By Village Missionary Movement
Tuesday, 28-Dec-2021ಧೈನಂದಿನ ಧ್ಯಾನ(Kannada) – 28.12.2021
ಯಾರು ಬೇಕಾದರೂ ಪಡೆಯಬಹುದು
"ಕ್ರಿಸ್ತ ಯೇಸು ಪಾಪಿಗಳನ್ನು ರಕ್ಷಿಸುವದಕ್ಕೋಸ್ಕರ ಈ ಲೋಕಕ್ಕೆ ಬಂದನು.... ಆ ಪಾಪಿಗಳಲ್ಲಿ ನಾನೇ ಮುಖ್ಯನು" - 1 ತಿಮೊಥೆ 1:15
ಒಂದು ದಿನ ಒಂದು ಯೌವನಸ್ಥ ಹುಡುಗಿಗೆ ಸುವಾರ್ತೆ ಸಾರಲು ಪ್ರಯತ್ನಿಸುತ್ತಿದ್ದಾಗ, ಅವಳು ತಾನೊಂದು ಕ್ರೈಸ್ತ ಹುಡುಗಿ ಎಂದು ಹೇಳಿದಳು. ಅವಳ ಬಳಿ ಸತತವಾಗಿ ಮಾತು ಮುಂದುವರೆಸಿ, "ರಕ್ಷಣೆ ಹೊಂದಿದ್ದೀಯ?" ಎಂದು ಕೇಳಿದಾಗ, ಅವಳು ತಕ್ಷಣ “ನಾನೇಕೆ ರಕ್ಷಣೆ ಹೊಂದಬೇಕು? ನಾನು ಹುಟ್ಟಿನಿಂದಲೇ ಕ್ರೈಸ್ತಳಾಗಿಯೇ ಬೆಳೆದೆ. ಹಾಗಾದರೆ ನನಗೆ ಏಕೆ ರಕ್ಷಣೆ ಬೇಕು? ” ಎಂದು ಕೇಳಿದಳು. ಅವಳ ಬಳಿ ರಕ್ಷಣೆ ಎಂದರೆ ಏನು ಎಂದು ಕೇಳಿದಾಗ, ಅವಳು ಉತ್ತರಿಸಲು ಸಾಧ್ಯವಾಗಲಿಲ್ಲ. ತಕ್ಷಣವೇ ಅವಳ ಬಳಿ, “ಯೇಸು ಶಿಲುಬೆಗೆ ಹಾಕಲ್ಪಟ್ಟರು, ರಕ್ತವನ್ನು ಸುರಿಸಿದರು ಮತ್ತು ಮೂರನೆಯ ದಿನದಲ್ಲಿ ಜೀವಂತವಾಗಿ ಎದ್ದರು. ನಮ್ಮ ಜೀವನವು ಈ ಪ್ರಪಂಚದೊಂದಿಗೇ ಕೊನೆಗೊಳ್ಳುವುದಾದರೆ ಯೇಸು ಕ್ರಿಸ್ತನು ಈ ಜಗತ್ತಿಗೆ ಬರಬೇಕಾದ ಅವಶ್ಯಕತೆಯೇ ಇರಲಿಲ್ಲ; ಯೇಸು ಕ್ರಿಸ್ತನು ಈ ಲೋಕಕ್ಕೆ ಬಂದ ಉದ್ದೇಶವೇ ಪ್ರತಿಯೊಬ್ಬರೂ ಪಾಪಕ್ಷಮಾಪಣೆ ಹೊಂದಿ ರಕ್ಷಣೆ ಹೊಂದಬೇಕು ಎಂಬುದಕ್ಕಾಗಿಯೇ. ಪಾಪದಿಂದ ಬಿಡುಗಡೆ ಹೊಂದಿದವರು ಪರಲೋಕಕ್ಕೆ ಹೋಗುತ್ತಾರೆ. ಆದ್ದರಿಂದಲೇ ಪ್ರತಿಯೊಬ್ಬರೂ ಪಾಪದಿಂದ ಬಿಡುಗಡೆ ಹೊಂದಬೇಕು ಎಂಬುದೇ ದೇವರ ಉದ್ದೇಶವಾಗಿದೆ" ಎಂದು ಹೇಳಿದಾಗ, ಅವಳು ಕೊಟ್ಟ ಉತ್ತರ “ನಾನೆಂದೂ ಪಾಪ ಮಾಡಿಲ್ಲವೇ” ಎಂದುಳು. ಸತ್ಯವೇದವು ಹೇಳುತ್ತದೆ, 1 ಯೋಹಾನ 1: 8 ರಲ್ಲಿ ನಮ್ಮಲ್ಲಿ ಪಾಪವಿಲ್ಲವೆಂದು ನಾವು ಹೇಳಿದರೆ ನಮ್ಮನ್ನು ನಾವೇ ಮೋಸಪಡಿಸಿಕೊಳ್ಳುತ್ತೇವೆ, ಮತ್ತು ಸತ್ಯವೆಂಬದು ನಮ್ಮಲ್ಲಿಲ್ಲ. ಇದನ್ನು ತಿಳಿಯದೆ ನನ್ನಲ್ಲಿ ಪಾಪವಿಲ್ಲ ನಾನೇಕೆ ರಕ್ಷಣೆ ಹೊಂದಬೇಕು ಎಂದು ಅನೇಕರು ಭಾವಿಸುತ್ತಾರೆ. ಹಾಗಲ್ಲ ಅವರ ಬಳಿ ನಮ್ಮ ಪಾಪಗಳನ್ನು ಹರಕೆ ಮಾಡಿ ವಿಮೋಚನೆ ಪಡೆಯಬೇಕು.
ಪ್ರಿಯರೇ! ಇಂದಿಗೂ ಅಂತಹ ಜನರಿದ್ದಾರೆ. ನಾವು ವಂಶ ಪಾರಂಪರ್ಯವಾಗಿ ಕ್ರೈಸ್ತರೇ ಎಂದು ಹೇಳುತ್ತಾರೆ. ಆದರೆ ರಕ್ಷಣೆ ಹೊಂದಿದ್ದೀರ ಎಂದು ಕೇಳುವಾಗ ಇಲ್ಲ ಎಂದು ಹೇಳುತ್ತಾರೆ. ನಾವು ಸತ್ಯವೇದದಲ್ಲಿ ನೋಡುವಾಗ, ಯೇಸುಕ್ರಿಸ್ತನು ಯೋಹಾನ 3: 3 ರಲ್ಲಿ ನಿಕೊದೇಮನ ಬಳಿ ಹೀಗೆ ಹೇಳುತ್ತಾರೆ, ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ಒಬ್ಬನು ಹೊಸದಾಗಿ ಹುಟ್ಟದಿದ್ದರೆ ಅವನು ದೇವರ ರಾಜ್ಯವನ್ನು ಕಾಣಲಾರನು" ಅಂದನು. ಆದ್ದರಿಂದ ನಾವು ಪಾಪದಿಂದ ವಿಮೋಚನೆ ಹೊಂದಿ ಕ್ರಿಸ್ತನಲ್ಲಿ ಪುನಃ ಹುಟ್ಟುವ ಅನುಭವವನ್ನು ಹೊಂದಿಕೊಳ್ಳೋಣ. ಇದನ್ನು ಓದುತ್ತಿರುವ ನೀವು ರಕ್ಷಣೆ ಹೊಂದಿದ್ದೀರ ಎಂಬುದನ್ನು ಖಚಿತಪಡಿಸಿಕೊಳ್ಳಿ. ಯೇಸು ಕ್ರಿಸ್ತನು ನಿಮಗೆ ರಕ್ಷಣೆಯನ್ನು ನೀಡಲು ಸಿದ್ಧವಾಗಿದ್ದಾರೆ. ಅವರ ರಕ್ಷಣೆಯನ್ನು ಯಾರು ಬೇಕಾದರೂ ಪಡೆಯಬಹುದು. ಹೊಸ ವರ್ಷ ಪ್ರಾರಂಭವಾಗುವವರೆಗೆ ಆಲಸ್ಯ ಮಾಡಬೇಡಿರಿ. ಇಂದೇ ಈಗಲೇ ಪಡೆದುಕೊಳ್ಳಿರಿ.
- P. V. ವಿಲಿಯಮ್ಸ್
ಪ್ರಾರ್ಥನಾ ಅಂಶ:
7000 ಸೇವಕರ ಮೂಲಕ 1ಲಕ್ಷ ಹಳ್ಳಿಗಳನ್ನು ತಲುಪುವ ಯೋಜನೆಯಲ್ಲಿ ಎಲ್ಲಾ ರಾಜ್ಯಗಳಿಂದಲೂ ಮೊದಲ ಹಂತದಲ್ಲಿ 12 ಜನರು ನಮ್ಮೊಂದಿಗೆ ಬಂದು ಸೇರುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482