Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 31.12.2021
Share:

By Village Missionary Movement

Friday, 31-Dec-2021

ಧೈನಂದಿನ ಧ್ಯಾನ(Kannada) – 31.12.2021

 

ಕೃತಜ್ಞತೆ ಹೇಳುವ ಸಮಯವಿದು

 

“ನನ್ನ ಮನವೇ, ಯೆಹೋವನನ್ನು ಕೊಂಡಾಡು; ಆತನ ಉಪಕಾರಗಳಲ್ಲಿ ಒಂದನ್ನೂ ಮರೆಯಬೇಡ." - ಕೀರ್ತನೆ 103:2

 

2021 ನೇ ವರ್ಷದ ಕಡೆಯ ದಿನದೊಳಗೆ ಬಂದಿರುವ ನಾವು, ನಮ್ಮ ದೇವರಿಗೆ ಕೃತಜ್ಞತೆಗಳನ್ನು ಸಲ್ಲಿಸಲು ಬದ್ಧರಾಗಿದ್ದೇವೆ. ಮಾರ್ಚ್ 2020 ರಲ್ಲಿ ನಮ್ಮನ್ನು ಭಯಭೀತಗೊಳಿಸಿ ನಮ್ಮಲ್ಲಿ ಅನೇಕರನ್ನು ಕೊಂದು 2021-ನೇ ವರ್ಷದಲ್ಲೂ ಮುಂದುವರೆಯಿತು ಕರೋನಾ ಎಂಬ ಈ ಘೋರ ವ್ಯಾಧಿ. ಆದರೆ ನೀವು ಮತ್ತು ನಾನು ಇನ್ನೂ ಜೀವಂತವಾಗಿ, ಸುಖವಾಗಿ ಜೀವಿಸಲು ದೇವರು ಕೃಪೆ ತೋರಿಸಿದ್ದಾರೆ. ಕ್ರೈಸ್ತ ಜೀವನಕ್ಕೆ ಕೃತಜ್ಞತೆ ಬಹಳ ಮೂಲಭೂತವಾಗಿದೆ. ಈ ಸಂದರ್ಭದಲ್ಲಿ ನನ್ನ ಸಾಕ್ಷಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ತುಂಬಾ ಸಂತೋಷವಾಗುತ್ತಿದೆ.

 

ನನ್ನ Teen Age ಪ್ರಾಯದಲ್ಲಿ ನನ್ನ ಹೆತ್ತವರನ್ನು ಕಳೆದುಕೊಂಡು ನನ್ನ ಸಹೋದರ, ಸಹೋದರಿಯರೊಂದಿಗೆ ತವಕಿಸುತ್ತಿದ್ದ ನಮ್ಮನ್ನು ದೇವರು ನಡೆಸಿದ ರೀತಿಯನ್ನು ನಾನು ಪ್ರತಿದಿನ ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತೇನೆ. ಒಂಟಿಯಾಗಿದ್ದ ನನಗೆ, 37ನೇ ವಯಸ್ಸಿನಲ್ಲಿ ವಾಸಿಸಲು ಮನೆ ಕೊಟ್ಟು ಗಂಡನನ್ನು ಕೊಟ್ಟು, ಸೇವೆ ಮಾಡಲು ಕೃಪೆ ನೀಡಿದರು. 2 ವರ್ಷಗಳು ಮಕ್ಕಳಿರಲಿಲ್ಲ ನಂತರ ನನಗೆ 40 ನೇ ವಯಸ್ಸಿನಲ್ಲಿ ಒಂದು ಹೆಣ್ಣು ಮಗುವನ್ನು ಮತ್ತು 42 ನೇ ವಯಸ್ಸಿನಲ್ಲಿ ಗಂಡು ಮಗುವನ್ನು ಕೊಟ್ಟು ಅವರನ್ನು ಬೆಳೆಸಿ ಒಂದು ವ್ಯಕ್ತಿಯಾಗಿ ಮಾಡಲು ಕೃಪೆ ನೀಡಿದ ನನ್ನ ದೇವರನ್ನು ಪ್ರತಿ ಕ್ಷಣವೂ ಕೃತಜ್ಞತೆಯೊಂದಿಗೆ ಸ್ತುತಿಸುತ್ತಲೇ ಇದ್ದೇನೆ. ನಾವು ನಿರ್ಮೂಲವಾಗದೇ ಇರುವುದು ದೇವರ ಕೃಪೆಯೇ.

 

ನನ್ನ ಉಪದ್ರವಗಳು ಮತ್ತು ಸಂಕಟಗಳ ಮೂಲಕ ದೇವರು ನನಗೆ ಹೇರಳವಾದ ಆಶೀರ್ವಾದಗಳನ್ನು ಮತ್ತು ಉಪಕಾರಗಳನ್ನು ಮಾಡಿ, ಮತ್ತೊಬ್ಬರಿಗಾಗಿ ಪ್ರಾರ್ಥಿಸಲು ನನಗೆ ಕಲಿಸಿ ಕೊಟ್ಟಿದ್ದಾರೆ. ಅನಾಥ ಮಕ್ಕಳು, ವಿವಾಹವಾಗದ ಯೌವನಸ್ಥರು, ಸಂತಾನಕ್ಕಾಗಿ ಕಾಯುತ್ತಿರುವ ಹೆತ್ತವರು ಹೀಗೆ ಕಷ್ಟಪಡುತ್ತಿರುವ ಎಲ್ಲರಿಗಾಗಿ ಭಾರದಿಂದ ಪ್ರಾರ್ಥಿಸುವ ಪ್ರಾರ್ಥನಾ ಆತ್ಮವನ್ನು ನನ್ನಲ್ಲಿ ಅಧಿಕವಾಗಿ ಸುರಿಸಿ ಪ್ರಾರ್ಥಿಸುವಂತೆ ಮಾಡುತ್ತಿದ್ದಾರೆ. ನಾವು ಈ ದಿನದವರೆಗೂ ಎಷ್ಟೋ ಸಂಕಟ, ವೇದನೆ, ನಷ್ಟ ಇಂಥವುಗಳನ್ನು ಅನುಭವಿಸಿರಬಹುದು. ಆದರೆ ನಾವು ನಿರ್ಮೂಲವಾಗದಂತೆ ನಮ್ಮನ್ನು ಕಾಪಾಡಿದ ದೇವರಿಗೆ ಕೃತಜ್ಞತೆ ಹೇಳಬಾರದಾ? ಎಲ್ಲಾ ಸಮಯದಲ್ಲೂ ನಾವು ಎದುರುನೋಡುವ ರೀತಿಯಲ್ಲಿ ನಡೆಯದಿದ್ದರೂ ಸಹ ಅವರು ನಮ್ಮನ್ನು ಹೊತ್ತು, ಸಹಿಸಿ, ನಿರ್ವಹಿಸುತ್ತಾ ಬರುತ್ತಿದ್ದಾರೆ.

ಆದ್ದರಿಂದ ಯಾವಾಗಲೂ ಎಲ್ಲದಕ್ಕೂ ಕೃತಜ್ಞತೆಯ ಹೃದಯದಿಂದ ಜೀವಿಸೋಣ. ಯಾವ ಉದ್ದೇಶಕ್ಕಾಗಿ ಈ ವರ್ಷವನ್ನು ಮುಗಿಸಿ, ಹೊಸ ವರ್ಷದೊಳಗೆ ಪ್ರವೇಶಿಸುವಂತೆ ಮಾಡುತ್ತಿದ್ದಾರೋ ಆ ಉದ್ದೇಶವನ್ನು ನೆರವೇರಿಸಲು ಸಮರ್ಪಿಸಿ ಪ್ರಾರ್ಥಿಸೋಣ. ದೇವರ ಸಮಾಧಾನದೊಂದಿಗೆ ಹೊಸ ವರ್ಷದೊಳಗೆ ಪ್ರವೇಶಿಸಲು ದೇವರು ಕೃಪೆ ತೋರಿಸಲಿ! ಆಮೆನ್.

- Mrs. ಸರೋಜಾ ಮೋಹನದಾಸ್

 

ಪ್ರಾರ್ಥನಾ ಅಂಶ:

ಬರಲಿರುವ 2022 ನೇ ವರ್ಷದಲ್ಲೂ ಸತತವಾಗಿ ದೇವರ ಕೃಪೆ ನಮ್ಮೊಂದಿಗಿದ್ದು, ದೇವರು ಕೊಟ್ಟಿರುವ ಯೋಜನೆಗಳನ್ನು ನಾವು ನೆರವೇರಿಸಲು ಕೃಪೆ ಅನುಗ್ರಹಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş