Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.01.2022
Share:

By Village Missionary Movement

Tuesday, 04-Jan-2022

ಧೈನಂದಿನ ಧ್ಯಾನ(Kannada) – 04.01.2022

 

ಸಹಾಯಕನು

 

 "...ಭಯಪಡಬೇಡ; ನಾನೇ ನಿನಗೆ ಸಹಾಯ ಮಾಡುತ್ತೇನೆಂದು ಕರ್ತನೂ ನಿನ್ನ ವಿಮೋಚಕನೂ ಇಸ್ರಾಯೇಲಿನ ಪರಿಶುದ್ಧನೂ ಹೇಳುತ್ತಾನಲ್ಲಾ!" - ಯೆಶಾಯ 41:13

 

ಜಾನ್ ಎಂಬ ಹುಡುಗ ತನ್ನ ಮನೆಯ ಮಹಡಿಯ ಮೇಲೆ ಹತ್ತಿ ಆಟವಾಡುತ್ತಿದ್ದನು. ಇದ್ದಕ್ಕಿದ್ದಂತೆ ಅವನ ತಂದೆ ಕೆಳಗಿನಿಂದ ಜಾನ್ ಕೆಳಗೆ ಜಿಗಿದು ಬಿಡು ಎಂದು ಹೇಳಿದರು. ತಕ್ಷಣ ಜಾನ್ ಕೆಳಕ್ಕೆ ಜಿಗಿದು ಬಿಟ್ಟನು. ತಂದೆ ದೊಡ್ಡ ಬಲೆ ಹಾಕಿ ಅವನನ್ನು ಹಿಡಿದರು. ಏಕೆಂದರೆ ವಿದ್ಯುತ್ ಸ್ಪರ್ಶದಿಂದ ವಿದ್ಯುತ್ ಕಂಬಕ್ಕೆ ಬೆಂಕಿ ಹೊತ್ತಿಕೊಂಡಿತು. ಆತನನ್ನು ರಕ್ಷಿಸಲೆಂದೇ ತಂದೆ ಹಾಗೆ ಹೇಳಿದರು. ಜನರು ಹೇಗೆ ಜಿಗಿದೆ ಎಂದು ಜಾನ್ ಬಳಿ ಕೇಳಿದರು. "ಜಿಗಿದು ಬಿಡು" ಎಂದು ಕೇಳಿದ್ದು ನನ್ನ ಅಪ್ಪನ ಧ್ವನಿಯಲ್ಲವೇ? ಎಂದನು. “ನನ್ನ ತಂದೆ ನನ್ನ ರಕ್ಷಕ. ಅವರು ತಪ್ಪಾಗಿ ಏನನ್ನೂ ಹೇಳುವುದಿಲ್ಲ. ” ಎಂದನು.

 

ಇದೇ ರೀತಿಯಲ್ಲಿ, ನಾವು ಸತ್ಯವೇದವನ್ನು ಓದುವಾಗ ದೇವರು ನಮ್ಮೊಂದಿಗೆ ಮಾತನಾಡುವ ವಿಷಯಗಳನ್ನು ಅದೇ ರೀತಿ ನಂಬಿ ಭರವಸೆಯಿಡುವಾಗ, ನಮ್ಮ ಜೀವನದಲ್ಲಿ ಆಶೀರ್ವಾದ ಉಂಟಾಗುತ್ತದೆ. ನಮ್ಮ ಜೀವನದಲ್ಲಿ ಪಾಪ ಮತ್ತು ಅಪಾಯದಿಂದ ಪಾರಾಗಬಹುದು. ಇಂದಿಗೂ ನಮ್ಮ ದೇವರು ನಮ್ಮ ಬಲಗೈ ಹಿಡಿದು ನಾನು ನಿನಗೆ ಸಹಾಯ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಈ ವರ್ಷವಿಡೀ ನಮ್ಮ ದೇವರು ನಮ್ಮ ಸಹಾಯಕನಾಗಿದ್ದರೆ ನಾವು ಎಷ್ಟು ಸಂತೋಷಪಡುತ್ತೇವೆ. ಈ ವರ್ಷಪೂರ್ತಿ ನಾವು ನಮ್ಮ ದೇವರನ್ನು ನಮ್ಮ ಸಹಾಯಕನೆಂದು ನಂಬಿ ಭರವಸೆಯಿಟ್ಟರೆ ಅವರು ಎಲ್ಲಾ ವಿಷಯಗಳಲ್ಲಿ ನಮಗೆ ಸಹಾಯಕನಾಗಿದ್ದು ನಡೆಸುತ್ತಾರೆ. ಮನುಷ್ಯರನ್ನು ನಂಬಿದರೆ ಕೆಲವು ವಿಷಯಗಳನ್ನು ನಿಭಾಯಿಸಲು ಸಾಧ್ಯವಾಗದಿರಬಹುದು. ಆದರೆ ನಾವು ನಮ್ಮ ದೇವರನ್ನು ಸಹಾಯಕನಾಗಿ ಮಾಡಿಕೊಂಡರೆ ಆತನು ಸರ್ವಶಕ್ತನು ಎಲ್ಲವನ್ನೂ ಸುಲಭವಾಗಿ ಮತ್ತು ಉತ್ತಮವಾಗಿ ಮಾಡಿ ಮುಗಿಸುತ್ತಾರೆ. ದೇವರು ನಮ್ಮ ಸಹಾಯಕನಾಗಿದ್ದರೆ ಎಷ್ಟು ದೊಡ್ಡ ಬಲ!

 

ಪ್ರಿಯರೇ! ಈ ವರ್ಷವನ್ನು ಹೇಗೆ ಭೇಟಿಯಾಗುವುದು? ಈ ವರ್ಷವೂ ಇದೇ ಬಲಹೀನತೆಯಿಂದ ಇರಬೇಕಾ? ಈ ಪರಿಸ್ಥಿತಿ ಬದಲಾಗುವುದಿಲ್ಲವಾ? ಎಂಬ ಪ್ರಶ್ನೆಗಳೊಂದಿಗೆ ಇದ್ದೀರಾ? ನಿಮ್ಮನ್ನು ನೋಡಿ ದೇವರು, "ನಾನು ನಿನ್ನ ಬಲಗೈಯನ್ನು ಹಿಡಿದು, ಭಯಪಡಬೇಡ, ನಾನು ನಿನಗೆ ಸಹಾಯ ಮಾಡುತ್ತೇನೆ" ಎಂದು ಹೇಳುತ್ತಿದ್ದಾರೆ. ಅವರು ನಿಮಗೆ ಸಹಾಯಕನಾಗಿ ಇದ್ದರೆ ಈ ಪರಿಸ್ಥಿತಿ, ಸಮಸ್ಯೆಯಷ್ಟೇ ಅಲ್ಲ, ಯಾವುದೇ ಪರಿಸ್ಥಿತಿಯನ್ನು, ಯಾವುದೇ ಸಮಸ್ಯೆಯನ್ನು ನಿಭಾಯಿಸಬಹುದು. ಏಕೆಂದರೆ ನಮ್ಮ ದೇವರು ದೊಡ್ಡವನು ಆತನ ಮುಂದೆ ನಮ್ಮ ಸಮಸ್ಯೆಗಳು ಚಿಕ್ಕದಾಗಿ ಕಾಣುತ್ತವೆ. ಆತನು ಸರ್ವಶಕ್ತನು ಆತನಿಗೆ ಅಸಾಧ್ಯವಾದದ್ದೊಂದೂ ಇಲ್ಲ. ಈ ವಾಕ್ಯವನ್ನು ಹಿಡಿದುಕೊಂಡು ಪ್ರಾರ್ಥಿಸಿರಿ ನಮ್ಮ ಜೀವನದಲ್ಲಿ ಜಯವನ್ನು ಪಡೆಯೋಣ. ಹಲ್ಲೇಲೂಯ!

- Mrs. ಅನ್ಬುಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

ಈ ವರ್ಷದ ದರ್ಶನದಂತೆ ಸೇವೆಯ ಎಲ್ಲೆಡೆ ಪರಿಶುದ್ಧತೆ ಕಾಣಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al