Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.01.2022 (Kids Special)
Share:

By Village Missionary Movement

Sunday, 02-Jan-2022

ಧೈನಂದಿನ ಧ್ಯಾನ(Kannada) – 02.01.2022 (Kids Special)

 

ಚಾಕೊಲೇಟ್ ನೀನೆ

 

"ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ನೋಡಿರಿ;... ಅವುಗಳಿಗಿಂತ ನೀವು ಹೆಚ್ಚಿನವರಲ್ಲವೋ?” - ಮತ್ತಾಯ 6:26

 

Hello! ಪುಟಾಣಿಗಳೇ! ಈ ಹೊಸ ವರ್ಷದಲ್ಲಿ ನಿಮ್ಮನ್ನು ಭೇಟಿಯಾಗಲು ತುಂಬಾ ಸಂತೋಷವಾಗುತ್ತಿದೆ. ಕಳೆದ ವರ್ಷ ನಮ್ಮನ್ನು ಕಣ್ಣಿನ ಗುಡ್ಡೆಯಂತೆ ಕಾಪಾಡಿ, ಎಲ್ಲಾ ದುಷ್ಟರಿಂದ ನಮ್ಮನ್ನು ತಪ್ಪಿಸಿ ರಕ್ಷಿಸಿದ ಕರ್ತನಿಗೆ ನಾವು ಕೃತಜ್ಞತೆಯನ್ನು ಸಲ್ಲಿಸುತ್ತಲೇ ಇರಬೇಕು. ಕಳೆದ ವರ್ಷವಿದ್ದ ಎಷ್ಟೋ ಜನರು...ಈ ವರ್ಷ ಇಲ್ಲ! ನಮ್ಮೆಲ್ಲರನ್ನೂ ಯೇಸಪ್ಪ ಜೀವಂತವಾಗಿ ಇಟ್ಟಿದ್ದಾರಲ್ಲ? ಆದುದರಿಂದ Jesus ನಿಮ್ಮ ಚಿತ್ತ ನನ್ನ ಜೀವನದಲ್ಲಿ ನಡೆಯಲಿ ಎಂದು ನಿಮ್ಮನ್ನು ದೇವರ ಕೈಯಲ್ಲಿ ಒಪ್ಪಿಸಿಕೊಟ್ಟರೆ Super - ಆಗಿ ನಿಮ್ಮನ್ನು ಮುನ್ನಡೆಸುತ್ತಾರೆ. Ok ಪುಟಾಣಿಗಳೇ ಕಥೆಯ ಸಮಯ ಬಂದು ಬಿಡ್ತು ...ಕಥೆ ಕೇಳೋಣವಾ?

 

ಬೆನಿಟಾ ಮತ್ತು ಜೆನಿಟಾ ಎಂಬ ಇಬ್ಬರು ಹುಡುಗಿಯರು ದೆಹಲಿಯಲ್ಲಿ ಬೆಳೆಯುತ್ತಾ ಇದ್ದರು. ಅವರು ತುಂಬಾ ಕಪ್ಪಗೆ ಇರುತ್ತಾರೆ. ಅವರ ಮನೆಯ ಪಕ್ಕದಲ್ಲಿ ಸುಂದರವಾದ ಉದ್ಯಾನವನವಿತ್ತು. ಆಗಾಗ ಅಲ್ಲಿಗೆ ಹೋಗಿ ಆಟವಾಡುತ್ತಿದ್ದರು. ನೀವು ಕೂಡ ಪಾರ್ಕ್‌ಗೆ ಹೋಗುತ್ತೀರಾ? Jollyಯಾಗಿ ಇರುತ್ತೆ ತಾನೇ! ಏನೇನೆಲ್ಲಾ ಆಟವಾಡ್ತೀರ. ಉಯ್ಯಾಲೆ, ಕಣ್ಣಾ ಮುಚ್ಚಾಲೆ .... ಹೀಗೆ ತುಂಬಾ ಆಟವಾಡ್ತೀರ ಹೌದು ತಾನೇ! ಅಂತೆಯೇ ಬೆನಿಟಾ ಮತ್ತು ಜೆನಿಟಾ ಆಟವಾಡುತ್ತಿದ್ದಾಗ ಕಾಗೆ... ಕಾಗೆ ಎಂದು ಗೇಲಿ ಮಾಡುತ್ತಾ ನಗುತ್ತಿದ್ದರು. ಉತ್ತರ ಭಾರತದ ಮಕ್ಕಳು ಕೆಂಪಾಗಿದ್ದದರಿಂದ ಹಾಗೆ ಮಾಡಿದರು. ಆ ಇಬ್ಬರು ಪುಟ್ಟ ಹುಡುಗಿಯರಿಗೆ ತುಂಬಾ ದುಃಖವಾಯಿತು. ದೇವರು ನಮ್ಮನ್ನು ಏಕೆ ಇಷ್ಟು ಕಪ್ಪಾಗಿ ಮಾಡಿದ್ದಾರೋ! ಸ್ವಲ್ಪ ಕಲರ್ ಆಗಿ ಇದ್ದಿದ್ದರೂ ಕೂಡ ನಮ್ಮನ್ನು ಗೇಲಿ ಮಾಡುತ್ತಿರಲಿಲ್ಲವೇ! ಎಂದು ಅದರ ಬಗ್ಗೆ ಚಿಂತಿಸುತ್ತಲೇ ಇದ್ದರು. ಇದನ್ನೆಲ್ಲ ಗಮನಿಸುತ್ತಿದ್ದ ಅಮ್ಮ ನನ್ನ ಮುದ್ದಿನ ಮಕ್ಕಳಿಗೆ ಏನಾಯ್ತು ಎಂದು ಕೇಳಿ ತಿಳಿದುಕೊಂಡರು. "ಯಾರು ಹೇಳಿದ್ದು? ನಿಮ್ಮನ್ನು ಕಾಗೆ ಎಂದು... ನೀವು ಕಾಗೆ ಅಲ್ಲ, ಚಾಕೊಲೇಟ್” ಎಂದು ಹೇಳಿದ ಕೂಡಲೇ ಮುಗುಳ್ನಗೆ ಪ್ರಾರಂಭವಾಯಿತು. “ದೇವರು ನಿಮ್ಮನ್ನು ತನ್ನ ಸ್ವರೂಪದಲ್ಲಿ ಸೃಷ್ಟಿಸಿದ್ದಾರೆ. ಆದ್ದರಿಂದ ನಿಮ್ಮನ್ನು ಪ್ರೀತಿಸಲು ಅಭ್ಯಾಸ ಮಾಡಿಕೊಳ್ಳಬೇಕು. ಅದುವೇ ದೇವರಿಗೂ ಇಷ್ಟವಾದದ್ದು ” ಎಂದು ಅಮ್ಮ ಹೇಳಿದ ಕೂಡಲೇ ಇಬ್ಬರು ಪುಟ್ಟ ಹುಡುಗಿಯರೂ ಕುಣಿದು ಕುಪ್ಪಳಿಸಿದರು. ನಾವು ಚಾಕೊಲೇಟ್ ನಾವಂದ್ರೆ ಎಲ್ಲರಿಗೂ ಇಷ್ಟ. ಯೇಸಪ್ಪಾಗು ಕೂಡ ತುಂಬಾ ಇಷ್ಟ. ಏಕೆಂದರೆ ನಾವು ಆತನ ದೃಷ್ಟಿಯಲ್ಲಿ ವಿಶೇಷವಾದವರು ಎಂಬುದನ್ನು ಅರ್ಥಮಾಡಿಕೊಂಡರು. ಅವರ ಮನಸ್ಥಿತಿಯಲ್ಲಿ ದೊಡ್ಡ ಬದಲಾವಣೆ ಉಂಟಾಯಿತು.

 

ತಮ್ಮ-ತಂಗಿ, ನೀವೂ ಕೂಡ ನಾನು ಕಪ್ಪಗಿದ್ದೇನೆ, ಕಲರ್ ಆಗಿ ಇಲ್ಲ, ಸುಂದರವಾಗಿ ಇಲ್ಲ. ಬಡವನಾಗಿ ಹುಟ್ಟಿಬಿಟ್ಟೆ ಎಂದೆಲ್ಲಾ feel ಮಾಡಬಾರದು. ನೀವು ಯೇಸಪ್ಪನ ದೃಷ್ಟಿಯಲ್ಲಿ Very special. ನೀವು ಕೂಡ ಚಾಕೊಲೇಟ್ ಗಳೇ, ಪುಟಾಣಿಗಳೇ ನಿಮಗೆ ಚಾಕೊಲೇಟ್ ಎಂದರೆ ತುಂಬಾ ಇಷ್ಟತಾನೇ. Very good. 

- Mrs. ಜೀವಾ ವಿಜಯ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş