Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 27.12.2021
Share:

By Village Missionary Movement

Monday, 27-Dec-2021

ಧೈನಂದಿನ ಧ್ಯಾನ(Kannada) – 27.12.2021

 

ಮುಖ್ಯವಾದ ಮೂಲೆಗಲ್ಲು

 

 "...ಮನೆ ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು;..." - ಮತ್ತಾಯ 21:42

 

ಮನೆ ನಿರ್ಮಿಸಲು ವಿವಿಧ ಗಾತ್ರದ ಕಲ್ಲುಗಳು ಬೇಕಾಗುತ್ತವೆ. ಅವುಗಳನ್ನು ಸರಿಯಾದ ಗಾತ್ರದಲ್ಲಿ ಕತ್ತರಿಸಿ ಇಟ್ಟಿರುತ್ತಾರೆ. ಮನೆ ನಿರ್ಮಿಸುವವರಿಗೆ ಮಾತ್ರ ಯಾವ ಕಲ್ಲನ್ನು, ಯಾವ ಸ್ಥಳದಲ್ಲಿಟ್ಟರೆ ಅದು ಚೆನ್ನಾಗಿ, ಉಪಯುಕ್ತವಾಗಿರುತ್ತದೆ ಎಂಬುದು ಗೊತ್ತು. ಅಂತೆಯೇ ನಮ್ಮನ್ನು ಸೃಷ್ಟಿಸಿದ ದೇವರಿಗೇನೆ ನಮ್ಮನ್ನು ಯಾವ ಸ್ಥಳದಲ್ಲಿ ಯಾವ ಪರಿಸ್ಥಿತಿಯಲ್ಲಿ ಇಡಬೇಕು; ಹೇಗೆ ನಡೆಸಬೇಕು ಎಂಬುದು ಗೊತ್ತು. ಅಂತೆಯೇ ಮೂಲೆಗಲ್ಲಾಗಿರುವ ಕಲ್ಲು, ಗೋಡೆಯ ಎರಡೂ ಬದಿಗಳನ್ನು ಹೊತ್ತುಕೊಳ್ಳುವಂತೆ ಇಡಲಾಗುತ್ತದೆ. ಅದೇ ರೀತಿಯಲ್ಲಿ ಕರ್ತನಾದ ಯೇಸು ಕ್ರಿಸ್ತನು, ದೇವರು ಮತ್ತು ಮನುಕುಲವನ್ನು ಒಂದುಗೂಡಿಸುವ ಮೂಲಾಧಾರವಾಗಿರುವ ಸೇತುವೆಯಾಗಿದ್ದಾರೆ.

 

ಮಹಾಯಾಜಕರು, ಶಾಸ್ತ್ರಿಗಳು, ಫರಿಸಾಯರು ಮತ್ತು ಸದ್ದುಕಾಯರಿಂದ ಹೊರಹಾಕಲ್ಪಟ್ಟ ತಿರಸ್ಕರಿಸಲ್ಪಟ್ಟ ಯೇಸು ಕ್ರಿಸ್ತನು, ರಕ್ಷಣೆಯ ಅಧಿಪತಿಯಾಗಿ ಪ್ರಪಂಚದ ಎಲ್ಲಾ ಜನರ ಪಾಪಗಳನ್ನು ತೆಗೆದುಹಾಕಲು ಬಲಿಯಾದರು. ಯೆಹೂದ್ಯರು ಬೇಡವೆಂದು ತಳ್ಳಲ್ಪಟ್ಟ ಕಲ್ಲಿನಂತಿದ್ದ ಅವರೇ, ಮೂಲೆಗಲ್ಲಿನಂತೆ ಉನ್ನತವಾಗಿ ನಿಂತರು. ಇದು ದೇವರು ಅವರ ತಾಳ್ಮೆಗೂ, ವಿಧೇಯತೆಗೂ ಕೊಟ್ಟ ಕೊಡುಗೆಯಾಗಿದೆ.

 

ಪ್ರೀತಿಯ ಸಹೋದರ ಸಹೋದರಿಯರೇ, ನೀವು ಕೂಡ ನಿಮ್ಮ ಕುಟುಂಬಗಳಲ್ಲೋ, ಕೆಲಸದ ಸ್ಥಳಗಳಲ್ಲೋ ಯಾವುದಕ್ಕೂ ಪ್ರಯೋಜನವಿಲ್ಲದವರೆಂದು ತಳ್ಳಲ್ಪಟ್ಟ ಕಲ್ಲಿನಂತಿದ್ದೀರಾ? ನೀವು ಯಾವುದೇ ಕೆಲಸಕ್ಕೂ ಪ್ರಯೋಜನವಿಲ್ಲದವರು ಅನರ್ಹರು ಎಂಬ ಮುದ್ರೆ ಹಾಕಲ್ಪಟ್ಟವರಾಗಿದ್ದೀರಾ? ಚಿಂತೆ ಬಿಡಿ. ಯೆಹೂದದ ಜನರಿಂದಲೂ ಮತ್ತು ಅನೇಕರಿಂದಲೂ ತಳ್ಳಲ್ಪಟ್ಟ ಕಲ್ಲಿನಂತಿದ್ದ ಯೇಸುವನ್ನು ದೇವರು ಎಲ್ಲಾ ಜನರಿಗಿಂತ ಹೆಚ್ಚಾಗಿ ಎತ್ತರಕ್ಕೆ ಏರಿಸಿದರು. ಆತನು ನಿಮ್ಮ ಕುಟುಂಬದವರೆಲ್ಲರಿಗಿಂತಲೂ ಮತ್ತು ಬೇರೆ ಎಲ್ಲರಿಗಿಂತಲೂ ಹೆಚ್ಚಾಗಿ ನಿಮ್ಮನ್ನು ಮೇಲಕ್ಕೆತ್ತಲು ಸರ್ವಶಕ್ತನಾಗಿದ್ದಾರೆ.

 

ಯಾಕೋಬನ ಮೊದಲ ಹೆಂಡತಿಯಾದ ಲೇಯಳು, ಅವಳ ಪತಿಯಾದ ಯಾಕೋಬನಿಂದಲೂ ಮತ್ತು ಅವಳ ಸಹೋದರಿ ರಾಹೇಲಳಿಂದಲೂ ತಿರಸ್ಕಾರಕ್ಕೊಳಗಾದಳು. ಗಂಡನ ಪ್ರೀತಿ ಸಿಗಲಿಲ್ಲ; ಅವಳ ಜೊತೆ ಹುಟ್ಟಿದ ತನ್ನ ಸ್ವಂತ ತಂಗಿಯೂ ಅವಳನ್ನು ದ್ವೇಷಿಸುತ್ತಿದ್ದಳು. ಆದರೆ ಕರ್ತನು ಅವಳನ್ನು ತಿರಸ್ಕರಿಸಲಿಲ್ಲ. ಅವಳಿಗೆ ಗರ್ಭಫಲವನ್ನು ಕೊಟ್ಟು ಆಕೆಯನ್ನು ಸಂತೋಷಪಡಿಸಿದರು ಅವಳ ಹೆತ್ತಮಗನಾದ ಯೆಹೂದನ ವಂಶದಲ್ಲೇ ಯೇಸುಕ್ರಿಸ್ತನು ಜನಿಸಿದರು. ಹೌದು, ತಳ್ಳಲ್ಪಟ್ಟವರೆಲ್ಲರನ್ನು ತಿರಸ್ಕರಿಸಿದವರೆಲ್ಲರನ್ನು ಹೆಚ್ಚಿಸಲು ಕರ್ತನಿಗೆ ಸಾಧ್ಯ. ಆದ್ದರಿಂದ ನಾವು ತಳ್ಳಲ್ಪಟ್ಟ ಸ್ಥಿತಿಯಲ್ಲಿದ್ದರೆ, ಕರ್ತನನ್ನು ದೃಷ್ಟಿಸಿ ನೋಡೋಣ. ಆತನು ನಮ್ಮನ್ನು ಮೇಲಕ್ಕೆತ್ತಿ ಆಶೀರ್ವದಿಸುವರು. ಆಮೆನ್. ಹಲ್ಲೇಲೂಯ!

- Mrs. ಭುವನಾ ಧನಪಾಲನ್

 

ಪ್ರಾರ್ಥನಾ ಅಂಶ:

ಪ್ರತಿಯೊಬ್ಬ ಕ್ರೈಸ್ತರು ಸುವಾರ್ತೆ ಸಾರುವವರಾಗಿ ಮಾರ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş