By Village Missionary Movement
Sunday, 26-Dec-2021ಧೈನಂದಿನ ಧ್ಯಾನ(Kannada) – 26.12.2021 (Kids Special)
ಹಣ ನಿದ್ದೆಗೆಡಿಸುತ್ತದೆ
"...ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು." - 2 ಕೊರಿಂಥ. 9: 7
Hello ಮುದ್ದು ಪುಟಾಣಿಗಳೇ! ನವೆಂಬರ್ 1 ರಂದು ಶಾಲೆಗೆ ಹೋಗಿಬಿಟ್ರಲ್ಲ. ಯೇಸಪ್ಪ ನಿನಗಾಗಿ ಮುಚ್ಚಲ್ಪಟ್ಟಿದ್ದ ಬಾಗಿಲುಗಳನ್ನೆಲ್ಲಾ ತೆರೆದು ಅದ್ಭುತಗಳನ್ನು ಮಾಡಿದರು ನೋಡ್ದಾ? ನಿಮ್ಮನ್ನು ಗುಣಪಡಿಸಿದ್ದಕ್ಕಾಗಿ ಮತ್ತು ನಿಮಗೆ ಉತ್ತಮ ಆರೋಗ್ಯವನ್ನು ನೀಡಿದ್ದಕ್ಕಾಗಿ ನೀವು ಯೇಸಪ್ಪನಿಗೆ ಕೃತಜ್ಞತೆ ಹೇಳುದ್ರಾ? ಈಗಲೇ ಕೈ ಜೋಡಿಸಿ Jesus ಗೆ ಕೃತಜ್ಞತೆ ಹೇಳಿ. Super...Daily school ಗೆ ಹೋಗುವಾಗ prayer ಮಾಡಲು ಮರೆಯಲೇ ಬಾರದು. Ok. ಕಥೆ ಹೇಳ್ಳಾ?
ಒಬ್ಬ ದೊಡ್ಡ ಶ್ರೀಮಂತನಿದ್ದನು. ಅವರಿಗೆ ಸಾಕಷ್ಟು ಆಸ್ತಿ, ತೋಟ, ಸೇವಕರು ಎಲ್ಲವೂ ಇತ್ತು. ಎಲ್ಲಾ ರೀತಿಯಲ್ಲೂ ಹಣ ಕೂಡಿ ಬರುತ್ತಲೇ ಇತ್ತು. ಅಷ್ಟು ಹಣವನ್ನು ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ಆ ಶ್ರೀಮಂತನು ತಾನು ಮತ್ತು ತನ್ನ ಕುಟುಂಬದವರು ಚೆನ್ನಾಗಿದ್ದರೆ ಸಾಕು ಎಂದು ಭಾವಿಸುತ್ತಿದ್ದರು. ಯಾರಿಗಾದರೂ ಸಹಾಯ ಮಾಡೋಣ ಅಂತ ಎಂದಿಗೂ ಅಂದುಕೊಳ್ಳುತ್ತಿರಲ್ಲ. ಮನೆಯಲ್ಲಿ ತುಂಬಾ ಹಣವಿದ್ದರೆ ಕಳ್ಳರು ಬಂದು ದೋಚಿಕೊಂಡು ಹೋಗಿ ಬಿಡುತ್ತಾರೆ ಎಂದು ಭಾವಿಸಿ, ಎಲ್ಲಾ ಹಣವನ್ನು ಒಂದು ಪೆಟ್ಟಿಗೆಯಲ್ಲಿಟ್ಟು ಬೀಗ ಹಾಕಿ ಬಿಟ್ಟರು. ಯಾರಿಗೂ ತಿಳಿಯದಂತೆ ತೋಟಕ್ಕೆ ಹೋಗಿ ಒಂದು ಮರದ ಕೆಳಗೆ ಗುಂಡಿ ತೋಡಿ ಕೆಳಗೆ ಕಲ್ಲುಗಳನ್ನು ಜೋಡಿಸಿ ಬಿಟ್ಟು ಅದರ ಮೇಲೆ ಪೆಟ್ಟಿಗೆ ಇಟ್ಟು ಮಣ್ಣು ಹಾಕಿ ಬಚ್ಚಿಟ್ಟು ಬಿಟ್ಟರು. ಅಬ್ಬ ಯಾರೂ ಹಣವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಸಂತೋಷಪಟ್ಟರು. ಅಯ್ಯೋ ಮಳೆ ಬಂದರೆ ಮಳೆಯ ನೀರು ಪೆಟ್ಟಿಗೆಯೊಳಗೆ ಹೋಗಿ ಹಣ ಒದ್ದೆಯಾಗಿ ಬಿಡುತ್ತದೇನೋ ಎಂದುಕೊಂಡು ನಿದ್ದೆಯೇ ಮಾಡುತ್ತಿರಲಿಲ್ಲ. ಬೆಳಗ್ಗೆ ಎದ್ದ ಕೂಡಲೇ ಮಣ್ಣು ಅಗೆದು ಪೆಟ್ಟಿಗೆಯನ್ನು ತೆರೆದು ನೋಡುತ್ತಿದ್ದರು. ಹಣ ಸುರಕ್ಷಿತವಾಗಿದೆ ಎಂದು ಕಂಡು ನೆಮ್ಮದಿಯಾಗಿರುತ್ತಿದ್ದರು. ಇದನ್ನು ಗಮನಿಸುತ್ತಿದ್ದ ಕೆಲಸದವನು ಯಾರಿಗೂ ತಿಳಿಯದಂತೆ ಹಣವನ್ನೆಲ್ಲ ತೆಗೆದುಕೊಂಡು ಎಂದಿನಂತೆ ಆ ಪೆಟ್ಟಿಗೆಯನ್ನು ಮಾತ್ರ ಅಲ್ಲೇ ಇಟ್ಟು ಬಿಟ್ಟನು. ಒಂದು ದಿನ ಶ್ರೀಮಂತನು ಪೆಟ್ಟಿಗೆಯನ್ನು ತೆರೆದು ನೋಡಿದರು. ಹಣ ಕಾಣೆಯಾಗಿದೆ ಎಂದು ಭಾವಿಸಿ ಜೋರಾಗಿ ಅತ್ತುಬಿಟ್ಟರು. ಅಯ್ಯಯ್ಯೋ! ಈ ಶ್ರೀಮಂತನು ಏಕೆ ಅಳುತ್ತಿದ್ದಾರೆ ಎಂದು ನೋಡಲು ಎಲ್ಲರೂ ಓಡಿ ಬಂದರು. ವಿಷಯ ಕೇಳಿದ ಪ್ರತಿಯೊಬ್ಬರೂ ಯಾರಾದರೂ ಹಣವನ್ನು ಮಣ್ಣಿನ ಕೆಳಗೆ ಇಡುತ್ತಾರಾ? ಯಾರಿಗೂ ಪ್ರಯೋಜನವಿಲ್ಲದ ಹಣ ಏಕೆ? ಎಂದು ಹೀಗೆ ಮಾತಾಡಿಕೊಂಡರು. ಇದನ್ನು ಕೇಳಿ ತಪ್ಪನ್ನು ಅರಿತುಕೊಂಡ ಆ ಶ್ರೀಮಂತ ಆ ದಿನದಿಂದ ಮತ್ತೊಬ್ಬರಿಗೆ ಸಹಾಯ ಮಾಡಲು ಪ್ರಾರಂಭಿಸಿದರು.
ಪ್ರೀತಿಯ ತಮ್ಮ-ತಂಗಿ, ದೇವರು ನಮಗೆ ನೀಡಿರುವ ಹಣ, ಸೌಲಭ್ಯಗಳು ಮತ್ತು ಆಶೀರ್ವಾದಗಳನ್ನೆಲ್ಲಾ ನಾವು ಮಾತ್ರ ಅನುಭವಿಸಲು ಅಲ್ಲ, ಕಷ್ಟದಲ್ಲಿರುವವರಿಗೂ ಸಹಾಯ ಮಾಡಬೇಕು. ಆ ಶ್ರೀಮಂತನಂತೆ ಮತ್ತೊಬ್ಬರಿಗೆ ಕೊಡಲು ಮನಸ್ಸಿಲ್ಲದೆ ಇರಬಾರದು. ಬರುವ ಹೊಸ ವರ್ಷದಲ್ಲಿ, "ಅಗತ್ಯವಿರುವವರಿಗೆ ಕೊಡುತ್ತೇನೆಂದು ನಿರ್ಧರಿಸು" Ok.
- Sis. ದೆಬೋರಾಳ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482