Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 29.12.2021
Share:

By Village Missionary Movement

Wednesday, 29-Dec-2021

ಧೈನಂದಿನ ಧ್ಯಾನ(Kannada) – 29.12.2021

 

ಇಂಥಾ ಒಂದು ಸವಾಲಾ?

 

"ಲೋಕದಲ್ಲಿ ಬರುವ ಪ್ರತಿಯೊಬ್ಬ ಮನುಷ್ಯನಿಗೆ ಆತನು ಬೆಳಕನ್ನು ಕೊಡುವ ನಿಜವಾದ ಬೆಳಕಾಗಿದ್ದನು" - ಯೋಹಾನ 1:9

 

ಸ್ಟೀಫನ್ ಮತ್ತು ಸ್ಯಾಮ್ ಎಂಬ ಇಬ್ಬರು ಯೌವನಸ್ಥರು ವರ್ಷದ ಆರಂಭದಲ್ಲಿ ತಮ್ಮೊಳಗೆ ಒಂದು ಸವಾಲನ್ನು ಹಾಕಿಕೊಂಡರು. ಒಂದು ವರ್ಷದಲ್ಲಿ 100 Girl freinds ನ್ನು ಮಾಡಿಕೊಂಡು ಅವರ ಫೋನ್ ನಂಬರ್ ಗಳನ್ನು ತೆಗೆದುಕೊಳ್ಳಬೇಕು ಎಂಬುದೇ ಆ ಸವಾಲಾಗಿತ್ತು. ಸ್ಟೀಫನ್ ಯೇಸುವನ್ನು ಪ್ರೀತಿಸುತ್ತಿದ್ದ ಯುವಕನಾಗಿದ್ದನು. ಆದರೂ ಕಿರಿಯ ಮಗನಂತೆ ಅವನು ಯೇಸುವನ್ನು ಬಿಟ್ಟು ಬೇರ್ಪಟ್ಟು ಸವಾಲನ್ನು ಸ್ವೀಕರಿಸಿದನು. ಅಷ್ಟೇ ಅಲ್ಲದೆ ಅವನು ಹೇಳಿದ ಮಾತು ಏನು ಗೊತ್ತಾ? "ನೋಡಿ, ಈ ಸವಾಲಿನಲ್ಲಿ ನಾನೇ ಗೆಲ್ಲುತ್ತೇನೆ" ಎಂದು! ಇದಕ್ಕಾಗಿ ಬಹಳಷ್ಟು ಕಾರ್ಯಗಳನ್ನು ಮತ್ತು ಕೆಲಸಗಳನ್ನು ಮಾಡಲು ಪ್ರಾರಂಭಿಸಿದನು. ಅವನ Hair style, dress, character ಎಲ್ಲವೂ ಹೆಣ್ಣು ಮಕ್ಕಳನ್ನು ಆಕರ್ಷಿಸುವಂತೆ ಇರಬೇಕು ಎಂಬ ಉದ್ದೇಶದಿಂದ ಬದಲಾಗತೊಡಗಿತ್ತು. ಹೆಚ್ಚು ಕಡಿಮೆ ಆ ದಿನಗಳಿಂದ ಅವನು ಯೇಸುವನ್ನು ಮರೆತೇ ಹೋದನು. ಆದರೆ ಯೇಸು ಮಾತ್ರ ಅವನನ್ನು ಮರೆಯಲೇ ಇಲ್ಲ. ಏಕೆಂದರೆ (ಲೂಕ 15:20) ಈ ವಾಕ್ಯದ ಪ್ರಕಾರ ಯೇಸು ನಂಬಿಗಸ್ತನಾಗಿದ್ದನು. 7 ತಿಂಗಳಲ್ಲಿ ಸುಮಾರು 76 ಹೆಣ್ಣು ಮಕ್ಕಳೊಂದಿಗೆ ಸ್ಟೀಫನ್ ನ ಪರಿಚಯವಾಗಿ ಅವರಿಗೆ ಸ್ನೇಹಿತನಾಗಿ ಮಾರ್ಪಟ್ಟಿದ್ದನು. ಇದೇ ಅವನ ಗುರಿಯಾಗಿತ್ತು. ಈ ವಿಷಯದಲ್ಲಿ ಇವನು ಪ್ರವೀಣನಾಗಿ ಮಾರ್ಪಟ್ಟನು.

 

ಇದೇ ಡಿಸೆಂಬರ್ 29 ರಂದು, ದೇವರು ಸ್ಟೀಫನ್ ಬಳಿ ಬಂದರು. ಆ ರಾತ್ರಿ ಸಮಯದಲ್ಲಿ ದೇವರು ಅವನೊಂದಿಗೆ ಮಾತನಾಡಿದರು, “ನಾನು ನಿನಗಾಗಿ ಮರಣ ಹೊಂದಿದೆ, ನೀನು ನನಗಾಗಿ ಏನು ಮಾಡಿದ್ದೀಯ? ನಿನಗಾಗಿ ಉತ್ತಮ ಯೋಜನೆ ಮತ್ತು ಉದ್ದೇಶವನ್ನು ಇಟ್ಟಿದ್ದೇನೆ. ನೀನು ಮಾಡುವಂತೆ ಸೇವೆಯನ್ನೂ ಇಟ್ಟಿದ್ದೇನೆ. ನನಗಾಗಿ ನೀನು ಏನು ಮಾಡಿದ್ದೀಯ? ” ಎಂದು ಕ್ಲುಪ್ತವಾಗಿ ಸ್ಪಷ್ಟವಾಗಿ ಮಾತನಾಡಿದರು. ದೇವರ ಮಾತಿಗೆ ವಿಧೇಯನಾಗಿ ಮೊಬೈಲ್ ನಲ್ಲಿದ್ದ ಸಿಮ್ ಕಾರ್ಡ್ ನ್ನು ಮುರಿದು ಹಾಕಿದನು. ಆ ರಾತ್ರಿಯೇ ಅವನನ್ನು ದೇವರ ಕೈಗೆ ಒಪ್ಪಿಸಿಕೊಟ್ಟನು. ನಮ್ಮ ದೇವರು ಸೌಲನನ್ನು ಪೌಲನಾಗಿ ಮಾರ್ಪಡಿಸಿದ ದೇವರು. 

ಪತ್ರಿಕೆಗಳನ್ನು ಹರಿದು ಹಾಕಲು ಬಂದವನನ್ನು ಪತ್ರಿಕೆಗಳನ್ನು ಬರೆಯುವಂತೆ ಮಾಡಿದ ದೇವರು. ದೇವರನ್ನು ಮರೆತು ಹೆಣ್ಣುಮಕ್ಕಳನ್ನು ಹುಡುಕುತ್ತಾ ಹೋದ ಯುವಕನನ್ನು, ಅವರೇ ಹುಡುಕಿಕೊಂಡು ಬಂದು ಅವನೊಂದಿಗೆ ಮಾತನಾಡಿ ಅವನ ಬದುಕನ್ನು ಸಂಪೂರ್ಣವಾಗಿ ಮಾರ್ಪಡಿಸಿದರು. ಹೊಲಸಾದ ಕೆಸರಿನಿಂದ ಅವನನ್ನು ಮೇಲಕ್ಕೆತ್ತಿದರು. ಈಗ VMM ಸೇವೆಯಲ್ಲಿ ಪೂರ್ಣ ಸಮಯದ ಸೇವಕರಾಗಿ ಸೇವೆ ಮಾಡುತ್ತಿದ್ದಾರೆ.

 

ಸ್ನೇಹಿತರೇ! ಯಾವ ಮನುಷ್ಯನನ್ನಾದರೂ ಬೆಳಗಿಸಲು ಮತ್ತು ಮಾರ್ಪಡಿಸಲೂ ಯೇಸುವಿಗೆ ಸಾಧ್ಯ. ಹೌದು, ನಮ್ಮ ಯೇಸು ಯಾರನ್ನೂ ದ್ವೇಷಿಸುವುದಿಲ್ಲ. ಅವನಲ್ಲಿರುವ ಆ ಪಾಪವನ್ನೇ ದ್ವೇಷಿಸುತ್ತಾರೆ. ಆದ್ದರಿಂದ ಯಾವುದೇ ರೀತಿಯ ಹಿಂಜಾರಿಕೆಯ ಪರಿಸ್ಥಿತಿಯಲ್ಲಿದ್ದರೂ ದೇವರನ್ನು ದೃಷ್ಟಿಸಿ ನೋಡಿರಿ. ಅವರು ನಿಮ್ಮನ್ನು ಖಂಡಿತವಾಗಿ ಬಿಡಿಸುತ್ತಾರೆ. 

- Sis. ರೋಸ್ಲಿನ್

 

ಪ್ರಾರ್ಥನಾ ಅಂಶ:

7000 ಸೇವಕರ ಮೂಲಕ 1 ಲಕ್ಷ ಹಳ್ಳಿಗಳನ್ನು ತಲುಪುವ ಯೋಜನೆಯಲ್ಲಿ ಸಮರ್ಪಣೆಯುಳ್ಳ ಸೇವಕರು ನಮ್ಮೊಂದಿಗೆ ಸೇರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş