Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.12.2021
Share:

By Village Missionary Movement

Thursday, 30-Dec-2021

ಧೈನಂದಿನ ಧ್ಯಾನ(Kannada) – 30.12.2021

 

ವಿಚಾರಿಸಿ ತಿಳಿಯೋಣ

 

"ನಮ್ಮನ್ನು ನಾವೇ ವಿಚಾರಿಸಿಕೊಂಡರೆ ನ್ಯಾಯವಿಚಾರಣೆಗೊಳಗಾಗುವದಿಲ್ಲ" -1 ಕೊರಿಂಥ. 11:31

 

ದೇವರು ನಮಗೆ ಎಷ್ಟು ಸುಂದರವಾದ ಜೀವನವನ್ನು ಕೊಟ್ಟಿದ್ದಾರೆ. ಆದರೂ ಅದರಲ್ಲಿ ಏನು ಗುಣುಗುಟ್ಟುವಿಕೆ? ಜೀವನದ ಬೆಲೆ ಗೊತ್ತಿಲ್ಲದೆ ಎಷ್ಟು ಸಲ ಬೇಸರವಾಗಿದ್ದೆವು. ನಾವು ಪ್ರತಿದಿನ ಬೆಳಿಗ್ಗೆ ಏಳುವಾಗ ದೇವರು 86,400 ಸೆಕೆಂಡುಗಳನ್ನು ನಮಗೆ ನೀಡಿದ್ದಾರೆ. ಹಾಗಾದರೆ ಒಂದು ವರ್ಷಕ್ಕೆ ಎಷ್ಟು ಸೆಕೆಂಡುಗಳು (86400 × 360) ಎಂದು ಯೋಚಿಸೋಣ. ಇಷ್ಟನ್ನೂ ಹಣವಾಗಿ ನಮ್ಮ ಕೈಯಲ್ಲಿ ಕೊಟ್ಟಿದ್ದರೆ, ಅದನ್ನು ಬಹಳ ಎಚ್ಚರಿಕೆಯಿಂದ ಖರ್ಚು ಮಾಡುತ್ತಿದ್ದೆವು. ಖರ್ಚಾಗದ ಹಣ ನಮ್ಮ ಬಳಿ ಇರುತ್ತಿತ್ತು. ಆದರೆ ನಾವು ಖರ್ಚು ಮಾಡದ ಸೆಕೆಂಡುಗಳು ನಮ್ಮ ಬಳಿ ಇರುವುದೂ ಇಲ್ಲ, ಅವುಗಳನ್ನು ಮರಳಿ ಪಡೆಯಲೂ ಸಾಧ್ಯವಿಲ್ಲ. ಆದ್ದರಿಂದ ಸಮಯವು ಹಣಕ್ಕಿಂತ ಹೆಚ್ಚು ಮೌಲ್ಯಯುತವಾಗಿದೆ. ಪ್ರತಿದಿನವು 86400 ಸೆಕೆಂಡುಗಳನ್ನು ಪಡೆದಿರುವ ನಾವು ಏನು ಮಾಡಿದ್ದೇವೆ ಎಂಬುದನ್ನು ಯೋಚಿಸೋಣ.

 

ಅಷ್ಟೇ ಅಲ್ಲ, ಒಂದು ವರ್ಷದಲ್ಲಿ ಒಟ್ಟು ಗಂಟೆಗಳು 8760. ಅದರಲ್ಲಿ ಕೆಲಸ ಮಾಡುವುದಕ್ಕಾಗಿ 2920 ಗಂಟೆಗಳು ಮತ್ತು ನಿದ್ರೆಗಾಗಿ 2920 ಗಂಟೆಗಳು. ಇವೆಲ್ಲಾ ಹೋಗಲು ಉಳಿದದ್ದು 2920 ಗಂಟೆಗಳು! ಜ್ಞಾನಿಯಾದ ದೇವರು ಸರಿಸಮವಾಗಿ ವಿಂಗಡಿಸಿ ಕೊಟ್ಟಿರುವ ಈ ಉಳಿದ ಗಂಟೆಗಳನ್ನು ಮನುಷ್ಯನು ತನ್ನನ್ನು ನಿತ್ಯತ್ವಕ್ಕೆ ಸಿದ್ಧಪಡಿಸಿಕೊಳ್ಳವುದಕ್ಕಾಗಿ ಕೊಟ್ಟಿದ್ದಾರೆ. ಈ ಸಮಯವನ್ನು ನಾವು ಹೇಗೆ ಕಳೆದಿದ್ದೇವೆ? ಯೋಚಿಸೋಣ.

 

ನಮ್ಮನ್ನು ನಾವೇ ವಿಚಾರಿಸಿಕೊಂಡರೆ ನ್ಯಾಯವಿಚಾರಣೆಗೊಳಗಾಗುವದಿಲ್ಲ ಎಂದು ಸತ್ಯವೇದವು ಹೇಳುತ್ತದೆ. ನಾವು ಸತ್ಯವೇದದ ಬೆಳಕಿನಲ್ಲಿ ವಿಚಾರಿಸಿಕೊಳ್ಳುವಾಗ ನಮ್ಮ ಹೃದಯವು ಗ್ರಹಿಸುತ್ತದೆ. ನಾವು ಈ ವರ್ಷದಲ್ಲಿ ಸತ್ಯವೇದ ಧ್ಯಾನ, ಪ್ರಾರ್ಥನೆ, ಮನುಷ್ಯರೊಂದಿಗಿನ ಸಂಬಂಧ, ಮನೆಯ ವ್ಯವಹಾರಗಳು ಮತ್ತು ವಿದ್ಯಾಭ್ಯಾಸದ ವಿಷಯಗಳಲ್ಲಿ ನಾವು ಕ್ರಿಸ್ತನ ಶಿಷ್ಯನಾಗಿ ಮತ್ತು ಶಿಷ್ಯೆಯಾಗಿ ಏನು ಮಾಡಿದ್ದೇವೆ? ಯಾವುದಕ್ಕೆ ಮುಖ್ಯತ್ವವನ್ನು ಕೊಟ್ಟಿದ್ದೇವೆ? ಇವುಗಳಲ್ಲಿ ಯಾವುದಾದರೂ ಒಂದರಲ್ಲಿ ಅಭಿವೃದ್ಧಿ ಇದೆಯೇ? ಇಲ್ಲದಿದ್ದರೆ ಇಷ್ಟು ಗಂಟೆಗಳನ್ನು ವ್ಯರ್ಥ ಮಾಡಿಬಿಟ್ಟೆವಾ? ಇದನ್ನೆಲ್ಲ ಗ್ರಹಿಸಿದವರಾಗಿ ದೇವರ ಬಳಿ ಕ್ಷಮಾಪಣೆ ಕೇಳೋಣ. ನಮ್ಮನ್ನು ನಾವು ಸರಿಪಡಿಸಿಕೊಳ್ಳೋಣ. ಇವುಗಳಲ್ಲಿ ಯಾವುದಾದರೂ ಒಂದರಲ್ಲಿ ಅಭಿವೃದ್ಧಿ ಇರುವುದಾದರೆ ಉಳಿದ ಎಲ್ಲಾ ಕಾರ್ಯಗಳಲ್ಲಿ ಅಭಿವೃದ್ಧಿ ಉಂಟಾಗುವಂತೆ ಯೋಜನೆ ಹಾಕಿಕೊಳ್ಳೋಣ ಮತ್ತು ಮಾಡೋಣ.

- Sis. ಅನ್ಬುಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

ಈ 2021 ವರ್ಷದುದ್ದಕ್ಕೂ ನಮ್ಮನ್ನು ಕಣ್ಣಿನ ಗುಡ್ಡೆಯಂತೆ ಕಾಪಾಡಿ ದೇವರು ಮುನ್ನಡೆಸುತ್ತಾ ಬಂದ ಕೃಪೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al