Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.12.2021
Share:

By Village Missionary Movement

Friday, 24-Dec-2021

ಧೈನಂದಿನ ಧ್ಯಾನ(Kannada) – 24.12.2021

 

ದಾರಿತೋರುವ ನಕ್ಷತ್ರ

 

"ಅವರು ಆ ನಕ್ಷತ್ರವನ್ನು ಕಂಡು ಅತ್ಯಧಿಕವಾದ ಆನಂದದಿಂದ ಸಂತೋಷಪಟ್ಟರು." - ಮತ್ತಾಯ 2:10

 

ಎರಡನೆಯ ಮಹಾಯುದ್ಧದ ನಂತರ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಒಂದು ತಂದೆ ಮತ್ತು ಮಗ ಬೀದಿಯಲ್ಲಿ ನಡೆದು ಹೋಗುತ್ತಿದ್ದರು. ಅವರ ಮಗ ಸುತ್ತ ಮುತ್ತಲಿನ ಮನೆಗಳನ್ನೆಲ್ಲ ನೋಡಿ “ಅಪ್ಪಾ, ಅಪ್ಪಾ ಇಲ್ಲಿ ಎಲ್ಲರ ಮನೆಯಲ್ಲೂ ನಕ್ಷತ್ರ (ಸ್ಟಾರ್) ಹಾಕಿರೋದು ಯಾಕೆ?” ಎಂದು ಕೇಳಿದನು. ಅದಕ್ಕೆ ಅವನ ತಂದೆ, “ಈ ಮನೆಯಲ್ಲಿರುವ ಯಾರಾದರೊಬ್ಬರು ಎರಡನೇ ಮಹಾಯುದ್ಧದಲ್ಲಿ ಭಾಗಿಯಾಗಿರಬೇಕು. ಆದ್ದರಿಂದ ಅಮೆರಿಕ ಸರ್ಕಾರವು ಅವರನ್ನು ಗೌರವಿಸುವ ರೀತಿಯಲ್ಲಿ ಈ ನಕ್ಷತ್ರವನ್ನು ಇವರ ಮನೆಗಳಲ್ಲಿ ಹಾಕಲಾಗಿದೆ” ಎಂದರು. ಇನ್ನು ಕೆಲವು ಮನೆಗಳಲ್ಲಿ ನಕ್ಷತ್ರವು ಚಿನ್ನದ ಬಣ್ಣದಲ್ಲಿ ಹಾಕಲಾಗಿತ್ತು ಅದರ ಕಾರಣವನ್ನೂ ಅವನು ತನ್ನ ತಂದೆಯ ಬಳಿ ಕೇಳಿದನು. ಅದಕ್ಕೆ ತಂದೆ, ಇವರು ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣ ಕೊಟ್ಟವರು ಹೀಗಾಗಿ ಸರ್ಕಾರ ಅವರ ಮನೆಗಳಿಗೆ ಚಿನ್ನದ ನಕ್ಷತ್ರವನ್ನು ಅಂಟಿಸಿ ಗೌರವಿಸಿದೆ ಎಂದರು. ಇನ್ನೂ ಕತ್ತಲಾಗುತ್ತಿತ್ತು. ಸ್ವಲ್ಪ ದೂರ ನಡೆದ ನಂತರ ಮನೆಗಳಿಲ್ಲದ ಖಾಲಿ ಜಾಗದಲ್ಲಿ ನಡೆಯುತ್ತಿದ್ದರು. ಅವನು ಆಕಾಶದತ್ತ ನೋಡಿದಾಗ ನಕ್ಷತ್ರವೊಂದು ಹೊಳೆಯುತ್ತಿತ್ತು. "ಅಪ್ಪಾ, ಆಕಾಶದಲ್ಲೂ ನಕ್ಷತ್ರವಿದೆ" ಎಂದನು. ಅವರು ದೇವರು ತಮ್ಮ ಒಬ್ಬನೇ ಮಗನಾದ ಯೇಸುಕ್ರಿಸ್ತನನ್ನು, ಈ ಭೂಮಿಯಲ್ಲಿ ಪಾಪದಲ್ಲಿ ಜೀವಿಸುತ್ತಿರುವ ಮನುಷ್ಯರನ್ನು ಬಿಡಿಸಲು ಕಳುಹಿಸಿ ಎಷ್ಟೊಂದು ಪ್ರೀತಿಸಿದರು" ಎಂದರು. 

 

ನಮ್ಮ ಸತ್ಯವೇದವೂ ನಮಗೆ ಒಂದು ನಕ್ಷತ್ರದ ಬಗ್ಗೆ ಹೇಳುತ್ತದೆ. ಶಾಸ್ತ್ರಿಗಳಿಗೆ ದಾರಿತೋರಿದ ಆ ನಕ್ಷತ್ರವೇ. ಅದು ನಿಖರವಾಗಿ ಒಂದೇ ನೇರ ಸಾಲಿನಲ್ಲಿ ಅವರನ್ನು ಕರೆದುಕೊಂಡು ಹೋಯಿತು. ಅವರ ಪ್ರಯಾಣ ರಾತ್ರಿಯಲ್ಲಿ ಮಾತ್ರ ಹೋಗಬೇಕಿತ್ತು. ಆದರೂ ಅವರು ಚಳಿಗಾಲದ ಚಳಿ ಎಂದೂ ನೋಡದೇ ಯಾವ ಕಾಲವಾದರೂ ಎಂತಹಾ ಪರಿಸ್ಥಿತಿಯಿದ್ದರೂ ಪ್ರಯಾಣ ಮುಂದುವರೆಸಿ ಯೇಸುವನ್ನು ನೋಡಿ ತಮ್ಮನ್ನು ಮತ್ತು ತಮ್ಮ ಕಾಣಿಕೆಗಳನ್ನೂ ಅರ್ಪಿಸಿದರು.

 

ಪ್ರಿಯರೇ! ಮೇಲಿನ ಘಟನೆಯಿಂದ ಕರ್ತನು ನಮಗೆ ಕಲಿಸಿಕೊಡುವ ಸುಲಭವಾದ ಸತ್ಯವೇನೆಂದರೆ, ಎಲ್ಲಾ ಮನುಷ್ಯರಿಗೆ ಕತ್ತಲೆಯ‌ ಇಕ್ಕಟ್ಟಾದ ಪರಿಸ್ಥಿತಿ ಖಂಡಿತ ಬರುತ್ತದೆ. ಶಾಸ್ತ್ರಿಗಳು ಆಕಾಶವನ್ನು ನೋಡಿದಾಗ ನಕ್ಷತ್ರವು ಅವರನ್ನು ಸ್ಪಷ್ಟವಾಗಿ ಮುನ್ನಡೆಸಿದಂತೆ, ಪರಲೋಕವನ್ನು ಎದುರು ನೋಡುತ್ತಿರುವ ನಮಗೂ ದೇವರು ಉತ್ತಮ ಮಾರ್ಗದರ್ಶಕರಾಗಿದ್ದು ಸೇರಬೇಕಾದ ಪರಲೋಕಕ್ಕೆ ಖಂಡಿತವಾಗಿಯೂ ನಮ್ಮನ್ನು ಕರೆದೊಯ್ಯುತ್ತಾರೆ. ನಾವು ಮೇಲೆ ನೋಡಿದ ಯೋಧರು ಆ ದೇಶದ ಕಾನೂನುಗಳನ್ನು ಪಾಲಿಸುವಾಗ ಆ ದೇಶವು ಅತ್ಯುತ್ತಮವಾದ ಮನ್ನಣೆಯನ್ನು ನೀಡಿದ ಹಾಗೆ, ನಾವು ನಮ್ಮ ದೇವರ ಆಜ್ಞೆಗಳನ್ನು ಪಾಲಿಸುವಾಗ ಅದಕ್ಕಿಂತಲೂ ಶಾಶ್ವತವಾದ ಮಹಿಮೆಯನ್ನು ನಮಗೆ ನೀಡಲು ಅವರು ಶಕ್ತರಾಗಿದ್ದಾರೆ. ಆಮೆನ್.

- S. ಮನೋಜ್ ಕುಮಾರ್

 

ಪ್ರಾರ್ಥನಾ ಅಂಶ:

ಕ್ರಿಸ್ಮಸ್ ವಿಶೇಷ ಕಾರ್ಯಕ್ರಮಗಳು ನಡೆಯುವ ದಿನಗಳಲ್ಲಿ ಉತ್ತಮ ಹವಾಮಾನವು ಇರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin