Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.01.2022
Share:

By Village Missionary Movement

Saturday, 01-Jan-2022

ಧೈನಂದಿನ ಧ್ಯಾನ(Kannada) – 01.01.2022

 

ಸಂತೋಷಕರವಾದ ಪ್ರಾರಂಭ

 

“...ನಿಮ್ಮನ್ನು ಶುದ್ಧಮಾಡಿಕೊಳ್ಳಿರಿ; ಯೆಹೋವನು ನಾಳೆ ನಿಮ್ಮ ಮಧ್ಯದಲ್ಲಿ ಅದ್ಭುತಗಳನ್ನು ನಡಿಸುವನು ಎಂದು ಹೇಳಿದನು." - ಯೆಹೋಶುವ 3:5

 

ಜರ್ಮನಿ ಮತ್ತು ಫ್ರಾನ್ಸ್ ನಡುವಿನ ಯುದ್ಧವು 1870-1871 ರವರೆಗೆ ನಡೆಯುತ್ತಿತ್ತು. ಆ ವೇಳೆ ವ್ಯಕ್ತಿಯೊಬ್ಬ ಸ್ಫೋಟಗೊಳ್ಳದ ಎರಡು ಬಾಂಬ್‌ಗಳನ್ನು ಏನೆಂದು ತಿಳಿಯದೆ ತನ್ನ ಮನೆಯಲ್ಲಿ ಬೆಂಕಿ ಹಚ್ಚಿ ಚಳಿ ಕಾಯಿಸಿಕೊಳ್ಳುವ ಸ್ಥಳದ ಬಳಿ ಇಟ್ಟಿದ್ದನು. ಹಲವಾರು ದಿನಗಳ ನಂತರ ಆ ವ್ಯಕ್ತಿಯ ಸ್ನೇಹಿತ ಮತ್ತು ಸ್ಫೋಟಕ ವಸ್ತುಗಳ ತಜ್ಞರಾಗಿದ್ದ ಒಬ್ಬ ವ್ಯಕ್ತಿ ಆಕಸ್ಮಿಕವಾಗಿ ಅವರ ಮನೆಗೆ ಬಂದರು. ಸ್ನೇಹಿತನ ಮನೆಯಲ್ಲಿ ಸ್ಫೋಟಗೊಳ್ಳದ ಎರಡು ಬಾಂಬ್‌ಗಳನ್ನು ನೋಡಿದಾಗ ಆ ವ್ಯಕ್ತಿ ಹಾಗೆ ಬೆಚ್ಚಿ ಬಿದ್ದರು. ನಂತರ ತನ್ನ ಸ್ನೇಹಿತನಿಗೆ ಅದರ ಪರಿಣಾಮಗಳನ್ನು ತಿಳಿಸಿ ಬಾಂಬ್‌ಗಳನ್ನು ಅಲ್ಲಿಂದ ತೆಗೆದುಹಾಕಿದರು.

 

ಕೆಲವೊಮ್ಮೆ ನಾವು ಕೂಡ ನಮ್ಮ ಬಳಿ ಇರುವವುಗಳ ಬಗ್ಗೆಯೇ ತಿಳಿಯದವರಾದ್ದೇವೆ. ನಮ್ಮನ್ನು ಹಾಳುಮಾಡುವ ಕೆಲವು ಕೃತ್ಯಗಳನ್ನು ಬಿಟ್ಟು ಅದನ್ನು ನಮ್ಮಿಂದ ತೊಲಗಿಸುವಾಗ ನಮಗೆ ಸುಮಾಧಾನ ಮತ್ತು ನೆಮ್ಮದಿ ಸಿಗುತ್ತದೆ. ಅರಣ್ಯ ಪ್ರಯಾಣದಲ್ಲಿ ಯಾಕೋಬನು ತನ್ನ ಬಳಿ‌ ಇದ್ದವರಿಗೆ ನಿಮ್ಮಲ್ಲಿರುವ ಅನ್ಯದೇವರುಗಳನ್ನು ತಳ್ಳಿಬಿಟ್ಟು ನಿಮ್ಮನ್ನು ಶುದ್ಧೀಕರಿಸಿಕೊಂಡು ಮಡಿವಸ್ತ್ರಗಳನ್ನು ಹಾಕಿಕೊಳ್ಳಿರಿ ಎಂದು ಹೇಳುತ್ತಾರೆ (ಆದಿ. 35: 1-4). ಇದರಂತೆ 1 ಸಮು. 7 ನೇ ಅಧ್ಯಾಯದಲ್ಲಿ ಸಮುವೇಲನ ಮೂಲಕ ಇಸ್ರಾಯೇಲ್ಯರನ್ನು ಸುಧಾರಿಸಿ ಪರಿಶುದ್ದತೆಯಲ್ಲಿ ಮುನ್ನಡೆಸುವುದನ್ನು ಓದುತ್ತೇವೆ. ನಮ್ಮ ದೇವರಿಗೆ ಇಷ್ಟವಾಗದ ಕಾರ್ಯಗಳನ್ನು ಬಿಟ್ಟು ನಾವು ನೇರವಾಗಿ ಪರಿಶುದ್ಧತೆಯ ಕಡೆಗೆ ಮರಳುವುದಾದರೆ ಎಷ್ಟೊಂದು ಅದ್ಭುತಗಳನ್ನು ಕಾಣಬಹುದು.

 

ಇಸ್ರಾಯೇಲ್ ಜನರನ್ನು ಮುನ್ನಡೆಸುವ ಜವಾಬ್ದಾರಿ ಯನ್ನು ಹೊಸದಾಗಿ ಪಡೆದಿದ್ದ ಯೆಹೋಶುವನ ಬಳಿ, "ನಿಮಗೆ ಅದ್ಭುತ ಬೇಕಾದರೆ, ನಿಮ್ಮನ್ನು ಶುದ್ದೀಕರಿಸಿಕೊಳ್ಳಿರಿ" ಎಂದು ದೇವರು ಹೇಳುತ್ತಾರೆ. ಈ ವರ್ಷ ನಿಮಗೆ ಅತ್ಯುತ್ತಮವಾಗಿ ಇರಬೇಕಾದರೆ ಬೇರೆ ಯಾವ ಮಂತ್ರವೂ ಇಲ್ಲ. ಪರಿಶುದ್ಧತೆ ಒಂದೇ ನಾವು ಅದ್ಭುತಗಳನ್ನು ಪಡೆಯಲು ಮಾರ್ಗವೆಂದು ಸತ್ಯವೇದವು ಹೇಳುತ್ತಿದೆ. ಮತ್ತೊಬ್ಬರನ್ನು ನೋಡಬೇಡಿರಿ. ಸ್ವಯಂ ಪರೀಕ್ಷೆಗೆ ಹೆಚ್ಚು ಗಮನ ಕೊಡಿರಿ. ಯಾವ ಪಾಪಗಳು ಬಾಂಬ್‌ನಂತೆ ಸ್ಫೋಟಿಸಿ ನನ್ನನ್ನು ನಾಶಮಾಡುವುದು ಎಂದು ಶೋಧಿಸಿ ನೋಡಿ ಅವುಗಳನ್ನೆಲ್ಲಾ ತೊಲಗಿಸಿರಿ.

 

ಪಾಪದ ಇಚ್ಚೆಗಳು, ಮನರಂಜನೆಯ ವಿಷಯಗಳಲ್ಲಿ ಸಮಯವನ್ನು ವ್ಯರ್ಥ ಮಾಡುವುದು, ವಿರೋಧಿಗಳೊಂದಿಗೆ ಬೆರೆಯುವುದು ಮತ್ತು ವ್ಯರ್ಥವಾದ ಸಂಭಾಷಣೆಗಳು ಇನ್ನೂ ಇಂತಹ ಅನೇಕ ಕಾರ್ಯಗಳ ಬಗ್ಗೆ ಹೇಳಬಹುದು. ನಮ್ಮ ದೇವರು ಪರಿಶುದ್ಧತೆಯನ್ನು ಪ್ರೀತಿಸುವವರು. ಆದ್ದರಿಂದ ಪರಿಶುದ್ಧತೆಯನ್ನು ಬಯಸಿರಿ, ಪ್ರೀತಿಸಿರಿ ನಿಮ್ಮಿಂದ ತೆಗೆದುಹಾಕಬೇಕಾದದ್ದನ್ನು ತಕ್ಷಣವೇ ತೆಗೆದುಹಾಕಿರಿ. ಪ್ರತಿದಿನ ನಿಮ್ಮ ಪ್ರಾಂತ್ಯಗಳಲ್ಲಿ ದೇವರ ಅದ್ಭುತಗಳನ್ನು ಕಾಣುವಿರಿ. ಈ ವರ್ಷವನ್ನು ಪರಿಶುದ್ಧತೆಯಲ್ಲಿ ಬೆಳೆಯುವ ವರ್ಷವಾಗಿ ಆಚರಿಸಲಿದ್ದೇವೆ. ಪ್ರತಿದಿನವೂ ನಾವು ಪರಿಶುದ್ಧತೆಯಲ್ಲಿ ಬೆಳೆದು ಸಮೃದ್ಧಿಯಾಗಿ ಆಶೀರ್ವದಿಸಲ್ಪಡೋಣ.

- P. ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

ಈ ಹೊಸ ವರ್ಷದಲ್ಲಿ ದೇವರು ಈ ಸೇವೆಯನ್ನು ಉತ್ತಮವಾಗಿ ಮುನ್ನಡೆಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş