By Village Missionary Movement
Wednesday, 05-Jan-2022ಧೈನಂದಿನ ಧ್ಯಾನ(Kannada) – 05.01.2022
ಹೊಸ ಕಾರ್ಯ
"ಇಗೋ, ಹೊಸ ಕಾರ್ಯವನ್ನು ಮಾಡುವೆನು, ಈಗ ತಲೆದೋರುತ್ತಲಿದೆ,..." - ಯೆಶಾಯ 43:19
ಎಪ್ಪತ್ತು ವರ್ಷಗಳ ಹಿಂದಿನ ಸತ್ಯ ಘಟನೆ:-
ಜೋಸೆಫ್-ಕ್ರಿಸ್ಟಿಪದ್ಮ ದಂಪತಿಗಳಿಗೆ ಸುಮಾರು 12 ವರ್ಷಗಳಿಂದ ಮಕ್ಕಳಿರಲಿಲ್ಲ. ವೈದ್ಯರು, "ನಿಮಗೆ ಮಗು ಆಗುವುದಿಲ್ಲ" ಎಂದು ಹೇಳಿಬಿಟ್ಟರು. ಜೋಸೆಫ್ ಅವರ ಸಹೋದರಿ, ಎಬಿನೇಜರ್ ಎಂಬ ಸೇವೆ ಮಾಡುವ ತಾಯಿಯನ್ನು ತನ್ನ ಸಹೋದರನ ಮನೆಗೆ ಕಳುಹಿಸಿದರು. ಎಬಿನೇಜರ್ ತಾಯಿ ಜೋಸೆಫ್ ಕ್ರಿಸ್ಟಿ ಇವರಿಬ್ಬರ ತಲೆಯ ಮೇಲೆ ತನ್ನ ಎರಡೂ ಕೈಗಳನ್ನು ಇಟ್ಟು ಪ್ರಾರ್ಥಿಸಿದರು. ಆಮೇಲೆ, "10ನೇ ತಿಂಗಳಲ್ಲಿ ಒಂದು ಹೆಣ್ಣು ಮಗು ಜನಿಸುತ್ತದೆ" ಎಂದು ಹೇಳಿ ಹೋದರು. ಯೇಸುವನ್ನು ತಿಳಿಯದ ಕುಟುಂಬದಲ್ಲಿ ಹುಟ್ಟಿ ಬೆಳೆದು, ಯೇಸು ಕ್ರಿಸ್ತನನ್ನು ಸ್ವೀಕರಿಸಿದ ಕ್ರಿಸ್ಟಿಪದ್ಮ, "ಯೇಸು ಪ್ರಭು ನನಗೆ ಮಗುವನ್ನು ಕೊಡುತ್ತಾರೆ" ಎಂದು ನಂಬಿದಳು. ಆದರೆ ಕ್ರೈಸ್ತ ಕುಟುಂಬದಲ್ಲಿ ಹುಟ್ಟಿ ಬೆಳೆದ ಜೋಸೆಫ್, “ಡಾಕ್ಟರ್ ಆಗಲ್ಲ ಎಂದು ಹೇಳಿ ಬಿಟ್ಟರು. ಈ ತಾಯಿ ತಲೆಯ ಮೇಲೆ ಕೈಯಿಟ್ಟರೆ ಮಗು ಆಗುತ್ತದಾ? 10ನೇ ತಿಂಗಳಲ್ಲಿ ಹೆಣ್ಣು ಮಗು ಜನಿಸುತ್ತದೆ ಎಂದು ಹೇಳುತ್ತಿದ್ದಾರೆ. ಸರಿ, ನೋಡೋಣ ನಾನು ದಿನಾಂಕವನ್ನು ಬರೆದಿಡುತ್ತೇನೆ” ಎಂದರು. ಕರ್ತನ ಮಾತೇ ಮಾತು. ಕ್ರಿಸ್ಟಿ ಗರ್ಭಧರಿಸಿದರು. 10ನೇ ತಿಂಗಳಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ನಂಬಿಕೆಯಲ್ಲಿ ಬೇರೂರುವಂತೆ ಆ ಮಗುವನ್ನು ಬೆಳೆಸಿದಳು. ಆ ಮಗು ದೇವರ ಸೇವೆ ಮಾಡುವ ಸೇವಕಿಯಾದಳು.
ನಿಮ್ಮ ಜೀವನದಲ್ಲಿಯೂ ಎಷ್ಟೋ ಕೊರತೆಗಳಿರಬಹುದು. ಅವಶ್ಯಕತೆಗಳು ಇರಬಹುದು. ದೀರ್ಘಕಾಲದ ಅನಾರೋಗ್ಯ, ಸಾಲದ ಹೊರೆ, ಮಗನಿಗೆ ಕೆಲಸ, ಮಗಳಿಗೆ ಮದುವೆ ಹೀಗೆ ಹಲವು ಅಗತ್ಯಗಳು ಇರಬಹುದು. ಚಿಂತಿಸಬೇಡಿರಿ. ಕರ್ತನನ್ನು ಮಾತ್ರ ಅವಲಂಬಿಸಿರಿ. ಮನಸಾರೆ ಅವರನ್ನು ಸ್ತುತಿಸಿರಿ. ಅಗತ್ಯಗಳ ಬಗ್ಗೆ ಗೊಣಗದೆ ಅವರು ಮಾಡಿದ ಉಪಕಾರಗಳಿಗಾಗಿ ಮತ್ತು ಇನ್ನು ಮುಂದೆ ಮಾಡಲಿರುವ ಉಪಕಾರಗಳಿಗಾಗಿ ಕೃತಜ್ಞತೆಯುಳ್ಳ ಹೃದಯದೊಂದಿಗೆ ಸ್ತುತಿಸಿರಿ.
ದೇವರಾದ ಕರ್ತನು ಅರಣ್ಯದಲ್ಲಿ ಮಾರ್ಗವನ್ನು ಮತ್ತು ಮರುಭೂಮಿಯಲ್ಲಿ ನದಿಗಳನ್ನು ಉಂಟು ಮಾಡುವರು. ಕುರಿಗಳನ್ನು ಮೇಯಿಸುತ್ತಿದ್ದ ದಾವೀದನು ಇಸ್ರಾಯೇಲ್ಯರ ಚಕ್ರವರ್ತಿಯಾದನು. ಅನಾಥಳಾಗಿದ್ದ ಎಸ್ತೇರ್ 127 ಸಂಸ್ಥಾನಗಳಿಗೆ ರಾಣಿಯಾದಳು. ಅನ್ಯ ದೇಶದವಳಾದ ರೂತಳು ಯೇಸುಕ್ರಿಸ್ತನ ಪೂರ್ವಜಳಾದಳು. ಅವರೆಲ್ಲರನ್ನು ಹೆಚ್ಚಿಸಿದ ದೇವರು ಈ ಹೊಸ ವರ್ಷದಲ್ಲಿ ನಿಮ್ಮ ಜೀವನದಲ್ಲಿಯೂ ಹೊಸ ಕಾರ್ಯವನ್ನು ಮಾಡುತ್ತಾರೆ. ಅದ್ಭುತವಾಗಿ ಆಶೀರ್ವದಿಸುತ್ತಾರೆ.
- Mrs. ವನಜಾ ಪಾಲ್ ರಾಜ್
ಪ್ರಾರ್ಥನಾ ಅಂಶ:
ಈ ಹೊಸ ವರ್ಷದಲ್ಲಿ ಸೇವೆಯು ಎಲ್ಲೆಡೆ ವಿಸ್ತರಿಸುವಂತೆ, ದೇವರು ಕೊಟ್ಟ ಯೋಜನೆಗಳು ತಡೆಯಿಲ್ಲದೆ ನೆರವೇರುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482