Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.01.2022
Share:

By Village Missionary Movement

Monday, 03-Jan-2022

ಧೈನಂದಿನ ಧ್ಯಾನ(Kannada) – 03.01.2022

 

ಕರ್ತನಿಗೆ ಪರಿಶುದ್ಧವು

 

"ಆ ದಿನದಲ್ಲಿ ಕುದುರೆಗಳ ಗೆಜ್ಜೆಗಳ ಮೇಲೆ ಕರ್ತನಿಗೆ ಪರಿಶುದ್ಧವು ಎಂದಿರುವದು;..." - ಜೆಕರ್ಯ 14:20

 

ನಮ್ಮ ಕರ್ತನು ಪರಿಶುದ್ಧನು! ಅವರು ವಾಸಿಸುವ ಸ್ಥಳವು ಪರಿಶುದ್ಧವಾಗಿದೆ. ಅವರ ಗಡಿಗಳು ಎಲ್ಲೆಡೆ ಪರಿಶುದ್ಧತೆಯಿಂದ ತುಂಬಿರುತ್ತದೆ. ನಮ್ಮ ಕರ್ತನು ಕ್ರಿಯೆ ಮಾಡಬೇಕಾದರೆ ಪರಿಶುದ್ಧತೆಯೇ ಅವರ ನಿರೀಕ್ಷೆಯ ಪ್ರಮುಖ ಭಾಗವಾಗಿದೆ. "ಕರ್ತನು ಪ್ರೀತಿಸುವ ಪರಿಶುದ್ಧತೆ" ಎಂದು ಸತ್ಯವೇದವು ಅವರ ಗುಣಾತಿಶಯದ ಬಗ್ಗೆ ಹೇಳುತ್ತದೆ. ಪರಿಶುದ್ಧತೆ ಏನೆಂದು ನೀವು ತಿಳಿಯಬೇಕಾದರೆ ಅದರ ಜೊತೆಯಲ್ಲೇ ನಮ್ಮ ದೇವರನ್ನೂ ತಿಳಿದುಕೊಳ್ಳಬಹುದು. ಎಲ್ಲಿ ಪರಿಶುದ್ಧತೆ ಇದೆಯೋ ಅಲ್ಲಿ ಕರ್ತನು ಇದ್ದಾನೆ. ಕರ್ತನು ಎಲ್ಲಿ ಇದ್ದಾನೋ ಅಲ್ಲಿ ಪರಿಶುದ್ಧತೆ ಇರುತ್ತದೆ. ನಮ್ಮ ದೇವರನ್ನು ಮತ್ತು ಪರಿಶುದ್ಧತೆಯನ್ನು ಎಂದಿಗೂ ಬೇರ್ಪಡಿಸಲಾಗುವುದಿಲ್ಲ. ಪರಿಶುದ್ಧತೆ ಎಂಬ ಮಾತು ಸತ್ಯವೇದದಲ್ಲಿ 587 ಬಾರಿ ವಿವಿಧ ಸ್ಥಳಗಳಲ್ಲಿ ಉಲ್ಲೇಖಿಸಲಾಗಿದೆ.

 

ಸಂಗೀತ ವಿಮರ್ಶಕರೊಬ್ಬರು ಅತ್ಯಂತ ಪ್ರಸಿದ್ಧ ಪಿಟೀಲು ಪ್ರತಿಭೆ ಹೊಂದಿರುವ ಇಟ್ಶಾಕ್ ಬೆಲ್ಮನ್ ಅವರನ್ನು ಹೊಗಳಿ ಬರೆಯಲು ಪದಗಳಿಲ್ಲದೆ ತವಕಿಸಿದರಂತೆ. “ಪಿಟೀಲು ನುಡಿಸಲು ಬಳಸುವ ಉದ್ದವಾದ ವಾದ್ಯದೊಂದಿಗೆ, ಮೇಲಕ್ಕೆ ಮತ್ತು ಕೆಳಕ್ಕೆ ಎಳೆಯುವ ಸಂಗೀತವು ಎಷ್ಟು ಮಧುರವಾಗಿದೆ. ಅವರ ಸಂಗೀತವು ಮಾತನಾಡುವ ಹಾಗೂ ಚಿಂತನೆಗೆ ಪ್ರತ್ಯುತ್ತರವಾಗಿಯೂ ಇದೆ” ಎಂದು ಬೆಲ್ಮನ್ ರವರ ಬಗ್ಗೆ ಹೊಗಳಿಕೆ ಮುಂದುವರೆಯಿತು. “ನಮ್ಮ ದೇವರನ್ನು ಯಾರಾದರೊಬ್ಬರು ಹೀಗೆ ಹೊಗಳಿ ಸ್ತುತಿಸುತ್ತಾರಾ ಎಂದು ಹುಡುಕುತ್ತಿದ್ದೇನೆ ಎಂದರು ಒಬ್ಬ ದೇವ ಸೇವಕರು. ಪರಿಶುದ್ಧ ಗ್ರಂಥದಲ್ಲಿ ನಮ್ಮ ದೇವರ ಪರಿಶುದ್ಧವಾದ ಅಲಂಕಾರದ ಬಗ್ಗೆ ಅನೇಕ ಸ್ಥಳಗಳಲ್ಲಿ ಸ್ತುತಿಸಿ ಬರೆದಿರುವುದನ್ನು ಓದಬಹುದು. ದೇವರಿಂದ ದೂರವಾದಾಗ ಅವರ ಸೌಂದರ್ಯ ಮತ್ತು ವೈಭವವನ್ನು ಹೊಗಳುವವರು ಅನೇಕರಿದ್ದಾರೆ. ಆದರೆ ದೇವರ ಹತ್ತಿರ ಸೇರಿ ಅವರನ್ನು ನೋಡುವಾಗ, ತಮ್ಮ ಕೈಗಳಿಂದ ಬಾಯನ್ನು ಮುಚ್ಚಿಕೊಳ್ಳುವವರಿದ್ದಾರೆ. ಅಯ್ಯೋ! ನಾನು ಸತ್ತವನಂತಾದೆನು ಎಂದು ದೇವರಿಗೆ ಮೊರೆಯಿಡುವ ಪ್ರವಾದಿಗಳಿದ್ದಾರೆ. ದೇವದೂತರೂ ತಮ್ಮ ಪಾದಗಳನ್ನು ಮತ್ತು ಮುಖವನ್ನು ಮುಚ್ಚಿಕೊಂಡು ಆತನ ಪರಿಶುದ್ಧತೆಯನ್ನು ಹೊಗಳುತ್ತಾ ಸ್ತುತಿಸಿದರು ಮತ್ತು ಗೌರವದಿಂದ ಪರಿಶುದ್ಧತೆಯಲ್ಲಿ ಮಹತ್ವದ ದೇವರನ್ನು ಹಾಡಿ ಮಹಿಮೆಪಡಿಸಿದರು.

 

ಪರಿಶುದ್ಧರ ಗುಂಪಿನ ಮಧ್ಯದಲ್ಲಿ ಬೆಳಗುತ್ತಿರುವ ಶುದ್ಧ ಬೆಳಕಿನ ತಂದೆಯಾದ ನಮ್ಮ ಯೇಸುವನ್ನು ಶೀಘ್ರದಲ್ಲೇ ನೋಡಲಿದ್ದೇವೆ. ಅಲ್ಲಿ ನಾವು ಅವರ ಪರಿಶುದ್ಧತೆಯ ಸ್ಮರಣೆಯನ್ನು ಆಚರಿಸಲಿದ್ದೇವೆ. ನಾನು ನಿಮ್ಮನ್ನು ಪರಿಶುದ್ಧಗೊಳಿಸುವ ದೇವರು ಎಂದು ನಮ್ಮೊಂದಿಗೆ ಮಾತುಡುತ್ತಿರುವ ದೇವರು ನಮ್ಮನ್ನು ಪರಿಶುದ್ಧತೆಯಲ್ಲಿ ಮುನ್ನಡೆಸುತ್ತಾರೆ, ದೇವರ ಪರಿಶುದ್ಧವಾದ ನಾಮಕ್ಕೆ ಮಹಿಮೆ ಮತ್ತು ಘನತೆ ಉಂಟಾಗಲಿ! ಆಮೆನ್!

- P. ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

ಪರಿಶುದ್ಧತೆಯಲ್ಲಿ ಬೆಳೆಯುವ ವರ್ಷವಾಗಿರುವ ಈ ವರ್ಷದಲ್ಲಿ ಸೇವಕರು ಮತ್ತು ಸೇವೆಯಲ್ಲಿರುವ ಪ್ರತಿಯೊಬ್ಬರೂ ಪರಿಶುದ್ಧತೆಯಲ್ಲಿ ಅಭಿವೃದ್ಧಿಯಾಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş