಹ್ಯವಾಗಿತ್ತು.
ರಾಣಿ ವಿಕ್ಟೋರಿಯಾ, ಗಂಭೀರವಾಗಿ ಅವನ ಬಳಿಗೆ ಬಂದರು. ದೊಡ್ಡ ಚಿನ್ನದ ಪದಕವನ್ನು ಕೊಟ್ಟರು. ಅಷ್ಟೇ ಅಲ್ಲ, ಬಾಗಿ ಅವನ ಹಣೆಗೆ ಮುತ್ತಿಟ್ಟು, "ಒಳ್ಳೆಯದು, ನಂಬಿಗಸ್ತನಾದ ನಿಷ್ಠಾವಂತ ಸೇವಕನೇ!" ಎಂದು ಕರೆದರು. ಅವನ ಹೃದಯವು ಸಂತೋಷದಿಂದ ತುಂಬಿತು. ತನ್ನ ನೋವನ್ನೆಲ್ಲ ಮರೆತು ಹೋದನು. ಸ್ತೆಫನನ ಮೇಲೆ ಕಲ್ಲೆಸೆಯುತ್ತಾ ಇರಲು ತನ್ನ ಶರೀರದಲ್ಲೆಲ್ಲಾ ರಕ್ತ ಹರಿಯುತ್ತಿದ್ದಾಗ ವೇದನೆಯೊಂದಿಗೆ ಆಕಾಶವನ್ನು ದೃಷ್ಟಿಸಿ ನೋಡಿ ದೇವರ ಬಲಗಡೆಯಲ್ಲಿ ನಿಂತಿರುವ ಯೇಸುವನ್ನು ಕಂಡಾಗ, ಅವರು ಅವನನ್ನು ಸ್ವಾಗತಿಸುತ್ತಿದ್ದಂತೆ ಇತ್ತು ಆ ದೃಶ್ಯ. ಆಗ ಕರ್ತನಾದ ಯೇಸುವಿಗೆ ನನ್ನಾತ್ಮವನ್ನು ಸೇರಿಸಿಕೋ ಎಂದು ಸ್ತೆಫನನು ಪ್ರಾರ್ಥಿಸಿದನು.
ಇದನ್ನು ಓದುತ್ತಿರುವ ಸ್ನೇಹಿತರೇ! ಇಂದು ನಮ್ಮ ಬಗ್ಗೆ ಏನು ಸಾಕ್ಷಿ ಇದೆ? ಯೋಚಿಸೋಣ. ಈ ಭೂಮಿಯಲ್ಲಿ ದೇವರ ರಾಜ್ಯವನ್ನು ಸ್ಥಾಪಿಸಲು ನಾವು ಧೈರ್ಯದಿಂದ ನಿಂತುಕೊಳ್ಳುವುದು ಬಹಳ ಮುಖ್ಯ. ನಾವು ಇರುವ ಸ್ಥಳಗಳಲ್ಲಿ, ಕೆಲಸದ ಸ್ಥಳಗಳಲ್ಲಿ, ಯೇಸುವಿನ ಹೆಸರನ್ನು ಪ್ರಕಟಿಸಲು, ಮಹಿಮೆ ಪಡಿಸಲು ನಾವು "ಏನು ಕಳೆದುಕೊಂಡರೂ ಪರವಾಗಿಲ್ಲ" ಎಂದು ಧೈರ್ಯದಿಂದ ನಿಲ್ಲೋಣ! ಒಂದು ರಾಷ್ಟ್ರದ ವಿಜಯಕ್ಕಾಗಿ ಒಬ್ಬ ಮನುಷ್ಯನು ತನ್ನ ಕೈಕಾಲುಗಳನ್ನು ಕಳೆದುಕೊಳ್ಳುವ ಧೈರ್ಯವನ್ನು ಮಾಡಿದರೆ, ನಮ್ಮ ದೇವರ ಪರಲೋಕರಾಜ್ಯದ ಮಹಿಮೆಗಾಗಿ ನಾವು ಕೂಡ ಕೆಲವು ಕಾರ್ಯಗಳನ್ನು ಕಳೆದುಕೊಳ್ಳಲು ಧೈರ್ಯವಾಗಿ ನಿಲ್ಲೋಣ!
- Mrs. ಜಾಸ್ಮಿನ್ ಪಾಲ್
ಪ್ರಾರ್ಥನಾ ಅಂಶ:
ಈ ಸೇವೆಯ ಸ್ಥಾಪಕರು ಸಹೋ. ಡೇವಿಡ್ ಗಣೇಶನ್ ರವರನ್ನು ದೇವರು ಶಕ್ತಿಯುತವಾಗಿ ಉಪಯೋಗಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482